Author: admin

ಮನೋನಿಶ್ಚಯ ಉಳ್ಳವರಿಗೆ, ಪ್ರಯತ್ನಶೀಲರಿಗೆ ದುಸ್ತರವಾದುದು ಈ ಲೋಕದಲ್ಲಿ ಯಾವುದೂ ಇಲ್ಲ. ಈ ಸಂಸಾರದಲ್ಲಿ ನಿಶ್ಚಿತವೆಂಬುದು ಯಾವುದೂ ಇಲ್ಲ. ಜೀವನ ಚಕ್ರ ಉರುಳುತ್ತಲೇ ಇರುತ್ತದೆ. ಕರ್ಮಫಲವನ್ನು ತಪ್ಪಿಸಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ಮಹಾಭಾರತದ ಶಾಂತಿ ಪರ್ವದಲ್ಲಿ ಭೀಷ್ಮ ಶರ ಮಂಚದಲ್ಲಿ ಮಲಗಿರುವಾಗ ಹೇಳುತ್ತಾನೆ, ಮನುಷ್ಯನಿಗೆ ಗ್ರಹಸ್ಥಾಶ್ರಮವೇ ಬೇರೆಲ್ಲಾ ಆಶ್ರಮಗಳಿಗಿಂತ ಪುಣ್ಯತಮವಾದ ಸಿದ್ಧಿಕ್ಷೇತ್ರ. ಕಾಲಚಕ್ರದ ಸುಳಿಯಲ್ಲಿ ಮಾನವನ ಸುಖ, ಅಧಿಕಾರ, ಧನ, ಕಷ್ಟ, ನಷ್ಟ, ಬಡತನ, ಸಿರಿತನ ಯಾವುದೂ ಸ್ಥಿರವಲ್ಲ. ಮನುಷ್ಯ ಸುಖ ಬಂದಾಗ ಸೊಕ್ಕಿ ಮೆರೆಯುತ್ತಾನೆ. ಕಷ್ಟ ಬಂದಾಗ ಅರಗಿನಂತೆ ಕರಗಿ ಹೋಗುತ್ತಾನೆ. ಹಗಲು, ರಾತ್ರಿಗಳಂತೆ ನಮ್ಮ ಜೀವನದಲ್ಲಿ ಬಂದು ಹೋಗತಕ್ಕ ಇವನ್ನು ನಾವು ಹಗಲು ರಾತ್ರಿ ಸಂತೊಗ್ಗಿಸಿಕೊಂಡಂತೆ ಒಗ್ಗಿಸಿಕೊಳ್ಳಲಾಗದು. ಗಾಡಿಯ ಎರಡು ಚಕ್ರಗಳಂತೆ ಮಾನವನ ಭಾಗ್ಯ – ದುರ್ಭಾಗ್ಯಗಳೆರಡೂ ಉರುಳುತ್ತಿರುತ್ತದೆ. ಈ ಉರುಳಾಟ ಯಾರೊಬ್ಬ ವ್ಯಕ್ತಿಯನ್ನೂ ಬಿಟ್ಟಿಲ್ಲ. ಆದರೆ ಮನಸಿದ್ದರೆ ಮಾರ್ಗವೂ ಇದೆ. ಮಾರ್ಗದರ್ಶಕರೂ ಇದ್ದಾರೆ. ಸೃಷ್ಟಿಕರ್ತನಾದ ದೇವರು ನಮಗೆ ಈ ಅಮೂಲ್ಯವಾದ ಮಾನವ ಬದುಕನ್ನು ಕೊಟ್ಟು ಅದರೊಟ್ಟಿಗೆ ಮಾನವನಿಗೆ ಚಿಂತನೆ, ಮಂಥನ…

