Author: admin
ಹಿಂದೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಇದ್ದಾಗ ಮಂಗಳೂರು ಕೇಂದ್ರ ಸ್ಥಳದಲ್ಲಿತ್ತು. ಆದರೆ ಈಗ ಉಡುಪಿ ಪ್ರತ್ಯೇಕ ಜಿಲ್ಲೆಯಾದ ಮೇಲೆ ಮಂಗಳೂರು ಜಿಲ್ಲಾ ಕೇಂದ್ರವಾಗಿಯೇ ಉಳಿದಿದ್ದರೂ ಅದು ಭೌಗೋಳಿಕವಾಗಿ ಕೇಂದ್ರ ಸ್ಥಾನದಲ್ಲಿರದೆ ದಕ್ಷಿಣ ಕನ್ನಡದ ಒಂದು ಮೂಲೆಯಲ್ಲಿದೆ. ಹಾಗಾಗಿ ಸುಳ್ಯ, ಕಡಬ, ಬೆಳ್ತಂಗಡಿ ಮತ್ತು ಪುತ್ತೂರು ತಾಲೂಕುಗಳ ಅಂಚಿನಲ್ಲಿರುವ ಹಳ್ಳಿಗಳ ಜನಗಳಿಗೆ ಮಂಗಳೂರಿನ ಜಿಲ್ಲಾ ಸರಕಾರೀ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳುವುದು ಕಷ್ಟವಿದೆ. ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ನೂರಾರು ವರ್ಷಗಳ ಇತಿಹಾಸವಿದೆ. ಈ ಆಸ್ಪತ್ರೆಯು ಬಹಳ ದೊಡ್ಡದಾಗಿದ್ದು ಸಾವಿರ ಹಾಸಿಗೆಗಳ ಸೌಲಭ್ಯ ಹೊಂದಿದೆ. ಮಂಗಳೂರಿನ ಕಸ್ತೂರ್ಬಾ ಮೆಡಿಕಲ್ ಕಾಲೇಜಿಗೆ ಇದೇ ವೆನ್ಲಾಕ್ ಆಸ್ಪತ್ರೆ ಟೀಚಿಂಗ್ ಹಾಸ್ಪಿಟಲ್ ಆಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಎರಡನೇ ಅತೀ ದೊಡ್ಡ ಸರ್ಕಾರೀ ಸಾರ್ವಜನಿಕ ಆಸ್ಪತ್ರೆಯೆಂದರೆ ಅದು ಪುತ್ತೂರಿನ ಆಸ್ಪತ್ರೆಯೇ..! ಲೆಕ್ಕದಲ್ಲಿ ಇದನ್ನು ಎರಡನೆಯ ಅತೀ ದೊಡ್ಡ ಆಸ್ಪತ್ರೆ ಅಂತ ಕರೆಯಬಹುದೇ ವಿನಃ ಗಾತ್ರದಲ್ಲಾಗಲೀ, ಸೌಲಭ್ಯಗಳಲ್ಲಾಗಲೀ ನಮ್ಮ ಪುತ್ತೂರಿನ ಸರಕಾರೀ ಆಸ್ಪತ್ರೆ ವೆನ್ಲಾಕ್ ಆಸ್ಪತ್ರೆಯ ಹತ್ತನೇ ಒಂದು ಭಾಗದಷ್ಟೂ…
ಬೈಂದೂರು-ಇಲ್ಲಿನ ಸರಕಾರಿ ಪದವಿಪೂರ್ವ ಕಾಲೇಜಿನ ಮೊಗೇರಿ ಗೋಪಾಲಕೃಷ್ಣ ಅಡಿಗ ರಂಗಮಂಟಪದಲ್ಲಿ ನಡೆದ ಕಾಲೇಜು ವಿಭಾಗದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಟೊರ್ಪೆಡೋಸ್ ಗೌತಮ್ ಶೆಟ್ಟಿ ಮಾತನಾಡಿ “ಯುವಕರು ಸಮಯ ಪಾಲನೆಯ ಮಹತ್ವವನ್ನು ಅರಿಯಬೇಕು. ಜೀವನದಲ್ಲಿ ಧನಾತ್ಮಕ ಚಿಂತನೆಯನ್ನು ಬೆಳೆಸಿಕೊಂಡು ಸೋಲು ಗೆಲುವು ಎರಡನ್ನು ಸಮಾನವಾಗಿ ಸ್ವೀಕರಿಸಿ ಜೀವನವನ್ನು ಮುನ್ನಡೆಸಬೇಕು” ಎಂದು ಹೇಳಿದರು. ಈ ಸಂದರ್ಭ ಬೈಂದೂರು ಅಂಜಲಿ ಹಾಸ್ಪಿಟಲ್ ನ ಡಾ.ಅಣ್ಣಪ್ಪ ಶೆಟ್ಟಿ, ಹರ್ಷ ಮಾಡರ್ನ್ ಡಯಾಗ್ನೊಸ್ಟಿಕ್ಸ್ ಸರ್ವಿಸಸ್ ಮಂಗಳೂರು ಆಡಳಿತ ನಿರ್ದೇಶಕರಾದ ಡಾ.ಪ್ರಿಯದರ್ಶಿನಿ, ಉಪ ಅರಣ್ಯಾಧಿಕಾರಿ ಶ್ರೀಧರ್.ಪಿ,ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ತಿನ ಅಧ್ಯಕ್ಷ ಡಾ. ರವಿ ಶೆಟ್ಟಿ, ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಗಿರೀಶ್ ಬೈಂದೂರು, ಉಪ ಪ್ರಾಂಶುಪಾಲ ಶ್ರೀ ಪದ್ಮನಾಭ, ರಾಜ್ಯ ಮತ್ತು ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ವಿಜೇತ ಎಸ್.ಜೆ.ಕೈರಣ್ಣ ಹೊನ್ನಾವರ, ಪ್ರಾಂಶುಪಾಲರಾದ ಶ್ರೀ ಮಂಜುನಾಥ ನಾಯಕ್ ಉಪಸ್ಥಿತರಿದ್ದರು.
ಹಿಂದೆ ಬ್ರಾಹ್ಮ ಪುರೋಹಿತರಿಲ್ಲದೆ ಯೇ ಬಂಟರ ಗುತ್ತಿನಾರರ ಮುಂದಾಳತ್ವದಲ್ಲಿ ಇಂತಹ ಮದುವೆಗಳು ನಡೆಯುತ್ತಿತ್ತು. ಮದುವೆಯ ಮೊದಲು ಮನೆಯಲ್ಲಿ ಮುರ್ತ ನಡೆಯುತ್ತಿತ್ತು. ಆಗ ಗುತ್ತಿನಾರರ ಮಡದಿ ಅಥವಾ ವಧುವಿನ ಸೋದರತ್ತೆ ಹುಡುಗಿಯ ಕೊರಳಿಗೆ ಕರಿಮಣಿ ಹಾಕಿ ಕಾಲಿಗೆ ಕಾಲುಂಗುರ ಇಟ್ಟು ಕೈಬೆರಳಿಗೆ ಒಡ್ಡಿ ಉಂಗುರ ತೊಡಿಸುತ್ತಿದ್ದಳು. ಬಂಟರ ಮದುವೆಗಳಿಗೆ ಪುರೋಹಿತರ ಪ್ರವೇಶ ಇರುತ್ತಿರಲಿಲ್ಲ. ಯಾವುದೇ ವೈದಿಕ ಶಾಸ್ತ್ರಗಳು ಇರುತ್ತಿರಲಿಲ್ಲ. ಬ್ರಾಹ್ಮಣರೂ ಶೂದ್ರರ ವಿವಾಹದಲ್ಲಿ ಪೌರೋಹಿತ್ಯ ವಹಿಸುತ್ತಿರಲಿಲ್ಲ. ಆಗ ನಡೆಯುತ್ತಿದ್ದುದು ಬಂಟ ಮದುವೆ. ಬಂಟ ದಾರೆ ಎಂದೂ ಹೇಳುತ್ತಾರೆ. ವಧು ಹಾಗೂ ವರನ ಬಲಗೈ ಹೆಬ್ಬೆರಳನ್ನು ಹೆಣೆದು ಜೊತೆಯಾಗಿ ಅವರು ಭೂಮಿಯನ್ನು ಮುಟ್ಟಿ ಬೇಕು. ಹೀಗೆ ಮೂರು ಬಾರಿ ಭೂಮಿ/ಮಣ್ಣು ಮುಟ್ಟಿ ಈ ವಿವಾಹಕ್ಕೆ ಭೂಮಿಯನ್ನು ಸಾಕ್ಷಿಯನ್ನಾಗಿಸಬೇಕು. ಮುಂದೆ ಬದಲಾದ ಕಾಲಘಟ್ಟದಲ್ಲಿ ಬ್ರಾಹ್ಮಣ ಪುರೋಹಿತರ ಪ್ರವೇಶ ಆಗುತ್ತದೆ. ಆರಂಭದ ದಿನಗಳಲ್ಲಿ ಪುರೋಹಿತರೂ ಬಂಟರ ಮದುವೆಗೆ ಭೂಮಿಯನ್ನು ಸಾಕ್ಷಿಯನ್ನಾಗಿಸುತ್ತಿದ್ದರು. ಬಂಟರು ಪೃಥ್ವೀ ಪೂಜಕರು ಕ್ಷೇತ್ರ ರಕ್ಷಕರು ಮತ್ತು ಕ್ಷೇತ್ರ ಕಕ್ಷಕರು. ಹೀಗಾಗಿ ಅವರಿಗೆ ಭೂಮಿಯ ಸಾಕ್ಷಿ…
ಯಕ್ಷಲೋಕವೇ ಧರೆಗಿಳಿದು ಬಂದಿದೆಯೋ ಎಂದು ಭಾಸವಾಗುವ ರಂಗಸ್ಥಳ. ರಂಗಸ್ಥಳದ ಹಿಂಭಾಗದಲ್ಲಿ ಜಗಮಗಿಸುವ ಬೆಳಕಿನ ಮಧ್ಯೆ ಕಂಗೊಳಿಸುತ್ತಿರುವ ಕೆಂಪು ಮುಂಡಾಸಿನ ಹಿಮ್ಮೇಳ ತಂಡ.ಭಾಗವತರ ಪಕ್ಕದಲ್ಲಿ ನಿಂತಿರುವ ಎತ್ತರದ ನಿಲುವಿನ ಸುರದ್ರೂಪಿ ವ್ಯಕ್ತಿಯೋರ್ವ, ದಪ್ಪನೆಯ ಅಂಚಿನ ಬಿಳಿ ಪಂಚೆ ಹಾಗೂ ಉದ್ದನೆಯ ಪೈರಾನ್ ತೊಟ್ಟ, ಚೆನ್ನಾಗಿ ಕ್ಷೌರ ಮಾಡಿದ ನಸುಗಪ್ಪುಬಣ್ಣದ ಹೊಳೆಯುವ ಮುಖದ, ದಪ್ಪ ಮೀಸೆಯಡಿಯಿಂದ ಮಂದಹಾಸವನ್ನು ಸೂಸುತ್ತಾ, ಚೆಂಡೆಯನ್ನು ಹೆಗಲಿಗೇರಿಸಿ ತನ್ನ ಅಪೂರ್ವ ಕೈಚಳಕದೊಂದಿಗೆ ತಾಳ ರಾಗ ಲಯ ಗಳಿಗನುಗುಣವಾಗಿ ನುಡಿಸುತ್ತಾ ಯಕ್ಷ ರಸಿಕರ ಗಮನ ಸೆಳೆಯುತ್ತಾನೆ.ಇವರು ಮತ್ತಾರೂ ಅಲ್ಲ ಅವರೇ ತೆಂಕುತಿಟ್ಟಿನ ಖ್ಯಾತ ಚಂಡೆ ಮದ್ದಳೆ ವಾದಕ ಶ್ರೀ ಪ್ರಶಾಂತ್ ಶೆಟ್ಟಿ ವಗೆನಾಡು. ಪ್ರಶಾಂತ್ ಶೆಟ್ಟಿಯವರು ಕಾಸರಗೋಡು ಜಿಲ್ಲೆಯ ಕುಡಾಲ ಗುತ್ತು ಮನೆತನದ ವಗೆನಾಡು ಶ್ರೀ ದೇರಣ್ಣ ಶೆಟ್ಟಿ ಹಾಗೂ ಸಾಲೆತ್ತೂರು ಕೊಡಂಗೆ ಮನೆ ಶ್ರೀಮತಿ ಚಂದ್ರಾವತಿ ದೇರಣ್ಣ ಶೆಟ್ಟಿ ದಂಪತಿಗಳ ನಾಲ್ಕು ಜನ ಮಕ್ಕಳಲ್ಲಿ ಕಿರಿಯವರಾಗಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ವಗೆನಾಡು ಎಂಬಲ್ಲಿ ಜನಿಸಿದರು.…
