Author: admin
ತೀರ್ಥಹಳ್ಳಿ ಶ್ರೀ ಮಾರಿಕಾಂಬಾ ಜಾತ್ರೆ ಪ್ರಯುಕ್ತ ನಡೆದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಸಂದರ್ಭದಲ್ಲಿ ಶ್ರೀ ಪಾವಂಜೆ ಮೇಳದ ಸಂಚಾಲಕರು ಹಾಗೂ ಪ್ರಧಾನ ಭಾಗವತರಾದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಇವರನ್ನು ಗಣ್ಯರ ಉಪಸ್ಥಿತಿಯಲ್ಲಿ ಗೌರವಿಸಲಾಯಿತು. ಈ ಸಮಾರಂಭದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ನ ತೀರ್ಥಹಳ್ಳಿ ಘಟಕದ ಪದಾಧಿಕಾರಿಗಳು, ಯಕ್ಷಗಾನ ಕಲಾಭಿಮಾನಿಗಳು ಬಹು ಸಂಖ್ಯೆಯಲ್ಲಿ ನೆರೆದಿದ್ದರು.
ದೇವರಲ್ಲಿ ಅರ್ಪಣಾ ಭಾವದ ಭಕ್ತಿ, ಸತತ ಪರಿಶ್ರಮ, ಸಮಾಜದ ಸತತ ಸಂಪರ್ಕಗಳಿಂದ ಇಂದು ಬಂಟ ಸಮುದಾಯ ಮಾತ್ರವಲ್ಲ ಸಮಸ್ತ ಮಾನವ ಸಮುದಾಯದ ಮಧ್ಯೆ ಧ್ರುವತಾರೆಯಂತೆ ಪ್ರಕಾಶಮಾನರಾಗಿರುವ ಪ್ರಕಾಶ್ ಶೆಟ್ಟರ ಹೆಸರು ಇಂದು ಅನ್ವರ್ಥವಾಗಿದೆ. ಪ್ರಕಾಶ್ ಶೆಟ್ಟರು ತಾನು ಬೆಳೆಯುತ್ತಿರುವಂತೆಯೇ ತಾನು ಹುಟ್ಟಿದ ಸಮುದಾಯದ ಏಳಿಗೆಗೂ ಕಂಕಣ ಬದ್ಧರಾಗಿ ದುಡಿಯುತ್ತಿದ್ದಾರೆ. ಸಾಮಾಜಿಕವಾಗಿ, ಆರ್ಥಿಕವಾಗಿ ಬಹು ಎತ್ತರಕ್ಕೇರಿದರೂ ತಮ್ಮ ಸ್ನೇಹ ಸೌಹಾರ್ದ ಆತ್ಮೀಯತೆಗಳಿಂದ ಎಂಥವರನ್ನೂ ತನ್ನ ಮಿತ್ರವಲಯಕ್ಕೆ ಸೇರಿಸಿಕೊಳ್ಳುವ ಅತ್ಯಂತ ಉದಾರಿ ಸಜ್ಜನ. ತನ್ನ ಹೋಟೆಲ್ ಉದ್ಯಮದಲ್ಲಿ ಗ್ರಾಹಕರನ್ನೂ ತನ್ನ ಕುಟುಂಬದ ಸದಸ್ಯರಂತೆ ಪ್ರೀತಿಸುತ್ತಾ ಅವರ ಅವಶ್ಯಕತೆ ಏನೇ ಇರಲಿ, ದೂರುಗಳಿರಲಿ, ಶ್ಲಾಘನೆ ಇರಲಿ ಎಲ್ಲವನ್ನೂ ಸಮಚಿತ್ತದಿಂದ ಆಲಿಸುವ ತಮ್ಮ ವಿಶಿಷ್ಟ ಗುಣ ಇಂದು ಹೋಟೆಲ್ ಹಾಸ್ಪಿಟಾಲಿಟಿ ಉದ್ಯಮದಲ್ಲಿ ಕೀರ್ತಿಶಿಖರದ ತುತ್ತ ತುದಿಯಲ್ಲಿದ್ದರೂ ತಮ್ಮ ದೃಷ್ಠಿ ತಾನು ಹುಟ್ಟಿ ಬೆಳೆದ ನೆಲದ ತಳದಲ್ಲಿದೆ. 1959ರಲ್ಲಿ ಉಡುಪಿ ಜಿಲ್ಲೆಯ ಕೊರಂಗ್ರಪಾಡಿ ಎಂಬಲ್ಲಿ ಕೊರಂಗ್ರಪಾಡಿ ಮಾಧವ ಶೆಟ್ಟಿ ಮತ್ತು ರತ್ನಾ ಶೆಟ್ಟಿ ಇರ್ವತ್ತೂರು ಹೊಸಮನೆ ದಂಪತಿಗೆ ಜನಿಸಿದ…