Read More

ಬ್ರಹ್ಮಾವರ: ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್‍ನ 19ನೇ ವರ್ಷದ ವಾರ್ಷಿಕ ಕ್ರೀಡಾಕೂಟ ಶಾಲೆಯ ಸುಸಜ್ಜಿತ ಕ್ರೀಡಾಂಗಣ ಜಿ ಎಮ್ ಅರೆನಾದಲ್ಲಿ ನವೆಂಬರ್ 4ರಂದು ನಡೆಯಿತು. ಕ್ರೀಡಾಕೂಟದ ಮುಖ್ಯ ಅತಿಥಿ ನಾವುಂದ ಸರಕಾರಿ ಪದವಿಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಜೀವನ್ ಕುಮಾರ್ ಶೆಟ್ಟಿ ಕ್ರೀಡಾಜ್ಯೋತಿಯನ್ನು ಬೆಳಗಿ, ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ ಜಿ ಎಮ್ ಸಂಸ್ಥೆಯ ಹೊರಾಂಗಣ ವ್ಯವಸ್ಥೆಯನ್ನು ನೋಡುವಾಗ ರಾಜ್ಯ, ರಾಷ್ಟ್ರ ಮಟ್ಟದ ಕ್ರೀಡಾಕೂಟದ ಅನುಭವವಾಗುತ್ತಿದೆ. ಕ್ರೀಡೆ ಎಂದರೆ ಒಂದು ವಿಜ್ಞಾನ. ಕ್ರೀಡಾಪಟುಗಳು ಸೈನಿಕರಿದ್ದಂತೆ ಎಂದು ಹೇಳಿದರು. ಸಮಾರೋಪ ಸಮಾರಂಭದ ಮುಖ್ಯ ಅತಿಥಿ ಶಂಕರನಾರಾಯಣ ಅರಣ್ಯ ಇಲಾಖೆಯ ಬೀಟ್ ಫಾರೆಸ್ಟರ್ ಸುದೀಪ್ ಶೆಟ್ಟಿ, ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿ ಜಿ ಎಮ್ ಕರಾವಳಿಯ ಬಹುದೊಡ್ಡ ವಿದ್ಯಾಸಂಸ್ಥೆ, ಇದು ಶಿಕ್ಷಣ ಕ್ರಾಂತಿಯ ಜೊತೆಗೆ ಕ್ರೀಡೆಗೆ ಒತ್ತು ನೀಡುತ್ತಿದೆ, ಕ್ರೀಡೆಯಿಂದ ಬದುಕನ್ನು ಕಟ್ಟಿಕೊಳ್ಳಬಹುದು ಜೊತೆಗೆ ಆಸ್ಪತ್ರೆಯನ್ನು ನಮ್ಮಿಂದ ದೂರ ಇಡಬಹುದು ಎಂದರು. ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಮಾತನಾಡಿ ಕ್ರೀಡೆಗಳಿಂದ ಕೌಶಲ್ಯಗಳ ಅಭಿವೃದ್ಧಿ,…

Read More

ಆನಂದ ಫಿಲಂಸ್ ಮತ್ತು ದಿ ಮಂಗಳೂರಿಯನ್ಸ್ ಲಾಂಛನದಲ್ಲಿ ರಾಮ್ ಶೆಟ್ಟಿ ಅರ್ಪಿಸುವ, ದಯಾನಂದ ಶೆಟ್ಟಿ ನಿರ್ಮಾಣ, ಸಂತೋಷ್ ಶೆಟ್ಟಿ ನಿರ್ದೇಶನದಲ್ಲಿ ತಯಾರಾದ “ಯಾನ್ ಸೂಪರ್ ಸ್ಟಾರ್” ತುಳು ಚಿತ್ರವು ಸೆಪ್ಟಂಬರ್ 22 ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆ ಕಾಣಲಿದೆ ಎಂದು ರಾಮ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಬಳಿಕ ಮಾತಾಡಿದ ಸಿಐಡಿ ದಯಾ ಖ್ಯಾತಿಯ ದಯಾನಂದ ಶೆಟ್ಟಿ ಅವರು, “ಹಿಂದಿ ಸಿನಿಮಾ ಮತ್ತು ಧಾರವಾಹಿ ಕ್ಷೇತ್ರದಲ್ಲಿ ನಾನು ಕಳೆದ 25 ವರ್ಷಗಳಿಂದ ದುಡಿಯುತ್ತಿದ್ದೇನೆ. ನಾನೆಲ್ಲಿ ಹೋದರೂ ತುಳು ಸಿನಿಮಾ ಯಾವಾಗ ಮಾಡುತ್ತೀರಿ ಎಂದು ಪ್ರಶ್ನಿಸುತ್ತಿದ್ದರು. ಈಗ ನಾನು ನಟಿಸಿರುವ ಯಾನ್ ಸೂಪರ್ ಸ್ಟಾರ್ ತುಳು ಸಿನಿಮಾ ಬಿಡುಗಡೆಗೆ ತಯಾರಾಗಿದ್ದು ಶುಕ್ರವಾರ ಬಿಡುಗಡೆಯಾಗಲಿದೆ. ಮೇಕಿಂಗ್, ನಿರ್ದೇಶನ ಎಲ್ಲದರಲ್ಲೂ ಗ್ರ್ಯಾಂಡ್ ಆಗಿರುವ ಸಿನಿಮಾವನ್ನು ಖಂಡಿತಾ ತುಳುವರು ಇಷ್ಟಪಡುತ್ತಾರೆ ಎಂಬ ವಿಶ್ವಾಸವಿದೆ ಎಂದರು. ಬಳಿಕ ಮಾತಾಡಿದ ನಟ ಹರೀಶ್ ವಾಸು ಶೆಟ್ಟಿ ಅವರು, “ಯಾನ್ ಸೂಪರ್ ಸ್ಟಾರ್ ಸಿನಿಮಾ ಮಂಗಳೂರಿನ ರೂಪವಾಣಿ, ಭಾರತ್ ಸಿನಿಮಾಸ್, ಪಿವಿಆರ್,…

