ಪ್ರಕೃತಿಯ ಮಡಿಲಲ್ಲಿ ಬೆಳೆಯುವ ಮಾನವನ ಜಗತ್ತು ಜೀವ ಸಂಕುಲ ಎಲ್ಲ ಒಂದು ಮಹತ್ವವಾಗಿದೆ . ಇಂತಹ ಪರಿಸರವನ್ನು ಉಳಿಸಿ-ಬೆಳೆಸುವ ಹೊಣೆ ನಮ್ಮೆಲ್ಲರ ಜವಾಬ್ದಾರಿಯಾಗಬೇಕು. ನಮ್ಮ ಒಂದು ಸ್ವಾರ್ಥಕ್ಕಾಗಿ ಪರಿಸರ ಹಾಳು ಮಾಡಿದರೆ ನಾಳೆಯ ದಿನ ಪರಿಸರ ನಮ್ಮನ್ನು ಉಳಿಸುವುದಿಲ್ಲ.
ಹಸುರು ನಮ್ಮೆಲ್ಲರ ಉಸಿರು ಎಂಬ ನುಡಿ ಮಾತು ನಿಜಕ್ಕೂ ಅದ್ಭುತವಾದ ಅರ್ಥ ಕಲ್ಪಿಸುತ್ತದೆ. ಗಿಡ ಮರ, ಹೂ, ಪ್ರಾಣಿ, ಪಕ್ಷಿಗಳು ಎಲ್ಲ ಜೀವಿಗಳ ಸಂಕುಲವನ್ನು ಪರಿಸರದಲ್ಲಿ ನೋಡುವ ಸೊಬಗು ಕಣ್ಣಿಗೆ ಆಕರ್ಷಣಿಯವಾದದು. ಪ್ರತಿಯೊಬ್ಬರು ಒಂದೊಂದು ಮರ ನೆಡುತ್ತಾ ಪರಿಸರ ಬೆಳೆಸುವಲ್ಲಿ ಕೈ ಜೋಡಿಸಬೇಕು. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ ಪರಿಸರ ಜಾಗೃತಿ ಮೂಡಿಸುವ ಕರ್ತವ್ಯ ನಮ್ಮದಾಗಬೇಕು.
ನಿಸರ್ಗ ಒಂದು ಕೊಡುಗೆ ಅದನ್ನು ವರ್ಣಿಸಲು ಪದಗಳೇ ಸಾಲದು ನಿಸರ್ಗದ ಒಡಲು ತಾಯಿಯ ಮಡಿಲು ಯಾವುದಕ್ಕೂ ಸರಿಸಾಟಿಯಾಗದು. ಜೀವ ಸಂಕುಲಕ್ಕೆ ಮಗುವಾಗಿ ಪಾಲನೆ ಮಾಡುವ ತಾಯಿ, ಪ್ರಕೃತಿಯನ್ನು ತನ್ನ ಮಡಿಲಲ್ಲಿ ಜೋಗುಳವಾಡುವ ಭೂ ತಾಯಿ ಇವಳನ್ನು ನಾವು ಕಾಪಾಡುವ ಒಂದು ಮನೋಭಾವ ಇರ ಬೇಕು. ಪ್ರಕೃತಿಯ ಸೊಬಗಲಿ ನಾವೆಲ್ಲ ಪ್ರಾಣಿ,ಪಕ್ಷಿಗಳನ್ನು ಜೀವಿಸಲು ಬಿಡಬೇಕು. ಹಸುರು ಉಸಿರಾಗಬೇಕು ಪ್ರತಿಯೊಬ್ಬ ಮಕ್ಕಳಿಗೆ ಪರಿಸರ ಮಹತ್ವ ತಿಳಿಸುವುದರ ಜತೆಗೆ ಜೂನ್ 5ರಂದು ಸಸಿಗಳನ್ನು ನೆಡುವುದರ ಮೂಲಕ ಪ್ರಕೃತಿಯ ಮಹತ್ವ ತಿಳಿಸುವುದು ನಮ್ಮ ಕರ್ತವ್ಯ.
ಸುಂದರ ಪ್ರಕೃತಿ ಭೂಮಿಯನ್ನೇ ಸ್ವರ್ಗವಾಗಿಸಿದೆ. ಇಂತಹ ಸಂದರ್ಭದಲ್ಲಿ ಅ ಪ್ರಕೃತಿಯ ಸಂಪತ್ತು ಉಳಿವು ನಮ್ಮ ಕೈಯಲ್ಲಿ ಇದೆ. ನಮ್ಮ ಬೇಕು ಬೇಡಿಕೆಗಳನ್ನು ಈ ನೈಸರ್ಗಿಕ ಸಂಪನ್ಮೂಲಗಳನ್ನು ನಾವು ಪರಿಸರದಿಂದ ಪಡೆದುಕೊಳ್ಳುವುದು. ಅದರ ಉಳಿವಿಗಾಗಿ ಪ್ರತಿಯೊಬ್ಬರು ಪ್ರತಿ ಕ್ಷಣವೂ ಆಲೋಚಿಸುವ ಭಾವನೆ ಹೊಂದಿರಬೇಕು. ಎಲ್ಲರೂ ನಿಸರ್ಗದ ಮಕ್ಕಳು ಚಿಗುರುವ ಎಲೆಗಳಂತೆ ನಮ್ಮ ದಿನ ನಿತ್ಯದ ಜೀವನ ಪರಿಸರ ಸೌಂದರ್ಯ ಇನ್ನೂ ಹೆಚ್ಚಾಗಲಿ ಇದು ಪ್ರಕೃತಿಯಲ್ಲಿ ಅಡಗಿರುವ ಸೌಂದರ್ಯ.