ದಟ್ಟ ಹಸಿರಿನ ಗಿರಿಕಂದಕಗಳ ನಡುವೆ ನಿಸರ್ಗ ದೇವತೆ ಧರೆಗಿಳಿದಂತೆ ಕಂಗಳಿಸುವ ನೈಸರ್ಗಿಕ ತಾಣ ಕರ್ನಾಟಕದ ಸುಂದರ ತಾಣ ಕೊಡಗು. ನಿತ್ಯ ಹರಿದ್ವರ್ಣದ ದಟ್ಟ ಕಾಡುಗಳ ಹಸಿರಿನ ಮಡಿಲು, ಬೆಟ್ಟಗುಡ್ಡಗಳ ಸೊಬಗು, ತುಂಬಿ ತುಳುಕುವ ಸಸ್ಯ ಸಂಪತ್ತು ವನರಾಶಿಗಳು, ಕಾಫಿತೋಟದ ಕಂಪು, ಕಿತ್ತಳೆ, ಏಲಕಿ ತೋಟಗಳ ನಡುವೆ ಹರಿವ ಹಳ್ಳ ಕೊಳ್ಳ, ಧುಮ್ಮಕಿ ಹರಿವ ಜಲಪಾತಗಳು, ಝಳುಝಳು ಹರಿವ ನದಿ ತೊರೆಗಳು , ಪಚ್ಚೆ, ಪೈರಿನಿಂದ ಆವೃತ್ತವಾದ ಕೊಡಗಿನ ಮೂಲೆ ಮೂಲೆಯಲ್ಲೂ ನೈಸರ್ಗಿಕ ಸೊಬಗಿದೆ. ಪ್ರಕೃತಿಯ ಲಾಲಿತ್ಯ ದ ಅಚ್ಚರಿಯ ತಾಣವಿದ್ದು. ಭಕ್ತಿ ಸಿಂಚನ ಗೈವ ದೇಗುಲಗಳಿವೆ ಅದರಲ್ಲಿ ಮುಖ್ಯವಾಗಿ ಓಂಕಾರೇಶ್ವರ ದೇವಳವು ಒಂದು.
ಮಡಿಕೇರಿ ಪೇಟೆ ಕೇಂದ್ರಭಾಗದಲ್ಲಿಯ ಬಹುಪುರಾತನ ಐತಿಹಾಸಿಕ ಪುಣ್ಯ ಕ್ಷೇತ್ರ ಓಂಕಾರೇಶ್ವರ ದೇವಳ. ಕೊಡಗಿಗೆ ಹೋದವರು ಅಗತ್ಯ ವಾಗಿ ಬೇಟಿ ನೀಡ ಬೇಕಾದ ಸ್ಥಳ ವಿದು .ಸುತ್ತಲೂ ಆವರಣ ಹೊಂದಿದ ವಿಶಿಷ್ಟ ಆಧ್ಯಾತ್ಮಿಕ ತಾಣ. ಗೋಧಿಕ್ ಮತ್ತು ಇಸ್ಲಾಮಿಕ್ ಶೈಲಿಗಳ ಮಿಶ್ರಣದಿಂದ ನಿರ್ಮಿಸಲಾಗಿದೆ. ಸುಮಾರು 200 ವಷಗಳ ಹಿಂದೆ ಮಡಿಕೇರಿಯ ರಾಜ ಎರಡನೇ ಲಿಂಗ ರಾಜ ಮಹಾರಾಜ 1820 ರಲ್ಲಿ ಕಟ್ಟಿಸಿದರು ಎನ್ನ ಲಾದ ಈ ದೇವಾಲಯ ಇಂಡೊ ಇಸ್ಲಾಮಿಕ್ ವಾಸ್ತು ಶೈಲಿಯನ್ನು ಹೊಂದಿದೆ.
ದೇವಳದ ಮಧ್ಯದಲ್ಲಿ ವಿಶಾಲವಾದ ಪುಷ್ಕರಣಿ ಇದ್ದು ಸುತ್ತಲೂ ದೇವಸ್ಥಾನಗಳಿವೆ. ಇದರ ನಡುಭಾಗದಲ್ಲೊಂದು ಮುಖಮಂಟಪವಿದೆ. ದೇವಸ್ಥಾನದ ಮುಂಭಾಗದಿಂದ ಒಂದು ಕಿರಿದಾದ ಸೇತುಬಂಧವಿದೆ. ಪುಷ್ಕರಿಣಿಯ ಸುತ್ತಲೂ ಕಲ್ಲು ಹಾಸಿದ
ಗರ್ಭಗುಡಿಯ ಮೇಲೆ ಗೋಲಾಕಾರದ ಗುಮ್ಮಟವಿದ್ದು ಆಕರ್ಷಕ ಮುಕುಟದಂತೆ ಶೋಭಿಸುತ್ತಿದೆ. ಈ ದೇವಳದ ಐತಿಹಾಸಿಕ ಹಿನ್ನೆಲೆಯಂತೆ ದೇವಸ್ಥಾನದ ನಿರ್ಮಾಣದ ಹಿಂದಿನ ಕಥಾ ರೂಪದಲ್ಲಿ ಲಿಂಗರಾಜರು ತನ್ನ ಆಳ್ವಿಕೆಯ ಕಾಲದಲ್ಲಿ ತಪ್ಪುಗಳನ್ನು ಎತ್ತಿ ತೋರಿಸಿದ ಪ್ರಾಮಾಣಿಕ ಬ್ರಾಹ್ಮಣರ ಹತ್ಯೆಮಾಡಿಸುತ್ತಾನೆ. ಬ್ರಾಹ್ಮಣನ ಸಾವಿನ ನಂತರ ರಾಜನನ್ನು ಬ್ರಹ್ಮ ರಾಕ್ಷಸನಾಗಿ ಕಾಡಿದ ಬ್ರಾಹ್ಮಣ.ರಾಜ ಜ್ಯೋತಿಷಿಯೊಬ್ಬರ ಸಲಹಯಂತೆ ಕಾಶಿಯಿಂದ ಶಿವಲಿಂಗ ತರಿಸಿ ದೇವಸ್ಥಾನ ಕಟ್ಟಿಸಿದ ರಾಜ.
ಪುರಾಣದ ಪ್ರಕಾರ, ರಾಜನು ಪ್ರಾಯಶ್ಚಿತ್ತ ಮಾಡಿಕೊಳ್ಳುವ ಸಲುವಾಗಿಯೇ ಈ ದೇವಾಲಯವನ್ನು ನಿರ್ಮಿಸಿದ ಈ ದೇವಸ್ಥಾನವೇ ಕೊಡಗಿನ ಕೇಂದ್ರ ಪಟ್ಟಣ ಮಡಿಕೇರಿಯ ಪ್ರಸಿದ್ದ ಓಂಕಾರೇಶ್ವರ ದೇವಸ್ಥಾನ.
ಈ ದೇವಳದಲ್ಲಿ ಚೌಕಾಕಾರದಲ್ಲಿ ನಿರ್ಮಿತ ಕೇಂದ್ರ ಭಾಗದಲ್ಲಿ ಚಿನ್ನದ ಲೇಪನ ಹೊಂದಿರುವ ಗುಮ್ಮಟವಿದ್ದು ನಾಲ್ಕು ಮಿನಾರ್ ರನ್ನು ಹೋಲುವ ರಚನೆಗಳಿವೆ. ದೇವಸ್ಥಾನದ ಮುಖ್ಯದ್ವಾರದ ಹತ್ತಿರವೆ ಶಿವಲಿಂಗ ಸ್ಥಾಪನೆಗೊಂಡಿದೆ.ಶಿವಲಿಂಗದ ಇಕ್ಕೆಲಗಳಲ್ಲಿ ಗಣೇಶ ಹಾಗೂ ಕಾರ್ತಿಕೇಯ ಮೂರ್ತಿ ಗಳಿವೆ. ಮಧ್ಯಭಾಗದಲ್ಲಿರುವ ಗರ್ಭಗೃಹದಲ್ಲಿ ಲಿಂಗವನ್ನು ಪ್ರತಿಷ್ಠಾಪಿಸಲಾಗಿರುತ್ತದೆ. ಆದರೆ ಈ ದೇವಸ್ಥಾನದಲ್ಲಿ ಪ್ರವೇಶದ್ವಾರದ ಬಳಿಯ ಶಿವಲಿಂಗವನ್ನು ಸ್ಥಾಪಿಸಲಾಗಿದೆ. ದೇವಾಲಯದ ಇತಿಹಾಸವನ್ನು ತಾಮ್ರದ ತಟ್ಟೆಯಲ್ಲಿ ಕೆತ್ತಿ ಅದನ್ನು ಪ್ರವೇಶ ಬಾಗಿಲಿನ ಚೌಕಟ್ಟಿನಲ್ಲಿ ಅಳವಡಿಸಲಾಗಿದೆ.