ಬಂಟರ ಸಂಘ ಬೆಂಗಳೂರು ಇದರ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ ರಮಾನಾಥ್ ರೈ ಅವರಿಗೆ ದಿ. ಡಾ ಜೀವರಾಜ್ ಆಳ್ವ ಸದ್ಧಾವನ ಪ್ರಶಸ್ತಿ ನೀಡಿ ಗೌರವಿಸಿದರು. ಈ ಶುಭ ಸಮಾರಂಭದಲ್ಲಿ ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಉಪೇಂದ್ರ ಆರ್ ಶೆಟ್ಟಿ, ಉಪಾಧ್ಯಕ್ಷ ಭೋಜರಾಜ್ ಶೆಟ್ಟಿ, ಕಾರ್ಯದರ್ಶಿ ಮಧುಕರ್ ಶೆಟ್ಟಿ, ಮುಂಬಯಿ ಬಂಟರ ಸಂಘದ ಉಪಾಧ್ಯಕ್ಷ ಮೋಹನ್ ದಾಸ್ ಶೆಟ್ಟಿ, ಸರ್ವೋತ್ತಮ ಶೆಟ್ಟಿ ಅಬುಧಾಭಿ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ಹಲವಾರು ಮಹತ್ಕಾರ್ಯಗಳಿಂದ ಕಲಾರಸಿಕರ ಕಲಾವಿದರ ಅಂತರಂಗದಲ್ಲಿ ಸ್ಥಿರಸ್ಥಾನ ಗಳಿಸಿದ ಮಹಾಸಾಧಕ, ಸಜ್ಜನ, ಉದ್ಯಮಿ ಶ್ರೀ ಅಜೆಕಾರು ಬಾಲಕೃಷ್ಣ ಶೆಟ್ಟಿ
ಮುಂಬಯಿಯಲ್ಲಿ ನೆಲೆಸಿ ಯಕ್ಷಗಾನ ಕಲೆಯ ಏಳಿಗೆ ಮತ್ತು ಉಳಿವಿಗೆ ಅವಿರತ ಶ್ರಮ ವಹಿಸುತ್ತಿರುವುದರ ಜೊತೆಗೆ ಅಶಕ್ತ ಕಲಾವಿದರಿಗೆ ನೆರವು, ಪ್ರತಿಭಾವಂತರಿಗೆ ಪುರಸ್ಕಾರ, ಸಾಧಕರಿಗೆ ಸನ್ಮಾನ, ತಾಳಮದ್ದಳೆ ಹಾಗೂ ಯಕ್ಷಗಾನ ಸಂಯೋಜನೆ ಇನ್ನೂ ಹಲವಾರು ಮಹತ್ಕಾರ್ಯಗಳಿಂದ ಕಲಾರಸಿಕರ ಕಲಾವಿದರ ಅಂತರಂಗದಲ್ಲಿ ಸ್ಥಿರಸ್ಥಾನ ಗಳಿಸಿದ ಮಹಾಸಾಧಕ, ಸಜ್ಜನ, ಉದ್ಯಮಿ ಶ್ರೀ ಅಜೆಕಾರು ಬಾಲಕೃಷ್ಣ ಶೆಟ್ಟಿಯವರಿಗೆ ಸಮಸ್ತ ಬಂಟ ಸಮಾಜದ ಪರವಾಗಿ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತಿದ್ದೇವೆ.
ಕೊರೊನಾದ ಅತ್ಯಂತ ಕ್ಷಿಪ್ರವಾಗಿ ಹರಡಬಲ್ಲ ಹೊಸ ತಳಿ ಜೆಎನ್.1 ಸೋಂಕು ಕೇರಳದಲ್ಲಿ ಪತ್ತೆಯಾಗಿರುವುದು ಗಾಬರಿ ಪಡಬೇಕಾದ ವಿಷಯ ಅಲ್ಲ; ಆದರೆ ಮುನ್ನೆಚ್ಚರಿಕೆಯಿಂದ ಇರಬೇಕಾದ, ಸಂಭಾವ್ಯ ಪರಿಸ್ಥಿತಿಗಳನ್ನು ಪರಿಣಾಮಕಾರಿಯಾದ ರೀತಿಯಲ್ಲಿ ಎದುರಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗಿದೆ. 2019-20ರಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡು ಹಾಹಾಕಾರ ಸೃಷ್ಟಿಸಿದ ಕೊರೊನಾ ಮರುವರ್ಷ ಬೇರೆಯದೇ ರೀತಿಯಲ್ಲಿ ಅಪಾರ ತೊಂದರೆಗೆ ಕಾರಣವಾಗಿತ್ತು. ಮೊದಲ ವರ್ಷ ಕಾಯಿಲೆ ಸಂಪೂರ್ಣವಾಗಿ ಅಪರಿಚಿತವಾಗಿದ್ದುದರಿಂದ ಸಾವು ನೋವುಗಳು ಸಂಭವಿಸಿದವು. ಆಗ ಜಗತ್ತಿನಾದ್ಯಂತ ಸೃಷ್ಟಿಯಾದದ್ದು ಮನುಕುಲ ಇತ್ತೀಚೆಗಿನ ದಶಕಗಳಲ್ಲಿ ಅನುಭವಿಸಿರದಂತಹ ಆರೋಗ್ಯ ತುರ್ತುಸ್ಥಿತಿ. ಅದರಿಂದ ಹೇಗೋ ಪಾರಾಗಿ ನಿಟ್ಟುಸಿರು ಬಿಡುವ ವೇಳೆಗೆ ಮರು ವರ್ಷ ಅದೇ ಕೊರೊನಾ ತುಸು ಹೊಸ ರೂಪ ತಳೆದು ಕಂಗೆಡಿಸಿತು. ಆಗ ಆಮ್ಲಜನಕ ಕೊರತೆ ಉಂಟಾದುದು, ಬ್ಲ್ಯಾಕ್ ಫಂಗಸ್ ಕಾಟ ಮರೆಯಲಾಗದ್ದು. ಮೊದಲ ವರ್ಷದ ಅನುಭವವನ್ನು ಪಾಠವಾಗಿ ಇರಿಸಿಕೊಂಡು ಮರುವರ್ಷದ ಅಲೆಯನ್ನು ಎದುರಿಸಲು ಮುಂದಾದಾಗ ಅದು ಬೇರೆಯದೇ ರೂಪದಲ್ಲಿ ಕಾಡಿತ್ತು ಎಂಬುದು ಗಮನದಲ್ಲಿ ಇರಿಸಿಕೊಳ್ಳಬೇಕಾದ ಅಂಶ. ನಮ್ಮ ದೇಶದಲ್ಲಿ ದೃಢಪಟ್ಟಿರುವ ಕೊರೊನಾ ಉಪತಳಿ…
ವಿಶ್ವ ಬಂಟರ ಕ್ರೀಡಾಕೂಟದಲ್ಲಿ ಮುಂಬಯಿ ಬಂಟರ ಸಂಘದ ಮೀರಾ ಭಾಯಂದರ್ ಪ್ರಾದೇಶಿಕ ಸಮಿತಿಗೆ ಸಮಗ್ರ ಚಾಂಪಿಯನ್ ಪ್ರಶಸ್ತಿ
