ಪಂಜುರ್ಲಿ ಗ್ರೂಪ್ ಆಫ್ ಹೊಟೇಲ್ಸ್ ಸಂಸ್ಥೆಯಿಂದ ದಾವಣಗೆರೆಯಲ್ಲಿ ಶ್ರೀ ಪಂಜುರ್ಲಿ ಪ್ಯಾಲೇಸ್ ಮತ್ತು ಲೀಲಾವತಿ ಕಲ್ಯಾಣ ಮಂಟಪವನ್ನು ಮಾಜಿ ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನ್ ಅವರು ಉದ್ಘಾಟಿಸಿ, ಇಂತಹ ಹೋಟೆಲುಗಳು ದಾವಣಗೆರೆಗೆ ಬೇಕಾಗಿವೆ. ಪಂಜುರ್ಲಿ ಹೋಟೆಲಿನಲ್ಲಿ ಶುಚಿ ರುಚಿಯಾದ ತಿಂಡಿಯೊಂದಿಗೆ ನಮ್ಮ ಜ್ಞಾನವೂ ವೃದ್ಧಿಯಾಗುತ್ತದೆ ಈ ಹೋಟೆಲನ್ನು ಬಹಳ ಮುತುವರ್ಜಿಯಿಂದ ಅಚ್ಚುಕಟ್ಟಾಗಿ ನಿರ್ಮಿಸಿದ್ದಾರೆ. ಪಂಜುರ್ಲಿ ಹೊಟೇಲ್ಸ್ ಹುಬ್ಬಳ್ಳಿ, ಬೆಳಗಾವಿಯಲ್ಲಿ ಜನರ ಪ್ರೀತಿ ಪ್ರಶಂಸೆಗೆ ಪಾತ್ರವಾಗಿದ್ದು ಇಲ್ಲಿನ ಎಲ್ಲಾ ವರ್ಗದ ಜನರಿಗೆ ಅನುಕೂಲವಾಗಲಿದೆ ಎಂದು ಹೇಳಿದರು. ಈ ಸಂಧರ್ಭ ಪಂಜುರ್ಲಿ ಗ್ರೂಪ್ ಆಫ್ ಹೊಟೇಲ್ಸ್ ನ ಸಂಸ್ಥಾಪಕರಾದ ರಾಜೇಂದ್ರ ವಿ ಶೆಟ್ಟಿ, ಪಾಲುದಾರರದ ಸಂದೀಪ್ ಆಳ್ವ, ಗಣೇಶ್ ಶೆಟ್ಟಿ, ರವಿಕಾಂತ ಶೆಟ್ಟಿ, ಶಶಿಕಾಂತ ಶೆಟ್ಟಿ, ರಾಜೇಶ್ ಶೆಟ್ಟಿ, ಅವಿನಾಶ್ ಶೆಟ್ಟಿ, ರಂಜಿತ್ ಶೆಟ್ಟಿ, ಉದಯ್ ಶೆಟ್ಟಿ, ಪ್ರಕಾಶ್ ಶೆಟ್ಟಿ, ಪಂಜುರ್ಲಿ ಅಭಿಮಾನಿ ಬಳಗದವರು ಉಪಸ್ಥಿತರಿದ್ದರು.