ದಿನಾಂಕ:04/06/1960ರಂದು ಇವರ ಜನನವಾಯಿತು. ಇವರು ಬಾಲ್ಯದಲ್ಲಿಯೇ ಹೆಚ್ಚಾಗಿ ಯಕ್ಷಗಾನದ ಬಗ್ಗೆ ಆಸಕ್ತಿಯುಳ್ಳವರಿಗಿದ್ದು, ನಂತರ ಮಧುರಾದಿ ರಸಗಳ ಸಮಾಪಾಕವಾಗಿ ಸೌಂದರ್ಯ ಶ್ರೀಮಂತಿಗೆಯಿಂದ ಸುಶೋಭಿತವಾಗಿ ಯಕ್ಷಗಾನದ ಯಾರ ಅನೂಕರಾಣೆಯು ಇಲ್ಲದೆ ತನ್ನದೇ ಶೈಲಿಯಿಂದ ಯಕ್ಷಗಾನಕ್ಕೆ ತನ್ನದ್ದೆ ಆದ ಕೊಡುಗೆಯನಿತ್ತವರು. ಮೇಳವನ್ನು ಸೇರುವ ಮೊದಲು ಇವರಿಂದಲೇ ಸ್ಥಾಪಿತವಾದ “ಶ್ರೀ ವೀರಭದ್ರೇಶ್ವರ ಕಲಾ ಸಂಘ” ಇದು ಅವರ ನಿರ್ದೇಶನದಲ್ಲಿ ಯಶಸ್ವಿ ಕಂಡಿತ್ತು. ನಂತರ ಬದುಕನ್ನು ಕಟ್ಟಿಕೊಳ್ಳುದಕ್ಕಾಗಿ ಆಯ್ಕೆಮಾಡಿಕೊಂದದ್ದು ಯಕ್ಷಗಾನ ಮೇಳ. ಯಕ್ಷರಂಗದ ಬೀಷ್ಮನೆಂದೇ ಖ್ಯಾತರಾದ ಎಂ. ಎಂ. ಹೆಗ್ಡೆಯವರ ಸಂಚಾಲಕತ್ವದ ಮಾರಣಕಟ್ಟೆ ಮೇಳವನ್ನು ಸೇರಿಕೊಂಡರು ಇವರು ಮಾರಣಕಟ್ಟೆ ಮೇಳದಲ್ಲಿ ಹೆಸರಾಂತ ಆಗ್ರಾಮನ್ಯ ಕಲಾವಿದರಾದ ಐರಬೈಲು ಆನಂದ ಶೆಟ್ಟಿ, ನಾಗೂರು ಶ್ರೀನಿವಾಸ, ದೇವಾಡಿಗ, ಮೊಳಹಳ್ಳಿ ದಿ||ಹೆರಿಯ ನಾಯ್ಕ, ಏಳಬೇರು ಶೇಖರ್ ಶೆಟ್ಟಿ ಮುಂತಾದವರೊಂದಿಗೆ ರಂಗವನ್ನು ಹಂಚಿಕೊಂಡಿದ್ದಾರೆ.
ಇವರು “ಕೌರವ”,”ದ್ರೋಣ”, ವಿಕ್ರಮ”, “ಕೋಲಮುನಿ”, “ಕಮಲಭೂಪ” ಮುಂತಾದ ಪಾತ್ರಗಳನ್ನು ಪಾರಂಪರಿಕ ಪರಿದಿಯಲ್ಲಿ ಪ್ರಸ್ತುತ ಪಡಿಸುವ ರಂಗ ತಾದ್ಯಾತ್ಮ ಶ್ಲಾಘನೀಯವಾದದ್ದು. ಇವರು ಬಾಳಸಂಗಾತಿಯಾಗಿ ಪಾರ್ವತಿ ಎನ್ನುವವರ ಕೈಹಿಡಿದು ಇವರ ದಾಂಪತ್ಯದ ಪ್ರತೀಕವಾಗಿ ಪ್ರತ್ವಿರಾಜ್, ಪ್ರತಿಮಾ ಎನ್ನುವ ಇಬ್ಬರು ಮಕ್ಕಳನ್ನು ಪಡೆದು ಸಾರ್ಥಕ ಜೀವನವನ್ನು ಸಾಗಿಸುತ್ತಿದ್ದಾರೆ. ಇವರ ಬಾಳಯಾನ ಸದಾ ಸಂಭ್ರಮದಿಂದಿರಲಿ ಎಂದು ಸಮಸ್ತ ಬಂಟ ಸಮಾಜದ ಪರವಾಗಿ ಆರಾಧ್ಯ ದೇವನಾದ ಬ್ರಹ್ಮಲಿಂಗೇಶ್ವರನಲ್ಲಿ ಬೇಡುತ್ತೇವೆ.