Author: admin

ಐತಿಹಾಸಿಕ ಪ್ರಸಿದ್ಧ 400 ವರ್ಷದ ದಂತಕತೆಯನ್ನು ಹೊಂದಿರುವ ತೂಗುಯ್ಯಾಲೆಯ ತೊಟ್ಟಿಲ ಮಾತೆ ಶ್ರೀ ಯಕ್ಷಮ್ಮ ದೇಗುಲದ ಜಾತ್ರಾ ಮಹೋತ್ಸವ ಸಂಪನ್ನಗೊಂಡಿದೆ. “400 ವರುಷ ಇತಿಹಾಸ ಇರುವ ಕರಗುಡಿ ಶ್ರೀ ವರಬ್ರಹ್ಮ, ಶ್ರೀ ಸ್ವರ್ಣ ಯಕ್ಷಿ ಮತ್ತು ನಾಗ ದೇವತೆ ಸ-ಪರಿವಾರ ದೇವರುಗಳ ವಾರ್ಷಿಕ ಜಾತ್ರಾ ಮಹೋತ್ಸವ ವಿವಿಧ ಧಾರ್ಮಿಕ ವಿಧಾನಗಳೊಂದಿಗೆ ಸಂಪನ್ನಗೊಂಡಿತು. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಳಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ, ಸರಿ ಸುಮಾರು 400 ವರ್ಷಗಳ ಇತಿಹಾಸಿಯಾಗಿರುವ ಐತಿಹಾಸಿಕ ಪುರಾಣ ಪ್ರಸಿದ್ಧ ಮೊಳಹಳ್ಳಿ ಕರಗುಡಿ ಶ್ರೀ ವರಬ್ರಹ್ಮ, ಶ್ರೀ ಸ್ವರ್ಣ ಯಕ್ಷಿ, ನಾಗದೇವತೆ ಸಹ ಪರಿವಾರ ಗಣಗಳ ವಾರ್ಷಿಕ ಜಾತ್ರಾ ಮಹೋತ್ಸವ (ಹಾಲು ಹಬ್ಬ ಸೇವೆ) ಕಲಾ ಹೋಮ, ಮಹಾ ಅನ್ನ ಸಂತರ್ಪಣೆ, ಗಂಡಸೇವೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಫೆಬ್ರವರಿ 28/02/2023 ಮಂಗಳವಾರ ಮತ್ತು ಮಾರ್ಚ್- 01/03 /2023 ಬುಧವಾರ ವರೆಗೂ ಧಾರ್ಮಿಕ ವಿವಿಧ ಕಾರ್ಯಕ್ರಮಗಳು ಹಾಗೂ ಧಾರ್ಮಿಕ ವಿಧಿ ವಿಧಾನಗಳು ಸಂಪನ್ನಗೊಂಡಿದೆ. ಕಾರ್ಯಕ್ರಮದಲ್ಲಿ ಅರ್ಚಕರೊಂದದವರು ವಿಶೇಷವಾದಂತಹ ಕಲಾ…

