

ಕರಾವಳಿ ಅಭಿವೃದ್ಧಿಯ ಬಗ್ಗೆ ಹೊಸ ಸರಕಾರದ ಕಾಳಜಿ ಸ್ವಾಗತಾರ್ಹ. ಎಷ್ಟೋ ವರ್ಷಗಳಿಂದ ಕರಾವಳಿಗರು ಬೆಂಗಳೂರಿಗಿಂತ ಜಾಸ್ತಿ ಮುಂಬೈ ಹಾಗೂ ಗಲ್ಫ್ ರಾಷ್ಟ್ರಗಳಿಗೆ ಉದ್ಯೋಗ ಹಾಗೂ ಆರ್ಥಿಕತೆಗೆ ವಲಸೆ ಹೋಗಿದ್ದು ಅಷ್ಟೇ ನಿಜ. ಇದಕ್ಕೆ ಬೆಂಗಳೂರಿನ ರಸ್ತೆ ಸಂಪರ್ಕದ ತೊಂದರೆಗಳು ಕೂಡಾ ಅಷ್ಟೇ ಕಾರಣವಾಗಿದ್ದು, ವಿಭಿನ್ನ ಸಂಸ್ಕೃತಿ ಕೂಡಾ ಕಾರಣವಾಗಿದ್ದು ನಿಜ. ಕೊಡಗು, ಚಿಕ್ಕಮಗಳೂರು, ಹಾಸನದ ಜನ ಮಕ್ಕಳ ವಿದ್ಯಾಭ್ಯಾಸ, ದೇವಸ್ಥಾನ ಹಾಗೂ ಅರೋಗ್ಯ ಸೇವೆಗೆ ಮಂಗಳೂರು ಹಾಗೂ ಉಡುಪಿಯೊಂದಿಗೆ ಕರ್ನಾಟಕದ ಉಳಿದ ಭಾಗಕ್ಕೆ ಕೊಂಡಿಯಾಗಿದ್ದು ಅಷ್ಟೇ ನಿಜ. ಕರಾವಳಿ ಪ್ರವಾಸೋದ್ಯಮ 5 ಸ್ಟಾರ್ ಹೋಟೆಲ್, ಬೀಚ್, ಸ್ಪೋರ್ಟ್ಸ್, ಬ್ರುವಾರಿಸ್ ಹಾಗೂ ಕಾಸಿನೋಗೆ ತನ್ನನ್ನು ತಾನು ಸಂಕುಚಿಸಿಕೊಂಡರೆ ಅಪಾಯಕಾರಿ. ನೆರೆ ರಾಜ್ಯಗಳ ಗಾಂಜಾ, ಇತರ ಡ್ರಗ್ಸ್ ಮಾಫಿಯ ಮಂಗಳೂರಿನಿಂದ ಮಣಿಪಾಲದವರೆಗೆ ಪಸವರಿಸಿದ್ದು ಅದು ಇನ್ನೂ ಜಾಸ್ತಿಯಾಗುವ ಭಯವಿದೆ. ಮಂಗಳೂರು ಹಾಗೂ ಉಡುಪಿಯ ದಕ್ಷ ಪೊಲೀಸ್ ಅಧಿಕಾರಿಗಳು ಅದಕ್ಕೆ ಕಡಿವಾಣ ಹಾಕಿದ್ದರು ಅದು ವ್ಯಕ್ತಿಪರವಾಗಬಾರದು.


ಟೆಂಪಲ್ ಟೂರಿಸಂ, ಮೆಡಿಕಲ್ ಟೂರಿಸಮ್, ಬೀಚ್ ಟೂರಿಸಮ್, ಯೋಗ ಹಾಗೂ ಆಯುರ್ವೇದ, ಎಜುಕೇಶನ್ ಟೂರಿಸಮ್ ಹಾಗೂ ಕಲ್ಚರಲ್ ಟೂರಿಸಮ್, AI ಟೂರಿಸಮ್ ಹಾಗೂ ಅಗ್ರಿಕಲ್ಚರ್ ಟೂರಿಸಮ್, ಫಿಷರೀಸ್ ಸರಕಾರದ ಅಧ್ಯತೆಯಾಗಬೇಕು. ಮುಖ್ಯವಾಗಿ ಸ್ಥಳೀಯ ಯುವಕ ಯುವತಿಯರಿಗೆ ಉದ್ಯೋಗ, ಸ್ವಉದ್ಯೋಗ ಸೃಷ್ಟಿಯಾಗಬೇಕು. ಕರಾವಳಿಯ ಸಂಸ್ಕೃತಿಗೆ ಯಾವುದೇ ರೀತಿಯ ಧಕ್ಕೆಯಾಗದ ರೀತಿ ಸೂಕ್ಷ್ಮವಾಗಿ ಕಾರ್ಯಕ್ರಮಗಳನ್ನು ಆಳವಡಿಸುವುದು ತುಂಬಾ ಮುಖ್ಯ.
ಬರಹ : ರಾಕೇಶ್ ಅಜಿಲ





























































































































