“ಜಗತ್ತಿನ ಭಾಗ್ಯವಂತ ವ್ಯಕ್ತಿ ಯಾರೆಂದರೆ ಅವನ ಹತ್ತಿರ ಆಹಾರದ ಜೊತೆ ಹಸಿವು ಇರಬೇಕು, ಹಾಸಿಗೆ ಜೊತೆ ನಿದ್ರೆ ಇರಬೇಕು ಹಣದ ಜೊತೆ ಧರ್ಮ ಇರಬೇಕು ” ಎಂಬ ಮಾತಿದೆ. ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಾಹಾಪೋಷಕರಗಿರುವ ಜಯಪ್ರಕಾಶ್ ರೈಯವರು 1964 ನೇ ಇಸವಿಯ ಜುಲೈ 2 ನೇ ತಾರೀಕಿನಂದು ಶ್ರೀ ಮೋನಪ್ಪ ರೈ ಮತ್ತು ಶ್ರೀಮತಿ ಮೋಹಿನಿ ರೈ ದಂಪತಿಗಳ ಸುಪುತ್ರರಾಗಿ ಜನ್ಮ ತಾಳಿದರು. ಕೊಡಗು ಜಿಲ್ಲೆ ಮಡಿಕೇರಿ ಈ ದೇಶಕ್ಕೆ ಹಲವು ವೀರ ಯೋಧರನ್ನು ಕೊಟ್ಟ ನಾಡು. ಇಲ್ಲಿಯೇ ಜನಿಸಿದ ಶ್ರೀ ಜಯರಾಮ ರೈ ಇಲ್ಲಿ 10 ನೇ ತರಗತಿಯವರೆಗೆ ಶಿಕ್ಷಣ ಪೂರೈಸಿದರು. ತಮ್ಮ 17 ನೇ ವಯಸ್ಸಿಗೆ ಭಾರತೀಯ ಭೂ ಸೇನೆಯಾದ ಮರಾಠ ಇನ್ಫೆoಟ್ರಿಗೆ 1980 ನೇ ಇಸವಿಯಲ್ಲಿ ಸೇರ್ಪಡೆಯಾದರು. ಇಲ್ಲಿ ತರಭೇತಿ ಮುಗಿಸಿ 1981 ರಲ್ಲಿ ಚೀನಾ ಗಡಿಯಾದ ಅರುಣಾಚಲ ಪ್ರದೇಶಲ್ಲಿ ತಮ್ಮ ಕರ್ತವ್ಯ ನಿಭಾಯಿಸಲು ಶುರು ಮಾಡಿದರು. ರಾಜಸ್ತಾನ ಗಡಿ ಪ್ರದೇಶ, ಜಮ್ಮು ಕಾಶ್ಮೀರ ಗಡಿ ಪ್ರದೇಶ, ಪಾಕಿಸ್ತಾನ ಗಡಿ ಪ್ರದೇಶ, ಭಾರತ ಬಾಂಗ್ಲಾ ಗಡಿ ಪ್ರದೇಶ, ಭಾರತ ಬರ್ಮಾ ಗಡಿ ಪ್ರದೇಶ, ಪಂಜಾಬ್, ಮಣಿಪುರ, ನಾಗಲ್ಯಾಂಡ್ ಉಡಿ ಸೆಕ್ಟರ್ ಹೀಗೆ ದೇಶದ ಆಯಾ ಕಟ್ಟಿನ ಜಾಗದಲ್ಲಿ ಕರ್ತವ್ಯ ನಿರ್ವಹಿಸಿದ ಹಿರಿಮೆ ಇವರದು.
ಇಂದಿರಾ ಗಾಂಧಿ ಹತ್ಯೆಯ ಸಂಧರ್ಭದ ವಿಷಮ ಸನ್ನಿವೇಶದಲ್ಲಿ 3 ತಿಂಗಳು ದೆಹಲಿ ತುರ್ತು ಸೇವೆ ಮಾಡಿರುವ ಶ್ರೀಯುತರು 1984 ರಲ್ಲಿ ಪಂಜಾಬಿನ ಬ್ಲೂಸ್ಟಾರ್ ಆಪರೇಷನ್ ನಲ್ಲಿಯೂ ಪಾಲ್ಗೊಂಡಿದ್ದಾರೆ. ರಾಜಸ್ತಾನದ ರಕ್ಷಕ್ ಆಪರೇಷನ್ 1999ರಲ್ಲಿ ಕಾರ್ಗಿಲ್ ವಾರ್ ಆಪರೇಷನ್ ನಲ್ಲೂ ಮುಂಚೂಣಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಜಮ್ಮು ಕಾಶ್ಮೀರ್ ವಿಜಯ ಆಪರೇಷನ್ ನಲ್ಲಿ ಭಾಗವಹಿಸಿ ಜಮ್ಮು ಉಗ್ರರನ್ನು ನಿಗ್ರಹಿಸಿದರೆಂಬ ಕಾರಣಕ್ಕೆ ಚೀಪ್ ಆಫ್ ಆರ್ಮಿ ಸ್ಟಾಫ್ ಅವರಿಂದ ಪ್ರಶಂಸೆ ಪತ್ರ ಪಡೆದಿರುತ್ತಾರೆ. 25 ವರ್ಷಗಳು ಸುದೀರ್ಘ ಸೇವೆ ಸೇನೆಯಲ್ಲಿ ಸಲ್ಲಿಸಿರುವ ಶೀಯುತರು, 2006 ರಲ್ಲಿ ನಿವೃತ್ತರಾಗಿ ಕುತ್ತಾರು ಅಜ್ಜನ ಕಟ್ಟೆ ಹತ್ತಿರ ಪತ್ನಿ ಪುತ್ರಿಯೊಂದಿಗೆ ವಾಸಿಸುತ್ತಿದ್ದಾರೆ. ಹಲವಾರು ಧಾರ್ಮಿಕ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾ ಕ್ರಿಯಾಶೀಲರಾಗಿರುವ ಶ್ರೀಯುತ ಜಯಪ್ರಕಾಶ್ ರೈಯವರದ್ದು ದಣಿವರಿಯದ ಚೇತನ.