ಅಂತರಂಗ ಸಾಧನೆಗೆ ಬೇಕು ಶ್ರೀರಂಗ
ಅವನಲ್ಲಿ ಇಡಬೇಕು ನಿಜವಾದ ಸಂಗ
ಪ್ರೀತಿಯಿಂದ ಕರೆಯುವ ರಂಗಾ ರಂಗ
ಆಗ ನೆಲೆಯುವನು ಹೃದಯದಲಿ ದಯಾರಂಗ! !
ಅಂತರ್ಯಾಮಿ ಎಂದು ಅವನ ಹೆಸರು
ಅವನೇ ನಮ್ಮ ಜೀವನದ ಉಸಿರು
ನಾಮಗಳು ಸಾವಿರ ಒಬ್ಬನೇ ದೇವರು
ದೇವರೇ ನಮ್ಮ ಜೀವನದ ಬೇರು! !
ಬಹಿರಂಗ ವಿಷಯ ಅವನದೇ ಮಾಯೆಯು
ಬರುವ ಸುಖ: ದುಃಖ ಅವನದೇ ಕೃಪೆಯು
ಬಯಕೆಗಳ ರಾಶಿಯನ್ನು ಹೊರುವ ಅಜ್ಞಾನಿಯು
ಕ್ಷಣದಲ್ಲಿ ಬಿಡಬಹುದು ಆಗಿ ನೀ ಜ್ಞಾನಿಯು! !
ಜೀವನ ಆಸಕ್ತಿ ಮುಕ್ತಿ ಆಗಿರಬೇಕು
ನಿತ್ಯಾ ನಿತ್ಯ ವಸ್ತು ವಿವೇಕ ಬೇಕೇಬೇಕು
ಗುರುವೇ ಜೀವನದ ದಿವ್ಯ ಬೆಳಕು
ಅಂತರಂಗ ಸಾಧನೆಗೆ ಗುರುವೇ ಬೇಕು! !
-ದೆಪ್ಪುಣಿಗುತ್ತು ಸುಧಾಕರ ಶೆಟ್ಟಿ
Next Article ಭೂರಮೆಯ ನಗ್ನಗೊಳಿಸುವಿರೇಕೆ?