Read More

ಅನಾದಿ ಕಾಲದಿಂದಲೂ ದಕ್ಷಿಣ ಭಾರತದ ಜನರು ಪ್ರಕೃತಿಯ ಅರಾಧಕರಾಗಿದ್ದರು. ಪ್ರಾಚೀನ ಪರಂಪರೆಯ ಹಲವಾರು ಕ್ಷೇತ್ರಗಳು, ಭೂಮಿ ತಾಣಗಳು, ಹರಿಯುವ ನದಿಗಳು ಮುಂತಾದ ಹತ್ತು ಹಲವಾರು ಪ್ರಕೃತಿದತ್ತವಾದ ಪರಿಸರಗಳು ವಿವಿಧತೆಯಿಂದ ಪಾವಿತ್ರ್ಯತೆಯನ್ನು ಯಾ ಪರಂಪರೆಯನ್ನು ಹೊಂದಿತ್ತು. ಇಲ್ಲಿರುವ ವಿವಿಧ ಧರ್ಮಕ್ಷೇತ್ರಗಳು ತಮ್ಮದೇ ಆದ ವರ್ಚಸ್ಸಿನಲ್ಲಿ ಮೆರೆಯುತ್ತಿದೆ. ಧಾರ್ಮಿಕ ಪರಂಪರೆಯನ್ನು ಅವಲೋಕಿಸುವಾಗ ಆಚರಣೆಯ ದೇವರ ಪೂಜಾ ವಿಧಿ-ವಿಧಾನಗಳಲ್ಲಿ ಕಾಲ ಚಕ್ರದಂತೆ ಯಾವುದೇ ಒಂದು ಸೀಮಿತ ಸಮುದಾಯಕ್ಕೆ ಅಂಟಿಕೊಳ್ಳದೆ ತಮ್ಮದೇ ಆದ ಬದಲಾವಣೆಯ ಆಚರಣೆಯ ರೀತಿಯನ್ನು ಅನುಸರಿಸುತ್ತಿರುವುದು ಇಂದಿನ ಶೈಲಿಯ ಪದ್ದತಿಯಾಗಿದೆ. ಇದರಂತೆ ಕಳೆದ 17 ವರ್ಷಗಳ ಹಿಂದೆ ಮೀರಾರೋಡ್ ಸೆಕ್ಟರ್ 4ರ ಸಿ 19, ನಂ. 002 ನ ಪ್ರೇಮ್ ಜ್ಯೋತ್ ಸೊಸೈಟಿ ಮೀರಾರೋಡ್ ಇಲ್ಲಿ ಪ್ರತಿಷ್ಟಾಪಿಸಲ್ಪಟ್ಟ ಶ್ರೀ ಚಾಮುಂಡೇಶ್ವರೀ ಪ್ರಸನ್ನ ಎಂಬ ಸಾನಿಧ್ಯವು ಇದೀಗ ಭಕ್ತರಾಲಯವಾಗಿದೆ. ದಿನದಿಂದ ದಿನಕ್ಕೆ ಶ್ರೀ ಕ್ಷೇತ್ರವು ಶ್ರೀ ಚಾಮುಂಡೇಶ್ವರಿ ಅಮ್ಮನವರ ಕೃಪಾಕಟಾಕ್ಷದ ಅನುಗ್ರಹ ಭಕ್ತಾಧಿಗಳಿಗೆ ಲಭ್ಯವಾಗುತ್ತಿದೆ. ಯಾವುದೇ ಪಂಗಡ ಯಾ ಜಾತೀಯತೆಯನ್ನು ಅನುಸರಿಸದೆ ಕ್ಷೇತ್ರದ ಅಭಯ ಹಸ್ತ…

Read More

ರೈನ್ ಬೋ ಬುಡಾಕಾನ್ ಕರಾಟೆ ಅಕಾಡೆಮಿ ಯಡ್ ತ್ತೆರೆ ಬೈಂದೂರು ಇಲ್ಲಿ ನಡೆದ 9ನೇ ರೈನ್ ಬೋ “ಕಪ್ 22-23ರ ಕಪ್ ಕರಾಟೆ ಸ್ಪರ್ಧೆಯಲ್ಲಿ ಕಟ ಮತ್ತು ಕುಮೆಟೆ ಎರಡು ವಿಭಾಗಗಳಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಎರಡು ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದು 5ನೇಯ ಬಾರಿ ರಾಷ್ಟ ಮಟ್ಟದಲ್ಲಿ ನಡೆದ ಕರಾಟೆ ಸ್ಪರ್ಧೆ ಯಲ್ಲಿ ಪ್ರಶಸ್ತಿ ಪಡೆಯುವಲ್ಲಿ ಹಾವಂಜೆ ಗ್ರಾಮದ ಕೀಳಂಜೆಯ ರಿಯಾ ಜಿ, ಶೆಟ್ಟಿ. ಯಶಸ್ವಿಯಾಗಿದ್ದಾರೆ. ಉಡುಪಿಯ ವಳಕಾಡು ಶಾಲೆಯ ಎಂಟನೆ ತರಗತಿಯ ವಿದ್ಯಾರ್ಥಿನಿಯಾಗಿದ್ದು ಹಾವಂಜೆಯ ಛಾಯಾಗ್ರಾಹಕ ಗಣೇಶ್ ಶೆಟ್ಟಿ ಕೀಳಂಜೆ ಹಾಗು ಜಯಲಕ್ಷ್ಮಿ ಜಿ,ಶೆಟ್ಟಿಯವರ ಪುತ್ರಿ ಯಾಗಿದ್ದು ಪರ್ಕಳದ ಕರಾಟೆ ಪಟು ಪ್ರವೀಣ್ ರವರ ಶಿಷ್ಯೆಯಾಗಿದ್ದು ಪರ್ಕಳದ ಪಿಕೆಸಿ ತಂಡದ ಸದಸ್ಯೆ ಆಗಿದ್ದಾರೆ.