ವಿಶ್ವ ಬಂಟರ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ವಿಶ್ವ ಬಂಟ ಸಮ್ಮೇಳನ ಹಿನ್ನಲೆಯಲ್ಲಿ ಅಜ್ಜರಕಾಡು ಮೈದಾನದಲ್ಲಿನ ನಳಿನ ಬೋಜ ಶೆಟ್ಟಿ ವೇದಿಕೆಯನ್ನು ಒಳಗೊಂಡ ಮೈದಾನದಲ್ಲಿ ಬಂಟರ ಸಂಘಗಳು ವಿವಿಧ ಕ್ರೀಡೆಯಲ್ಲಿ ಪಾಲು ಪಡೆಯುವ ಮೂಲಕ ಅದ್ದೂರಿಯಾಗಿ ನಡೆಯಿತು. ಬೆಳಗ್ಗಿನಿಂದ ತಡ ರಾತ್ರಿಯವರೆಗೆ ನಡೆದ ವಿವಿಧ ಕ್ರೀಡಾಕೂಟದಲ್ಲಿ ಮುಂಬಯಿ ಬಂಟರ ಸಂಘದ ಮೀರಾ ಭಾಯಿಂದರ್ ಪ್ರಾದೇಶಿಕ ಸಮಿತಿ ಕಾರ್ಯಧ್ಯಕ್ಷ ಮಾಣಿ ಗುತ್ತು ಶಿವಪ್ರಸಾದ್ ಶೆಟ್ಟಿ ಅವರ ನೇತೃತ್ವದ ತಂಡ ಎಲ್ಲಾ ಕ್ರೀಡೆಯಲ್ಲಿ ಪಾಲು ಪಡೆದು ಅತೀ ಹೆಚ್ಚು ಅಂಕಗಳನ್ನು ಪಡೆದು ಕ್ರೀಡಾಕೂಟದ ಸಮಗ್ರ ಪ್ರಶಸ್ತಿ ಪಡೆದಿದೆ. ಅಕ್ಟೋಬರ್ 29 ರಂದು ನಡೆದ ವಿಶ್ವ ಬಂಟರ ಸಾಂಸ್ಕೃತಿಕ ಉತ್ಸವದಲ್ಲಿ ಕ್ರೀಡಾಕೂಟದ ಬಹುಮಾನವನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಮುಂಬಯಿ ಬಂಟರ ಸಂಘದ ಉಪಾಧ್ಯಕ್ಷ ರತ್ನಾಕರ್ ಶೆಟ್ಟಿ ಮುಂಡ್ಕೂರು, ಗೌರವ ಪ್ರಧಾನ ಕಾರ್ಯದರ್ಶಿ ಡಾ. ಆರ್.ಕೆ.ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಉಮಾ ಕೃಷ್ಣ ಶೆಟ್ಟಿ, ಬೋರಿವಲಿ ಶಿಕ್ಷಣ ಸಮಿತಿಯ ಉಪಕಾರ್ಯಧ್ಯಕ್ಷ ಮಹೇಶ್…
ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿ, ನಿಟ್ಟೆ ಎಜುಕೇಶನ್ ಟ್ರಸ್ಟ್ನ ಅಧ್ಯಕ್ಷ ಎನ್.ವಿನಯ ಹೆಗ್ಡೆ ಅವರಿಗೆ ಶಿರ್ವ ವಿದ್ಯಾವರ್ಧಕ ಸಂಘದ ವತಿಯಿಂದ ಸಮ್ಮಾನ ವಿನಯಾಭಿವಂದನೆ ಕಾರ್ಯಕ್ರಮವು ವಿದ್ಯಾವರ್ಧಕ ಸಂಘದ ಅಧ್ಯಕ್ಷ, ಕಾಪು ಶಾಸಕ ಸುರೇಶ್.ಪಿ ಶೆಟ್ಟಿ ಗುರ್ಮೆ ಅವರ ಅಧ್ಯಕ್ಷತೆಯಲ್ಲಿ ಅ. 20 ರಂದು ವಿದ್ಯಾವರ್ಧಕ ಕ್ಯಾಂಪಸ್ನಲ್ಲಿ ನಡೆಯಿತು. ವಿದ್ಯಾವರ್ಧಕ ಸಂಘದ ವತಿಯಿಂದ ಎನ್.ವಿನಯ ಹೆಗ್ಡೆ ಅವರನ್ನು ಸಮ್ಮಾನಿಸಲಾಯಿತು. ಆಡಳಿತ ಮಂಡಳಿಯ ಸದಸ್ಯ ಶ್ರೀನಾಥ್ ಹೆಗ್ಡೆ ಸಮ್ಮಾನ ಪತ್ರ ವಾಚಿಸಿದರು. ಶಿರ್ವ ಗ್ರಾ.ಪಂ.