ವಿಶ್ವ ಬಂಟರ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ವಿಶ್ವ ಬಂಟ ಸಮ್ಮೇಳನ ಹಿನ್ನೆಲೆಯಲ್ಲಿ ವಿಶ್ವ ಬಂಟರ ಸಾಂಸ್ಕೃತಿಕ ವೈಭವದ ಉದ್ಘಾಟನಾ ಕಾರ್ಯಕ್ರಮ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಶೆಟ್ಟಿ ತೆರೆದ ಮೈದಾನದಲ್ಲಿನ ಕನ್ಯಾನ ಸದಾಶಿವ ಶೆಟ್ಟಿ ವೇದಿಕೆಯಲ್ಲಿ ಭಾನುವಾರ ಮುಂಜಾನೆ ನೆರವೇರಿತು. ಬಳಿಕ ಸಭೆಯನ್ನುದ್ದೇಶಿಸಿ ಮಾತಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವ ಅವರು, “ಯಕ್ಷಗಾನಕ್ಕೆ ಬಂಟರು ಕೊಟ್ಟಿರುವ ಕೊಡುಗೆ ಅಪಾರ. ತೆಂಕುತಿಟ್ಟು, ಬಡಗುತಿಟ್ಟುಗಳಲ್ಲಿ ನಮ್ಮ ಅನೇಕ ಕಲಾವಿದರು ಇದ್ದಾರೆ. ಬಂಟ ಸಮುದಾಯ ಇಂದು ಕಲೆಗೆ ಸಾಕಷ್ಟು ಪ್ರೋತ್ಸಾಹ ನೀಡುತ್ತಾ ಬೆನ್ನೆಲುಬಾಗಿ ನಿಂತಿದೆ. ಕ್ರೀಡೆ ಮತ್ತು ಸಂಸ್ಕೃತಿಯನ್ನು ಬಿಟ್ಟು ಬಂಟರ ಬದುಕೇ ಇಲ್ಲ. ಈ ಹಿನ್ನೆಲೆಯಲ್ಲಿ ಬಂಟರ ಸಮ್ಮೇಳನ ಅರ್ಥಪೂರ್ಣವಾಗಿ ನಡೆಯುತ್ತಿದೆ. ಐಕಳ ಹರೀಶ್ ಶೆಟ್ಟಿಯವರ ಸಾರಥ್ಯದಲ್ಲಿ ಬಹಳ ಒಳ್ಳೆಯ ಕಾರ್ಯಕ್ರಮಗಳು ಆಯೋಜನೆಗೊಂಡಿವೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಹೇರಂಬ ಇಂಡಸ್ಟ್ರಿಸ್ ಸಿಎಂಡಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮಹಾದಾನಿ ಕನ್ಯಾನ ಸದಾಶಿವ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ…
ಪುಣೆ : ಜನ ಸಾಮಾನ್ಯರಿಗೆ ಬೇಕಾದ ವಸ್ತುಗಳು ಪ್ರಾಮುಖ್ಯತೆಯನ್ನು ಹೊಂದಿ ಪ್ರದರ್ಶನಗೊಂಡಾಗ ಉತ್ಪನ್ನ ಮತ್ತು ಸೇವೆಯನ್ನು ಉತ್ತೇಜಿಸಲು ಸಹಕಾರಿಯಾಗುತ್ತದೆ, ಇಂತಹ ಪ್ರದರ್ಶನಗಳಿಂದ ನಾವು ಸ್ಪಷ್ಟ ಕಲ್ಪನೆಯೊಂದಿಗೆ ಯೋಜನೆ ರೂಪಿಸಿದರೆ ಸಂಘಕ್ಕೆ ಸಂಪನ್ಮೂಲ ಕ್ರೋಡಿಕರಣಕ್ಕೆದಾರಿ ಯನ್ನು ಮಾಡಿಕೊಳ್ಳಬಹುದು ,ಅಲ್ಲದೆ ಪ್ರದರ್ಶನಕಾರರ ವಿಶ್ವಾಸಾರ್ಹತೆಯನ್ನು ಪ್ರದರ್ಶಿಸಲು ಮತ್ತು ಪ್ರಚಾರ ಪಡೆಯಲು ಕಾರಣವಾಗುತ್ತದೆ .