ಪನ್ವೇಲ್ ಪೂರ್ವದ ಸೆಕ್ಟರ್ 5/A ಗುರುದ್ವಾರದ ಹಿಂದೆ ಸಂತ ಶ್ರೀ ವೃಂದಾವನ ಬಾಬಾ ಸಮಾಧಿ ಮಂದಿರರದಲ್ಲಿ ತುಳು ಕನ್ನಡಿಗರು ಸ್ಥಾಪಿಸಿರುವ ವೃಂದಾವನ ಬಾಬಾ ಭಜನೆ ಮಂಡಳಿಯ ಸದಸ್ಯರು, ಅಯ್ಯಪ್ಪ ಭಕ್ತರು ಹಾಗೂ ನ್ಯೂ ಪನ್ವೇಲ್ ನಗರ ಸೇವಕ ಸಂತೋಷ ಜಿ ಶೆಟ್ಟಿ ಇವರೆಲ್ಲರ ಒಗ್ಗಟ್ಟಿನಲ್ಲಿ ಪ್ರಾರಂಭಗೊಂಡಿರುವ
ಶ್ರೀ ವೃಂದಾವನ ಬಾಬಾ ಅಯ್ಯಪ್ಪ ಭಕ್ತ ವೃಂದದ 19 ನೇ ವರ್ಷದ ಶ್ರೀ ಅಯ್ಯಪ್ಪ ಮಹಾಪೂಜೆಯು ಜನವರಿ 1 ರ ಸೋಮವಾರ ಭಕ್ತಿ ಸಂಭ್ರಮದೊಂದಿಗೆ ನಡೆಯಿತು. ಬೆಳಗ್ಗೆ ಮಹಾಗಣಪತಿ ಹೋಮ ಬಳಿಕ ಶ್ರೀ ವೃಂದಾವನ ಬಾಬಾ ಭಜನಾ ಮಂಡಳಿಯವರಿಂದ ಭಜನೆ ನಡೆಯಿತು. ಅನಂತರ ಜಯ ಗುರುಸ್ವಾಮಿ ಮಹಾಮಂಗಳಾರತಿಯನ್ನು ನಡೆಸಿದರು. ಮಧ್ಯಾಹ್ನ ಮಹಾಪ್ರಸಾದ ಅನ್ನಸಂತರ್ಪಣೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅಯ್ಯಪ್ಪ ಸ್ವಾಮಿಯ ಭಕ್ತರು ಪಾಲ್ಗೊಂಡಿದ್ದರು.
ಮಧ್ಯಾಹ್ನ ನಂತರ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಪುಣೆ ಹಾಗೂ ಊರಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ “ಕೋರ್ದಬ್ಬು ಬಾರಗ” ಎಂಬ ತುಳು ಐತಿಹಾಸಿಕ ಯಕ್ಷಗಾನ ಪ್ರಸಂಗ ನಡೆಯಿತು. ಪೂಜಾ ಕಾರ್ಯಕ್ಕೆ ಆಗಮಿಸಿದ ಪನ್ವೆಲ್ ನ ಶಾಸಕ ಪ್ರಶಾಂತ್ ಠಾಕೂರ್ ಮತ್ತು ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಪುಣೆಯ ಅಧ್ಯಕ್ಷ ಪ್ರವೀಣ್ ಶೆಟ್ಟಿ ಪುತ್ತೂರು ಇವರನ್ನು ನಗರ ಸೇವಕ ಸಂತೋಷ ಜಿ ಶೆಟ್ಟಿ, ಪನ್ವೇಲ್ ಕರ್ನಾಟಕ ಸಂಘದ ಅಧ್ಯಕ್ಷ ಭಾಸ್ಕರ್ ಶೆಟ್ಟಿ ( ಪದ್ಮ), ಬಿ ಕೆ ಗುರುಸ್ವಾಮಿ ಗೌರವಿಸಿದರು. ಪೂಜಾ ಕಾರ್ಯಗಳು ವಿಜೃಂಭಣೆಯಿಂದ ನಡೆಯಲು ವೃಂದಾವನ ಬಾಬಾ ಭಜನೆ ಮಂಡಳಿಯ ಸದಸ್ಯರು, ಅಯ್ಯಪ್ಪ ಭಕ್ತರು, ಪನ್ವೇಲ್ ಕರ್ನಾಟಕ ಸಂಘದ ಪದಾಧಿಕಾರಿಗಳು, ಸದಸ್ಯರು ಸಹಕರಿಸಿದರು.