ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ನೂತನ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಅವರನ್ನು ಕೊಡಗು ಜಿಲ್ಲಾ ಬಂಟರ ಸಂಘದ ವತಿಯಿಂದ ಅಭಿನಂದಿಸಲಾಯಿತು. ವಿರಾಜಪೇಟೆಯ ನಿವಾಸದಲ್ಲಿ ಭೇಟಿಯಾದ ಅಧ್ಯಕ್ಷ ಬಿ.ಡಿ. ಜಗದೀಶ್ ರೈ ಮತ್ತು ಪದಾಧಿಕಾರಿಗಳು ಕರಾವಳಿಯ ಕಲೆ ಯಕ್ಷಗಾನ ಕಿರೀಟದ ಪ್ರತಿರೂಪವನ್ನು ನೀಡಿ ಶುಭ ಹಾರೈಸಿದರು. ಸಂಘದ ಪ್ರಮುಖ ಬೇಡಿಕೆಯುಳ್ಳ ಮನವಿ ಪತ್ರವನ್ನು ಶಾಸಕರಿಗೆ ನೀಡಲಾಯಿತು.

ಸಮುದಾಯದ ಬೆಳವಣಿಗೆ ಜತೆಗೆ ಎಲ್ಲಾ ವರ್ಗದವರನ್ನು ಜತೆ ಸೇರಿಸಿಕೊಂಡು ಪಕ್ಷಾತೀತವಾಗಿ ಕಾರ್ಯ ನಿರ್ವಹಿಸುವಂತೆ ಪೊನ್ನಣ್ಣ ಸಲಹೆ ನೀಡಿದರು.

ಜಿಲ್ಲಾ ಸಹಕಾರ್ಯದರ್ಶಿ ಮನೋಜ್ ಶೆಟ್ಟಿ, ನಿರ್ದೇಶಕರಾದ ಬಾಲಕೃಷ್ಣ (ಅಪ್ಪು) ರೈ, ಸತೀಶ್ ರೈ ಫಾರೆಸ್ಟ್ ವ್ಯಾಲಿ, ಪ್ರಭು ರೈ, ವಿರಾಜಪೇಟೆ ತಾಲೂಕು ಅಧ್ಯಕ್ಷ ಲೀಲಾಧರ ರೈ ನೀಲುಮಾಡು, ಉಪಾಧ್ಯಕ್ಷ ಪ್ರಕಾಶ್ ರೈ, ಕಾರ್ಯದರ್ಶಿ ಸಂಪತ್ ಕುಮಾರ್ ಶೆಟ್ಟಿ, ಜಂಟಿ ಕಾರ್ಯದರ್ಶಿ ನೀತ ರೈ, ಸದಸ್ಯರಾದ ಜಗನ್ನಾಥ ರೈ ಈ ಸಂದರ್ಭ ಇದ್ದರು.






































































