ಇಲ್ಲಿನ ಇನ್ನೊಂದು ವಿಶೇಷವೆಂದರೆ ಸುಂದರವಾದ ಬೃಹತ್ ಕಲ್ಯಾ ಣಿ ಮಧ್ಯದಲ್ಲಿ ಮಂಟಪವಿದ್ದು ದೇವರ ಗರ್ಭಗುಡಿಯ ಮಧ್ಯ ಭಾಗದಲ್ಲಿ ಶ್ರೀ ಓಂಕಾರೇಶ್ವರ ದೇವರ ಬಿಂಬ ಎಡಭಾಗದಲ್ಲಿ ಸುಬ್ರಹ್ಮಣ್ಯ ಹಾಗೂ ಬಲಭಾಗದಲ್ಲಿ ಗಣಪತಿ ವಿಗ್ರಹ ಗಳಿವೆ .ಓಂಕಾರೇಶ್ವರ ದೇವಸ್ಥಾನವು ಅನನ್ಯ ಶೈಲಿಯ ವಾಸ್ತುಶಿಲ್ಪ ಹೊಂದಿದ ಮುಸ್ಲಿಂ ಜನಾಂಗದ ದರ್ಗಾದಂತ ವಿನ್ಯಾಸ ಹೊಂದಿದೆ. ದೇವಾಲಯ ರಚನೆಯ ನಾಲ್ಕು ಮೂಲೆಗಳಲ್ಲಿ ಮಿರ್ನಾರ್ ಗಳನ್ನು ಹೊಂದ್ಧಿದ್ದು ಮಧ್ಯದಲ್ಲಿ ದೊಡ್ಡ ಗುಮ್ಮಟ ಗಳನ್ನೋಳಗೊಂಡಿದೆ. ದೇವಾಲಯದ ಐತಿಹಾಸಿಕ ಮಹತ್ವವನ್ನು ತಾಮ್ರದ ಬಿತ್ತಿಯಲ್ಲಿ ಕ್ತೆತ್ತಿ
ಪ್ರವೇಶ ದ್ವಾರದ ಚೌಕಟ್ಟಿನಲ್ಲಿ ಸ್ಥಿರ ಪಡಿಸಲಾಗಿದೆ.
ದೇವಾಲಯವು ಬೆಳಿಗ್ಗೆ 6-30 ರಿಂದ ರಾತ್ರಿ 8 ಗಂಟೆಯವರೆಗೆ ತೆರೆದಿರುತ್ತದೆ. ಈ ದೇವಸ್ಥಾನವು ಯಾತ್ರಿಗಳು ,ಭಕ್ತಾದಿಗಳು ಅಲ್ಲದೆ ಮುದ್ದುಮಕ್ಕಳನ್ನು ಪ್ರಮುಖವಾಗಿ ಆಕರ್ಷಿಸುವುದು ಇಲ್ಲಿನ ಪುಷ್ಕರಣಿಯಲ್ಲಿರುವ ಮೀನುಗಳು. ಬಣ್ಣ ಬಣ್ಣಗಳ ಮೀನುಗಳು ಇಡೀ ಪುಷ್ಕರಣಿಯಲ್ಲಿ ತುಂಬಿದೆ. ಇನ್ನು ವಿಶಾಲವಾದ ಆವರಣ ಹೊಂದಿರುವ ಈ ದೇವಸ್ಥಾನವನ್ನು ಸುತ್ತಾಡಲು ಕನಿಷ್ಠ 2 ಗಂಟೆಗಳಾದರೂ ಬೇಕು.
ಪ್ರತಿತಿಂಗಳು ಈ ದೇವಸ್ಥಾನದಲ್ಲಿ ಪೂರ್ಣಿಮೆಯಂದು ಸತ್ಯನಾರಾಯಣ ಸ್ವಾಮಿ ಪೂಜೆ ನಡೆಯುತ್ತದೆ.ಮಹಾ ಶಿವರಾತ್ರಿ ಹಾಗೂ ಸೋಮವಾರ ಜನದಟ್ಟಣೆ ಹೆಚ್ಚು ಇದ್ದು ದಿನದ ಎರಡು ಹೊತ್ತು ಪೂಜೆ, ವಿಶೇಷ ದಿನಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತದೆ. ಈ ದೇವಾಲಯದಲ್ಲಿ ಶಾಂತತೆಯ ವಾತಾವರ್ಣ ಇದ್ದು
ಕೊಡಗಿಗೆ ಹೋದವರು ಅಗತ್ಯವಾಗಿ ಸಂದರ್ಶಿಸ ಬಹುದಾದ ಮಂದಿರವಿದು.
ಲತಾ ಸಂತೋಷ್ ಶೆಟ್ಟಿ ಮುದ್ದುಮನೆ