ಮೈಸೂರ್ ಪಾಕ್ ಎಂದಾಕ್ಷಣ ಎಲ್ಲರಿಗೂ ನೆನಪಾಗುವುದು ಸಿಹಿಯಾದ ತಿಂಡಿ. ಇದರ ಹಿಂದಿನ ಕಥೆ ರೋಚಕವಾಗಿದ್ದು. ಮೈಸೂರು ಅರಮನೆಯ ಪಾಕ ಶಾಲೆಯಲ್ಲಿ ಜನ್ಮ ತಳೆದ ತಿಂಡಿ ಇದು. ಮಹರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಜಯಚಾಮರಾಜ ಒಡೆಯರ್ ಆಡಳಿತಾವದಿಯಲ್ಲಿ ಅರಮನೆಯಲ್ಲಿದ್ದ ಕುಟುಂಬಕ್ಕೆ ಬೇಕಾದ ಸಿಹಿ ಖಾರದ ತಿನಿಸು ತಯಾರಿಸುವುದರಲ್ಲಿ ಜಾಣ್ಮೆ ಹೊಂದಿದ್ದ ಅರಮನೆಯ ಪಾಕ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಕಾಕಾಸುರ ಮಾದಪ್ಫನವರಲ್ಲಿ ಒಮ್ಮೆ ಮಹಾರಾಜರು ಯಾವುದಾದರೊಂದು ತಿಂಡಿ ತಯಾರಿಸುವಂತೆ ಹೇಳಿದಾಗ ಕಡಲೆ ಹಿಟ್ಟು ಸಕ್ಕರೆ, ತುಪ್ಪ, ಎಣ್ಣೆ ಸೇರಿಸಿ ತಿಂಡಿಯೊಂದನ್ನು ಮಾಡಿ ಅದನ್ನು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರಿಗೆ ತಿನ್ನಲು ಕೊಟ್ಟರು. ಇದರ ರುಚಿ ನೋಡಿದ ಮಾಹಾರಾಜರಿಗೆ ತುಂಬಾ ಖುಷಿಯಾಗಿ ಮಾದಪ್ಫನವರಿಗೆ ಪ್ರೋತ್ಸಾಹ ನೀಡಿ ಪ್ರಶಂಸಿಸುತ್ತಾ, ಇದು ಯಾವ ತಿಂಡಿ? ಚೆನ್ನಾಗಿದೆ, ತಿಂಡಿಯ ಹೆಸರೇನು? ಎಂದು ಕೇಳಿದ ಮಹಾರಾಜರಿಗೆ ತಬ್ಬಿಬ್ಬಾದ ಮಾದಪ್ಪನವರು ಗಡಿ ಬಿಡಿಯಲ್ಲಿ ಮೈಸೂರು ಪಾಕ್ ಎಂದರಂತೆ. ಇದು ಮೈಸೂರು ಅರಮನೆಯಲ್ಲಿ ಮೊದಲ ಬಾರಿಗೆ ತಯಾರಾಗಿದ್ದರಿಂದ ಇದಕ್ಕೆ ಮೈಸೂರು ಪಾಕ್ ಎಂದು ಹೆಸರಿಸಿದ್ದು ಶಾಶ್ವತವಾಯಿತು.
ವಿವಾದದಲ್ಲಿ ಮೈಸೂರು ಪಾಕ್ :- ಮೈಸೂರ್ ಪಾಕ್ ಭೌಗೋಳಿಕ ಸೂಚ್ಯಂಕ (ಜಿ ಐ ) ತಮಿಳುನಾಡಿಗೆ ಸಿಕ್ಕಿದ್ದು ಎಂಬುದನ್ನು ಟ್ವೀಟ್ ಹಾಕಿದ ತವಿಳುನಾಡಿನ ಅಂಕಣಕಾರ, ಲೇಖಕ ಆನಂದರಂಗ ನಾಥ್ನ್ ಅವರ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಯಿತು. ಮೈಸೂರು ಪಾಕ್ ಭೌಗೋಳಿಕ ಸೂಚ್ಯಂಕ ಸಿಕ್ಕಿರುವುದಕ್ಕೆ ಸದಸ್ಯ ಸಮಿತಿ ಪರವಾಗಿ ಅಭಿನಂದನೆ ಸ್ವೀಕರಿಸಲು ಖುಷಿಯಾಗುತ್ತಿದೆ ಎಂದು ಟ್ವೀಟಿಸಿ ನಿರ್ಮಲ ಸೀತಾರಾಮನ್ ಅವರ ಜೊತೆಗಿದ್ದ ಪೋಟೋ ಶೇರ್ ಮಾಡಿದ್ದರು. ಇದು ವೈರಲ್ ಆಗುತ್ತಿದ್ದಂತೆ ಕರ್ನಾಟಕದ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದಂತೆ ತಮಿಳುನಾಡು ಮೂಲದ ಆ ಲೇಖಕರು ತಮ್ಮ ಬರಹವನ್ನು ತೆಗೆದು ಹಾಕಿದ್ದರು. ತಮಾಷೆಗಾಗಿ ಈ ಪೋಸ್ಟ್ ಮಾಡಿದ್ದೆ ಎಂದು ಹೇಳಿಕೆ ನೀಡಿ ಪ್ರಕರಣಕ್ಕೆ ವಿರಾಮ ಹಾಕಿದ್ದರು.
