” ದೇಹದಲ್ಲಿನ ಬ್ಯಾಕ್ಟೀರಿಯ ಮತ್ತು ವಿಟಮಿನ್, ನಾರಿನಂಶ ಉತ್ಪನ್ನಗಳನ್ನು ದೇಹಕ್ಕೆ ಸಾಗಿಸುವ ಮತ್ತು ಆರೋಗ್ಯ ನಿಯಂತ್ರಕ ಬೆಳ್ಳುಳ್ಳಿ ಸೇವನೆ – ಸದೃಢ ಆರೋಗ್ಯದ ದ್ಯೋತಕ…!”
ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ ,ಕುಂದಾಪುರ ಉಡುಪಿ ಜಿಲ್ಲೆ (ಪತ್ರಕರ್ತರು & ಮಾಧ್ಯಮ ವಿಶ್ಲೇಷಕರು)
m: 9632581508
ಭಾರತೀಯ ಸಾಂಸ್ಕೃತಿಕ ವಿಚಾರಕ್ಕೆ ಸಂಬಂಧಪಟ್ಟಂತೆ ಭಾರತದ ಅಡುಗೆ ಪದಾರ್ಥಗಳಲ್ಲಿ ಬೆಳ್ಳುಳ್ಳಿಯನ್ನು ಜಾಸ್ತಿ ಬಳಸುವುದರಿಂದ ಆರೋಗ್ಯಕರ ಲಕ್ಷಣವು ಪದಾರ್ಥಗಳಲ್ಲಿ ಸೇವನೆ ಮಾಡಬೇಕು. ಬೆಳ್ಳುಳ್ಳಿ ನಮ್ಮ ಅಡುಗೆಯಲ್ಲಿ ಹೆಚ್ಚು ಬಳಸುವುದರಿಂದ ದೇಹದಲ್ಲಿನ ಕೊಬ್ಬಿನಂಶ ಮತ್ತು ನಾರಿನಾಂಶ ಹೆಚ್ಚುಗೊಳಿಸುವುದರೊಂದಿಗೆ ಅದರಲ್ಲಿನ ಪ್ರಾಮುಖ್ಯತೆಯನ್ನು ಕೂಡ ಹಿಂದಿನ ಪಾರಂಪರಿಕ ಅಡುಗೆ ಮನೆಯಲ್ಲಿ ಬಳಸಲಾಗುತ್ತದೆ. ವಿವಿಧ ಹೋಟೆಲ್ಗಳಲ್ಲಿ ಮತ್ತು ಅಡುಗೆ ಸಿದ್ಧಪಡಿಸುವ ಅಡುಗೆ ಮನೆಯಲ್ಲಿ ಬೆಳ್ಳುಳ್ಳಿ ಉತ್ತಮ ಒಗ್ಗರಣೆಯ ಉತ್ಪನ್ನವಾಗಿ ಬಳಕೆ ಮಾಡುತ್ತೇವೆ. ಅದಲ್ಲದೆ ಸಾಂಬಾರು ಪದಾರ್ಥ ಮತ್ತು ರಸಂ ಮಾಡುವಾಗ ಬೆಳ್ಳುಳ್ಳಿಯನ್ನು ಹೆಚ್ಚು ಬಳಸುತ್ತಾರೆ. ಪಾರಂಪರಿಕ ಅಡುಗೆ ಪದಾರ್ಥಗಳಲ್ಲಿ ಬೆಳ್ಳುಳ್ಳಿ ,ಕರಿಬೇವು, ಹಸಿಮೆಣಸಿನಕಾಯಿ ಹಾಗೂ ಬ್ಯಾಡಗಿ ಮೆಣಸುಗಳನ್ನು ಬಳಸಿ ಅಡುಗೆಯನ್ನು ಸಿದ್ಧಪಡಿಸುತ್ತಾರೆ. ಆ ಕಾರಣಕ್ಕಾಗಿ ಬೆಳ್ಳುಳ್ಳಿ ಮಹತ್ತರ ಪಾತ್ರ ವಹಿಸುತ್ತದೆ. ಮಹಿಳೆಯರು ಹೆಚ್ಚಾಗಿ ಅಡುಗೆಯನ್ನು ಸಿದ್ಧಪಡಿಸುವಾಗ ಬೆಳ್ಳುಳ್ಳಿ ಸಾಸಿವೆ, ಕಡಲೆ ಬೇಳೆ ಒಗ್ಗರಣೆಯನ್ನು ಉಪಯೋಗಿಸಿದ ನಂತರವೇ ವಿಶೇಷ ರೀತಿಯಲ್ಲಿ ಅಡುಗೆಯನ್ನು ತಯಾರು ಮಾಡುತ್ತಾರೆ. ಕರ್ನಾಟಕದ ಹಾಗೂ ಕರಾವಳಿ ಶೈಲಿಯಲ್ಲಿ ಮಾಡುವ ಉತ್ಪನ್ನಗಳನ್ನು ಬೆಳ್ಳುಳ್ಳಿಸುವುದರಿಂದ ಕಣ್ಣಿಗೆ ತಂಪು ನೀಡುವುದರೊಂದಿಗೆ ತಲೆ ನೋವು ನಿವಾರಕವಾಗಿ ಕೂಡ ಬೆಳ್ಳುಳ್ಳಿಯನ್ನ ಬಳಕೆ ಮಾಡುತ್ತಾರೆ. ಅದಲ್ಲದೆ ಹಳ್ಳಿಗಳ ಕಡೆಯಲ್ಲಿ ಮಕ್ಕಳಿಗೆ ಅಥವಾ ವಯಸ್ಕರಿಗೆ ಹಲ್ಲು ನೋವು ಬಂದಂತಹ ಸಂದರ್ಭದಲ್ಲಿ ಬೆಳ್ಳುಳ್ಳಿಯನ್ನು ಸಣ್ಣದಾಗಿ ಜಜ್ಜಿ ಅದನ್ನು ವಸಡು ನೋವು ಸಂದರ್ಭದಲ್ಲಿ ಬಳಕೆ ಮಾಡುವುದರಿಂದ ಹೊಸದು ನೋವು ಕಡಿಮೆ ಆಗುತ್ತದೆ. ಅದಲ್ಲದೆ ಹಲ್ಲುಗಳ ಗಟ್ಟಿತನಕ್ಕೆ ಬೆಳ್ಳುಳ್ಳಿ ಸಹಕಾರಿಯಾಗುತ್ತದೆ. ಒಟ್ಟಾರೆಯಾಗಿ ಭಾರತೀಯ ಸಂಸ್ಕೃತಿಯಲ್ಲಿ ಬೆಳ್ಳುಳ್ಳಿಯನ್ನು ಹೆಚ್ಚು ಪದಾರ್ಥಗಳಲ್ಲಿ ಬಳಸುವುದರಿಂದ ಜಠರ ಸಂಬಂಧಿ ಕಾಯಿಲೆಗಳು ದೂರವಾಗುವುದರೊಂದಿಗೆ ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ.
ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ನಾವು ಭಾರತೀಯರು ಬಳಸುವಂತಹ ಪ್ರತಿಯೊಂದು ಸಾಂಬಾರು ಪದಾರ್ಥದಲ್ಲಿ ಹಲವಾರು ಆರೋಗ್ಯದ ಗುಣಗಳು ಅಡಗಿವೆ. ಹಿಂದಿನವರ ಜೀವನಶೈಲಿ ಮತ್ತು ಆಹಾರ ಕ್ರಮವನ್ನು ನೋಡಿದರೆ ಅವರ ಆರೋಗ್ಯದ ಗುಟ್ಟನ್ನು ನಾವು ತಿಳಿದುಕೊಳ್ಳಬಹುದು. ಹಾಗಾಗಿ ನಾವು ಕೂಡ ಅವರ ಜೀವನಶೈಲಿಯನ್ನು ನಾವು ಅಳವಡಿಸಿಕೊಂಡರೆ ನಮ್ಮ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳಬಹುದು. ಸಾವಿರಾರು ವರ್ಷಗಳಿಂದ
ಬಳಕೆ ಮಾಡಿಕೊಂಡು ಬರುತ್ತಾ ಇರುವಂತಹ ಬೆಳ್ಳುಳ್ಳಿ ನಮ್ಮ ಅಡುಗೆಯಲ್ಲಿ ಬಹಳನೇ ಒಂದು ಅಪಾರವಾದ ಪಾತ್ರವನ್ನು ಹೊಂದಿದೆ. ಇದು ಕೇವಲ ಅಡುಗೆಗೆ ಮಾತ್ರವಲ್ಲದೆ ನಮ್ಮ ಆರೋಗ್ಯದ ರಕ್ಷಣೆ ಮಾಡುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಅದರಲ್ಲೂ ಈ ಹುರಿದ ಬೆಳ್ಳುಳ್ಳಿಯನ್ನು ಸೇವನೆ ಮಾಡುವುದರಿಂದ ಹಲವಾರು ರೀತಿಯ ಪೌಷ್ಟಿಕಾಂಶಗಳನ್ನು ನಾವು ಪಡೆದುಕೊಳ್ಳಬಹುದು.
