Author: admin
ಉಡುಪಿ ಜಿಲ್ಲಾ ಟೆನ್ನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ, ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಸಮಾಜರತ್ನ ಗೌತಮ್ ಶೆಟ್ಟಿ ಟೊರ್ಪೆಡೋಸ್ ಇವರು ಕರ್ನಾಟಕ ಟೇಬಲ್ ಟೆನ್ನಿಸ್ ಸಂಸ್ಥೆಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಗೌತಮ್ ಶೆಟ್ಟಿ ಅವರು ಧಾರವಾಡದಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದು ಮುಂದಿನ ನಾಲ್ಕು ವರ್ಷಗಳ ಕಾಲ ಅವರು ಅಧಿಕಾರದಲ್ಲಿ ಇರಲಿದ್ದಾರೆ. ಆಯ್ಕೆಯ ಬಳಿಕ ಮಾತನಾಡಿದ ಗೌತಮ್ ಶೆಟ್ಟಿ “ಮಾನಸಿಕ ಮತ್ತು ದೈಹಿಕ ಅರೋಗ್ಯಕ್ಕೆ ಇದು ಪ್ರಯೋಜನಕಾರಿ, ಏಕಾಗ್ರತೆ ಹೆಚ್ಚಿಸುವ ಆಟಗಳಲ್ಲಿ ಟೇಬಲ್ ಟೆನಿಸ್ ಕೂಡ ಒಂದಾಗಿದ್ದು, ಯುವಕರನ್ನು ಪ್ರೋತ್ಸಾಹಿಸುವ ಮೂಲಕ ಕ್ರೀಡೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಶ್ರಮಿಸುವುದಾಗಿ ಹೇಳಿದರು. ನೂತನವಾಗಿ ಆಯ್ಕೆಗೊಂಡ ತಂಡಕ್ಕೆ ಸಮಸ್ತ ಬಂಟ ಸಮಾಜದ ಪರವಾಗಿ ಬಂಟ್ಸ್ ನೌ ಮಾಧ್ಯಮ ಸಂಸ್ಥೆ ಹಾಗೂ ಬಂಟ್ಸ್ ಬ್ರಿಗೇಡ್ ವತಿಯಿಂದ ಶುಭಾಶಯಗಳು.
ಬಂಟರ ಸಂಘ ಸಿದ್ದಕಟ್ಟೆ ವಲಯ ಇದರ ವತಿಯಿಂದ ಕೆಸರ್ಡ್ ಒಂಜಿ ದಿನ ಕ್ರೀಡಾಕೂಟ ಎಲಿಯನಡುಗೂಡು ಗ್ರಾಮದ ಕೊನೆರಬೆಟ್ಟು ಗುತ್ತು ಗದ್ದೆಯಲ್ಲಿ ಜರಗಿತು. ದೇಜಣ್ಣ ಶೆಟ್ಟಿ ಗೋಳಿದೊಟ್ಟು ಕ್ರೀಡಾಕೂಟವನ್ನು ಉದ್ಘಾಟಿಸಿದರು. ಜಯರಾಮ ಅಡಪ ಕಣಿಯೂರು ಕ್ರೀಡಾ ಕೂಟಕ್ಕೆ ಚಾಲನೆ ನೀಡಿದರು. ಸಂಘದ ಅಧ್ಯಕ್ಷ ಸಂದೇಶ್ ಶೆಟ್ಟಿ ಪೊಡುಂಬ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾಲೂಕು