ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿಯವರು, ಒಕ್ಕೂಟದ ಸಮಾಜ ಕಲ್ಯಾಣ ಯೋಜನೆಯಡಿ ಕಾರ್ಕಳದ ಬೋಳ ಗ್ರಾಮದ ನಿವಾಸಿ ಶ್ರೀಮತಿ ರತ್ನಾ ಶೆಟ್ಟಿ ಇವರಿಗೆ ಮನೆ ರಿಪೇರಿಗೆ ಮಂಜೂರಾದ ಪ್ರಥಮ ಕಂತಿನ ಧನಸಹಾಯದ ಚೆಕ್ಕನ್ನು ಒಕ್ಕೂಟದ ಕಚೇರಿಯಲ್ಲಿ ಹಸ್ತಾಂತರಿಸಿದರು. ಈ ಸಂಧರ್ಭದಲ್ಲಿ ಒಕ್ಕೂಟದ ಆಹ್ವಾನಿತ ಸದಸ್ಯರಾದ ಶ್ರೀ ರವಿ ಶೆಟ್ಟಿ ಹಾಗೂ ಫಲಾನುಭವಿಯ ಕುಟುಂಬಸ್ಥರು ಉಪಸ್ಥಿತರಿದ್ದರು.









































































































