ಯಾವುದೇ ಆಹಾರವಾಗಲಿ ಹಿತಮಿತವಾಗಿ ಬಳಸಿ ಆರೋಗ್ಯವನ್ನು ಕಾಪಾಡಿಕೊಳ್ಳಿ. ತಿನ್ನಲು ರುಚಿಯಾಗಿದೆ ಎಂದು ಅತಿಯಾಗಿ ತಿಂದರೆ ಆರೋಗ್ಯಕ್ಕೆ ಅನಾರೋಗ್ಯಗಳೇ ಹೆಚ್ಚು. ಅತಿಯಾಗಿ ತಿಂದರೆ ಅಮೃತವೂ ವಿಷ ಎಂಬ ಮಾತಿನಂತೆ ಆಹಾರವನ್ನು ನಿಯಮಿತವಾಗಿ ಸೇವಿಸುವ ಅಭ್ಯಾಸ ಮಾಡಿಕೊಳ್ಳಿ. ಹಣ್ಣುಗಳೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಇಷ್ಟಪಟ್ಟು ತಿನ್ನುತ್ತಾರೆ. ಹಾಗಿರುವಾಗ ನಾವು ಸೇವಿಸುತ್ತಿರುವ ತರಕಾರಿಗಳು ಮತ್ತು ಹಣ್ಣುಗಳಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂಬುದರ ಬಗ್ಗೆ ತಿಳಿದುಕೊಳ್ಳಲೇಬೇಕು. ಕಲ್ಲಂಗಡಿ ಹಣ್ಣಿನಿಂದ ಆರೋಗ್ಯಕ್ಕೆ ಎಷ್ಟು ಪ್ರಯೋಜನವಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ.
ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ
ಕಲ್ಲಂಗಡಿಯಲ್ಲಿರುವ ಪೊಟ್ಯಾಷಿಯಮ್ ಮತ್ತು ಮೆಗ್ನೀಷಿಯಮ್ ಪ್ರಮಾಣವು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಿರುವುದರಿಂದ ಹೃದ್ರೋಗ ಸಮಸ್ಯೆಯನ್ನು ತಡೆಗಟ್ಟಲು ಸಹಾಯಕವಾಗಿದೆ.
ದೇಹವನ್ನು ಹೈಡ್ರೀಕರಿಸುತ್ತದೆ:-
ಕಲ್ಲಂಗಡಿಯಲ್ಲಿ ಶೇ.90ರಷ್ಟು ನೀರಿನ ಪ್ರಮಾಣ ಇರುವುದರಿಂದ ಇದು ನಿಮ್ಮ ದೇಹಕ್ಕೆ ನೀರಿನಾಂಶವನ್ನು ನೀಡುತ್ತದೆ. ಉಷ್ಣಾಂಶದಿಂದ ದೇಹವನ್ನು ತಂಪಾಗಿಡಲು ಸಹಾಯ ಮಾಡುತ್ತದೆ. ಹೆಚ್ಚು ತಂಪಾಗಿರುವುದರಿಂದ ಮಳೆಗಾಲದ ಸಮಯದಲ್ಲಿ ಈ ಹಣ್ಣನ್ನು ಹೆಚ್ಚು ಸೇವಿಸುವುದಿಲ್ಲ.
ತೂಕನಷ್ಟಕ್ಕೆ ಸಹಾಯಕ:-
ಕಲ್ಲಂಗಡಿ ಸಿಹಿ ಮತ್ತು ರಸಭರಿತ ಹಣ್ಣು. ಇದರಲ್ಲಿ ಕ್ಯಾಲೊರಿ ಕಡಿಮೆ. ಆದ್ದರಿಂದ ತೂಕ ಇಳಿಸಿಕೊಳ್ಳಲು ಸಹಾಯಕವಾಗಿದೆ. ಕೊಬ್ಬಿನಾಂಶ ಹೆಚ್ಚಾಗಿ ಇಲ್ಲವಾದ್ದರಿಂದ ಯಾವ ವಯಸ್ಸಿನವರೂ ಸಹ ನಿಯಮಿತವಾಗಿ ಹಣ್ಣನ್ನು ಸೇವಿಸಬಹುದು.
ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ:-
ಕಲ್ಲಂಗಡಿಯಲ್ಲಿ ಫೈಬರ್ ಅಂಶ ಕಂಡು ಬರುತ್ತದೆ. ಇದು ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆಗೆ ಸಹಾಯಕವಾಗಿದೆ. ಫೈಬರ್ಯುಕ್ತ ಹಣ್ಣುಗಳು ಮತ್ತು ತರಕಾರಿಗಳು ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಜತೆಗೆ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಲು ಸಹಾಯಕವಾಗಿದೆ.ಕಲ್ಲಂಗಡಿ ಹಣ್ಣನ್ನು ಇತ್ಯರ್ಥವಾಗಿ ಬಳಸುವುದರಿಂದ ದೇಹದಲ್ಲಿನ ನೀರಿನಂಶ ಉತ್ಪತ್ತಿಯಾಗುವುದರೊಂದಿಗೆ ನರನಾಡಿಗಳಲ್ಲಿ ನೀರಿನ ತೇವಾಂಶ ವೃದ್ದಿಗೊಳಿಸುತ್ತದೆ.ಕಲ್ಲಂಗಡಿ ಹಣ್ಣಿನಲ್ಲಿ ವಿಶೇಷವಾಗಿ ಗುಣಲಕ್ಷಣಗಳನ್ನು ಹೊಂದಿವೆ .ಅದೇ ರೀತಿ ಬೇಸಿಗೆಯಲ್ಲಿ ಕಲ್ಲು ಹಿನ್ನಡೆಯನ್ನು ಸೇವಿಸಿದರೆ 3ಲೀಟರ್ ನಷ್ಟು ನೀರು ಕುಡಿದಂತೆ ಶಕ್ತಿ ದೇಹಕ್ಕೆ ನೀಡುತ್ತದೆ.ಆದ್ದರಿಂದ ಕಲ್ಲು ಅಂಗಡಿಯನ್ನು ತಿಂದು ಆರೋಗ್ಯದ ಸುರಕ್ಷತೆಯನ್ನು ಕಾಪಾಡುವುದು ರೊಂದಿಗೆ ನೀರಿನ ತೇವಾಂಶವನ್ನು ಹಿಡಿದಿಟ್ಟು ಕೊಳ್ಳಲು ಶಕ್ತಿದಾಯಕವಾಗಿದೆ.ಮಲ್ಲಣ್ಣ ಅಂಗಡಿ ವಿಪರೀತ ತಿನ್ನುವುದಕ್ಕಿಂತ ಈ ಬೇಸಿಗೆ ಸಂದರ್ಭದಲ್ಲಿ ನೀರಿನ ದಾಹವನ್ನು ನೀಗಿಸಲು ಮತ್ತು ಪ್ರತಿಕೂಲ ಪರಿಸ್ಥಿತಿ ಅವಮಾನವನ್ನು ಕೇಂದ್ರೀಕರಿಸಲು ನೀರಿನಂಶವನ್ನು ದೇಹಕ್ಕೆ ಸಮರ್ಥಿಸುತ್ತದೆ .ಮನುಷ್ಯನ ವಿವಿಧ ಚಲನವಲನಗಳಿಗೆ ಮತ್ತು ರಕ್ತ ಸಂಗ್ರಹಕ್ಕೆ ನೀರಿನ ಅವಶ್ಯಕತೆ ಎಷ್ಟಿದೆಯೋ ಅಷ್ಟು ಪ್ರಮಾಣವನ್ನು ಕಲ್ಲಂಗಡಿ ಹಣ್ಣಿನ ಮೂಲಕ ದೇಹಕ್ಕೆ ರವಾನೆಯಾಗುತ್ತದೆ ಅಂತಹ ನೀರಿನಂಶವೂ ಇರುತ್ತದೆ ಹಾಗೂ ಇನ್ನಿತರ ದೇಹಕ್ಕೆ ಬೇಕಾಗುವ ಪೌಷ್ಟಿಕಾಂಶಗಳ ಈ ಹಣ್ಣಿನಿಂದ ಶೇಖರಿಸಲಾಗುತ್ತದೆ ಇದು ದೈವದತ್ತವಾಗಿ ಬಂದಿರುವ ಹಣ್ಣಿನ ಖನಿಜಾಂಶಗಳು ಮತ್ತು ಜೀವಸತ್ವಗಳು ಬೆಳೆಯಲು ಸಹಕರಿಸುತ್ತದೆ.
ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ (ಪತ್ರಕರ್ತರು & ಮಾಧ್ಯಮ ವಿಶ್ಲೇಷಕರು)