ಕಿಡ್ನಿ ಪೈಲೂರ್ ಪ್ರಕರಣದಲ್ಲಿ ಈಗ ಮೊವ್ವತ್ತರೊಳಗಿನ ಮಕ್ಕಳೂ ಜಾಸ್ತಿಯಾಗಿ ಸಿಲುಕುತ್ತಿದ್ದಾರೆ. ಕಿಡ್ನಿ ಡಯಾಲಿಸೀಸ್ ವಾರ್ಡಿಗೊಮ್ಮೆ ನೀವು ಎಂಟ್ರಿ ಕೊಟ್ಟರೆ ಈ ಕರಾಳ ಸತ್ಯ ನಿಮಗೂ ಅರ್ಥವಾದೀತು. ಸ್ಟಿಂಗ್ ಎನ್ನುವ ಹೆಸರಿನ ಬಣ್ಣ ಬಣ್ಣದ ಪೇಯವೊಂದು ಮಕ್ಕಳ ಕೈಗೆ ಬಹಳ ಸುಲಭವಾಗಿ ಸಿಗುತ್ತಿದೆ, ಕೇವಲ ಮೂರೇ ಮೂರು ದಿವಸ ಯಾವುದೇ ಮಗು ಸ್ಟಿಂಗ್ ಕುಡಿದರೆ ಅದರ ಅಡಿಕ್ಷನ್ ಶುರುವಾಗುತ್ತದೆ ಮತ್ತು ಆ ಮಗುವಿನ ಕರಾಳ ಅಂತ್ಯವೂ ಸಮೀಪಿಸುತ್ತದೆ! ಅಂಗಡಿ, ಬೇಕರಿಗಳ ಮತ್ತು ಮಾಲ್ ಗಳಲ್ಲಿ ಇದನ್ನ ಮಾರಾಟಕ್ಕಿಟ್ಟವರಿಗೆ ಮನೆಯಲ್ಲಿ ಮಕ್ಕಳಿದ್ದರೆ, ಕನಿಷ್ಠ ಪಾಪ ಪ್ರಜ್ಜೆ ಇದ್ದರೆ ದಯವಿಟ್ಟು ಸ್ಟಿಂಗ್ ಎನ್ನುವ ವಿಷವನ್ನ ಮಾರಾಟ ಮಾಡಿ ಪಾಪವನ್ನು ಕೊಳ್ಳಬೇಡಿ! ಯಾರದೋ ಮನೆಯ ಬೆಳಕು ಆರಲಿಕ್ಕೆ ನೀವೂ ಕಾರಣರಾಗುತ್ತೀರಿ ಎನ್ನುವುದನ್ನ ಮರೆಯಬೇಡಿ. ನಮ್ಮ ಟೀಮ್ ಅಭಿಮತ ಇದನ್ನ ಯಾವುದೇ ಅಂಗಡಿಯಲ್ಲಿ ಮಾರಾಟ ಮಾಡುವುದನ್ನ ಗಮನಿಸಿದರೂ ಅವರಿಗೆ ಮನವರಿಕೆ ಮಾಡಿ ಇನ್ನುಮುಂದೆ ಮಾರಾಟ ಮಾಡದಂತೆ ಒತ್ತಾಯಿಸುತ್ತದೆ.
ನಾನೂ ರೆಡ್ ಬುಲ್ ಕುಡಿಯುತ್ತೇನೆ!