Read More

ಸೆ. 04 ಬ್ರಹ್ಮಾವರದ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ನಲ್ಲಿ ಸಂಸ್ಥೆಯ ಸ್ಥಾಪಕ ಪ್ರಾಂಶುಪಾಲರಾದ ದಿ. ಎನ್ ಎಸ್ ಅಡಿಗರವರ ದಿವ್ಯಾತ್ಮಕ್ಕೆ ಶಾಂತಿಕೋರಲು ಶ್ರದ್ಧಾಂಜಲಿ ಸಭೆಯನ್ನು ಆಯೋಜಿಸಲಾಗಿತ್ತು. ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಮಾತನಾಡಿ ಶ್ರೇಷ್ಠ ವ್ಯಕ್ತಿತ್ವವನ್ನು ಹೊಂದಿದ್ದ ಎನ್. ಎಸ್. ಅಡಿಗರು, ಸರಳ ಸಜ್ಜನಿಕೆ, ನಗು ಮುಖದೊಂದಿಗೆ ಸಹಸ್ರಾರು ವಿಧ್ಯಾರ್ಥಿಗಳಿಗೆ ಜ್ಞಾನದ ಸುಧೆಯನ್ನು ಹರಿಸಿದ್ದಾರೆ. ಅವರ ಅಪಾರ ಭಾಷಾ ಪಾಂಡಿತ್ಯ, ಕೆಲಸದಲ್ಲಿ ಲವಲವಿಕೆಯಿಂದ ತೊಡಗಿಕೊಳ್ಳುತ್ತಿದ್ದ ಪರಿ ನಮಗೆಲ್ಲರಿಗೂ ಆದರ್ಶವೆಂದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಅಡಿಗರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಭಾವುಕರಾಗಿ ಮಾತನಾಡಿ ಶಿಸ್ತಿಗೆ, ಪರಿಪೂರ್ಣತೆಗೆ ಇನ್ನೊಂದು ಹೆಸರೇ ಅಡಿಗರು. ಅವರು ನನ್ನ ಗುರುಗಳು, ಮಾರ್ಗದರ್ಶಕರೂ ಆಗಿದ್ದರು ಎಂದರು. ನಂತರ ಜಿ ಎಮ್ ಸಂಸ್ಥೆಯನ್ನು ಕಟ್ಟುವಲ್ಲಿ ಅವರ ಕೊಡುಗೆಗಳನ್ನು ಸ್ಮರಿಸಿ ನಾವೆಲ್ಲರೂ ಅವರ ಆದರ್ಶಗಳನ್ನು, ಗುಣಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು. ಸಂಸ್ಥೆಯ ಶಿಕ್ಷಕರು, ವಿದ್ಯಾರ್ಥಿಗಳು, ಸಹ ಸಿಬ್ಬಂದಿವೃಂದ ತಮ್ಮ ಭಾರವಾದ ಮನಸ್ಸಿನಿಂದ ಅನಿಸಿಕೆಗಳನ್ನು ಹಂಚಿಕೊಂಡರು. ಸಭೆಯಲ್ಲಿ ಜಿ…

