ಭಾರತ ಸರಕಾರದ ಮಾನ್ಯತೆ ಪಡೆದಿರುವ ಸ್ವರ್ದಾತ್ಮಕ ಪರೀಕ್ಷೆಗಳ ತರಬೇತಿ ಮತ್ತು ಖಾಸಗಿ ಉದ್ಯೋಗಗಳ ವೃತ್ತಿಪರ ಕೌಶಲ್ಯ ತರಬೇತಿ ಸಂಸ್ಥೆ ಭಾಗ್ಯೆಶ್ ರೈ ಸಾರಥ್ಯದ ವಿದ್ಯಾಮಾತಾ ಅಕಾಡೆಮಿ ಇದರ ಚೊಚ್ಚಲ ಶಾಖೆ ಸೆ. 28 ರಂದು ಸುಳ್ಯ ರಥಬೀದಿಯಲ್ಲಿನ ಟಿ.ಎ.ಪಿ.ಸಿ.ಎಂ.ಎಸ್. ಸಂಕೀರ್ಣದಲ್ಲಿ ಶುಭಾರಂಭಗೊಳ್ಳಲ್ಲಿದೆ. ವಿದ್ಯಾಮಾತಾ ಇದರ ಮಾತೃ ಸಂಸ್ಥೆ ವಿದ್ಯಾಮಾತ ಫೌಂಡೇಶನ್ ಈಗಾಗಲೇ 3 ರಾಜ್ಯಮಟ್ಟದ ಉದ್ಯೋಗ ಮೇಳ, ಸುಮಾರು 500 ಕ್ಕೂ ಹೆಚ್ಚು ನೇರ ಉದ್ಯೋಗ ಸಂದರ್ಶನಗಳ ಮೂಲಕ 5000 ಕ್ಕೂ ಮಿಕ್ಕಿದ್ದ ವಿದ್ಯಾರ್ಥಿಗಳಿಗೆ ವಿವಿಧ ಕಂಪನಿಗಳಲ್ಲಿ ಉದ್ಯೋಗ ಕೊಡಿಸುವಲ್ಲಿ ಸಫಲತೆ ಕಂಡಿದೆ. ಕರಾವಳಿಯಲ್ಲಿ ಸ್ವರ್ದಾತ್ಮಕ ಪರೀಕ್ಷೆಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮತ್ತು ತರಬೇತಿ ನೀಡಿ 90 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸರಕಾರಿ ಹಾಗೂ ಸರಕಾರಿ ಸ್ವಾಮ್ಯದ ಇಲಾಖೆಗಳಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುವಲ್ಲೂ ಸಂಸ್ಥೆಯ ಶ್ರಮದ ಜೊತೆಗೆ ವಿದ್ಯಾರ್ಥಿಗಳ ಪ್ರಯತ್ನ ಸಾಕಾಷ್ಟಿದೆ.
ಅಕಾಡೆಮಿಯ ವೈಶಿಷ್ಟತೆಗಳು : 20 ಕ್ಕೂ ಹೆಚ್ಚು ವಿವಿಧ ಸ್ವರ್ದಾತ್ಮಕ ಪರೀಕ್ಷೆಗಳಿಗೆ 6 ತಿಂಗಳ ಅವಧಿಯಲ್ಲಿ ಏಕಕಾಲದಲ್ಲಿ ತರಬೇತಿ ಪಡೆಯುವ ಅವಕಾಶ. ಸದ್ಯ ಓದುತ್ತಿರುವ ವಿದ್ಯಾರ್ಥಿಗಳಿಗೆ ಹಾಗೂ ಉದ್ಯೋಗದಲ್ಲಿರುವವರಿಗೆ ಅನುಕೂಲವಾಗುವಂತೆ ದಿನನಿತ್ಯ ಆನ್ಲೈನ್ ಮುಖಾಂತರವೂ ತರಬೇತಿಗೆ ಅವಕಾಶ. ನೇರ ತರಗತಿಗಳಲ್ಲಿ ಪಾಲ್ಗೊಳ್ಳುವವರಿಗೆ ವಾರದ 