ರಾತ್ರಿ ಪ್ರಯಾಣದ ವೇಳೆಯಲ್ಲಿ ನಿದ್ದೆ ಬಾರದಂತೆ ತಡೆಯಲು ಮೊದಲು ಕಾಫ಼ಿ ಅಥವಾ ಚಹಾ ಕುಡಿಯುತ್ತಿದ್ದ ನಾನು ರೆಡ್ ಬುಲ್ ಕುಡಿದ ಮೇಲೆ ನಿದ್ದೆ ಮಂಗಮಾಯವಾಗಿ ಬಿಡುತ್ತಿತ್ತು. ಒಮ್ಮೆ ಈ ಅನುಭವ ಆದ ನಂತರ ರಾತ್ರಿ ಪ್ರಯಾಣದಲ್ಲಿ ರೆಡ್ ಬುಲ್ ಪಕ್ಕಾ ಆಗಿ ಹೋಗಿತ್ತು! ಒಮ್ಮೆ ರೆಡ್ ಬುಲ್ ಕುಡಿದು ಕುಡಿದೇ ನೂರಾರು ಸಮಸ್ಯೆಗೆ ಬಲಿಯಾದ ಸ್ಟಡಿ ರಿಪೋರ್ಟು ಓದಿ ದಂಗಾಗಿ ಹೋದೆ! ಅನಿವಾರ್ಯ ಸಮಯದಲ್ಲಿ ಮಾತ್ರವೇ ರೆಡ್ ಬುಲ್ ಕುಡಿಯುತ್ತೇನೆ ಎನ್ನುವ ನೆವವನ್ನೂ ಬದಿಗಿಟ್ಟು ಎಂದಿಗೂ ಎನರ್ಜಿ ಡ್ರಿಂಕ್ ಮುಟ್ಟುವುದಿಲ್ಲ ಎನ್ನುವುದು ನನ್ನ ನಿರ್ಧಾರವಾಗಿದೆ. ಬೇಕಿದ್ದರೆ ರಾತ್ರಿ ಪ್ರಯಾಣವನ್ನ ಕಡಿತಗೊಳಿಸೋಣ, ಸಮಾಜವನ್ನು ಆಪೋಷನ ತೆಗೆದುಕೊಳ್ಳುತ್ತಿರುವ ವ್ಯವಸ್ಥೆಗೆ ನಮ್ಮಿಂದ ಒಂದೇ ಒಂದು ರೂಪಾಯಿ ನೆರವೂ ಸಿಗಕೂಡದು. ಎನರ್ಜಿ ಡ್ರಿಂಕ್ಸ್ ವ್ಯಸನಕ್ಕೆ ಬಿದ್ದ ಹಲವರ ಅನಿಸಿಕೆಗಳು ನಿಮಗೆ ಗೂಗಲ್ ಮಾಡಿದರೆ ಬೆರಳಂಚಿನಲ್ಲೇ ಲಭ್ಯವಾಗಲಿದೆ, ಒಮ್ಮೆ ಓದಿ ನೋಡಿ, ನಾವು ಎಷ್ಟು ದುಷ್ಟ ಜಗತ್ತಿನಲ್ಲಿ ಬದುಕುತ್ತಿದ್ದೇವೆ ಎನ್ನುವುದನ್ನು ಅರ್ಥಮಾಡಿಕೊಳ್ಳಿ.
ಸ್ಟಿಂಗ್ ಕುಡಿಯೋದಾ ? ವಿಷ ಕುಡಿಯೋದಾ?
ಬೇಕರಿಗಳಲ್ಲಿ, ಕೂಲ್ ಡ್ರಿಂಕ್ಸ್ ಅಂಗಡಿಗಳಲ್ಲಿ ಸುಲಭವಾಗಿ ಸಿಗುವ ಸ್ಟಿಂಗ್ ಬಾಟಲಿಯ ಮೇಲೆ ಸ್ಪಷ್ಟವಾಗಿ ಬರೆಯಲಾಗಿದೆ ಇದನ್ನ ಮಕ್ಕಳು, ಗರ್ಭಿಣಿಯರು ಮತ್ತು ಕೆಫ಼ೇನ್ ಅಲರ್ಜಿ ಇರುವವರು ಕುಡಿಯಲೇ ಕೂಡದು ಎನ್ನುವುದಾಗಿ. ಆದರೂ ಈ ಪಿಂಕ್ ಪಾನೀಯವನ್ನು ಮಕ್ಕಳನ್ನ ತಾರ್ಗೆಟ್ ಮಾಡಿಯೇ ಮಾಡಲಾಗಿದೆ ಎನ್ನುವುದು ಕಂಪೇನಿಯವರಿಗೆ ಮಾತ್ರವೇ ಗೊತ್ತು! ಸ್ಟಿಂಗ್ ಎಪ್ಪತ್ತೆರಡು ಪರ್ಸೆಂಟ್ ಕೆಮಿಕಲ್ ಕೆಫ಼ೆನ್ ಅಂಶವನ್ನ ಮತ್ತು ಹೈ ಶುಗರ್ ಸಿರಪ್ ಒಳಗೊಂಡಿದೆ, ನಮ್ಮ ಮೆದುಳಿನ ಅಡಿನೋಸಿನ್ ಎಂದರೆ ದೇಹಕ್ಕೆ ವಿಶ್ರಾಂತಿ ಬೇಕು ಎಂದು ಸೂಚಿಸುವ ಒಂದು ಹಾರ್ಮೋನ್ ಸೃವಿಸದಂತೆ ಮಾಡಿ ಕೃತಕವಾಗಿ ಶಕ್ತಿ ಅಥವಾ ಎನರ್ಜಿ ಬಂದ ಅನುಭವ ನಮಗಾಗುತ್ತದೆ, ಇದನ್ನ ನಿರಂತರವಾಗಿ ಕುಡಿಯುತ್ತಲೇ ಹೋದಾಗ ಮೆದುಳಿನಲ್ಲಿ ಹಾರ್ಮೋನುಗಳ ವ್ಯತ್ಯಾಸವಾಗಿ ಈ ಚಟ ನಮಗೆ ಚಟ್ಟ ಕಟ್ಟುವುದು ಗ್ಯಾರಂಟಿ, ನಂಗೆ ಚಟವೇನಿಲ್ಲ. ದಿನಕ್ಕೆ ಒಂದ್ ಸಲ ಕುಡಿತೀನಿ ಅಂದ್ರೂ ಅಥವಾ ತಿಂಗಳಿಗೆ ನಾಲ್ಕು ಸಲ ಕುಡಿದ್ರೂ ಇದು ದೇಹದ ಮೇಲೆ ವಿಪರೀತವಾದ ದುಷ್ಪರಿಣಾಮ ಬೀರುತ್ತದೆ.
ಅಲ್ಕೋಹಾಲ್ ಫ಼್ಯಾಷನ್!
ಹೈ-ಫ಼ೈ ಪಾರ್ಟಿಗಳಲ್ಲಿ ಈಗ ಎನರ್ಜಿ ಡ್ರಿಂಕ್ಸ್ ಮಿಕ್ಸ್ ಮಾಡಿ ಕುಡಿಯುವ ಹೊಸಾದೊಂದು ಶೋಕಿ ಶುರುವಾಗಿದೆ. ಇದು ಎಂಥಹ ಅನಾಹುತವನ್ನ ಸೃಷ್ಠಿಸಲಿದೆ ಎಂದರೆ ಸಡನ್ ಆಗಿ ಬ್ರೈನ್ ಹ್ಯಾಮರೇಜ್ ಆಗುವ ಸಾಧ್ಯತೆ ಇಪ್ಪತ್ತು ಪಟ್ಟು ಹೆಚ್ಚು ಎನ್ನುವುದನ್ನ ಸ್ಟಡಿ ರಿಪೋರ್ಟ್ ಹೇಳುತ್ತಿದೆ! ಹೀಗಿನ ಹಾಳು ಶೋಕಿ ಮಾಡಿ ಸಾಯುವವರು ಸಾಯಲಿ, ಆದರೆ ನಿಮ್ಮ ಮಗು ಸ್ಟಿಂಗ್ ಕುಡಿಯುತ್ತಿದೆಯಾ? ಕ್ರಿಕೇಟ್ ಆಡಲು ಹೊರಟ ಮಕ್ಕಳು, ಬಾಡಿ ಬಿಲ್ಡ್ ಮಾಡುವ ಗೆಳೆಯರು, ಕಬ್ಬಡ್ಡಿ ಪಟುಗಳು, ಸ್ಪೋರ್ಟ್ ಕೂಟದಲ್ಲಿರುವವರು ಇದರ ಚಟಕ್ಕೆ, ಭ್ರಮೆಗೆ ಹೆಚ್ಚು ದಾಸರಾಗಿರುತ್ತಾರೆ. ಇತ್ತೀಚೆಗೆ ಆಡುತ್ತಿರುವಾಗಲೇ ಕುಸಿದು ಬಿದ್ದ ಕ್ರೀಡಾಪಟುಗಳ ಹಿನ್ನೆಲೆಯಲ್ಲಿಯೂ ಇದು ಸಾಬೀತಾಗಿತ್ತು. ನಿಮ್ಮ ಮಕ್ಕಳ ಮೇಲೆ ನಿಮ್ಮ ಗಮನವಿರಲಿ. ಸ್ಟಿಂಗ್, ರೆಡ್ ಬುಲ್ ತರಹದ ಎನರ್ಜಿ ಡ್ರಿಂಕ್ಸ್ ನಿಮ್ಮ ಬದುಕನ್ನ ನೆಮ್ಮದಿಯನ್ನ ಕಸಿದುಕೊಳ್ಳದಿರಲಿ.
ವಸಂತ್ ಗಿಳಿಯಾರ್