Read More

ಯಾವುದೇ ಕ್ರೀಡಾ ಸಾಧನೆಗೆ ತರಬೇತಿ ಅತ್ಯಗತ್ಯವಾಗಿದೆ. ಪೋಷಕರು ತಮ್ಮ ಮಕ್ಕಳನ್ನು ಯಾವುದಾದರೊಂದು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರಿಪಿಸಬೇಕು ಎಂದು ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಹಾಗೂ ನಿವೃತ ಕಸ್ಟಮ್ಸ್ ಸೂಪರಿಂಟೆಂಡೆಂಟ್ ರೋಹಿತ್ ಹೆಗ್ಡೆ ಎರ್ಮಾಳು ಹೇಳಿದರು. ಅದಮಾರು ಮೂಡುಬೆಟ್ಟು ಬರ್ಪಾಣಿ ಜಗನ್ನಾಥ ಶೆಟ್ಟಿ ಮನೆ ಬಳಿ ಪಡುಬಿದ್ರಿ ಬಂಟರ ಸಂಘ, ಬಂಟ್ಸ್ ವೆಲ್ಫೇರ್ ಟ್ರಸ್ಟ್, ಬಂಟರ ಮಹಿಳಾ ವಿಭಾಗ, ಯುವ ಬಂಟರ ವಿಭಾಗ ಮತ್ತು ಬಂಟರ ಕ್ರೀಡಾ ವಿಭಾಗಗಳ ಆಶ್ರಯದಲ್ಲಿ ನಡೆದ ಕೆಸರ್ದ ಗೊಬ್ಬು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪುಣೆಯ ಉದ್ಯಮಿ, ಸಮಾಜಸೇವಕ ಪೂನಾ ಗೇಟ್ ಹೋಟೆಲ್ ನ ಸಿಎಮ್ ಡಿ ಎರ್ಮಾಳು ಪುಚ್ಚೋಟ್ಟು ಬೀಡು ಬಾಲಚಂದ್ರ ಎಲ್. ಶೆಟ್ಟಿ, ಅಸ್ಫನ್ ಎಸ್ಇಝಡ್ ಸೀನಿಯರ್ ಜನರಲ್ ಮ್ಯಾನೇಜರ್ ಅಶೋಕ್ ಶೆಟ್ಟಿ, ಬಂಟರ ಸಂಘದ ಪೂರ್ವಧ್ಯಕ್ಷ ನವೀನ್ ಚಂದ್ರ ಜೆ. ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಘದ ನಿರ್ದೇಶಕ, ಉದ್ಯಮಿ…

Read More

ಸರಕಾರವು ವಿವಿಧ ಕ್ಷೇತ್ರಗಳಲ್ಲಿನ ಸಾಧಕರನ್ನು ಗುರುತಿಸಿ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತಿದೆ. ಇಂದು ಸರಕಾರವೇ ಹುಡುಕಿ ಪ್ರಶಸ್ತಿಯನ್ನು ನೀಡುತ್ತಿದೆ. ಹಾಗಾಗಿ ಅರ್ಜಿ ಸಲ್ಲಿಸದವರಿಗೂ ಪ್ರಶಸ್ತಿ ಒಲಿಯುತ್ತಿದೆ. ಯಾವುದೋ ಹಳ್ಳಿಯ ಮೂಲೆಯಲ್ಲಿ ಕುಳಿತು ಪ್ರಶಸ್ತಿಯ ಬಗ್ಗೆ ಒಂದಿಷ್ಟೂ ನಿರೀಕ್ಷೆಯಲ್ಲಿಲ್ಲದ ಮಂದಿಗೆ ಪ್ರಶಸ್ತಿಯು ಒಲಿದು ಬಂದಾಗ ಅವರಿಗಾಗುವ ಆನಂದ ಊಹಿಸಲೂ ಅಸಾಧ್ಯ. ಈ ಗೌರವಗಳ ಮೂಲಕ ವಿವಿಧ ಕ್ಷೇತ್ರಗಳು ಶ್ರೀಮಂತವಾಗುವುದರೊಂದಿಗೆ ಸಾಂಸ್ಕೃತಿಕವಾಗಿಯೂ ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗುತ್ತದೆ. ಆದರೆ ಇಂದು ಸಮಾಜದ ಮುಂದಿರುವ ದೊಡ್ಡ ಸವಾಲು ನೈತಿಕ ಮೌಲ್ಯಗಳ ಕುಸಿತ. ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಅಪರಾಧದ ಸುದ್ದಿಗಳು ಸಮಾಜದ ನಿದ್ರೆ ಕೆಡಿಸುತ್ತಿವೆ. ಇಂಥ ಅಪರಾಧಗಳನ್ನು ಮಟ್ಟಹಾಕಲು ಎಲ್ಲ ಪ್ರಯತ್ನಗಳನ್ನೂ ಸರಕಾರ ಹಾಗೂ ಸಂಬಂಧಿಸಿದ ಇಲಾಖೆಗಳು ಮಾಡುತ್ತಿವೆ. ಇಲಾಖೆಗಳ ಈ ಪ್ರಯತ್ನಗಳ ನಡುವೆ ಅಪರಾಧಗಳನ್ನು ಕಡಿಮೆ ಮಾಡುವ ಮನೋ ಭಾವವನ್ನು ಸಮಾಜದಲ್ಲಿ ಮೂಡಿಸಲು ಸಾಧ್ಯವೇ? ಉತ್ತಮ ಶಿಕ್ಷಣ ಮತ್ತು ಸಂಸ್ಕಾರಗಳ ಮೂಲಕ ಈ ಪ್ರಯತ್ನ ಗಳನ್ನು ಒಂದು ಹಂತದಲ್ಲಿ ಮಾಡಬಹುದು. ಇದರೊಂದಿಗೆ ತಮ್ಮ ಬದುಕಿನಲ್ಲಿ ಈ ಮೌಲ್ಯಗಳನ್ನು ಅಳವಡಿಸಿಕೊಂಡು ಬಂದವರನ್ನು…