ಶಿರ್ವ ಆರೋಗ್ಯ ಮಾತಾ ದೇವಾಲಯ ಮತ್ತು ಎಂಎಸ್ಆರ್ಎಸ್ ಕಾಲೇಜು ಅಲುಮ್ನಿ ಎಸೋಸಿಯೇಶನ್ ಮುಂಬಯಿ ವತಿಯಿಂದ ಗೌರವಿಸಲಾಯಿತು. ಅಭಿನಂದನಾ ಭಾಷಣ ಮಾಡಿದ ಸುರೇಶ್ ಪಿ ಶೆಟ್ಟಿ ಗುರ್ಮೆ ಮಾತನಾಡಿ, ಮನುಷ್ಯ ಸಂಸಾರಮುಖಿಯಾಗಿ ಬದುಕದೆ ಸಮಾಜಮುಖಿಯಾಗಿ ಬದುಕಿದಾಗ ಮಾನ ಸಮ್ಮಾನಗಳು ಒಲಿದು ಬರುತ್ತವೆ. ಕಾಯಕದಲ್ಲಿ ಕೈಲಾಸವನ್ನು ಕಂಡ ಕರ್ಮಯೋಗಿ, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಅದ್ಭುತ ಸಾಧಕನಾಗಿ, ವಿದ್ಯಾ ಸಂಸ್ಥೆಗಳ ಏಳಿಗೆಯಲ್ಲಿ ಸುಖ ಕಂಡ, ದುಡಿಯುವ ಸಾವಿರಾರು ಕೈಗಳಿಗೆ ಬದುಕಿನ ಪಥ ತೋರಿಸಿದ ವಿನಯ ಹೆಗ್ಡೆಯವರ…
ಶ್ರೀ ಕೃಷ್ಣ, ಗೋವಿಂದ, ಮುರಾರಿ ಎಂದಾಕ್ಷಣ ನಮ್ಮ ಕಣ್ಮುಂದೆ ಸುಳಿದಾಡುವುದು ಬಾಲ ಕೃಷ್ಣನ ಮುದ್ದು ಮುಖ, ತುಂಟ ಕೃಷ್ಣ, ಬೆಣ್ಣೆ ಕಳ್ಳ,ಕಪ್ಪು ಬಣ್ಣದ ಶ್ಯಾಮ, ಗೋವುಗಳ ಕಾಯುವ ಗೋಪಾಲ, ಪರ್ವತ ಎತ್ತಿ ಹಿಡಿದ ಗಿರಿಧರ, ಕೊಳಲು ಊದುವ ಮುರಲಿ, ರಾಧೆಯ ಸಕ, ಜಗದ ಮಾಲಿಕ ಜಗದೀಶ, ಸುಂದರ ವದನ ಮಥನ, ದುಷ್ಟರ ಸಂಹಾರ, ಶಿಷ್ಟರ ರಕ್ಷಕ ಹೀಗೆ ನೆನಪಿಸಿಕೊಳ್ಳುತ್ತಾ ಭಕ್ತಿಯಿಂದ ಪೂಜಿಪ ಶ್ರೀ ಕೃಷ್ಣ ಹೆಚ್ಚಾಗಿ ಸಿಲ್ಕ್ ನ ಹಳದಿ ಬಣ್ಣದ ದೋತರ ಮತ್ತು ತಲೆಯನ್ನು ನವಿಲು ಗರಿಗಳಲ್ಲಿ ಅಲಂಕರಿಸಿದ್ದು ಕೊಳಲು ಊದುವ ಕೃಷ್ಣನನ್ನೇ ಹೆಚ್ಚಾಗಿ ಬಿಂಬಿಸಲಾಗುತ್ತದೆ. ಭಕ್ತರು ಭಕ್ತಿಯಿಂದ ಆಚರಿಸುವ ಶ್ರೀ ಕೃಷ್ಣಾಷ್ಟಮಿಯ ಸಂಭ್ರಮವು ಬಗೆ ಬಗೆ. ಶ್ರಾವಣ ಮಾಸದ ಕೃಷ್ಣಾಷ್ಟಮಿಯ ರೋಹಿಣಿ ನಕ್ಷತ್ರದಲ್ಲಿ ದೇವಕಿಯ ಎಂಟನೇ ಗರ್ಭದಲ್ಲಿ ಹುಟ್ಟಿದ ದಿನವನ್ನು ಇಂದಿಗೂ ಮನೆ ಮನೆಯಲ್ಲಿ ಆಚರಿಸುವುದು ಕಾಣ ಸಿಗುತ್ತವೆ. ಈ ದಿನ ಮನೆಯ ಯಜಮಾನ ಅಷ್ಟಮಿ ಉಪವಾಸ ಮಾಡುವ ಕ್ರಮ ಇದ್ದು ಮದ್ಯಾಹ್ಹ ಊಟ ಮಾಡದೆ ಉಪವಾಸದಲ್ಲಿದ್ದು (ಫಲಹಾರ…