Author: admin
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕದ. ನೂತನ ಪದಾಧಿಕಾರಿಗಳ ನೇಮಕ ; ಅಧ್ಯಕ್ಷರಾಗಿ ಡಾ.ಆರ್ .ಕೆ ಶೆಟ್ಟಿ ಅವಿರೋಧ ಆಯ್ಕೆ
ಮುಂಬಯಿ: ಜ.6: ಕರ್ನಾಟಕದ ಜಾನಪದ ಸಂಪತ್ತುಗಳಾದ ವೈವಿಧ್ಯಮ ಕಲೆ , ಸಂಸ್ಕಾರ , ಸಂಸ್ಕ್ರತಿ , ಆಚಾರ , ವಿಚಾರಗನ್ನು ಕರ್ನಾಟಕದ ಹೊರರಾಜ್ಯಗಳಲ್ಲಿ ಅದರಲ್ಲೂ ವಿಶೇಷವಾಗಿ ತುಳು – ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ಮಹಾರಾಷ್ಟ್ರದ ಮಣ್ಣಿನಲ್ಲಿ ಉಳಿಸಿ , ಬೆಳೆಸುವ ನಿಟ್ಟಿನಲ್ಲಿ ಈಗಾಗಲೇ ಕಾರ್ಯನಿರತವಾಗಿರುವ ಕರ್ನಾಟ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ಇದರ ಸಭೆಯು ಜ.5 ರ ಬುಧವಾರದಂದು ದಾದರ್ ಪಶ್ವಿಮದ ಶಿವಸೇನಾ ಮುಖ್ಯ ಕಚೇರಿಯ ಎದುರುಗಡೆಯ ಕೊಹಿನೂರು ಸ್ಕ್ಯಾರ್ ನ ಅಧ್ಯಕ್ಷ ಕಚೇರಿಯಲ್ಲಿ ಜರಗಿತು. ಈ ಸಭೆಯಲ್ಲಿ ಕರ್ನಾಟಕ ಜನಪದ ಪರಿಷತ್ತು ,ಜಾನಪದ ಲೋಕ ,ಇದರ ಪ್ರಧಾನ ಅಧ್ಯಕ್ಷ ,ಟಿ .ತಿಮ್ಮೇಗೌಡ ಐ ಎ ಎಸ್(ನಿ)ಯವರ ಅನುಮೋದನೆಯ ಮೇರೆಗೆ ನೂತನ ಪದಾಧಿಕಾರಿಗಳ ನೇಮಕಾತಿಯ ಬಗ್ಗೆ ಕರ್ನಾಟಕ ಸರಕಾರದ ಮಾನ್ಯತೆಯನ್ನು ನೀಡಿದ ಅಧಿಕೃತ ಪತ್ರವನ್ನು ಮಂಡಿಸುವುದರ ಮುಖಾಂತರ ಈ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ತಿಳಿಯ ಪಡಿಸಲಾಯಿತು . ಅದರಂತೆ ನೂತನ ಅಧ್ಯಕ್ಷರನ್ನಾಗಿ ಜೀವವಿಮಾ ಕ್ಷೇತ್ರದಲ್ಲಿ ರಾಷ್ಟ್ರೀಯ ಮತ್ತು…
ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಬಯೋಟೆಕ್ನಾಲಜಿ ಹಾಗೂ ಸಂಶೋಧನಾ ಕೇಂದ್ರದ ಮೊದಲ ಡಾಕ್ಟರೇಟ್ ಪದವೀಧರೆಯಾಗಿ ಗಗನ ಬಿ ಪಿಎಚ್‍ಡಿ ಪದವಿಯನ್ನು ಪಡೆದುಕೊಂಡಿದ್ದಾರೆ. ಆಳ್ವಾಸ್ ಕಾಲೇಜಿನಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನು ಮುಗಿಸಿದ ಗಗನ ಬಿ ಮಂಡಿಸಿದ ‘’ಸ್ಕ್ರೀನಿಂಗ್ ಆಫ್ ಪೈಟೋಕೆಮಿಕಲ್ ಕಾನ್ಟ್ಟಿಟ್ಯೂಯೆಂಟ್ಸ್ ಆ್ಯಂಡ್ ಇವ್ಯಾಲ್ಯೇವೇಷನ್ ಆಫ್ ಆ್ಯಂಟಿಕ್ಯಾನ್ಸ್‍ರಸ್ ಪ್ರೋರ್ಪಾಟೀಸ್ ಆಫ್ ಜಿಮ್ನಾಕ್ರಾಂಥೆರಾ ಫರ್ಕೋಹೆರಿಯನಾ (ಹುಕ್. ಎಫ್ ಆ್ಯಂಡ್ ಥಾಮ್ಸ್) ವಾರ್ಬ್’’ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾಲಯ ಪಿಎಚ್‍ಡಿ ಪದವಿ ನೀಡಿದೆ. ಮೂಲತಃ ತರೀಕೆರೆಯವರಾದ ಇವರು ಬಿವಿ ಬಸವರಾಜ್ ಹಾಗೂ ಹೆಚ್‍ಒ ಪ್ರಭಾವತಿ ದಂಪತಿಗಳ ಪುತ್ರಿ. ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಬಯೋಟೆಕ್ನಾಲಜಿ ಹಾಗೂ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ ರಾಮ ಭಟ್ ಪಿ ಯವರ ಮಾರ್ಗದರ್ಶನದಲ್ಲಿ ಮಹಾಪ್ರಬಂಧವನ್ನು ಮಂಡಿಸಿದ್ದರು. ಸಂಶೋಧನೆಯ ಹಂತದಲ್ಲಿ ಇವರು ಮೌಖಿಕವಾಗಿ ಪ್ರಸ್ತುತ ಪಡಿಸಿದ 6 ಅಂತರಾಷ್ಟ್ರೀಯ ಹಾಗೂ ಒಂದು ರಾಷ್ಟ್ರೀಯ ಪೇಪರ್‍ಗಳಿಗೆ ಅತ್ಯುತ್ತಮ ಪ್ರಸ್ತುತಿಯ ಗೌರವಕ್ಕೆ ಪಾತ್ರವಾಗಿದ್ದು, ಮೂರು ಸಂಶೋಧನಾ ಪೇಪರ್‍ಗಳು ಪ್ರಕಟಗೊಂಡಿವೆ.
ದೇಶ ವಿದೇಶಗಳಲ್ಲಿ ಬಂಟರ ಕೊಡುಗೆ ಅನನ್ಯವಾಗಿದೆ. ಕೃಷಿ ಪರಂಪರೆಯಿಂದ ಬಂದ ಬಂಟ ಸಮುದಾಯ ಪವಿತ್ರವಾದ ದೀಪಾವಳಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುತ್ತಾರೆ. ಈ ನಿಟ್ಟಿನಲ್ಲಿ ಬಂಟ್ವಾಳ ಬಂಟರ ಸಂಘ ಯುವ ವಿಭಾಗದ ಅಧ್ಯಕ್ಷ ನಿಶಾನ್ ಆಳ್ವ ಇವರ ನೇತೃತ್ವದಲ್ಲಿ ದೀಪಾವಳಿ ಹಬ್ಬವನ್ನು ಉತ್ತಮವಾಗಿ ನಡೆಸಿದ್ದಾರೆ ಎಂದು ಎಂಆರ್ ಜಿ ಗ್ರೂಪ್ ನ ಆಡಳಿತ ನಿರ್ದೇಶಕ ಕೆ ಪ್ರಕಾಶ್ ಶೆಟ್ಟಿ ತಿಳಿಸಿದರು. ಬಂಟರ ಸಂಘ ಬಂಟವಾಳ ತಾಲೂಕು (ರಿ) ಯುವ ವಿಭಾಗದ ಆಶ್ರಯದಲ್ಲಿ ಬಂಟ್ವಾಳ ಬಂಟರ ಭವನದಲ್ಲಿ ನಡೆದ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮದ ಪ್ರಯುಕ್ತ ಬೊಲ್ಪುದ ಐಸಿರಿ- 2 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕೆ ಪ್ರಕಾಶ್ ಶೆಟ್ಟಿ ಮಾತನಾಡಿದರು. ಬಂಟ್ವಾಳ ಬಂಟರ ಯುವ ವಿಭಾಗ ನಮ್ಮ ಸಂಸ್ಕೃತಿಯನ್ನು ಬಿಂಬಿಸಿ, ಸಂಪ್ರದಾಯದಂತೆ ಕಾರ್ಯಕ್ರಮವನ್ನು ನಡೆಸಿದ್ದಾರೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಶ್ಲಾಗಿಸಿದರು. ಸಮುದಾಯದ ವಿಚಾರಕ್ಕೆ ಬಂದಾಗ ಎಲ್ಲರೂ ಒಟ್ಟಾಗಿ ಸಮುದಾಯದ ಏಳಿಗೆಗಾಗಿ ಕೈ ಜೋಡಿಸಿ ಕೆಲಸ…
ಚಿಣ್ಣರ ಬಿಂಬದ ನೆರೂಲ್ ಶಿಬಿರದ ಮಕ್ಕಳ ಪ್ರತಿಭಾನ್ವೇಷಣೆಗಾಗಿ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮವನ್ನು ನೆರೂಲ್ ಶನಿ ಮಂದಿರದ ಆವರಣದಲ್ಲಿ ಯಶಸ್ವಿಯಾಗಿ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲಿಸಿ, ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ಹೋಟೆಲ್ ಉದ್ಯಮಿ ಹಾಗೂ ಶ್ರೀ ಗಣಪತಿ ಅಯ್ಯಪ್ಪ ದುರ್ಗಾದೇವಿ ಮಂದಿರ ನೆರೂಲ್ ನ ಕಾರ್ಯಾಧ್ಯಕ್ಷರಾದ ಶ್ರೀ ರವಿ ಆರ್ ಶೆಟ್ಟಿ ಮಾತನಾಡಿ, ಚಿಣ್ಣರ ಬಿಂಬದ ಮಕ್ಕಳ ಪ್ರತಿಭೆ ನೋಡಿ ಸಂತೋಷವಾಗುತ್ತಿದೆ. ಮಕ್ಕಳು ಎಳೆಯ ಗಿಡದಂತಿದ್ದಾಗಲೇ ಬಗ್ಗಿಸಿ, ತಿದ್ದಿ ತೀಡಿ ನೀಡುವ ಬಾಲ್ಯದ ಶಿಕ್ಷಣ-ಸಂಸ್ಕಾರಗಳು ಅವರ ವ್ಯಕ್ತಿತ್ವನ್ನು ರೂಪಿಸುವವು. ಅದಕ್ಕೆ ಶ್ರಮಿಸುವ ರೂವಾರಿಗಳು ಮತ್ತು ಸ್ವಯಂ ಸೇವಕರು ಮಾಡುವ ಕೆಲಸ ಶ್ಲಾಘನೀಯ. ಚಿಣ್ಣರ ಬಿಂಬದ ಮಕ್ಕಳಿಗೆ ನನ್ನ ಸಹಾಯ ಸದಾ ಇರುತ್ತದೆ ಎಂದು ಹೇಳಿದರು. ಬಂಟರ ಸಂಘದ, ನವಿ ಮುಂಬಯಿ ಪ್ರಾದೇಶಿಕ ಸಮಿತಿ ಮಹಿಳಾ ವಿಭಾಗದ ಅಧ್ಯಕ್ಷೆಯಾಗಿರುವ ಶ್ರೀಮತಿ ಜಯಂತಿ ಶೆಟ್ಟಿಯವರು ಮುಖ್ಯ ಅತಿಥಿಗಳಾಗಿ ಆಗಮಿಸಿ, ಪ್ರಕಾಶ್ ಭಂಡಾರಿಯವರ ಕಾರ್ಯದಕ್ಷತೆ, ಮಕ್ಕಳ ಬಗೆಗಿನ ಅವರ ಕಾಳಜಿ ತಿಳಿಸುತ್ತಾ ಮಕ್ಕಳಿಗೆ ಶುಭ ಹಾರೈಸಿದರು. ನೆರೂಲ್…