Read More

ಮುಂಬಯಿ:- ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗ ಹಾಗೂ ಐಲೇಸಾ ದಿ ವಾಯ್ಸ್ ಆಫ್ ಓಷನ್(ರಿ) ಆಯೋಜಿಸಿರುವ ವಿಶೇಷ ವಿಚಾರ ಸಂಕಿರಣ ‘ಸುಧಾ ಮೂರ್ತಿ ಅವರ ಸಾಹಿತ್ಯ ಸಾಧನೆ- ಒಂದು ಅವಲೋಕನ’ ಕಾರ್ಯಕ್ರಮವು ಎಪ್ರಿಲ್ 23ರಂದು ಸಂಜೆ 4ರಿಂದ ಝೂಮ್ ವೇದಿಕೆಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಪದ್ಮಭೂಷಣ ಡಾ.ಸುಧಾ ಮೂರ್ತಿ ಅವರ ಗಣ್ಯ ಉಪಸ್ಥಿತಿಯಲ್ಲಿ ಅವರ ಕೃತಿಗಳ ಕುರಿತು ಚರ್ಚೆ ನಡೆಸಲಾಗುವುದು. ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾದ ಡಾ.ಜಿ.ಎನ್.ಉಪಾಧ್ಯ ಅವರು ಅಧ್ಯಕ್ಷತೆ ವಹಿಸಲಿರುವರು. ‘ಸಿರಿತನ ಹಿರಿತನಗಳ ಸಮ್ಮಿಲನದ ಶಕ್ತಿ ಸುಧಾ ಮೂರ್ತಿ’ ಈ ವಿಷಯದ ಕುರಿತು ಕನ್ನಡ ವಿಭಾಗದ ಸಂದರ್ಶಕ ಪ್ರಾಧ್ಯಾಪಕರಾದ ಡಾ.ಉಮಾ ರಾಮರಾವ್ ಅವರು ಮಾತನಾಡಲಿರುವರು. ಸುಧಾ ಮೂರ್ತಿ ಅವರ ‘ಸಾಹಿತ್ಯ ಸಾಧನೆ’ಯ ಕುರಿತು ಪ್ರತಿಭಾ ರಾವ್, ‘ಪ್ರವಾಸ ಕಥನ’ದ ಕುರಿತು ಸವಿತಾ ಶೆಟ್ಟಿ, ಕಾದಂಬರಿಗಳಾದ ಅತಿರಕ್ತೆಯ ಕುರಿತು ರಾಜಶ್ರೀ ಶೆಟ್ಟಿ, ‘ಮಹಾಶ್ವೇತೆ’ಯ ಕುರಿತು ಶಶಿಕಲಾ ಹೆಗ್ಡೆ, ‘ಋಣ’ದ ಕುರಿತು ಅನಿತಾ ಪೂಜಾರಿ ತಾಕೋಡೆ, , ‘ತುಮುಲ’ದ…