Read More

ಕಾಪು ಹೊಸ ಮಾರಿಗುಡಿ ಜೀರ್ಣೋದ್ಧಾರದ ಕಾಮಗಾರಿ ವೀಕ್ಷಣೆಗೆ ಪುಣೆ ಸಮಿತಿಯ ಅಧ್ಯಕ್ಷರಾದ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ ಶ್ರೀ ಸಂತೋಷ್ ವಿ.ಶೆಟ್ಟಿ ಮತ್ತವರ ತಂಡ ಭೇಟಿ ನೀಡಿತು. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಶ್ರೀ ಕೆ. ವಾಸುದೇವ ಶೆಟ್ಟಿಯವರ ಉಪಸ್ಥಿತಿಯಲ್ಲಿ ವೇದಮೂರ್ತಿ ಶ್ರೀ ಶ್ರೀನಿವಾಸ ತಂತ್ರಿಯವರು ಮಾರಿಯಮ್ಮನ ಸನ್ನಿದಾನದಲ್ಲಿ ಪ್ರಾರ್ಥಿಸಿ ಅಮ್ಮನ ಅನುಗ್ರಹ ಪ್ರಸಾದವನ್ನು ನೀಡಿದರು. ಈ ಸಂದರ್ಭ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು ಕಾಪು ಹೊಸ ಮಾರಿಗುಡಿ ಕ್ಷೇತ್ರದ ಸಮಿತಿ ಪುಣೆಯಲ್ಲಿ ಈಗಾಗಲೇ ರಚನೆಯಾಗಿದ್ದು, ಕಟೀಲು ಅಮ್ಮನ ಯಕ್ಷಗಾನ “ಶ್ರೀ ದೇವಿ ಮಹಾತ್ಮೆ” ಕೂಡಾ ಆಯೋಜಿಸಿದ್ದೆವು, ಊರಿನ ಸಮಿತಿಯ ಪದಾಧಿಕಾರಿಗಳು ಪುಣೆ ಸಮಿತಿಯ ಮೊದಲ ಸಭೆಗೆ ಆಗಮಿಸಿ ನಮ್ಮೊಂದಿಗೆ ಸಮಿತಿ ರಚನೆಯಲ್ಲಿ ಸಹಕರಿಸಿದ್ದರು, ಸುಮಾರು ಒಂದು ಸಾವಿರ ಜನರ ಉಪಸ್ಥಿತಿಯಲ್ಲಿ ಸಮಿತಿ ರಚನೆ ಮಾಡಿದ್ದು, ಕಾಪು ಹೊಸ ಮಾರಿಗುಡಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ದೊಡ್ಡ ಮಟ್ಟದ ದೇಣಿಗೆಯನ್ನು ನೀಡಬೇಕೆನ್ನುವ ಆಶಯವನ್ನು ಹೊಂದಿದ್ದೇವೆ, ಕ್ಷೇತ್ರದ ಕಾಮಗಾರಿಯನ್ನು ವೀಕ್ಷಿಸುವಾಗ ಆಶ್ಚರ್ಯವಾಗುತ್ತಿದೆ, ಅರೋಗ್ಯ ವ್ಯಾಪಾರ ಮನಶಾಂತಿ ಉತ್ತಮವಾಗಿದ್ದರೆ ನಾವು…

Read More

ಬಂಟ್ವಾಳದ ಕರೋಪಾಡಿ ಗ್ರಾಮದ ಒಡಿಯೂರು ಕ್ಷೇತ್ರದ ಹೆಸರು ಕೇಳದೆ ಇರುವವರು ಕಡಿಮೆ. ಒಡಿಯೂರು ಶ್ರೀ ಕ್ಷೇತ್ರದ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಅವರ ಪರಮ ಶಿಷ್ಯ ಭಕ್ತರಾದ ಶ್ರೀ ಸುಬ್ರಹ್ಮಣ್ಯ ಉಷಾ ದಂಪತಿಗಳ ಸುಪುತ್ರನಾಗಿ 24.03.2000 ದಲ್ಲಿ ಜನಿಸಿದ ಗುರುತೇಜ ಬಾಲ್ಯದಲ್ಲೇ ಭರತನಾಟ್ಯ ಹಾಗೂ ಯಕ್ಷಗಾನ ನಾಟ್ಯಾಭ್ಯಾಸ ಪ್ರಾರಂಭ ಮಾಡಿದರು. ಯಕ್ಷಗಾನವನ್ನು ಸ್ವತಃ ಕಲಾವಿದೆಯಾದ ನಾಟ್ಯ ಗುರು ಸಂಘಟಕಿಯೂ ಆದ ಹೆತ್ತಮ್ಮ ಶ್ರೀಮತಿ ಉಷಾ ಶೆಟ್ಟಿ ಒಡಿಯೂರು ಹಾಗೂ ತಂದೆಯವರಿಂದ ಕಲಿತರು. ಆಮೇಲೆ ಶಾಲಾ ದಿನಗಳಲ್ಲಿ ಶ್ರೀ ಶೇಖರ ಶೆಟ್ಟಿ ಬಾಯಾರು ಕುಳ್ಯಾರು, ಶ್ರೀ ಉಂಡೆಮನೆ ಕೃಷ್ಣ ಭಟ್ ಮತ್ತು ಶ್ರೀ ಸಬ್ಬಣಕೋಡಿ ರಾಮ ಭಟ್ ಅವರೆಲ್ಲರಿಂದ ಶಾಸ್ತ್ರೀಯವಾಗಿ ನಾಟ್ಯಾಭ್ಯಾಸ ಮಾಡಿ ತಾಯಿಯ ತಂಡದಲ್ಲಿ, ಶಾಲಾ ಕಾಲೇಜುಗಳಲ್ಲಿ ಒಡಿಯೂರು ಕ್ಷೇತ್ರದಲ್ಲೇ ವೇಷ ಮಾಡುತ್ತಿದ್ದ ತೇಜುವಿಗೆ ತನ್ನ ವಿದ್ಯಾಭ್ಯಾಸದ ಜೊತೆಗೆ ಭರತನಾಟ್ಯ ಮತ್ತು ಕನ್ನಡ ಯಕ್ಷಗಾನದಲ್ಲಿ ಆಸಕ್ತಿ ಹೆಚ್ಚಾಯಿತು. ಅಮ್ಮನ ಸ್ಪೂರ್ತಿ ಹಾಗೂ ಒತ್ತಾಯದ ಮೇರೆಗೆ ಕಾಲೇಜು ದಿನಗಳಲ್ಲೇ ಎಡನೀರಿನ ಶ್ರೀ ಶ್ರೀ…

Read More

ಹಾವಂಜೆ ಗ್ರಾಮದ ಛಾಯಾಗ್ರಾಹಕ ಕೀಳಂಜೆ ಗಣೇಶ್ ಶೆಟ್ಟಿ, ಜಯಲಕ್ಷ್ಮೀ ಶೆಟ್ಟಿ ದಂಪತಿಗಳ ಸುಪುತ್ರಿ ರಿಯಾ ಜಿ ಶೆಟ್ಟಿ ಉಡುಪಿ ಒಳಕಾಡು ಶಾಲೆಯ 8 ನೇ ತರಗತಿಯ ವಿದ್ಯಾರ್ಥಿನಿ. ಈಕೆ ಅಂತರಾಷ್ಟ್ರೀಯ ಮಟ್ಟದ ಕರಾಟೆ ಪಟು ಶಿಕ್ಷಕಿ ಪ್ರವೀಣ ಪರ್ಕಳ ಇವರ ಶಿಷ್ಯೆಯಾಗಿದ್ದು ಪರ್ಕಳ ಪಿ.ಕೆ.ಸಿ ತಂಡದ ಹೆಮ್ಮೆಯ ಸದಸ್ಯೆಯಾಗಿದ್ದಾಳೆ. ನ.5 ಮತ್ತು 6 ರಂದು ಇನ್ಸ್ ಟಿಟ್ಯೂಟ್ ಅಫ್ ಕರಾಟೆ ಎಂಡ್ ಆಟ್ಸ್೯ ಕೊಡವೂರು ಇವರ ವತಿಯಿಂದ ಉಡುಪಿಯ ಅಮ್ರತ್ ಗಾರ್ಡನ್ ಸಭಾಂಗಣದಲ್ಲಿ ನಡೆದ ರಾಷ್ಟ್ರ ಮಟ್ಟದ 40 ನೇ ಸ್ಪರ್ಧಾ ಕೂಟದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ ರಿಯಾ ಜಿ. ಶೆಟ್ಟಿ ಕಟ ಮತ್ತು ಕುಮಿಟೆ ಎರಡು ವಿಭಾಗದಲ್ಲಿಯೂ ಅವಳಿ ಚಿನ್ನ ಗೆದ್ದ ಸಾಧಕಿಯಾಗಿದ್ದು, ರಾಷ್ಟ್ರ ಮಟ್ಟದಲ್ಲಿ ಆಯೋಜಿಸಲ್ಪಟ್ಟ ಸತತ ಎರಡನೇ ಪಂದ್ಯದಲ್ಲಿಯೂ ಎರಡನೇ ಬಾರಿಗೆ ಮತ್ತೆ ಅವಳಿ ಚಿನ್ನದೊಡತಿಯಾಗಿದ್ದು ವಿಶೇಷ ಸಾಧನೆ. ಅಷ್ಟೇ ಅಲ್ಲದೆ ಟೀಂ ಕಟ ವಿಭಾಗದಲ್ಲಿಯೂ ಬೆಳ್ಳಿ ಪದಕ ಗೆದ್ದುಕೊಂಡು ಕರಾಟೆಯಲ್ಲಿ ಸಾಧನೆಗೈದ ಈ ಬಾಲ ಪ್ರತಿಭೆ…

Read More

ಭಾರತೀಯ ಸಂಸ್ಕೃತಿ ಅಚಾರ ವಿಚಾರಗಳು ಜಗತ್ತಿನಲ್ಲಿಯೆ ಶ್ರೇಷ್ಠವಾದುದು ಅದನ್ನು ಉಳಿಸುವಲ್ಲಿ ಈಗೀನ ಯುವ ಸಮುದಾಯ ಪ್ರಯತ್ನಿಸಬೇಕು ಎಂದು ವಿದ್ಯಾವಾಚಸ್ಪತಿ ಬಾರ್ಕೂರು ಸಂಸ್ಥಾನದ ಶ್ರೀ ಡಾ! ಸಂತೋಷ್ ಗುರೂಜಿ ನುಡಿದರು ಅವರು ಬಂಟರ ಸಂಘ (ರಿ) ಸುರತ್ಕಲ್ ವತಿಯಿಂದ ಬಂಟರ ಭವನದಲ್ಲಿ ನಡೆದ ಭಾರತೀಯ ಸಂಸ್ಕೃತಿ ಅಳಿವು ಉಳಿವು ಬಗ್ಗೆ ಸಂವಾದ ಕಾರ್ಯಕ್ರಮದಲ್ಲಿ ನುಡಿದರು. ನಮ್ಮ ಪೂರ್ವಜರು ನಡೆಸುತ್ತಿದ್ದ ಹಿಂದಿನ ಪರಂಪರೆ, ಕಟ್ಟುಪಾಡು, ಪದ್ದತಿಯನ್ನು ನಾವು ಪ್ರಸ್ತುತ ಕಾಲಘಟ್ಟದಲ್ಲಿ ಮರೆಯುತ್ತಿದ್ದು, ಇದು ಅಪಾಯದ ಸೂಚನೆಯಾಗಿದೆ. ಹಾಗಾಗಿ ನಾವು ಕರಾವಳಿ ಪ್ರದೇಶದಲ್ಲಿ ದೈವರಾಧನೆ, ಪ್ರಕೃತಿಯ ಅರಾಧನೆ ಮಾಡುವ ಮೂಲಕ ನಮ್ಮ ಹಿಂದೂ ಧರ್ಮವನ್ನು ಹಾಗೂ ಸಂಸ್ಕೃತಿಯನ್ನು ಉಳಿಸುವ ಕೆಲಸ ಮಾಡಬೇಕಾಗಿದೆ ಎಂದರು. ಮುಖ್ಯ ಅತಿಥಿಗಳಾಗಿ ಮುಂಬಯಿ ಉದ್ಯಮಿ ಕರುಣಾಕರ ಎಂ ಶೆಟ್ಟಿ ಮಧ್ಯಗುತ್ತು ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ ಎಸ್ ಪೂಂಜ ವಹಿಸಿದ್ದರು. ಸಭೆಯಲ್ಲಿ ಉಪಾಧ್ಯಕ್ಷ ಲೋಕಯ್ಯ ಶೆಟ್ಟಿ ಮುಂಚೂರು, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಶೆಟ್ಟಿ ಸುರತ್ಕಲ್, ಕೋಶಾಧಿಕಾರಿ…

