ಜೀವನದಲ್ಲಿ ಯಶಸ್ಸು ಗಳಿಸಲು ಕ್ರೀಯಾಶೀಲತೆ, ಕರ್ತತ್ವ ಶಕ್ತಿ, ವಿಸ್ತಾರವಾದ ಜ್ಞಾನ, ಸ್ವಯಂ ನಿಯಂತ್ರಣ ಮೊದಲಾದ ಗುಣಗಳನ್ನು ಬೆಳಿಸಿಕೊಳ್ಳುವುದು ಅತ್ಯಗತ್ಯ. ವೃತ್ತಿ ಕೌಶಲ್ಯದೊಂದಿಗೆ ಕೃತಕ ಬುದ್ಧಿ ಮತ್ತೆ ತಂತ್ರಜ್ಞಾನವೂ ಅಗತ್ಯವಾಗಿದ್ದು, ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ಆ ನಿಟ್ಟಿನಲ್ಲೂ ಕಾರ್ಯಕ್ರಮಗಳನ್ನು ರೂಪಿಸಲಿ ಎಂದು ಮಣಿಪಾಲ ಎಂಐಟಿಯ ಪ್ರೊ. ಡಾ. ರವಿರಾಜ್ ಶೆಟ್ಟಿ ಹೇಳಿದರು.
ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಸಂಘದ ಕುಂತಳನಗರ ಸ್ಕಿಲ್ ಡೆವಲಪ್ ಮೆಂಟ್ ಸೆಂಟರ್ ನಲ್ಲಿ ಮುಂಬಯಿಯ ಆಲ್ ಕಾರ್ಗೋ ಲಾಜಿಸ್ಟಿಕ್ ಲಿ. ಸಂಸ್ಥೆಯ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ಕಂಪ್ಯೂಟರ್ ಸಾಕ್ಷರತಾ ತರಬೇತಿ ಕಾರ್ಯಕ್ರಮದ 9 ನೇ ಬ್ಯಾಚಿನ ವಿದ್ಯಾರ್ಥಿಗಳ ಪ್ರಮಾಣಪತ್ರ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ನ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿ, ಟ್ರಸ್ಟ್ ವತಿಯಿಂದ ಕೌಶಲ್ಯ ಅಭಿವೃದ್ಧಿ ತರಬೇತಿ, ಉದ್ಯೋಗ ಮೇಳ ಹಾಗೂ ಕಂಪ್ಯೂಟರ್ ತರಬೇತಿ ತರಗತಿಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದು, ಈವರೆಗೆ 1300 ವಿದ್ಯಾರ್ಥಿಗಳು ಮತ್ತು ಮಹಿಳೆಯರು ಕೌಶಲ್ಯಾಭಿವೃದ್ಧಿ ತರಬೇತಿ, 500 ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ ಹಾಗೂ 180 ವಿದ್ಯಾರ್ಥಿಗಳು ಕಂಪ್ಯೂಟರ್ ತರಬೇತಿ ಪಡೆದುಕೊಂಡಿದ್ದಾರೆ ಎಂದರು.
ಮೈಸ್ ಸಂಸ್ಥೆಯ ಆಡಳಿತಾಧಿಕಾರಿ ಗಾಯತ್ರಿ ಉಪಾದ್ಯಾಯ, ಉಡುಪಿ ಗ್ರಾಮೀಣ ಬಂಟರ ಸಂಘದ ಮಾಜಿ ಅಧ್ಯಕ್ಷರಾದ ಡಾ. ಎಚ್. ಬಿ ಶೆಟ್ಟಿ, ಹೇಮಂತ್ ಶೆಟ್ಟಿ, ಕಾರ್ಯದರ್ಶಿ ಪದ್ಮನಾಭ ಹೆಗ್ಡೆ, ಟ್ರಸ್ಟ್ ನ ಕೋಶಾಧಿಕಾರಿ ವಿಜಿತ್ ಶೆಟ್ಟಿ, ಸಂಘದ ಟ್ರಸ್ಟಿಗಳಾದ ಗೋಪಾಲ ಶೆಟ್ಟಿ ಬೆಳ್ಳೆ, ದಯಾನಂದ ಶೆಟ್ಟಿ ಕಲ್ಮಂಜೆ, ರಮೇಶ್ ಶೆಟ್ಟಿ ನಿಂಜೂರು, ದಿವಾಕರ್ ಶೆಟ್ಟಿ ಮಣಿಪುರ, ಹರೀಂದ್ರ ಹೆಗ್ಡೆ ಕೊರಂಗ್ರಪಾಡಿ, ಸತೀಶ್ ಶೆಟ್ಟಿ ಮಣಿಪುರ, ಹರೀಶ್ ಶೆಟ್ಟಿ ಬೆಳ್ಳೆ, ಅಶೋಕ್ ಶೆಟ್ಟಿ, ದಯಾನಂದ ಶೆಟ್ಟಿ ಬೆಳ್ಳೆ ಉಪಸ್ಥಿತರಿದ್ದರು.
ಟ್ರಸ್ಟ್ ನ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಕೋಶಾಧಿಕಾರಿ ವಿಜಿತ್ ಶೆಟ್ಟಿ ವಂದಿಸಿದರು. ನಿಟ್ಟೆ ವಿವಿಯ ವಿಸಿಟಿಂಗ್ ಪ್ರೊಪೆಸರ್ ಪ್ರೊ. ದಿವ್ಯಾರಾಣಿ ಪ್ರದೀಪ್ ಕಾರ್ಯಕ್ರಮ ನಿರೂಪಿಸಿದರು.