Read More

ಬಿಳಿ ಜಂಬೂ ಹಣ್ಣಿನಲ್ಲಿರುವ ವಿಟಮಿನ್ ಸಿ ಅಂಶವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಚರ್ಮದ ಹೊಳಪನ್ನು ಕಾಪಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ. ಜಂಬೂ ಹಣ್ಣು ಎಂದು ಹೆಚ್ಚು ಜನಪ್ರಿಯವಾಗಿರುವ ಈ ಹಣ್ಣನ್ನು ಸಾಮಾನ್ಯವಾಗಿ ಪನ್ನೇರಳೆ ಎಂದು ಕರೆಯುತ್ತಾರೆ. ಹಲವು ಬಾರಿ ನಾವು ಒಂದು ಹಣ್ಣಿನ ವಿಶೇಷತೆಯನ್ನು ಹೇಳುವ ಕಾಲಕ್ಕೆ ಅದರ ಹೆಸರು ಗೊತ್ತಿದ್ದರೂ ಮಾಹಿತಿ ಇಲ್ಲದಂತಾಗುತ್ತದೆ. ಇದಕ್ಕೆ ಕಾರಣ ಆ ಹಣ್ಣಿನ ಹೆಸರು ಒಂದೊಂದು ಭಾಗದಲ್ಲಿ ಒಂದೊಂದು ರೀತಿಯಾಗಿರುತ್ತದೆ. ಹಾಗೆಯೇ ಬಿಳಿ ಜಂಬೂ ಹಣ್ಣು ಕೂಡ. ಜಂಬೂ ಹಣ್ಣು ಕೆಂಪು, ಬಿಳಿ, ಗುಲಾಬಿ ಮತ್ತು ಹಸಿರು ಬಣ್ಣದಲ್ಲಿ ಲಭ್ಯವಿದೆ. ಅದರಲ್ಲೂ ಬಿಳಿ ಬಣ್ಣದ ಜಂಬೂ ಹಣ್ಣು ವಿಶೇಷವಾಗಿದ್ದು, ರೋಗನಿರೋಧಕ ಶಕ್ತಿಯನ್ನು ಹೊಂದಿದೆ. ಆಗ್ನೇಯ ಏಷ್ಯಾ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಕೆಲವು ಸ್ಥಳಗಳಲ್ಲಿ ಬಿಳಿ ಜಂಬೂ ಹಣ್ಣನ್ನು ಹೆಚ್ಚು ಬೆಳೆಯಲಾಗುತ್ತದೆ. ಇನ್ನು ಕರ್ನಾಟಕ್ಕೆ ಬಂದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತು ಇನ್ನಿತರ ಭಾಗಗಳಲ್ಲಿ ಈ ಹಣ್ಣುಗಳನ್ನು ಬೇಸಿಗೆ ಕಾಲದಲ್ಲಿ…

Read More

ಅದು ಯಾವುದೇ ಕ್ಷೇತ್ರ ಇರಲಿ, ಕಾಂಗ್ರೆಸ್‌ ಅಭ್ಯರ್ಥಿ ಯಾರು? ಎಂದು ಊಹಿಸುವುದು ತುಸು ಕಷ್ಟಸಾಧ್ಯವೇ. ಕಾರಣ ಪಕ್ಷದ ಟಿಕೆಟ್‌ಗಾಗಿ ಈ ಬಾರಿ ಕನಿಷ್ಠ 2-3 ಅಭ್ಯರ್ಥಿಗಳಾದರೂ ಬಿರುಸಿನ ಪೈಪೋಟಿ ನಡೆಸುತ್ತಿದ್ದಾರೆ. ಪಕ್ಷದ ಹೈಕಮಾಂಡ್‌ ತನ್ನ ಅಭ್ಯರ್ಥಿಗಳನ್ನು ಅಖೈರುಗೊಳಿಸಿ ಯಾದಿಯನ್ನು ಬಿಡುಗಡೆಗೊಳಿಸಿದಾಗಲೇ ಕುತೂಹಲಕ್ಕೆ ತೆರೆ ಬೀಳುತ್ತದೆ. ಆದರೆ ಈ ಬಾರಿ ಮೂಡುಬಿದರೆ ಕ್ಷೇತ್ರದಲ್ಲಿ ಮಿಥುನ್‌ ರೈ ಹೆಸರು ಬಹುತೇಕ ಪಕ್ಕಾ ಆದಂತಿದೆ. ಅಧಿಕೃತವಾಗಿ ಘೋಷಣೆ ಆಗಬೇಕಿದೆ. 2018ರಲ್ಲೇ ಮಿಥುನ್‌ ಈ ಕ್ಷೇತ್ರದಿಂದ ಸ್ಪರ್ಧಿಸಲು ಆಕಾಂಕ್ಷಿಯಾಗಿ ತೀವ್ರ ಪ್ರಯತ್ನ ನಡೆಸಿದ್ದರು. ಆದರೆ ಅಭಯಚಂದ್ರರಿಗೆ ಟಿಕೆಟ್‌ ಕೊಟ್ಟಿದ್ದರ ಹಿನ್ನೆಲೆಯಲ್ಲಿ ಮಿಥುನ್‌ ರೈ ಅವರಿಗೆ ಅವಕಾಶ ಕೈ ತಪ್ಪಿತ್ತು. ಅಭಯಚಂದ್ರ ಜೈನ್‌ ಈಗಾಗಲೇ ತಾವು ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕಳೆದ 2018ರ ಚುನಾವಣೆ ಸಂದರ್ಭದಲ್ಲೂ ಇದೇ ಮಾತು ಹೇಳಿದ್ದರೂ ಕೊನೆಯಲ್ಲಿ ಸಿದ್ದರಾಮಯ್ಯ ಸೂಚನೆ ಮೇರೆಗೆ ಸ್ಪರ್ಧಿಸಿದ್ದರು. 2019ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಮಂಗಳೂರು ಕ್ಷೇತ್ರದ ಟಿಕೆಟ್‌ ಪಡೆಯುವಲ್ಲಿ ಯಶಸ್ವಿಯಾಗಿದ್ದ ಮಿಥುನ್‌ ರೈ, ಬಿಜೆಪಿಯ ನಳಿನ್‌ ಕುಮಾರ್‌ ಕಟೀಲು…

