ಬಂಟರಿಗೆ ನಿಗಮ ಒದಗಿಸುವ ಕುರಿತು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿಯವರು ಮಹಾ ನಿರ್ದೇಶಕರು ಹಾಗೂ ಜೊತೆ ಕಾರ್ಯದರ್ಶಿ ಶ್ರೀ ಪ್ರವೀಣ್ ಭೋಜ ಶೆಟ್ಟಿ, ನಿರ್ದೇಶಕರಾದ ಶ್ರೀ ಅರವಿಂದ್ ಎ ಶೆಟ್ಟಿ, ಮಹಾ ಪೋಷಕರಾದ ಶ್ರೀ ಶಶಿಧರ್ ಶೆಟ್ಟಿ ಇನ್ನಂಜೆ ಮತ್ತು ಕೋಶಾಧಿಕಾರಿ ಶ್ರೀ ಮೋಹನದಾಸ್ ಶೆಟ್ಟಿಯವರನ್ನು ಒಳಗೊಂಡ ಒಕ್ಕೂಟದ ತಂಡವು ಮಹಾರಾಷ್ಟ್ರದ ಸಂಸದ ಶ್ರೀ ಗೋಪಾಲ್ ಶೆಟ್ಟಿಯವರನ್ನು ಭೇಟಿಯಾಗಿ ಬಂಟರಿಗೆ ನಿಗಮ ಒದಗಿಸುವ ಬಗ್ಗೆ ಮನವಿ ಮಾಡಿದರು. ಈ ಸಂದರ್ಭ ಸಂಸದರು ಕರ್ನಾಟಕ ಸರಕಾರದ ಮುಖ್ಯಮಂತ್ರಿ ಶ್ರೀ ಬಸವರಾಜ್ ಬೊಮ್ಮಾಯಿ, ಕರ್ನಾಟಕ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಶ್ರೀ ನಳಿನ್ ಕುಮಾರ್ ಕಟೀಲ್ ಹಾಗೂ ಕರ್ನಾಟಕ ಸರಕಾರದ ಇಂಧನ ಸಚಿವರಾದ ಶ್ರೀ ಸುನೀಲ್ ಕುಮಾರ್ ರವರಲ್ಲಿ ಈ ಕುರಿತು ಮಾತನಾಡುವುದಾಗಿ ಭರವಸೆ ನೀಡಿದರು.