ಬಂಟರ ಸಂಘದ ಕಾರ್ಯದರ್ಶಿ ಜಗನ್ನಾಥ ಚೌಟ ಬದಿಗುಡ್ಡೆ, ಬಂಟರ ಸಂಘದ ತಾಲೂಕು ಮಹಿಳಾ ವಿಭಾಗದ ಅಧ್ಯಕ್ಷೆ ರಮಾ ಎಸ್. ಭಂಡಾರಿ, ಜತೆ ಕಾರ್ಯದರ್ಶಿ ಮಂದಾರತಿ ಎಸ್. ಶೆಟ್ಟಿ, ತಾಲೂಕು ಬಂಟರ ಸಂಘದ ಜತೆ ಕಾರ್ಯದರ್ಶಿ ರಂಜನ್ ಶೆಟ್ಟಿ ಅರಳ, ಸಂಘದ ಗೌರವಾಧ್ಯಕ್ಷ ರತ್ನ ಕುಮಾರ್ ಚೌಟ, ಉಪಾಧ್ಯಕ್ಷ ರಾಜೇಶ್ ಶೆಟ್ಟಿ ಕೊನೆರಬೆಟ್ಟು, ಕಾರ್ಯದರ್ಶಿ ರತೀಶ್ ಶೆಟ್ಟಿ, ತಾಲೂಕು ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀಧರ್ ಶೆಟ್ಟಿ, ಸುರೇಶ್ ಶೆಟ್ಟಿ, ಗಣೇಶ್ ಶೆಟ್ಟಿ, ಅರುಣಾ ಶೆಟ್ಟಿ, ಪ್ರತಿಭಾ ಶೆಟ್ಟಿ, ಅಶ್ವಿನಿ ಶೆಟ್ಟಿ, ವಾಮದಪದವು ವಲಯ ಬಂಟರ ಅಧ್ಯಕ್ಷ ವಸಂತ್…
ಜುಲೈ 23 ರಂದು ಪುತ್ತೂರು ತಾಲೂಕು ಯುವ ಬಂಟರ ಸಂಘದ ಆಶ್ರಯದಲ್ಲಿ ಪುತ್ತೂರು ಎಂ. ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಬಂಟೆರೆ ಪರ್ಬ ಕಾರ್ಯಕ್ರಮದ ಸಿದ್ದತಾ ಸಭೆಯು ಪುತ್ತೂರು ಬಂಟರ ಭವನದಲ್ಲಿ ಜರಗಿತು. ಅಧ್ಯಕ್ಷತೆ ವಹಿಸಿದ್ದ ಪುತ್ತೂರು ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷ ಶಶಿರಾಜ್ ರೈ ಮುಂಡಾಳರವರು ಮಾತನಾಡಿ ಜಿಲ್ಲಾ ಮಟ್ಟದ ಬಂಟೆರೆ ಪರ್ಬ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲಿದ್ದು, ಬಂಟ ಸಮಾಜದ ಪ್ರತಿಭೆಗಳ ಪ್ರದರ್ಶನಕ್ಕೆ ಇದೊಂದು ವೇದಿಕೆಯಾಗಿದ್ದು, ಈ ಕಾರ್ಯಕ್ರಮದ ಸಂಪೂರ್ಣ ಯಶಸ್ವಿಗೆ ಬಂಟ ಸಮಾಜದ ಪೂರ್ಣ ಸಹಕಾರ ಅಗತ್ಯ ಎಂದು ಹೇಳಿ, ಯುವ ಬಂಟರ ಸಂಘದ ಈ ಕಾರ್ಯಕ್ರಮ ಮಾದರಿ ಕಾರ್ಯಕ್ರಮವಾಗಿ ಹತ್ತೂರಿನಲ್ಲಿ ಹೆಸರನ್ನು ಪಡೆಯಲಿ ಎಂದು ಆಶಿಸಿದರು. ಕಾರ್ಯಕ್ರಮದ ಸಂಚಾಲಕರಾದ ಭಾಗ್ಯೆಶ್ ರೈ ಕೆಯ್ಯೂರು ಮತ್ತು ಹರ್ಷಕುಮಾರ್ ರೈ ಮಾಡಾವುರವರುಗಳು ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಮಾಹಿತಿ ನೀಡಿದರು. ತಾಲೂಕು ಬಂಟರ ಸಂಘದ ನಿರ್ದೇಶಕ ಸಂತೋಷ್ ಶೆಟ್ಟಿ ಸಾಜ, ಯುವ ಬಂಟರ ಸಂಘದ…
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉರಿ ಸೆಕೆ ಏರುತ್ತಿದ್ದು, ಮಳೆ ನಿಂತ ಒಂದೇ ದಿನದಲ್ಲಿ ಗರಿಷ್ಠ ಉಷ್ಣಾಂಶದಲ್ಲಿ 5 ಡಿ.ಸೆ. ಏರಿಕೆ ಕಂಡಿದೆ. ಮಂಗಳೂರಿನಲ್ಲಿ ಶನಿವಾರ ಬೆಳಗ್ಗೆ ಬಿರುಸಿನ ಮಳೆಯಾಗಿತ್ತು. ಪರಿಣಾಮ, ಗರಿಷ್ಠ ಉಷ್ಣಾಂಶದಲ್ಲಿ ಭಾರೀ ಇಳಿಕೆ ಕಂಡು 30.8 ಡಿ.ಸೆ. ದಾಖಲಾಗಿತ್ತು. ಆದರೆ ರವಿವಾರ ಜಿಲ್ಲೆಯಲ್ಲಿ ಮಳೆಯ ಮುನ್ಸೂಚನೆ ಇರಲಿಲ್ಲ. ದಿನವಿಡೀ ಬಿಸಿಲು-ಉರಿ ಸೆಕೆಯಿಂದ ಕೂಡಿತ್ತು. ಇದೇ ಕಾರಣಕ್ಕೆ ಉಷ್ಣಾಂಶದಲ್ಲಿ 5 ಡಿ.ಸೆ. ಏರಿಕೆಯಾಗಿದ್ದು, 35 ಡಿ.ಸೆ. ದಾಖಲಾಗಿತ್ತು. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ (ಕೆಎಸ್ಎನ್ಡಿಎಂಸಿ) ಸದ್ಯದ ಮುನ್ಸೂಚನೆ ಪ್ರಕಾರ ಮೇ 15ರಂದು ಬಂಟ್ವಾಳದಲ್ಲಿ 33.9 ಡಿ.ಸೆ., ಪಾಣೆಮಂಗಳೂರು 33.1, ವಿಟ್ಲ 34.6, ಬೆಳ್ತಂಗಡಿ 34.5, ಕೊಕ್ಕಡ 35.4, ವೇಣೂರು 34, ಗುರುಪುರ 32.7, ಮಂಗಳೂರು 31.2, ಉಳ್ಳಾಲ 31.8, ಮೂಡುಬಿದಿರೆ 33.2, ಮೂಲ್ಕಿ 30.5, ಸುರತ್ಕಲ್ 30.5, ಕಡಬ 35.9, ಪುತ್ತೂರು 35.3, ಉಪ್ಪಿನಂಗಡಿ 35.6 ಮತ್ತು ಪಾಣಾಜೆಯಲ್ಲಿ 33.7 ಡಿ.ಸೆ. ಉಷ್ಣಾಂಶ ದಾಖಲಾಗುವ ಸಾಧ್ಯತೆ ಇದೆ.…