Read More

ಸೇವಾ ಶಿಖರ್ ಫೌಂಡೇಶನ್ ಮಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಹಾಗೂ ಮಂಗಳೂರು ತಾಲೂಕು ಕಬಡ್ಡಿ ಅಸೋಸಿಯೇಷನ್ ಇದರ ಸಹಯೋಗದಲ್ಲಿ “ಕುಡ್ಲ ಕಬಡ್ಡಿ-2023” ಇದರ ಉದ್ಘಾಟನಾ ಸಮಾರಂಭ ಪಣಂಬೂರಿನ ಎನ್ಎಂಪಿಎ ಮೈದಾನದಲ್ಲಿ ಜರುಗಿತು. ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ ಶಾಸಕ ಡಾ. ಭರತ್ ಶೆಟ್ಟಿ ವೈ. ಅವರು ಮಾತಾಡುತ್ತಾ, “ಕಬಡ್ಡಿಯಂತಹ ದೇಶೀಯ ಕ್ರೀಡೆ ಇಂದು ಅಳಿವಿನ ಅಂಚಿನಲ್ಲಿದೆ. ಆದರೆ ಯುವಕರು ಇಂತಹ ಕ್ರೀಡೆಗಳತ್ತ ಅಕರ್ಷಿತರಾಗುತ್ತಿರುವುದು ಒಳ್ಳೆಯ ಬೆಳವಣಿಗೆ. ಕಬಡ್ಡಿ ಟೂರ್ನಮೆಂಟ್ ಹಮ್ಮಿಕೊಂಡಿರುವ ಸಂಘಟನೆ ಇನ್ನಷ್ಟು ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಮಾಜಕ್ಕೆ ಮಾದರಿಯಾಗಲಿ” ಎಂದು ಶುಭ ಹಾರೈಸಿದರು. ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಮಾತನಾಡುತ್ತಾ, “ಸಮಾಜಕ್ಕೆ ಸೇವೆ ಸಲ್ಲಿಸಲು ಯಾವ ಜಾತಿ ಧರ್ಮವೂ ಬೇಕಾಗಿಲ್ಲ. ಸೇವೆಗಾಗಿ ನಿರ್ಮಿಸಿರುವ ಸೇವಾ ಶಿಖರ್ ಸಂಘಟನೆ ಸಾಮಾಜಿಕ ಕಳಕಳಿಯ ಮೂಲಕ ಸೇವೆಯ ಶಿಖರವನ್ನು ಏರಲಿ” ಎಂದರು. ಇತ್ತೀಚಿಗೆ ಕರ್ತವ್ಯ ಸಂದರ್ಭ ವೀರ ಮರಣವನ್ನಪ್ಪಿದ ಶಕ್ತಿನಗರದ…

Read More