Read More

ಭಾರತ ದೇಶದಲ್ಲೇ ಅಗ್ರ ಹೃದಯ ತಜ್ಞರಲ್ಲಿ ಒಬ್ಬರಾಗಿದ್ದುಕೊಂಡು ಪ್ರಸ್ತುತ ಬೆಂಗಳೂರಿನ ಕೊಲಂಬಿಯ ಏಷ್ಯಾ ಹಾಸ್ಪಿಟಲ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಹೆಗ್ಗುಂಜೆ ಡಾ.ಪ್ರಭಾಕರ್ ಶೆಟ್ಟಿಯವರಿಗೆ ಸಮಸ್ತ ಬಂಟ ಸಮಾಜದ ಪರವಾಗಿ ಶುಭ ಹಾರೈಸುತ್ತಿದ್ದೇವೆ.

Read More

ವಿದ್ಯಾಗಿರಿ: ಮಹಿಳೆಯರ ಹಾಗೂ ಪುರುಷರ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್ ಹಾಗೂ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಖೋ ಖೋ ಚಾಂಪಿಯನ್‍ಶಿಪ್‍ನಲ್ಲಿ ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸುವ 102 ಕ್ರೀಡಾಪಟುಗಳಿಗೆ ಆಳ್ವಾಸ್ ಕಾಲೇಜಿನಲ್ಲಿ ಜರ್ಸಿ ವಿತರಿಸಲಾಯಿತು. ಅಥ್ಲೆಟಿಕ್ಸ್‍ನ್ಲ 72ರ ಪೈಕಿ 59 ಹಾಗೂ ಖೋ ಖೋ 30ರ ಪೈಕಿ 23 ಸೇರಿದಂತೆ 82 ಕ್ರೀಡಾಪಟುಗಳು ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು. ತಮಿಳುನಾಡಿನಲ್ಲಿ ನಡೆಯಲಿರುವ ಪುರುಷರ ರಾಷ್ಟ್ರೀಯ ಮಟ್ಟದ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್  ಚಾಂಪಿಯನ್‍ಶಿಪ್‍ನಲ್ಲಿ ಮಂಗಳೂರು ವಿಶ್ವವಿದ್ಯಾಲಯದ 39 ಸ್ಪರ್ಧಿಗಳು ಪಾಲ್ಗೊಳ್ಳಲಿದ್ದು, ಈ ಪೈಕಿ 33 ಮಂದಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು. ಒಡಿಶಾದಲ್ಲಿ ನಡೆಯಲಿರುವ ಮಹಿಳೆಯರ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ ಮಂಗಳೂರು ವಿಶ್ವವಿದ್ಯಾಲಯದ 33 ವಿದ್ಯಾರ್ಥಿನಿಯರು ಪಾಲ್ಗೊಳ್ಳಲಿದ್ದು, 26 ಮಂದಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿಯರು. ಪುರುಷರ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಖೋ ಖೋ ಚಾಂಪಿಯನ್‍ಶಿಪ್  ಕೇರಳದ ಕಲ್ಲಿಕೋಟೆಯಲ್ಲಿ ನಡೆಯಲಿದ್ದು, ಮಂಗಳೂರು ವಿಶ್ವವಿದ್ಯಾಲಯ ತಂಡದ 15 ಆಟಗಾರರಲ್ಲಿ 12 ಮಂದಿ…

