ಯುವ ಬಂಟರ ಸಂಘ (ರಿ.) ಕಂಬಳಕಟ್ಟ-ಕೊಡವೂರು ಇದರ ದಶಮಾನೋತ್ಸವದ ಅಂಗವಾಗಿ ಸಂಘದ ಸದಸ್ಯರುಗಳಿಗೆ “ಬಂಟ ಕ್ರೀಡೋತ್ಸವ”ವನ್ನು ದಿನಾಂಕ 02.04.2023 ರವಿವಾರ ಆದಿವುಡುಪಿ ಶಾಲಾ ಮೈದಾನದಲ್ಲಿ ಏರ್ಪಡಿಸಲಾಯಿತು.
ಈ ಸಮಾರಂಭವನ್ನು ಹಿರಿಯರಾದ ಆದಿವುಡುಪಿ ಹಿ.ಪ್ರಾ. ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಜಯಕರ ಶೆಟ್ಟಿ ಅಂಬಲಪಾಡಿ ಇವರು ದೀಪ ಬೆಳಗುವುದರೊಂದಿಗೆ ಉದ್ಘಾಟಿಸಿದರು. ಲl ವಿದ್ಯಾಲತಾ ಯು ಶೆಟ್ಟಿ ಬನ್ನಂಜೆ ಇವರು ಕ್ರೀಡಾಜ್ಯೋತಿಯನ್ನು ಹಸ್ತಾಂತರಿಸುವ ಮೂಲಕ “ಬಂಟ ಕ್ರೀಡೋತ್ಸವ”ಕ್ಕೆ ಚಾಲನೆ ನೀಡಿದರು. ಈ ಕ್ರೀಡಾ ಕೂಟಕ್ಕೆ ಶುಭ ಹಾರೈಸುತ್ತಾ ಮಾತಾಡಿದ ಅವರು ಸಮಾಜವನ್ನು ಒಗ್ಗೂಡಿಸುವಲ್ಲಿ ಇಂತಹ ಕ್ರೀಡಾಕೂಟಗಳು ಉತ್ತಮ ಪಾತ್ರವಹಿಸುತ್ತದೆ. ಈ ಕ್ರೀಡಾಕೂಟದಲ್ಲಿ ಒಂದು ಭಾಗವಾಗಿ ಪಾಲ್ಗೊಂಡಿದ್ದು ತುಂಬಾ ಹೆಮ್ಮೆತಂದಿದೆ ಎಂದು ನುಡಿದರು. ಈ ಸಂದರ್ಭದಲ್ಲಿ ಆದಿವುಡುಪಿ ಪ್ರೌಢಶಾಲಾ ದೈಹಿಕ ಶಿಕ್ಷಕರಾದ ಶ್ರೀಯುತ ಇಮ್ಮಾನ್ಯವೆಲ್ ಡೇವಿಡ್ ಆಲ್ಬರ್ಟ್ ಹಾಗೂ ಉಡುಪಿ ನಗರಸಭಾ ಸ್ಥಾಯೀ ಸಮಿತಿಯ ನೂತನ ಅಧ್ಯಕ್ಷರಾದ ಶ್ರೀ ಶ್ರೀಶ ಭಟ್ ಕೊಡವೂರು ಅವರುಗಳಿಗೆ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಉಡುಪಿ ಬಂಟರ ಸಂಘದ ಕಾರ್ಯದರ್ಶಿ ಶ್ರೀ ಅಮಿತ್ ಶೆಟ್ಟಿ, ಆದಿವುಡುಪಿ ಶಾಲಾ ಸಂಚಾಲಕರಾದ ಶ್ರೀ ಗಣೇಶ್ ರಾವ್, ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆಯ ನಿವೃತ್ತ ಅಧಿಕಾರಿ ಪಾಂಡು ಶೆಟ್ಟಿ ಪಂದುಬೆಟ್ಟು, ಅರುಣ್ ಕುಮಾರ್ ಶೆಟ್ಟಿ ಗಂಗೋತ್ರಿ, ಹಿರಿಯರಾದ ಶಂಕರ್ ಶೆಟ್ಟಿ ಆದಿವುಡುಪಿ, ಸದಾನಂದ ಶೆಟ್ಟಿ ಮೂಡುಬೆಟ್ಟು, ಸಂಘದ ಅಧ್ಯಕ್ಷ ಶ್ರೀ ಶಿವಪ್ರಸಾದ್ ಶೆಟ್ಟಿ ಮಜಲುಮನೆ, ಗೌರವಾಧ್ಯಕ್ಷರುಗಳಾದ ಶ್ರೀ ಸಂತೋಷ್ ಶೆಟ್ಟಿ ಪಂಚರತ್ನ, ಶ್ರೀ ಸುರೇಶ್ ಶೆಟ್ಟಿ ಕಂಬಳಕಟ್ಟ, ಶ್ರೀಮತಿ ಸ್ಮಿತಾವಿದ್ಯಾಧರ್ ಶೆಟ್ಟಿ ಗರ್ಡೆ, ಕಾರ್ಯದರ್ಶಿ ಪುಷ್ಪರಾಜ್ ಶೆಟ್ಟಿ ಆದಿವುಡುಪಿ, ಖಜಾಂಚಿ ರಮೇಶ್ ಶೆಟ್ಟಿ ಮೂಡುಬೆಟ್ಟು, ದಶಮಾನೋತ್ಸವದ ಸಂಚಾಲಕರಾದ ಡಾ. ವಿಜೇಶ್ ಶೆಟ್ಟಿ ಜನ್ನಿಬೆಟ್ಟು, ಗೌರವಾಧ್ಯಕ್ಷರಾದ ಶ್ರೀಮತಿ ರೀನಾ ಆನಂದ ಶೆಟ್ಟಿ,ಗರ್ಡೆ, ಕ್ರೀಡಾ ಕಾರ್ಯದರ್ಶಿ ಸತೀಶ್ ಶೆಟ್ಟಿ ತೆಂಕುಮನೆ, ಕಾರ್ಯಕಾರಿ ಹಾಗೂ ದಶಮಾನೋತ್ಸವ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.
ಆಶ್ರಿತಾ ಶಿವಪ್ರಸಾದ್ ಶೆಟ್ಟಿ ಮಜಲುಮನೆ ಹಾಗೂ ಪ್ರಿಯಾ ನಿತೇಶ್ ಶೆಟ್ಟಿ ಮಜಲುಮನೆ ಪ್ರಾರ್ಥನೆಗೈದರು. ಸ್ಮರಣ ಸಂಚಿಕೆ ಸಂಚಾಲಕರಾದ ಶ್ರೀ ಸುರೇಶ್ ಶೆಟ್ಟಿ ಕಂಬಳಕಟ್ಟ ಸ್ವಾಗತಿಸಿದರು. ದಶಮಾನೋತ್ಸವ ಸಂಚಾಲಕ ಡಾ. ವಿಜೇಶ್ ಶೆಟ್ಟಿ ವಂದಿಸಿದರು. ಅಮೃತ್ ಶೆಟ್ಟಿ ಕಂಬಳಕಟ್ಟ ಕಾರ್ಯಕ್ರಮ ನಿರೂಪಿಸಿದರು.