ಮೀರಾ ಭಯಂಧರ್ ಪರಿಸರದ ಹೆಸರಾಂತ ಸಮಾಜ ಸೇವಕಿ, ವಿಧ್ಯಾಧರ ಕನ್ನಡ ಪ್ರತಿಷ್ಠಾನ ಜಯದೇವಿ ತಾಯಿ ಲಿಗಾಡೆ ಪ್ರಶಸ್ತಿ ಪುರಸ್ಕ್ರತೆ, ಬಂಟರ ಸಂಘ ಮುಂಬೈ ಇದರ ಮೀರಾ ಭಯಂದರ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ, ಶ್ರೀ ಶಕ್ತಿ ಫೌಂಡೇಶನ್ ಮಹಾರಾಷ್ಟ್ರದ ಅಧ್ಯಕ್ಷೆ , ಕನ್ನಡ ಜಾನಪದ ಪರಿಷತ್ ನ ಮಹಾರಾಷ್ಟ್ರದ ಮಹಿಳಾ ಕಾರ್ಯಾಧ್ಯಕ್ಷೆಯಾಗಿ ಮಾತ್ರವಲ್ಲದೆ ಹಲವಾರು ಸಂಘ-ಸಂಸ್ಥೆಗಳಲ್ಲಿ ಪುರಸ್ಕೃತೆಯಾಗಿ ಸಕ್ರೀಯವಾಗಿ ನಿರಂತರ ಸಮಾಜ ಸೇವೆಗೈಯ್ಯುತ್ತಿರುವ ಸಚ್ಚೇರಿಗುತ್ತು ಶಾಲಿನಿ ಎಸ್. ಶೆಟ್ಟಿಯವರಿಗೆ ಪ್ರತಿಷ್ಠಿತ ದಾದಾ ಸಾಹೇಬ್ ಪಾಲ್ಕೆ ಅವಾರ್ಡ್ ನ್ನು ಪಡೆದಿದ್ದಾರೆ. ಅಂಧೇರಿ ಕಂಟ್ರಿ ಕ್ಲಬ್ ಇಲ್ಲಿ ನಡೆದ ಸಮಾರಂಭದಲ್ಲಿ ದಾದಾ ಸಾಹೇಬ್ ಪಾಲ್ಕೆ ಮೆಮೋರಿಯಲ್ ಫೌಂಡೇಶನ್ ವತಿಯಿಂದ ಈ ಪ್ರಶಸ್ತಿಯನ್ನು ಇದರ ಉನ್ನತ ಅಧಿಕಾರಿಗಳು ಪ್ರಶಸ್ತಿಯನ್ನು ಪ್ರಧಾನಿಸಿದರು. ಮಹಾರಾಷ್ಟ್ರದಲ್ಲಿ ತುಳು – ಕನ್ನಡಿಗರ ಪರವಾಗಿ ಬಂಟ ಮಹಿಳೆಯೋರ್ವರು ಇಂತಹ ಮಹಾನ್ ಪ್ರಶಸ್ತಿಗೆ ಭಾಜನರಾಗಿರುವುದು ನಮ್ಮೆಲ್ಲರಿಗೆ ಹೆಮ್ಮೆಯ ವಿಷಯ.
Previous Articleಇಂದು ನಂದಳಿಕೆ ಸಿರಿ ಜಾತ್ರೆ
Next Article ಕರ್ತವ್ಯ ಪಥದಲ್ಲಿ ನಾರಿಶಕ್ತಿಯ ಕಂಡಿರಾ