ಈ ಹುರಿದ ಬೆಳ್ಳುಳ್ಳಿಯಲ್ಲಿ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವಂತಹ ಶಕ್ತಿ ಇದೆ. ನಿತ್ಯ ಇದನ್ನು ನಾವು ಸೇವನೆ ಮಾಡುತ್ತಾ ಬಂದರೆ ಹಲವು ರೀತಿಯ ಆರೋಗ್ಯದ ಸಮಸ್ಯೆಗಳಿಂದ ದೂರ ಇರಬಹುದು. ಈ ಬೆಳ್ಳುಳ್ಳಿ ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿದೆ. ಬೆಳ್ಳುಳ್ಳಿಯಲ್ಲಿ ಪ್ರೋಟಿನ್ ವಿಟಮಿನ್ ಸಿ ವಿಟಮಿನ್ ಬಿ ಮೆಗ್ನೇಶಿಯಂ ಕ್ಯಾಲ್ಸಿಯಂ ಸೇರಿದಂತೆ ಹಲವಾರು ಪೌಷ್ಟಿಕಾಂಶಗಳು ಮಹಾಪೂರವೇ ಇದರಲ್ಲಿ ಅಡಗಿದೆಇದೆಲ್ಲ ಪೋಸ್ಟಿಕ ಅಂಶಗಳನ್ನು ಒಳಗೊಂಡಿರುವ ಬೆಳ್ಳುಳ್ಳಿಯನ್ನು ನಾವು ಇದನ್ನು ಹರಿದು ಸೇವನೆ ಮಾಡುವುದರಿಂದ ನಮ್ಮ ದೇಹವು ಸಧೃಢ ಗೊಳ್ಳುವುದರೊಂದಿಗೆ ಅನಾರೋಗ್ಯ ಸಮಸ್ಯೆಯನ್ನು ದೂರ ಮಾಡುವುದರೊಂದಿಗೆ ಉಸಿರಾಟದ ಸಮಸ್ಯೆಯನ್ನು ಕೂಡ ಸದೃಢ ರೀತಿಯಲ್ಲಿ ಬದುಕುವಂತೆ ಮಾಡುತ್ತದೆ ಬೆಳ್ಳುಳ್ಳಿ ಸೇವನೆ ಸಾಂಪ್ರದಾಯಿಕ ಅಡುಗೆ ಪದ್ದತಿಯಲ್ಲಿ ಬಳಸುವುದರಿಂದ ನಮ್ಮ ದೇಹ ಸೇರಲ್ಪಟ್ಟು ಸದೃಢ ಆರೋಗ್ಯದ ವಾಹಕವನ್ನು ನಿಯಂತ್ರಿಸುವುದೇ ಬೆಳ್ಳುಳ್ಳಿಯ ಕಾಯಕ….!”
