ಮೂಲತ: ಮೂಡಂಬೈಲು ರವಿ ಶೆಟ್ಟಿ ದೋಣಿಂಜೆಗುತ್ತು ಅವರು ಕತಾರ್ ನಲ್ಲಿ ಎಟಿಎಸ್ ಸಂಸ್ಥೆಯ ಆಡಳಿತ ನಿರ್ದೇಶಕರು.ಇಂಜಿನಿಯರ್ ಪಧವೀಧರರಾದ ಅವರು ಉದ್ಯಮ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಬೀರಿದವರು. ಕರ್ನಾಟಕ ಮೂಲದ ಸುಮಾರು 2000 ಜನರಿಗೆ ಇದುವರೆಗೆ ಅವರು ಉದ್ಯೋಗವನ್ನು ನೀಡಿದ್ದಾರೆ.
ತಮ್ಮ ಜೀವನದಲ್ಲಿ ಸಮಾಜಸೇವೆಗೆ ಹೆಚ್ಚು ಮಹತ್ವ ನೀಡಿದ ಅವರು ಅಶಕ್ತರ,ನೊಂದವರ ಬಾಳಿಗೆ ಬೆಳಕಾದವರು. ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಕಾರ, ಆರೋಗ್ಯ ಸಮಸ್ಯೆಯಲ್ಲಿ ಇರುವ ಅದೆಷ್ಟೋ ನೊಂದವರಿಗೆ ಸಹಾಯ, ವಿ ದೇವಾಲಯಗಳ ಜೀರ್ಣೋದ್ಧಾರ ಹೀಗೆ ನಾನಾ ತರದಲ್ಲಿ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ. ಅವರಿಗೆ ಆರ್ಯಭಟ ಪ್ರಶಸ್ತಿ, ಮದರ್ ಥೆರೇಸಾ ಸೋಶಿಯಲ್ ಹಾರ್ಮೋನಿ ಪ್ರಶಸ್ತಿ, ಅಭಿಯಂತರ ಪ್ರಶಸ್ತಿ, ಸೋಶಿಯಲ್ ರೆಸ್ಪಾನ್ಸಿಬಿಲಿಟಿ ಆಂಡ್ ಬಿಜಿನೆಸ್ ಎಕ್ಸೆಲೆನ್ಸ್ ಅವಾರ್ಡ್, ನೆಲ್ಸನ್ ಮಂಡೇಲಾ ಅವಾರ್ಡ್ ಫಾರ್ ಹ್ಯೂಮಾನಿಟಿ ಮೊದಲಾದ ಅನೇಕ ರಾಜ್ಯ,ರಾಷ್ಟ್ರ, ಅಂತಾರಾಷ್ಟ್ರೀಯ ಪ್ರಶಸ್ತಿಗಳು ದೊರೆತಿವೆ.
ಮುಂಬಯಿ ವಿಶ್ವವಿದ್ಯಾಲಯ,ಕನ್ನಡ ವಿಭಾಗ ಇತ್ತೀಚೆಗೆ ರವಿತೇಜ ಎಂಬ ಪುಸ್ತಕವನ್ನು ಕನ್ನಡ ಮತ್ತು ಇಂಗ್ಲಿಷನಲ್ಲಿ ರಚಿಸಿ ಅರ್ಪಿಸಿತ್ತು.