5 ದಿನ, ಆರು ತಿಂಗಳ ತರಬೇತಿ. ತರಬೇತಿ ಬಳಿಕ ಎರಡು ವರ್ಷಗಳು ನಿರಂತರವಾಗಿ ಅರ್ಜಿ ಸಲ್ಲಿಕೆ. ಪ್ರವೇಶ ಪತ್ರ, ವಿಶೇಷ ತರಗತಿಗಳನ್ನು ಉಚಿತವಾಗಿ ನೀಡುವ ಮುಖಾಂತರ ಸರಕಾರಿ ಹುದ್ದೆಗೆ ಆಯ್ಕೆಯಾಗಲು ಸಂಪೂರ್ಣವಾಗಿ ವಿದ್ಯಾಮಾತ ಅಕಾಡೆಮಿಯ ಬೆಂಬಲ. ಅಭ್ಯರ್ಥಿಗಳಿಗೆ ಉಚಿತ ಕಂಪ್ಯೂಟರ್, ಸ್ಪೋಕನ್ ಇಂಗ್ಲಿಷ್, ದೈಹಿಕ ಸದೃಢತೆಯ ಮೈದಾನ ತರಬೇತಿ. ಅಧಿಕಾರಿ, ನಿವೃತರು, ದೇಶದ ಬೇರೆ ಬೇರೆ ಭಾಗಗಳ ವಿಶೇಷ ಸಂಪನ್ಮೂಲ ವ್ಯಕ್ತಿಗಳ ಮೂಲಕ ನಿರಂತರ ತರಬೇತಿ ಕಾರ್ಯಾಗಾರ ಪ್ರತಿವಾರ ಅಣಕು ಪರೀಕ್ಷೆ, ಹಳೆಯ ಪ್ರಶ್ನೆ ಪತ್ರಿಕೆಗಳ ಪುನರ್ ವಿಮರ್ಶೆಯ ಮೂಲಕ ತರಬೇತಿಗೊಳಿಸುವುದು. ದೇಶ- ವಿದೇಶ ಗಳಲ್ಲಿ ಉತ್ತಮ ಕಂಪನಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಡಿಫ್ಲೋಮಾ ಇನ್ ಪ್ರಾಕ್ಟಿಕಲ್ ಅಕೌಂಟಿಂಗ್ ಆಂಡ್ ಟ್ಯಾಕ್ಲೇಶನ್ ಕೋರ್ಸ್ ಗಳನ್ನು ನೀಡಲಾಗುತ್ತದೆ.
ಇವೆಲ್ಲಾ ಸೌಲಭ್ಯಗಳನ್ನು ಒಂದೇ ಸೂರಿನಡಿಯಲ್ಲಿ ಪಡೆಯುವ ಅವಕಾಶವನ್ನೂ ವಿದ್ಯಾಮಾತಾ ಒದಗಿಸಿಕೊಡುತ್ತಿದ್ದು ಸುಳ್ಯ, ಕೊಡಗು, ಮಡಿಕೇರಿ ಸಹಿತ ವಿವಿಧ ತಾಲೂಕು ಹಾಗೂ ಜಿಲ್ಲೆಯ, ಕರಾವಳಿ ಕರಾವಳಿ ಭಾಗದ ವಿದ್ಯಾರ್ಥಿಗಳು ಸರಕಾರಿ, ಸರಕಾರಿ ಸ್ವಾಮ್ಯದ ಇಲಾಖೆಗಳಲ್ಲಿ ಉದ್ಯೋಗ ಪಡೆಯಲು ತಯಾರಿ ಮಾಡುವುದು ಹಾಗೂ ಸರಕಾರಿ ಹುದ್ದೆಗೆ ಆಯ್ಕೆಯಾಗದೆ ಇರುವವರನ್ನು ಖಾಸಗಿ ವಲಯದಲ್ಲಿ ಉದ್ಯೋಗಕ್ಕೆ ಅಣಿಗೊಳಿಸುವುದು ವಿದ್ಯಾಮಾತಾ ಅಕಾಡೆಮಿಯ ಮುಖ್ಯ ಧ್ಯೇಯವಾಗಿದೆ. ವಿವರಗಳಿಗೆ ಮೊಬೈಲ್ ಸಂಖ್ಯೆ 9620468869 ಸಂಪರ್ಕಿಸುವಂತೆ ಸಂಸ್ಥೆ ಪ್ರಕಟಣೆ ತಿಳಿಸಿದೆ.