ಆರೋಗ್ಯಕ್ಕೆ ಇಷ್ಟೆಲ್ಲ ಲಾಭವಿದೆ ಎಂದು ಇಂದಿನ ಮಾಹಿತಿಯಲ್ಲಿ ತಿಳಿದುಕೊಳ್ಳೋಣ. ನೀವು ರಾತ್ರಿ ಮಲಗುವ ಮುನ್ನ ಈ ಬೆಳ್ಳುಳ್ಳಿಯನ್ನು ಉರಿದು ಸೇವನೆ ಮಾಡಿ ಮಲಗುವುದರಿಂದ ಬೆಳಗ್ಗೆ ಮೂತ್ರ ವಿಸರ್ಜನೆ ಮೂಲಕ ಮತ್ತು ಮಲವಿಸರ್ಜನೆ ಮೂಲಕ ನಮ್ಮ ದೇಹದಲ್ಲಿ ಇರುವಂತಹ ಹಲವಾರು ವಿಷಕಾರಿ ಅಂಶಗಳನ್ನು ಇದು ತೆರೆದು ಹೊರ ಹಾಕುತ್ತದೆ. ಮತ್ತು ರಾತ್ರಿ ಮಲಗುವ ಮುನ್ನ ಹುರಿದು ಬೆಳ್ಳುಳ್ಳಿ ಸೇವನೆ ಮಾಡುವುದರಿಂದ ನಮ್ಮ ದೇಹದಲ್ಲಿ ಇರುವಂತಹ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಇದರಿಂದ ನಮ್ಮ ಹೃದಯ ಯಾವಾಗಲೂ ಆರೋಗ್ಯಕರವಾಗಿರಲು ಸಹಾಯವಾಗುತ್ತದೆ.
ಬೆಳ್ಳುಳ್ಳಿಯನ್ನ ಎಚ್ಚೆತವಾಗಿ ಬಳಸುವುದರಿಂದ ಹೃದಯ ಸಂಬಂಧಿ ಕಾಯಿಲೆಗಳನ್ನು ದೂರ ಮಾಡುತ್ತದೆ ಅದಲ್ಲದೆ ಕಬ್ಬಿಣಾಂಶ ಹಾಗೂ ಮೊಲವಿಸರ್ಜನೆ ಮೂತ್ರ ವಿಸರ್ಜನೆ ಸಂದರ್ಭದಲ್ಲಿ ವಿಷಕಾರಿ ಅಂಶವನ್ನ ತೆಗೆದು ಹಾಕುವುದರೊಂದಿಗೆ ಕೊಲೆಸ್ಟ್ರಾ ಕೂಡ ಕಡಿಮೆ ಮಾಡುತ್ತದೆ. ಆರೋಗ್ಯಕರ ವಾತಾವರಣವನ್ನ ನಿರ್ಮಾಣ ಮಾಡಲು ಬೆಳ್ಳುಳ್ಳಿ ಸಹಕರಿಸುತ್ತದೆ.ಉತ್ತಮ ಪರಿಮಳ ಅದಲ್ಲದೆ ಭೇದಲಿನ ಜಠರು ಸಣ್ಣ ಕರುಳು ದೊಡ್ಡ ಕರುಳು ಶ್ವಾಸಕೋಶ ಹಾಗೂ ಯಕೃತ್ತಿಗಳಂತಹ ಸಮಸ್ಯೆಗಳನ್ನು ದೂರ ಮಾಡುವುದರೊಂದಿಗೆ ಬೆಳ್ಳುಳ್ಳಿ ಪ್ರತಿನಿತ್ಯ ಆಹಾರದಲ್ಲಿ ಬಳಸಬೇಕು. ಎನ್ನುವುದು ಒಂದು ಪಾರಂಪರಿಕ ಅಡುಗೆ ಪದ್ಧತಿಯಲ್ಲಿ ಬಂದಿದೆ. ಒಗ್ಗರಣೆ ಮಾಡುವಂತಹ ಸಂದರ್ಭದಲ್ಲಿ ಮಾತ್ರ ಬಳಸದೆ, ಪದಾರ್ಥಗಳನ್ನು ಸಿದ್ಧಪಡಿಸುವಂತಹ ರೀತಿಯಲ್ಲಿ ಬೆಳ್ಳುಳ್ಳಿ ಎಚ್ಚೆತವಾಗಿ ಬಳಸುವುದರಿಂದ ಕೂಡ ರೋಗಗಳಲ್ಲಿನ ಸಮಸ್ಯೆ ಹಾಗೂ ಆರೋಗ್ಯಕರ ಬದುಕಿಗೆ ಕಾರಣವಾಗದೆ. ನಿಯಂತ್ರಣದಲ್ಲಿರಲು ಸಹಕರಿಸುತ್ತದೆ ಎನ್ನುವುದು ಹಿರಿಯರ ಅಂಬೋಣ….!”
-ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ ಕುಂದಾಪುರ ಉಡುಪಿ ಜಿಲ್ಲೆ.m: 9632581508