ಯುವಜನರ ರಂಗಿನ ಹಬ್ಬಗಳ ಹಿಂದೆಯೂ ಇರುವ “ಹೊಸರಂಗು’ ಯಾವುದು ಗೊತ್ತೇ? ಆ “ರಂಗ್’ ಡ್ರಗ್ಸ್ ಮಾಫಿಯಾದ್ದು. ಡ್ರಗ್ಸ್ ಪೆಡ್ಲರ್ಗಳು ಬಳಸಿಕೊಳ್ಳುತ್ತಿರುವುದು ಪಾರ್ಟಿಗಳೆಂಬ ಪರಿಕಲ್ಪನೆಯನ್ನು. ಅದು ನಡೆಯುವುದು ಮತ್ತೆ ಕೆಲವು ಪಬ್ಗಳ ಅಂಗಳದಲ್ಲಿ. “ಹೋಳಿ”ಯೂ ಅಂಥದೊಂದು ಉದಾಹರಣೆ ಎನ್ನುತ್ತಾರೆ ಬಲ್ಲವರು. ಹೋಳಿ ಹಬ್ಬ ಭಾರತೀಯ ಸಂಸ್ಕೃತಿಯ ಅತ್ಯಂತ ವಿಶಿಷ್ಟವಾದ ಹಬ್ಬ. ಸಮುದಾಯದ ಹಬ್ಬ. ಬದುಕಿನ ಸಂಭ್ರಮವನ್ನು ಹೆಚ್ಚಿಸಿಕೊಳ್ಳಲು ಆಚರಿಸುವಂಥ ಹಬ್ಬ. ಆದರೀಗ ಅವೆಲ್ಲವೂ ಈ ಡ್ರಗ್ಸ್ ಮಾಫಿಯಾದ ಸರಕಾಗಿದೆ. ಮಣಿಪಾಲ ಸೇರಿದಂತೆ ಹಲವೆಡೆ ಈ ಹಬ್ಬಕ್ಕೆಂದೇ ಕೆಲವು ಪಬ್ಗಳು, ಪ್ರತಿಷ್ಠಿತ ಹೋಟೆಲ್ಗಳು ವಿಶೇಷ ಪಾರ್ಟಿಗಳನ್ನು ಆಯೋಜಿಸುತ್ತವೆ. ಜೋರಾಗಿ ಡಿಜೆ ಹಾಕಿ ಕುಣಿಸಲಾಗುತ್ತದೆ. ರಾತ್ರಿ ಹೊತ್ತು ಡಿಜೆಗೆ ಅನುಮತಿ ಇಲ್ಲದಿದ್ದರೂ ಈ ಕೆಲವು ಪ್ರತಿಷ್ಠಿತರ ಹೋಟೆಲ್ಗಳಿಗೆ, ಪಬ್ಗಳಿಗೆ ನಿಯಮ ಅನ್ವಯವಾಗದು. ರವಿವಾರ ಹಾಗೂ ರಜಾದಿನ ಗಳಲ್ಲಿ ಇಂಥ ಕೆಲವು ಪ್ರತಿಷ್ಠಿತ ಹೊಟೇಲ್ಗಳಲ್ಲಿ ಹಗಲು-ರಾತ್ರಿ ಎನ್ನದೇ ಡಿಜೆ ಹಾವಳಿ ಇರುತ್ತದೆ ಎಂಬ ದೂರು ವ್ಯಾಪಕವಾಗಿದೆ. ಹೆಸರಿಗಷ್ಟೇ ಹೋಳಿ ಆಚರಣೆ. ನಡೆಯು ವುದೆಲ್ಲಾ ಮೋಜು ಮಸ್ತಿ. ಹೆಚ್ಚಾಗಿ…
ಸಮರ್ಥ ಬಿಲ್ಡರ್ಸ್ ಗ್ರಾಹಕರಿಗೆ ಉತ್ತಮ ಮೌಲ್ಯವನ್ನು ತಂದುಕೊಡುವ ಉದ್ದೇಶದಿಂದ ನಿರ್ಮಾಣವಾದ ಸಂಸ್ಥೆ. ಇಂಟಿರಿಯರ್, ವ್ಯಾಪಾರಿ ಮತ್ತು ವಸತಿ ಸಮುಚ್ಛಯಗಳ ನಿರ್ಮಾಣದಲ್ಲಿ ಕಂಪೆನಿ ತೊಡಗಿಸಿಕೊಂಡಿದ್ದು ಉತ್ತಮ ಗುಣಮಟ್ಟದ ಉತ್ಪನ್ನಗಳ ತಯಾರಿಕೆಯಲ್ಲಿ ಹೆಸರುವಾಸಿಯಾಗಿದೆ. ಸಂದೀಪ್ ಶೆಟ್ಟಿ ಮಾಲಕತ್ವದ ಸಮರ್ಥ ಬಿಲ್ಡರ್ಸ್ ನ ನೂತನ ಆಡಳಿತ ಕಚೇರಿ ಮೂಡಬಿದಿರೆಯಲ್ಲಿ ಉದ್ಘಾಟನೆಗೊಂಡಿತು. ಉದ್ಘಾಟನಾ ಸಮಾರಂಭಕ್ಕೆ ಶಾಸಕ ಉಮಾನಾಥ್ ಕೋಟ್ಯಾನ್, ಕಾಂಗ್ರೆಸ್ ಮುಖಂಡ ಮಿಥುನ್ ರೈ, ಮೂಡಾ ಅಧ್ಯಕ್ಷ ಮೇಘನಾಥ ಶೆಟ್ಟಿ, ಪುರಸಭೆಯ ಪ್ರಸಾದ್ ಭಂಡಾರಿ, ಉದ್ಯಮಿ ಅಚ್ಯುತ ಶೆಟ್ಟಿ ಬೆಳುವಾಯಿ, ಸಂದೀಪ್ ಶೆಟ್ಟಿಯವರ ಪೋಷಕರು ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು. ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕರಾಗಿರುವ ಸಂದೀಪ್ ಶೆಟ್ಟಿಯವರು ಕಳೆದ ಹತ್ತು ವರ್ಷಗಳಿಂದ ಮಿತ ದರದಲ್ಲಿ ಉತ್ತಮ ಗುಣಮಟ್ಟದ ಮನೆಗಳನ್ನು, ಕಟ್ಟಿಕೊಡುವ ಸಂಸ್ಥೆಯನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಉದ್ಯಮದ ಜೊತೆಗೆ ಸಮಾಜಸೇವೆಯಲ್ಲೂ ತೊಡಗಿಸಿಕೊಂಡಿದ್ದು ಪ್ರಸ್ತುತ ಮೂಡಬಿದಿರೆ ಯುವ ಬಂಟರ ಸಂಘದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
‘ಬರಿ ಹಣ ಇರುವವನು ಆಳಿಗೆ ಮಾತ್ರ ಯಜಮಾನ ಆದರೆ ಗುಣ ಇರುವವನು ಮನುಷ್ಯ ಕುಲಕ್ಕೆ ಯಜಮಾನ’ ಎಂಬ ಮಾತಿದೆ. ಶ್ರೀಯುತ ಚೇತನ್ ಎಸ್. ಶೆಟ್ಟಿಯವರು ಅತ್ಯಂತ ಕಿರಿಯ ವಯಸ್ಸಿನಲ್ಲಿ ಉದ್ಯಮಿಯಾಗಿ ಬೆಳೆದು ಯುವಕರಿಗೆ ಮಾದರಿಯಾದವರು. 19.02.1992 ರಲ್ಲಿ ಜನಿಸಿದ ಇವರು ಮೆಕ್ಯಾಟ್ರೋನಿಕ್ಸ್ ಇಂಜಿನಿಯರಿಂಗ್ನಲ್ಲಿ ಡಿಪ್ಲೋಮೋ ಪದವಿದರರು. ತಂದೆ ದಿವಂಗತ ಸುಧಾಕರ ಶೆಟ್ಟಿ ಚಾರ ಮಣಿಬಟ್ಟಲು ಹೆಬ್ರಿ ಸಮೀಪದ ಒಂದು ಹಳ್ಳಿಯವರು. ತಾಯಿ ಸೂರಾಳು ಸಾವಂತ್ರಾಡಿ ವಸಂತಿ ಶೆಟ್ಟಿಯವರು. ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕರಾಗಿರುವ ಚೇತನ್ ಶೆಟ್ಟಿಯವರ ಇಬ್ಬರು ಸೋದರರು ಸಚಿನ್ ಶೆಟ್ಟಿ ಹಾಗೂ ನಿತಿನ್ ಶೆಟ್ಟಿ ಉನ್ನತ ಉದ್ಯೋಗದಲ್ಲಿದ್ದಾರೆ. ನಿತಿನ್ (ಅಸಿಸ್ಟೆಂಟ್ ಮ್ಯಾನೇಜರ್ ಫೆಡರಲ್ ಬ್ಯಾಂಕ್, ತಿಪಟೂರು, ತುಮಕೂರು ಜಿಲ್ಲೆ), ಸಚಿನ್ (ಟೀಮ್ ಲೀಡರ್ ಕ್ಯಾಶ್ ಫ್ರೀ ಪೇಮೆಂಟ್ ಇಂಡಿಯಾ ಲಿಮಿಟೆಡ್, ಬೆಂಗಳೂರು). ಪತ್ನಿ ದೀಪ್ತಿ ಶೆಟ್ಟಿಯವರು ಡಾಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಬೆಳಗಾವಿಯಲ್ಲಿ ಹೋಟೇಲು ಉದ್ಯಮಿಯಾಗಿರುವ ಇವರು ಸೂರಜ್ ಬಾರ್ ಅಂಡ್ ರೆಸ್ಟೋರೆಂಟನ್ನು ಹೊಂದಿದ್ದಾರೆ. ತನ್ನ ತವರೂರು ಉಡುಪಿ…
ಲೇಖನ – ವಿವೇಕ್ ಆಳ್ವ. ಕ್ಲಾಸಲ್ಲಿ ಗಮನವಿರದ ಒಬ್ಬ ವಿದ್ಯಾರ್ಥಿಯಲ್ಲಿ ಕಾರಣವೇನಿರಬಹುದು ಎಂದು ಮಾತನಾಡಿಸಿದಾಗ ಒಂದು ವಿಷಯ ಬೆಳಕಿಗೆ ಬಂತು. ಆತ 9 ಗಂಟೆಗೆ ಕ್ಯಾಂಪಸ್ ಗೆ ಕಾಲಿಡಬೇಕಾದರೆ ಬೆಳ್ಳಂಬೆಳಗ್ಗೆ 6.20ರ ಬಸ್ಸಿಗೆ ಹೊರಡಲೇಬೇಕಂತೆ. ಬಸ್ ಮಿಸ್ ಆಯಿತೆಂದರೆ ಮಧ್ಯಾಹ್ನ ನಂತರವೇ ಕ್ಲಾಸ್. ಇದು ದೂರದ ಹಳ್ಳೀ ಕಡೆಯಿಂದ ಬರುವ ಮಕ್ಕಳ ನೈಜ ಚಿತ್ರಣ. ಇದು ಒಂದು ಎಕ್ಸಾಂಪಲ್ ಅಷ್ಟೇ. ಅಮೇರಿಕಾದ ಶಾಲೆಗಳಲ್ಲಿ ಮಕ್ಕಳನ್ನು ಜಾಯಿನ್ ಮಾಡಬೇಕಾದರೆ ಶಾಲೆಯಿಂದ ಮೂರು ಮೈಲಿ ದೂರದೊಳಗಿನ ಶಾಲೆಗೇ ಸೇರಿಸಬೇಕಂತೆ. ಅದಕ್ಕೆ ಸ್ಕೂಲ್ ಡಿಸ್ಟ್ರಿಕ್ಟ್ ಅಂತ ಹೆಸರೂ ಕೊಟ್ಟಿದ್ದಾರೆ. ಅಂದರೆ ನೀವೇನಾದರೂ ದೂರದ ಶಾಲೆಗೆ ನಿಮ್ಮ ಮಗುವನ್ನು ಸೇರಿಸಬೇಕಾದರೆ ನೀವು ಮನೆಯನ್ನೇ ಶಾಲೆಗೆ ಹತ್ತಿರ ಬರುವ ರೀತಿಯಲ್ಲಿ ಬದಲಾಯಿಸಬೇಕಾಗುತ್ತದೆ..!. ಮಗುವಿನ ಮುಂದಿನ ಭವಿಷ್ಯದ ದೃಷ್ಟಿಯಿಂದ ಅವರು ಯಾವ ತ್ಯಾಗಕ್ಕೂ ಸಿಧ್ದವಿರಬೇಕು ಎಂಬ ಲೆಸನ್ ಅವರಿಂದ ಕಲಿತಂತಾಯಿತು. ಡಿಸ್ಟೆನ್ಸ್ ವಿಷಯ ನಮ್ಮಲ್ಲಿ ಸುಲಭವಿಲ್ಲ ಅಂತ ನನಗೂ ಗೊತ್ತು ನಿಮಗೂ ಗೊತ್ತು. ನಮ್ಮ ರಿಯಲ್ ಮ್ಯಾಟರ್ ಗೆ ಬರೋಣ.…
ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಸಮಾಜ ಕಲ್ಯಾಣ ಯೋಜನೆಯಡಿ ವೈದ್ಯಕೀಯ, ಮನೆ ನಿರ್ಮಾಣಕ್ಕೆ ಸಹಾಯ ಧನ ಹಸ್ತಾoತರ
ಜಾಗತಿಕ ಬಂಟರ ಸಂಘಗಳ ಒಕ್ಕೂಟ (ರಿ.) ಮಂಗಳೂರು ಇದರ ವತಿಯಿಂದ ಸಮಾಜ ಕಲ್ಯಾಣ ಯೋಜನೆಯಡಿ ಫಲಾನುಭವಿಗಳಿಗೆ ಪರಿಹಾರ ಧನ ವಿತರಿಸಲಾಯಿತು. ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ಸಮಾಜ ಕಲ್ಯಾಣ ಯೋಜನೆಯಡಿ ಮಂಗಳೂರಿನ ತಲಪಾಡಿ ನಿವಾಸಿ ಜಯಲತಾ ಶೆಟ್ಟಿಯವರ ವೈದ್ಯಕೀಯ ಶಸ್ತ್ರಚಿಕಿತ್ಸೆಗಾಗಿ ಮಂಜೂರಾದ ಸಹಾಯ ಧನದ ಚೆಕ್ಕನ್ನು ಒಕ್ಕೂಟದ ಕಚೇರಿಯಲ್ಲಿ ಹಸ್ತಾoತರಿಸಿದರು. ಮಂಗಳೂರಿನ ಆಶ್ರಯ ಕಾಲೋನಿ ನಿವಾಸಿ ರೇಷ್ಮಾ ಶೆಟ್ಟಿಯವರ ಪುತ್ರ 12 ವರ್ಷದ ರಿತ್ವಿಕ್ ಶೆಟ್ಟಿಯವರು ಅಂಗವೈಕಲ್ಯದಿಂದ ಬಳಲುತ್ತಿದ್ದು ನಡೆದಾಡಲು ಕಷ್ಟಕರವಾಗಿದ್ದು ಅವರ ವೈದ್ಯಕೀಯ ಚಿಕಿತ್ಸೆಗಾಗಿ ಸಹಾಯ ಧನದ ಚೆಕ್ಕನ್ನು ಒಕ್ಕೂಟದ ಕಚೇರಿಯಲ್ಲಿ ಹಸ್ತಾoತರಿಸಿದರು. ಉಡುಪಿಯ ಹೆಗ್ಗುoಜೆ ಗ್ರಾಮದ ನಿವಾಸಿ ವಿಜಯ ನಾಯಕ್ ರವರು ಕಾಲಿನ ಅಂಗವೈಕಲ್ಯದಿಂದ ಬಳಲುತ್ತಿದ್ದು ನಡೆದಾಡಲು ಕಷ್ಟಕರವಾಗಿದ್ದು ಅವರ ವೈದ್ಯಕೀಯ ಚಿಕಿತ್ಸೆಗಾಗಿ ಸಹಾಯ ಧನದ ಚೆಕ್ಕನ್ನು ಒಕ್ಕೂಟದ ಕಚೇರಿಯಲ್ಲಿ ಹಸ್ತಾoತರಿಸಿದರು. ಕಾಸರಗೋಡಿನ ನಿವಾಸಿ ರವೀಂದ್ರ ರೈಯವರು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು ಅವರ ವೈದ್ಯಕೀಯ ಚಿಕಿತ್ಸೆಗೆ ಮಂಜೂರಾದ ಸಹಾಯ ಧನದ ಚೆಕ್ಕನ್ನು ಅವರ ಪತ್ನಿ ಸರಸ್ವತಿ ರೈ…
ಸಣ್ಣ ಪ್ರಾಯದಲ್ಲೇ ಉದ್ಯಮ ಆರಂಭಿಸಿ ಯಶಸ್ಸಿನ ಪಥದಲ್ಲಿ ಸಾಗುತ್ತಿರುವ, ಕಠಿಣ ಪರಿಶ್ರಮಿಯಾಗಿರುವ ಕುಂದಾಪುರದ ಪ್ರಸಿದ್ಧ ಕೈಗಾರಿಕೋದ್ಯಮಿ ಶ್ರೀ ಜಯಕರ ಶೆಟ್ಟಿಯವರು 1960 ರಲ್ಲಿ ದಿವಂಗತ ಚಾರ್ಮಾಕ್ಕಿ ಸಂಜೀವ ಶೆಟ್ಟಿ ಮತ್ತು ದಿವಂಗತ ಗಿರಿಜಾ ಶೆಟ್ಟಿಯವರ ಸುಪತ್ರರಾಗಿ ಜನಿಸಿದರು. ಜಯಕರ ಶೆಟ್ಟಿಯವರು ತನ್ನ ಶಿಕ್ಷಣವನ್ನು ಬೆಂಗಳೂರಿನ ಬಾಲ್ಡ್ವಿನ್ ಶಾಲೆಯಲ್ಲಿ ಪ್ರಾರಂಭಿಸಿ, ಭಂಡಾರ್ ಕರ್ಸ್ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣವನ್ನು ಪೂರೈಸಿ, ಮಣಿಪಾಲದ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಇಂಜಿನಿಯರಿಂಗ್ ಪದವಿ ಪೂರೈಸಿ ತನ್ನ ವೃತ್ತಿ ಜೀವನವನ್ನು ಬೆಂಗಳೂರಿನಲ್ಲಿ ಪ್ರಾರಂಭ ಮಾಡಿದರು. ಉದ್ಯೋಗ ಕ್ಷೇತ್ರದಲ್ಲಿ ಬೇರೆ ಬೇರೆ ರಂಗದಲ್ಲಿ ದುಡಿದರೂ ಅವರಿಗೆ ಪೂರ್ತಿ ತೃಪ್ತಿ ಸಿಗಲಿಲ್ಲ. ಅವರಲ್ಲಿರುವ ಸಾಧನೆಯ ತುಡಿತ ಹೆಚ್ಚುತ್ತಲೇ ಹೋಯಿತು. ಯಾವುದಾದರೂ ಸ್ವಂತ ಉದ್ಯಮ ಆರಂಭಿಸಿ ಹಲವರಿಗೆ ಉದ್ಯೋಗದಾತರಾಗುವ ಕನಸು ಕಂಡರು. ಇದರ ಫಲವಾಗಿ 1987 ರಲ್ಲಿ ಗಿರಿಜಾ ಟೈಲ್ ವರ್ಕ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯನ್ನು ಸ್ಥಾಪಿಸಿ ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟರು. ಯಶಸ್ವೀ ಉದ್ಯಮಿ ಎಂದು ಗುರುತಿಸಿಕೊಂಡ ಜಯಕರ ಶೆಟ್ಟಿಯವರು ತನ್ನ ಉದ್ಯಮವನ್ನು…