ವಿಶ್ವ ವಿಖ್ಯಾತ ಮೈಸೂರು ಪಾಕ್ ಮೂಲ ಯಾರದ್ದು ಎಂಬುದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ 2019 ರಲ್ಲಿ ಭಾರಿ ಚರ್ಚೆ ನಡೆದಿದೆ. ಹೆಸರಿನಲ್ಲಿ ಮೈಸೂರು ಹೊಂದಿದ್ದರಿಂದ ಈ ಸಿಹಿ ಪದಾರ್ಥ ನಮ್ಮದು ಎಂಬವಾದ ಕರ್ನಾಟಕದ್ದು. ನಾಲ್ವಡಿ ಕೃಷ್ಣರಾಜ ಒಡೆಯರ ಆಳ್ವಿಕೆಯ ಸಂದರ್ಭದಲ್ಲಿ ಅರಮನೆ ಅಡುಗೆ ಭಟ್ಟರಾದ ಮಾದಪ್ಪ ತಯಾರಿಸಿರುವ ಸಿಹಿ ಎಂಬುದು ಕರ್ನಾಟಕದ ಸಮರ್ಥನೆ. ಕರ್ನಾಟಕ ಮೂಲದ್ದು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ಉದಾಹರಣೆ ಕಥೆ, ಉಪಕಥೆಗಳು ಇದೆ. ಆದರೆ ಬ್ರಿಟಿಷ್ ಆಡಳಿತ ಅಧಿಕಾರಿಯಾಗಿದ್ದ ಲಾರ್ಡ ಮೇಕಾಲೆ ಟಿಪ್ಪಣಿ ಆಧರಿಸಿ ಮೈಸೂರು ಪಾಕ್ ಮದ್ರಾಸ್ ಸಂಸ್ಥಾನದ ಹಕ್ಕು ಎಂದು ತಮಿಳರ ವಾದ.
ಭೌಗೋಳಿಕ ಸೂಚನೆ ಜಿಐ ಒಂದು ನಿರ್ದಿಷ್ಟ ಸ್ಥಳ, ಪ್ರದೇಶಕ್ಕೆ ಅನುರೂಪವಾಗಿ ಕೆಲವು ವಸ್ತುಗಳಿಗೆ ಬಳಸುವ ಚಿಹ್ನೆ ಅಥವಾ ಮಾನ್ಯತೆ ಸಂಪ್ರದಾಯಕ ವಿಶೇಷತೆಗಳನ್ನು ಹೊಂದಿರುವ ವಿಶ್ವ ವಾಣಿಜ್ಯ ಸಂಸ್ಥೆ ಸದಸ್ಯರಾಗಿ ನೋಂದಣಿ ಮತ್ತು ಸಂರಕ್ಷಣಾ ಕಾಯ್ದೆ ಹಕ್ಕು ವ್ಯಾಪಾರ ವ್ಯವಹಾರ ಸಂಬಂಧಿತ ಅಂಶಗಳ ಕುರಿತಾದ ವಾಣಿಜ್ಯ ಸಂಸ್ಥೆಯ ಒಪ್ಪಂದದಂತೆ ಭೌಗೋಳಿಕ ಪ್ರದೇಶದಲ್ಲಿರುವ ಅಪರೂಪದ ಅಗತ್ಯದ ದಿನ ನಿತ್ಯ ಬಳಕೆಯಲ್ಲಿರುವ ಉತ್ಪನ್ನ ಅಥವಾ ವಸ್ತುಗಳನ್ನು ಗುರುತಿಸುವ ಸೂಚನೆ. ಜಿ ಐ ಟ್ಯಾಗ್ ಅವಧಿ 10 ವರ್ಷ ಇರುತ್ತದೆ. 10 ವರ್ಷಗಳಿಗೊಮ್ಮೆ ನವೀಕರಣಗೊಳಿಸಲಾಗುತ್ತದೆ.
ಅತಿ ಹೆಚ್ಚು ಜಿ ಐ ಮಾನ್ಯತೆ ಪಡೆದ ರಾಜ್ಯಗಳ ಸಾಲಿನಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ.
ಮೈಸೂರು ಪಾಕ್ ಮಾಡುವ ವಿಧಾನ:- ಇದನ್ನು ತಯಾರಿಸಲು ಹೇರಳವಾಗ ತುಪ್ಪಕಡಲೆ ಹಿಟ್ಟು, ಏಲಕ್ಕಿ, ಮತ್ತು ಸಕ್ಕರೆಯನ್ನು ವಿಶ್ರಣ ಮಾಡಿಕೊಂಡು ನಂತರ ಪಾಕವನ್ನು ತಯಾರಿಸಿಕೊಂಡು ತಮಗೆ ಬೇಕಾದ ಆಕಾರಕ್ಕೆ ಒಣಗಲು ಬಿಟ್ಟು ಬಳಿಕ ಅದು ಮಿಠಾಯಿ ರೀತಿಯಲ್ಲಿ ಕತ್ತರಿಸಬಹುದು.
ಲತಾ ಸಂತೋಷ ಶೆಟ್ಟಿ ಮುದ್ದುಮನೆ