ಕರಾವಳಿಯ ಉದ್ಯಮದಲ್ಲಿ ಹೆಚ್ಚು ಲಾಭ ತರುವಂತಹ ಮತ್ತು ಪಶುಗಳ ಸಾಕಾಣಿಕೆ ಪ್ರಥಮ ಸ್ಥಾನ ಗಳಿಸುತ್ತಿರುವ ಕರಾವಳಿ ಕೆಎಂಎಫ್ ಗೆ ಹೆಚ್ಚು ಲಾಭವನ್ನು ನೀಡುತ್ತಿರುವ ಹಳ್ಳಿಗಳು ಇಂದಿಗೂ ಹೈನುಗಾರಿಕೆಯನ್ನು ಉಸಿರಾಗಿಸಿಕೊಂಡು ಅದರಲ್ಲಿಯೇ ತಮ್ಮ ಜೀವನವನ್ನು ಕಟ್ಟಿಕೊಂಡು ಬದುಕು ನಡೆಸುತ್ತಿರುವ ಸಾವಿರಾರು ಮಂದಿಯಲ್ಲಿ ಹಳ್ಳಿಗರ ಸರ್ವ ಪಾಲು ಬಹಳಷ್ಟು ಇದೆ. ಗೋ ಸೇವೆಯಲ್ಲಿ ತನ್ನನ್ನೇ ತಾನೇ ತೊಡಗಿಸಿಕೊಂಡು ಬದುಕಿನ ಜೊತೆಗೆ ಗೋವುಗಳ ಲಾಲನೆ ಪಾಲನೆ ಯೊಂದಿಗೆ ಹೈನುಗಾರಿಕೆ ಇಂದು ಬೆಟ್ಟದಷ್ಟು ಬೆಳೆದಿದೆ. ಅಂತಹ ಸೇವೆ ಹಾಗೂ ಕಾರ್ಯನಿರ್ವಹಣೆಯೊಂದಿಗೆ ಬದುಕಿನ ಜೊತೆಗೆ, ಹೈನುಗಾರಿಕೆಯ ಕರ್ತವ್ಯದ ಜೊತೆಗೆ ಕೃತಕ ಗರ್ಭಧಾರಣೆ ಕರ್ತವ್ಯ ಮೈಗೂಡಿಸಿಕೊಂಡ ಇವರು ಹಳ್ಳಿಗರ ನೋವುಗಳಿಗೆ ಸ್ಪಂದಿಸುತ್ತಾ ಸೇವೆ ನೀಡುತ್ತಿದ್ದಾರೆ ಇನ್ನೂ ಅಲ್ಲಿ ಇವರ ಬದುಕು ಜ್ವಲಂತ ಸಾಕ್ಷಿ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಳಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೈಲ್ಕೆರೆ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ಮತ್ತು ಕೃತಕ ಗರ್ಭಧಾರಣೆಯ ತಜ್ಞೆಯಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಲೇಖಾ ಎಸ್.…
ಗುಜರಾತ್ ನ ವಾಪಿ ಕನ್ನಡ ಸಂಘದ ಹೊಸ ಕಾರ್ಯಕಾರಿ ಸಮಿತಿ ರಚನೆಯಾಗಿದೆ. ವಾರ್ಷಿಕ ಸಾಮಾನ್ಯ ಸಭೆಯಲ್ಲಿ 2023-25 ರವರೆಗೆ ಹೊಸ ಕಾರ್ಯಕಾರಿ ಸಮಿತಿಯ ರಚನೆಯಾಗಿತ್ತು. ಮೇ 25 ರಂದು ಕಾರ್ಯಭಾರ ಹಸ್ತಾಂತರ ನಡೆಯಿತು. ನಿಶಾ ಶೆಟ್ಟಿ ಅಧ್ಯಕ್ಷೆ, ಲಲಿತಾ ಕಾರಂತ ಉಪಾಧ್ಯಕ್ಷೆ, ಗೌ. ಕಾರ್ಯದರ್ಶಿ ವಿದ್ಯಾಧರ ಭಟ್, ಪ್ರಫುಲ್ಲಾ ಶೆಟ್ಟಿ ಸಹಕಾರ್ಯದರ್ಶಿ, ಪರಮೇಶ್ವರ ಬೆಳಮಗಿ ಖಜಾಂಚಿ, ಸುಜಾತಾ ಶ್ರೀನಿವಾಸ ಸಹ ಖಜಾಂಚಿಯಾಗಿ ಸರ್ವಾನುಮತದಿಂದ ಆಯ್ಕೆಯಾದರು. ಮಹಿಳಾ ವಿಭಾಗದ ಮುಖ್ಯಸ್ಥೆಯಾಗಿ ಚಂದ್ರಿಕಾ ಕೋಟ್ಯಾನ್, ವಸಂತಿ ಭಟ್ ಕಾರ್ಯದರ್ಶಿ ಮತ್ತು ನೀತಾ ಮರ್ಬಳ್ಳಿ ಖಜಾಂಚಿಯಾಗಿ ನೇಮಕಗೊಂಡರು. ಮೇ 25 ರಂದು ಜರುಗಿದ ಕಾರ್ಯಭಾರ ಹಸ್ತಾಂತರದ ಸಮಯದಲ್ಲಿ ನಿರ್ಗಮನ ಅಧ್ಯಕ್ಷ ಟಿ.ಕೆ ವಿನಯಕುಮಾರ್ ಮಾತನಾಡುತ್ತಾ ತಮ್ಮ ಎರಡು ವರ್ಷಗಳ ಅವಧಿಯಲ್ಲಿ ಸಂಘದ ಅಭಿವೃದ್ಧಿಯಲ್ಲಿ ಸಭಾಭವನದ ಮೇಲ್ಚಾವಣಿ ನವಿಕರಣ, ಸಂಘ ಸಂಸ್ಥೆಗಳಿಗೆ ಕಡ್ಡಾಯವಾಗಿ ಬೇಕಾಗಿರುವ ಫೈಯರ್ ಹೈಡ್ರಂಟ್ ಅಳವಡಿಕೆ ಮತ್ತು ಜನರೇಟರ್ ಹೀಗೆ ಕೆಲವು ಕಾರ್ಯಗಳನ್ನು ಮಾಡಿದ ತೃಪ್ತಿ ತಮಗಿದ್ದು ಇನ್ನೂ ಉಳಿದ ಕೆಲವೊಂದು ಕಾರ್ಯಗಳನ್ನು ಹೊಸ…
ವಿಶ್ವದಾದ್ಯಂತ ಕೇಂದ್ರೀಯ ಬ್ಯಾಂಕ್‌ಗಳು ಬಡ್ಡಿ ದರ ಏರಿಕೆ ಮುಂತಾದ ಬಿಗಿ ವಿತ್ತೀಯ ಕ್ರಮಗಳ ಮೊರೆ ಹೋಗುತ್ತಿರುವುದರ ಹಿನ್ನೆಲೆಯಲ್ಲಿ ಮುಂದಿನ ವರ್ಷ ಆರ್ಥಿಕ ಹಿಂಜರಿತ ಕಾಡಬಹುದು ಎಂದು ವಿಶ್ವಬ್ಯಾಂಕ್ ಮತ್ತು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಎಚ್ಚರಿಕೆ ನೀಡಿದೆ. 1970ರಲ್ಲಿ ಉಂಟಾದ ಆರ್ಥಿಕ ಹಿಂಜರಿತದ ಅನಂತರ ಅತೀ ಗರಿಷ್ಠ ಹಿಂಜರಿತ 2024 ರಲ್ಲಿ ಆಗಬಹುದು ಎಂದು ವಿಶ್ವಬ್ಯಾಂಕ್‌ನ ವರದಿಯೊಂದು ಅಭಿಪ್ರಾಯಪಟ್ಟಿದೆ. ಅಭಿವೃದ್ಧಿಶೀಲ ದೇಶಗಳಿಗೆ ಇದರ ಬಿಸಿ ಹೆಚ್ಚಾಗಿ ತಟ್ಟಲಿದೆ ಎಂದು ವಿಶ್ವಬ್ಯಾಂಕ್ ವರದಿ ಹೇಳಿದೆ. ಇದೇ ವೇಳೆ ಹಣದುಬ್ಬರಕ್ಕೆ ಕಡಿವಾಣ ಹಾಕಲು ಉತ್ಪಾದನೆ ಹೆಚ್ಚಳ ಹಾಗೂ ಪೂರೈಕೆ ಸರಪಳಿ ಅಡಚಣೆ ನಿರ್ಮೂಲನೆಯಂತಹ ಕ್ರಮಗಳನ್ನು ಕೈಗೊಳ್ಳಲು ಸಲಹೆ ನೀಡಿದೆ. ರಷ್ಯಾ-ಉಕ್ರೇನ್ ಕದನ, ಜಾಗತಿಕ ಆಹಾರ ಪೂರೈಕೆಯಲ್ಲಿ ಅಡಚಣೆ, ಕೃಷಿ ಉತ್ಪಾದನೆಯಲ್ಲಿ ಕುಂಠಿತ, ಕೊರೊನಾ ಹೀಗೆ ಹಲವು ಕಾರಣಗಳಿಂದಾಗಿ ಹಣದುಬ್ಬರ ಉಂಟಾಗಿ ನಿರೀಕ್ಷಿತ ಆರ್ಥಿಕ ಪ್ರಗತಿಯನ್ನು ಸಾಧಿಸಲಾಗುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ವಿಶ್ವದ ಬಲಾಡ್ಯ ರಾಷ್ಟ್ರಗಳು ಮುಂದಿನ ವರ್ಷ ಆರ್ಥಿಕ ಹಿಂಜರಿತ ಕಾಣಬಹುದು ಎಂಬ ಭಯದ ವಾತಾವರಣ…
ಕರಾವಳಿ ಲೇಖಕಿಯರ ವಾಚಕಿಯರ ಸಂಘ ಕೊಡಮಾಡುವ ಸಂಜೀವಿನಿ ನಾರಾಯಣ ಅಡ್ಯಂತಾಯ ಸ್ಮರಣಾರ್ಥ ‘ಸಂಜೀವಿನಿ ಪ್ರಶಸ್ತಿ’ ಗೆ ಲೀಲಾವತಿ ಆಚಾರ್ಯ ಪೈಕ ಗುತ್ತಿಗಾರು ಅವರನ್ನು ಆಯ್ಕೆ ಮಾಡಲಾಗಿದೆ. ಬದುಕಿನ ಏಳು ಬೀಳುಗಳನ್ನು ಆತ್ಮಸ್ಟೈರ್ಯದಿಂದ ಎದುರಿಸಿ ಮಕ್ಕಳಿಗೆ ಒಳ್ಳೆಯ ಸಂಸ್ಕಾರ, ನೆಲೆಯನ್ನು ಕಂಡುಕೊಳ್ಳುವಲ್ಲಿ ಶ್ರಮಿಸಿ ಕುಟುಂಬದ ಸಂಜೀವಿನಿಯಾಗುವ ಅಮ್ಮಂದಿರನ್ನು ಗುರುತಿಸಿ ನೀಡುವ ಈ ಪುರಸ್ಕಾರದ ಪ್ರಶಸ್ತಿ ಪ್ರಧಾನ ಸಮಾರಂಭವು ಎ. 27ರಂದು ಅಪರಾಹ್ನ 2.30ಕ್ಕೆ ಉರ್ವಸ್ಟೋರ್ ನ ಅಂಬೇಡ್ಕರ್ ಭವನದಲ್ಲಿ ನೇರವೇರಲಿದೆ ಎಂದು ಸಂಘದ ಪ್ರಕಟಣೆಯಲ್ಲಿ ರೂಪಕಲಾ ಆಳ್ವರವರು ತಿಳಿಸಿದ್ದಾರೆ.
ಗೌರವಾನ್ವಿತ ಜಿಲ್ಲಾ ಗವರ್ನರ್ ಲಯನ್ ಡಾ. ಎಮ್ ಕೆ ಭಟ್ ರವರು ಲಯನ್ ಜಿಲ್ಲಾ ಪ್ರಥಮ ಮಹಿಳೆ, ಅವರ ಪತ್ನಿ ಲಯನ್ ಸವಿತಾ ಎಮ್ ಕೆ ಭಟ್ ರವರೊಂದಿಗೆ ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆ ಗೆ ಅಧೀಕೃತ ಭೇಟಿ ನೀಡಿದರು. ಬನ್ನಾಡಿ ಸುಬ್ಬಣ್ಣ ಹೆಗ್ಡೆ ಸಭಾ ಭವನ ದಲ್ಲಿ ಜರುಗಿದ ಕಾರ್ಯಕ್ರಮಕ್ಕೆ, ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆಯ ಅಧ್ಯಕ್ಷರಾದ ಲಯನ್ ರಾಜಾರಾಮ್ ಶೆಟ್ಟಿ ಕಲ್ಕಟ್ಟೆ, ಕಾರ್ಯದರ್ಶಿ ಲಯನ್ ಅಜಿತ್ ಶೆಟ್ಟಿ ಕೊತ್ತಾಡಿ ಹಾಗೂ ಕೋಶಾಧಿಕಾರಿ ಲಯನ್ ವಡ್ಡರ್ಸೆ ಬಾಲಕೃಷ್ಣ ಶೆಟ್ಟಿ ಹಾಗೂ ಪದಾಧಿಕಾರಿಗಳು ಹಾಗೂ ಸದಸ್ಯರು ಅವರನ್ನು ಆತ್ಮೀಯವಾಗಿ ಸ್ವಾಗತಿಸಿಕೊಂಡರು. ಲಯನ್ ಜಿಲ್ಲಾ ಗವರ್ನರ್ ಡಾ. ಎಮ್ ಕೆ ಭಟ್ ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆಯ B.O.D ಸಭೆ ನಡೆಸಿದರು. ಲಯನ್ ಬನ್ನಾಡಿ ಪ್ರಭಾಕರ್ ಶೆಟ್ಟಿಯವರ ಪ್ರಾರ್ಥನೆ ಮೂಲಕ, ಸಮಯಕ್ಕೆ ಸರಿಯಾಗಿ ಸಭಾ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಲಯನ್ ಜಿಲ್ಲಾ ಪ್ರಥಮ ಮಹಿಳೆ ಲಯನ್ ಸವಿತಾ ಎಮ್ ಕೆ ಭಟ್ ರವರನ್ನು ಶ್ರೀಮತಿ…
ಪುಣೆ ಬಂಟರ ಸಂಘದ ವಾರ್ಷಿಕ ಸ್ನೇಹಸಮ್ಮಿಲನವು ಜನವರಿ 26 ರಂದು ಸಂಘದ ಓಣಿಮಜಲು ಜಗನ್ನಾಥ ಶೆಟ್ಟಿ ಸಾಂಸ್ಕೃತಿಕ ಬಂಟರ ಭವನದಲ್ಲಿ ನಡೆಯಲಿದ್ದು ಈ ಬಗ್ಗೆ ಚರ್ಚಿಸಲು ಪೂರ್ವಭಾವಿ ಸಭೆಯನ್ನು ಸ್ವಾರ್ಗೆಟ್ ನಲ್ಲಿರುವ ಹೋಟೆಲ್ ಅಣ್ಣಾಚಿ ಚಾವಡಿಯಲ್ಲಿ ನಡೆಸಲಾಯಿತು. ಈ ಸಂದರ್ಭ ಸಭೆಯ ಅಧ್ಯಕ್ಷತೆ ವಹಿಸಿದ್ದ ಪುಣೆ ಬಂಟರ ಸಂಘದ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ ಸ್ವಾಗತಿಸಿ ಮಾತನಾಡಿ ಪ್ರತೀವರ್ಷ ನಮ್ಮ ಸಂಘದ ವಾರ್ಷಿಕ ಸ್ನೇಹ ಸಮ್ಮಿಲನ ಸಮಾರಂಭವು ಜ 26 ಕ್ಕೆ ನಡೆಯುತ್ತಿದ್ದು ಈ ವರ್ಷದ ಕಾರ್ಯಕ್ರಮವನ್ನು ಸ್ಮರಣೀಯವಾಗಿಸುವಲ್ಲಿ ವಿಶೇಷ ರೀತಿಯಲ್ಲಿ ಶಿಸ್ತುಬದ್ಧವಾಗಿ ಆಯೋಜಿಸುವಲ್ಲಿ ನಾವು ಸಾಕಷ್ಟು ಪೂರ್ವತಯಾರಿಯನ್ನು ಮಾಡಬೇಕಾಗಿದೆ. ಈ ವರ್ಷ ಸಂಘದ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಮನೋರಂಜನಾ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಲಿರುವ ಈ ಉತ್ಸವದಲ್ಲಿ ಸಮಾಜದ ಗಣ್ಯ ಅತಿಥಿಗಳೂ ಪಾಲ್ಗೊಳ್ಳಲಿದ್ದಾರೆ. ಅಪರಾಹ್ನ 2:30 ರಿಂದ ಕಾರ್ಯಕ್ರಮ ಆರಂಭಗೊಳ್ಳಲಿದ್ದು ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರಕಾರದ ಮಾಜಿ ಸಚಿವ ರಮಾನಾಥ ರೈ ಆಗಮಿಸಲಿದ್ದಾರೆ. ಗೌರವ…