Read More

ಯುಪಿಎಸ್‌ಸಿಯು 2022ರ ಸಿವಿಲ್ ಸರ್ವಿಸಸ್ ಪರೀಕ್ಷೆಯ consolidated ಲಿಸ್ಟ್ ಅನ್ನು ಬಿಡುಗಡೆಗೊಳಿಸಿದೆ. ಲಕ್ಷಾಂತರ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಈ ಪರೀಕ್ಷೆಯನ್ನು ಬರೆದರೂ ಪಾಸ್ ಆಗುವುದು ಕೇವಲ ಸಾವಿರದಲ್ಲಿ ಮಾತ್ರ. ಈ ಸಾರಿಯ ಯುಪಿಎಸ್ಸಿ ನಾಗರಿಕ ಸೇವಾ ಪರೀಕ್ಷೆಗೆ 11 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದು ಕೇವಲ 1022 ಅಭ್ಯರ್ಥಿಗಳು ಮಾತ್ರ ಆಯ್ಕೆಗೊಂಡಿದ್ದಾರೆ. ಅದೆಷ್ಟೋ ಅಭ್ಯರ್ಥಿಗಳಿಗೆ ಈ ಪರೀಕ್ಷೆಯಲ್ಲಿ ಪಾಸ್ ಆಗುವುದು ಕನಸಾಗಿ ಉಳಿದಿರುತ್ತದೆ. ಅದರಲ್ಲಿಯೂ ಮದುವೆಯಾದ ನಂತರವಂತೂ ಇದು ಸಾಧ್ಯವೇ ಇಲ್ಲ ಎಂಬ ಮನಸ್ಥಿತಿ ಅದೆಷ್ಟು ಸ್ತ್ರೀಯರಲ್ಲಿ ಇದೆ. ಆದರೆ ಇದಕ್ಕೆಲ್ಲ ಮನಸ್ಥಿತಿಯೊಂದೇ ಕಾರಣ. ನಾವು ಸಾಧಿಸುವ ಮನಸಿದ್ದರೆ ಸಾಧಿಸಬೇಕೆಂಬ ಛಲ ಇದ್ದರೆ ಏನೆನ್ನಾದರೂ ಸಾಧಿಸಬಹುದು ಎಂಬುದನ್ನು ಮೂರು ವರ್ಷದ ಮಗುವಿನ ತಾಯಿ ಉಡುಪಿಯ ನಿವೇದಿತಾ ಶೆಟ್ಟಿ ತೋರಿಸಿಕೊಟ್ಟಿದ್ದಾರೆ. ನಿವೇದಿತಾ ಮೂಲತ ಉಡುಪಿಯಯವರು. ಇವರ ತಂದೆ ಸದಾನಂದ ಶೆಟ್ಟಿ ಮತ್ತು ತಾಯಿ ಸಮಿತ ಶೆಟ್ಟಿ ಉಡುಪಿಯಲ್ಲಿ ವಾಸವಾಗಿದ್ದಾರೆ. ನಿವೇದಿತಾ ಅವರ ಪತಿ ದಿವಾಕರ ಶೆಟ್ಟಿ, ಓಮನ್ ಸರಕಾರಿ ಟೆಕ್ನಿಕಲ್ ಯೂನಿವರ್ಸಿಟಿಯಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ .…

Read More