ನಮ್ಮ ಬಂಟರ ಸಂಘದ ಮಹಿಳಾ ವಿಬಾಗವರು ಆಯೋಜಿಸಿರುವ ಈ ಪ್ರದರ್ಶನದಲ್ಲಿ ಉತ್ತಮ ಗುಣ ಮಟ್ಟದ ಸೀರೆಗಳು ನಮಗೆ ಒಂದೇ ಕಡೆ ಸಿಗುವಂಥಹ ಅವಕಾಶವನ್ನು ಕೌಶಿಕಿ ಸಿಲ್ಕ್ ನವರು ಮಾಡಿ ಕೊಟ್ಟಿದ್ದಾರೆ. ಇದರಲ್ಲಿ ಎಲ್ಲರೂ ಬಾಗಿಗಳಾಗಬೇಕು . ನವರಾತ್ರಿಯ ಈ ಶುಭ ಸಂದರ್ಭದಲ್ಲಿ ಮಹಿಳಾ ವಿಭಾಗದವರು ಹಮ್ಮಿಕೊಂಡಿರುವ ಈ ಕಾರ್ಯಕ್ರಮಕ್ಕೆ ಶುಭವನ್ನು ಕೋರುತ್ತೇನೆ ಹಾಗೂ ಪ್ರದರ್ಶನ ಮತ್ತು ಮಾರಾಟ ಯಶಸ್ವಿಯಾಗಲಿ ಎಂದು ಶುಭ ಹಾರೈಸುತ್ತೇನೆ, ಶರನ್ನವರಾತ್ರಿಯ ಶುಭಾಶಯಗಳು ಮತ್ತು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಕೃಪಾಶೀರ್ವಾದ ಸರ್ವರಿಗೂ ಲಬಿಸಲಿ ಎಂದು ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ಅಧ್ಯಕ್ಷ ರಾಕೇಶ್ ಶೆಟ್ಟಿ ಬೆಳ್ಳಾರೆ ನುಡಿದರು. ಬಂಟರ ಸಂಘ…
ಮುಂಬಯಿಯಲ್ಲಿ ನಡೆದ ನಡೆದ ‘ಮಿಸ್ ದಿವಾ ಯೂನಿವರ್ಸ್ 2023’ ಸ್ಪರ್ಧೆಯಲ್ಲಿ ಕರ್ನಾಟಕದ ತ್ರಿಶಾ ಶೆಟ್ಟಿ ‘ಮಿಸ್ ದಿವಾ ರನ್ನರ್ ಅಪ್’ ಕಿರೀಟಕ್ಕೆ ಭಾಜನರಾಗಿದ್ದಾರೆ. ಕಳೆದ ವರ್ಷ ಮಂಗಳೂರು ಮೂಲದ ಸುಂದರಿ ದಿವಿತಾ ರೈ ಅವರು (Diwita Rai) ಅವರು ‘ಮಿಸ್ ದಿವಾ ಯೂನಿವರ್ಸ್ 2022’ ಆಗಿ ಹೊರಹೊಮ್ಮಿದ್ದರು. ಈ ಬಾರಿ ರನ್ನರ್ ಅಪ್ ಸ್ಥಾನಕ್ಕೆ ಕರ್ನಾಟಕ ತೃಪ್ತಿಪಟ್ಟುಕೊಂಡಿದೆ. ‘ಮಿಸ್ ದಿವಾ ಯೂನಿವರ್ಸ್ 2023’ ಕಿರೀಟ ಚಂಡೀಗಢದ ಬೆಡಗಿ ಶ್ವೇತಾ ಶಾರದಾ (Shwetha Sharda) ಅವರ ಪಾಲಾಗಿದೆ. ಕಳೆದ ವರ್ಷದ ವಿಜೇತೆ ದಿವಿತಾ ರೈ ಅವರು ಈ ಕಿರೀಟವನ್ನು ಈ ಸಾಲಿನ ವಿಜೇತೆ ಶ್ವೇತಾ ಶಾರದಾ ಅವರಿಗೆ ತೊಡಿಸಿದರು. ಮಿಸ್ ದಿವಾ ಯೂನಿವರ್ಸ್ 2023 ರಲ್ಲಿ ಕರ್ನಾಟಕದಿಂದ ಬಂದ ತ್ರಿಶಾ ಶೆಟ್ಟಿ ಮೊದಲ ರನ್ನರ್-ಅಪ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ತ್ರಿಶಾ ಶೆಟ್ಟಿ ಅವರ ಕುರಿತು ಹೇಳುವುದಾದರೆ, 22 ನೇ ವಯಸ್ಸಿನಲ್ಲಿ, ತ್ರಿಶಾ ಮನೋವಿಜ್ಞಾನದಲ್ಲಿ ಪದವೀಧರರಾಗಿ, ಮಾಡೆಲ್ ಮತ್ತು ನಟಿಯಾಗಿ ನಿಂತಿದ್ದಾರೆ. ಈಕೆ ನೃತ್ಯಗಾತಿ. ಭರತನಾಟ್ಯ,…
ಕನ್ನಡ ಶಾಲೆಯಲ್ಲಿ ಇಂದು ಸಮವಸ್ತ್ರ ವಿತರಣೆ ಮಾಡಿದ್ದೇವೆ, ಮುಂದೆಯೂ ಕೂಡ ಪ್ರತಿ ವರ್ಷವೂ ಕೂಡ ನಾನೇ ಈ ಕನ್ನಡ ಶಾಲೆಗಳಿಗೆ ಸಮವಸ್ತ್ರ ವಿತರಿಸುತ್ತೇನೆ. ಕನ್ನಡ ಶಾಲೆಗಳು ಉಳಿಯಬೇಕು ಈ ನಿಟ್ಟಿನಲ್ಲಿ ನಾವು ಕನ್ನಡ ಶಾಲೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದು ಕಲಂಗುಟ್ ಕನ್ನಡ ಸಂಘದ ಅಧ್ಯಕ್ಷ ಮುರಳಿ ಮೋಹನ್ ಶೆಟ್ಟಿ ನುಡಿದರು. ಕನ್ನಡ ಸಂಘ ಜುವಾರಿನಗರ ಹಾಗೂ ಕಲಂಗುಟ್ ಕನ್ನಡ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಜುವಾರಿನಗರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 120 ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್ ಮತ್ತು ಸಮವಸ್ತ್ರ ವಿತರಣೆ ಮಾಡಲಾಯಿತು. ಕೊರ್ಟಾಲಿಂ ಕ್ಷೇತ್ರದ ಶಾಸಕ ಅಂಥೋನಿ ವಾಜ್ ಕಾರ್ಯಕ್ರಮದ ಉಧ್ಘಾಟನೆ ನೆರವೇರಿಸಿ ಮಾತನಾಡಿ, ಕನ್ನಡ ಶಾಲೆ ಮತ್ತು ಕನ್ನಡಿಗರ ಮೇಲೆ ನನಗೆ ಅಪಾರ ಗೌರವವಿದೆ. ಈ ಭಾಗದ ಕನ್ನಡಿಗರೇ ನನ್ನನ್ನು ಚುನಾವಣೆಯಲ್ಲಿ ಗೆಲ್ಲಿಸಿದ್ದಾರೆ. ಕನ್ನಡಿಗರೊಂದಿಗೆ ನಾನು ಸದಾ ಇರುತ್ತೇನೆ, ಕನ್ನಡ ಶಾಲೆಯ ದುರಸ್ತಿ ಕಾರ್ಯಕ್ಕಾಗಿ ಕೂಡಲೇ 15 ಲಕ್ಷ ರೂಪಾಯಿಗಳನ್ನು ಮಂಜೂರು ಮಾಡಲಾಗುವುದು.…
ಬ್ರಹ್ಮಾವರದ ಫಾರ್ಚ್ಯೂನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸಸ್ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭವು ಜೂನ್ 25ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಅಧ್ಯಕ್ಷ ಡಾ. ದೈವಿಕ್ ಟಿ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹಂಗಾರಕಟ್ಟೆಯ ಸಾಮಾಜಿಕ ಶಿಕ್ಷಣ ಮತ್ತು ಸಾಂಸ್ಕೃತಿಕ ಸಂಸ್ಥೆ ಇದರ ಅಧ್ಯಕ್ಷ ಬಿ. ಭರತ್ ಕುಮಾರ್ ಶೆಟ್ಟಿ ಮತ್ತು ಸಂಸ್ಥೆಯ ಕಾರ್ಯದರ್ಶಿ ಎಚ್. ಇಬ್ರಾಹಿಂ ಸಾಹೇಬ್ ಹಾಗೂ ಚೇತನಾ ಪ್ರೌಢಶಾಲೆಯ ಕಲ್ಪನಾ ಶೆಟ್ಟಿ ಇವರು ವಹಿಸಿದ್ದರು. ಫಾರ್ಚ್ಯೂನ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ತಾರಾನಾಥ್ ಶೆಟ್ಟಿ, ಬಿ. ಡಿ ಶೆಟ್ಟಿ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಸ್ಮಿಥಮೋಲ್ ಇ. ಎಂ, ಫಾರ್ಚ್ಯೂನ್ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಸಂಘದ ಅಧ್ಯಕ್ಷ ಧ್ರುವ ಹಾಗೂ ಬಿ. ಡಿ ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಧನುಷ್, ಕಾಲೇಜಿನ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಕಾಪು ಕ್ಷೇತ್ರದಿಂದ ಗೆಲುವು ಸಾಧಿಸಿ ಬಿಜೆಪಿ ಶಾಸಕರಾಗಿ ಆಯ್ಕೆಗೊಂಡ ಗುರ್ಮೆ ಸುರೇಶ್ ಶೆಟ್ಟಿಯವರ ವಿಜಯೋತ್ಸವ ಕಾರ್ಯಕ್ರಮವು ಶಿರ್ವ ಮಂಚಕಲ್‌ಪೇಟೆಯಲ್ಲಿ ನಡೆಯಿತು. ಪಡುಕೆರೆಯಿಂದ ಪ್ರಾರಂಭಗೊಂಡ ವಿಜಯೋತ್ಸವ ಯಾತ್ರೆಯು ಕಟಪಾಡಿ, ಕುರ್ಕಾಲು, ಬಂಟಕಲ್, ಶಿರ್ವ ಮಂಚಕಲ್ ಪೇಟೆಗೆ ಆಗಮಿಸಿದ್ದು, ಪಕ್ಷದ ಪ್ರಮುಖರು, ಕಾರ್ಯಕರ್ತರು ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು. ಶಿರ್ವ ಮಂಚಕಲ್‌ಪೇಟೆಯಲ್ಲಿ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಬಳಿಕ ಸಾರ್ವಜನಿಕ ಶ್ರೀ ಗಣೇಶೋತ್ಸವ ವೇದಿಕೆಯ ಬಳಿಯ ಮಹಿಳಾ ಸೌಧದಲ್ಲಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರು ಲಾಲಾಜಿ ಆರ್. ಮೆಂಡನ್ ಮತ್ತು ಕಾರ್ಯಕರ್ತರೊಂದಿಗೆ ಮಧ್ಯಾಹ್ನದ ಭೋಜನ ಸವಿದರು. ಬಳಿಕ ವಿಜಯೋತ್ಸವ ಯಾತ್ರೆಯು ಕುತ್ಯಾರುವಿಗಾಗಿ ಮುದರಂಗಡಿಗೆ ತೆರಳಿತು. ವಿಜಯೋತ್ಸವದಲ್ಲಿ ಲಾಲಾಜಿ ಆರ್.ಮೆಂಡನ್, ಶ್ಯಾಮಲಾ ಕುಂದರ್, ಕಾಪು ಮಂಡಲ ಅಧ್ಯಕ್ಷ ಶ್ರೀಕಾಂತ್ ನಾಯಕ್, ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಶೆಟ್ಟಿ, ಶಿಲ್ಪಾ ಜಿ. ಸುವರ್ಣ, ಗೀತಾಂಜಲಿ ಸುವರ್ಣ, ಸುಮಾ ಯು. ಶೆಟ್ಟಿ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಕುತ್ಯಾರು ನವೀನ್ ಶೆಟ್ಟಿ, ಗಂಗಾಧರ ಸುವರ್ಣ, ಮತ್ತಿತರ ಪಕ್ಷದ ಪ್ರಮುಖರು, ರಾಜೇಶ್ ನಾಯ್ಕ,…
ಚೇಳ್ಯಾರು ಖಂಡಿಗೆ ಧರ್ಮರಸು ಶ್ರೀ ಉಳ್ಳಾಯ ದೈವಸ್ಥಾನದ ಗಡಿ ಪ್ರಧಾನರಾಗಿ 30 ವರ್ಷಗಳನ್ನು ಪೂರೈಸಿರುವ ಆದಿತ್ಯ ಮುಕ್ಕಾಲ್ದಿಯವರಿಗೆ ಸಾರ್ವಜನಿಕ ಅಭಿನಂದನಾ ಸಮಾರಂಭ ಮೇ 12ರಂದು ಶ್ರೀ ಕ್ಷೇತ್ರದಲ್ಲಿ ಜರುಗಲಿದೆ ಎಂದು ಅಭಿನಂದನಾ ಸಮಿತಿ ಅಧ್ಯಕ್ಷ ಕರುಣಾಕರ ಶೆಟ್ಟಿ ಪಣಿಯೂರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಅಂದು ಬೆಳಿಗ್ಗೆ ಗಂಟೆ 7.00ಕ್ಕೆ ಚಂಡಿಕಾಯಾಗ ನಡೆಯಲಿದ್ದು, ಮಧ್ಯಾಹ್ನ ಗಂಟೆ 11.00ಕ್ಕೆ ಪುತ್ತೂರು ಜಗದೀಶ ಆಚಾರ್ಯ ಮತ್ತು ಬಳಗದವರಿಂದ “ಭಕ್ತಿಗಾನ ಸುಧೆ” ಜರುಗಲಿದೆ. ಮಧ್ಯಾಹ್ನ ಗಂಟೆ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಗಂಟೆ 4.00ಕ್ಕೆ ಖಂಡಿಗೆಬೀಡಿನಿಂದ ಅದಿತ್ಯ ಮುಕ್ಕಾಲ್ದಿಯವರೊಂದಿಗೆ, ಸ್ವಾಮೀಜಿಗಳು, ಧಾರ್ಮಿಕ ಮುಖಂಡರು, ಅತಿಥಿಗಣ್ಯರು ಹಾಗೂ ಎಲ್ಲಾ ಕ್ಷೇತ್ರದ ಗಡಿಪ್ರಧಾನರು ಭವ್ಯ ಮೆರವಣಿಗೆಯೊಂದಿಗೆ ಕ್ಷೇತ್ರದ ಬೂಬ ಮುಕ್ಕಾಲ್ಲಿ ವೇದಿಕೆಗೆ ಬಂದು ಸಂಜೆ ಗಂಟೆ 5ಕ್ಕೆ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮ ಜರುಗಲಿರುವುದು ಎಂದು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಒಡಿಯೂರು, ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ ವಜ್ರದೇಹಿ ಮಠ ಗುರುಪುರ…
ಕುಟುಂಬದ ತರವಾಡು ಎಂದರೆ ನಮ್ಮ ಶರೀರದಲ್ಲಿರುವ ಹೃದಯವಿದ್ದಂತೆ.ಹೃದಯ ಆರೋಗ್ಯವಾಗಿದ್ದರೆ ಮಾತ್ರ ಶರೀರ ಸ್ವಸ್ಥ ವಾಗಿರುತ್ತದೆ. ಆದುದರಿಂದ ತರವಾಡು ಮನೆಯನ್ನು ನಿರ್ಮಿಸಿ ದೈವಗಳನ್ನು ಶ್ರದ್ಧಾಭಕ್ತಿಯಿಂದ ಆರಾಧಿಸಿಕೊಂಡು ಬರಬೇಕು . ಕುಟುಂಬದ ತಾಯಿಬೇರೆಂದರೆ ಅದು ತರವಾಡು.ಬೇರಿಗೆ ನೀರೆರೆದು ಪೋಷಿಸಿದರೆ ಮಾತ್ರ ಕುಟುಂಬವೆಂಬ ವಟವೃಕ್ಷ ಸಮೃದ್ಧಿಯಿಂದಿರಲು ಸಾಧ್ಯ ಎಂದು ಒಡಿಯೂರು ಕ್ಷೇತ್ರದ ಪೂಜ್ಯರಾದ ಶ್ರೀ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು. ಅವರು ಕಳಿಯೂರು ದೇವಸ್ಯಗುತ್ತು ದೈವಸ್ಥಾನದ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಉಪಸ್ಥಿತರಿದ್ದು ಆಶೀರ್ವಚನ ನೀಡುತ್ತಾ ನಮ್ಮಲ್ಲಿ ಆತ್ಮಜ್ಞಾನದ ಹಸಿವನ್ನು ನೀಗಿಸುವ ಕಾರ್ಯ ಆಗಬೇಕಾಗಿದೆ. ನಮ್ಮ ವರ್ತಮಾನ ಸುಸ್ಥಿತಿಯಲ್ಲಿದ್ದರೆ ಭವಿಷ್ಯ ಸುಂದರವಾಗುತ್ತದೆ. ವಿಶ್ವದಲ್ಲಿ ಧರ್ಮ ಚಾವಡಿಯಿದ್ದರೆ ಅದು ಭಾರತ. ಭಾರತದೊಳಗೊಂದು ಧರ್ಮ ಚಾವಡಿಯಿದ್ದರೆ ಅದು ನಮ್ಮ ತುಳುನಾಡು. ಇಲ್ಲಿರುವಷ್ಟು ದೈವಗಳ ಆರಾಧನೆ ಬೇರೆಲ್ಲೂ ನಡೆಯುವುದಿಲ್ಲ. ತುಳುವ ಸಂಸ್ಕೃತಿ ನಮ್ಮ ಮಾತೃ ಸಂಸ್ಕೃತಿಯಾಗಿದೆ. ಸಂಸ್ಕೃತಿಯ ಉಳಿವು ಇಂತಹ ಧರ್ಮಾಚರಣೆಗಳಿಂದ ಮಾತ್ರ ಸಾಧ್ಯ. ದೈವಿಕವಾದ ಕಲೆ – ಕಾರಣಿಕದ ತಾಣವೇ “ದೇವಸ್ಯ”. ಇಲ್ಲಿ ಒಂದು ಆದರ್ಶಯುತ…















