” ಮನುಷ್ಯನ ಮೆದುಳಿನ ಬ್ರೈನ್ ಸ್ಟೋಕ್ ಮತ್ತು ತಡೆಗಟ್ಟುವಂತಹ ವಿಧಾನ ಹಾಗೂ ಸಂರಕ್ಷಣೆಯ ಪಾತ್ರ…!”
” ಮನುಷ್ಯನ ಕೇಂದ್ರಬಿಂದು ಮೆದುಳು ಪರಿಚಲನೆ ಮತ್ತು ಬ್ರೈನ್ ಸ್ಟ್ರೋಕ್ ಸಾಧಕ ಬಾಧಕಗಳ ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮ…!”
-ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ ಕುಂದಾಪುರ ,ಉಡುಪಿ ಜಿಲ್ಲೆ (ಪತ್ರಕರ್ತರು ಮಾಧ್ಯಮ ವಿಶ್ಲೇಷಕರು)’
m:9632581508
ಮನುಷ್ಯನ ಪ್ರತಿಯೊಂದು ಅಂಗಗಳು ತಮ್ಮದೇ ಆದಂತಹ ಕಾರ್ಯಗಳು ನಿರ್ವಹಿಸುತ್ತದೆ. ಅದೇ ರೀತಿಯಾಗಿ ನಮ್ಮ ಮೆದುಳಿನ ಕ್ರಿಯೆಗಳು ದೇಹದಲ್ಲಿನ ವಾತಾವರಣವನ್ನ ಸೃಷ್ಟಿಸುವುದರಿಂದ ದೇಹದಲ್ಲಿನ ಪ್ರಾಕೃತಿಕ ಲಕ್ಷಣಗಳನ್ನು ಹೊಂದಿದ್ದು, ಅವು ತನ್ನ ದಿನದ ಕಾರ್ಯವನ್ನು 24 ಗಂಟೆಯೂ ನಿರ್ವಹಿಸುತ್ತದೆ. ಅದಲ್ಲದೆ ನಮ್ಮ ಮೆದುಳಿನ ಭಾಗ ದೇಹದ ಕೇಂದ್ರ ಬಿಂದು ಆದ್ದರಿಂದ ಮೆದುಳಿನ ಸಂರಕ್ಷಣೆ ನಾವು ಯಾವ ರೀತಿ ಕೈಗೊಳ್ಳಬೇಕು ಮತ್ತು ಮೆದುಳಿನ ಸಂರಕ್ಷಣೆಯಿಂದ ಮನುಷ್ಯನ ಯಾವ್ಯಾವ ಭಾಗಗಳಿಗೆ ಒಳಿತನ್ನ ನೀಡುತ್ತದೆ ಅದಲ್ಲದೆ ನಿಷ್ಕಲ್ಮಶಕ್ತಿಯನ್ನು ಹೊಂದಿರುವಂತಹ ಮೆದುಳು, ಯಾವ ರೀತಿ ದೇಹ ರಚನೆಯನ್ನ ನಿರ್ಮಾಣ ಮಾಡುತ್ತದೆ. ಎನ್ನುವುದು ತಿಳಿಯುವುದು ಅತ್ಯಗತ್ಯ ಅದರಲ್ಲಿ ಮನುಷ್ಯನ ವಿವಿಧ ಭಾಗಗಳನ್ನು ಸಂರಕ್ಷಣ ಕ್ಷೇತ್ರವಾಗಿ ಮಾರ್ಪಾಡುವ ರೀತಿ ಮತ್ತು ದೇಹದಲ್ಲೇನಾ ಪ್ರಾಕೃತಿಕ ಸಂರಕ್ಷಣೆಯ ಕೇಂದ್ರ ಬಿಂದುವಾಗಿ ಕಾರ್ಯನಿರ್ವಹಿಸುತ್ತದೆ. ಮನುಷ್ಯನ ಮೆದುಳು ಪ್ರತಿಯೊಂದು ಅಂಗಗಳನ್ನು ನಿರ್ವಹಿಸುವ ಶಕ್ತಿ ಧಾಮವಾಗಿದೆ ನರಮಂಡಲಗಳನ್ನ ಸೂಕ್ತ ರೀತಿಯಲ್ಲಿ ಹಿಡಿದಿಟ್ಟುಕೊಳ್ಳುವ ಮತ್ತು ರಕ್ತ ಸಾಂದ್ರತೆಯ ಪರಿಚಲನೆಯನ್ನ ನೀಡುವ ಕೇಂದ್ರಿಕಥ ಬಿಂದುವಾಗಿ ಕಾರ್ಯನಿರ್ವಹಿಸುತ್ತದೆ ಮೆದುಳು. ಮೆದುಳಿಗೆ ಬೇಕಾದ ರಕ್ತ ಪರಿಚಲನೆ ಮತ್ತು ದೇಹದಲ್ಲಿನ ವಿವಿಧ ಭಾಗಗಳನ್ನು ಸಂಪೂರ್ಣವಾಗಿ ಸುರಕ್ಷತಾ ದೃಷ್ಟಿಯಿಂದ ಕಾರ್ಯನಿರ್ವಹಿಸುವ ಮೆದುಳು ಮನುಷ್ಯನ ದೇಹದ ಪ್ರಮುಖ ಭಾಗ ಆ ಕಾರಣಕ್ಕಾಗಿ ಮೆದುಳಿನ ಸಂರಕ್ಷಣೆ ಪ್ರತಿಯೊಬ್ಬ ಮನುಷ್ಯನ ಆದ್ಯ ಕರ್ತವ್ಯವಾಗಿದೆ.
ಬ್ರೈನ್ ಸ್ಟ್ರೋಕ್ ಉಂಟಾದಾಗ ಕಂಡುಬರುವ ಲಕ್ಷಣಗಳು: ಮಾತನಾಡಲು ಕಷ್ಟವಾಗುವುದು ತೊದಲುವುದು ಗೊಂದಲ ಮಾತುಗಳು ದೊಡ್ಡವರಿಸುವುದು ಒಂದು ಅಥವಾ ಎರಡು ಕಣ್ಣುಗಳಲ್ಲಿ ಸಮಸ್ಯೆ ಕಂಡು ಬರಬಹುದು ಕಣ್ಣು ಮುಂಜಾಗುವುದು ವಸ್ತುಗಳು ಎರಡು ಎರಡಾಗಿ ಕಾಣುವುದು ಮುಖ ಅಥವಾ ಕೈಕಾಲುಗಳಿಗೆ ಪಾಶ್ವ ವಾಯು ವಾಗುವುದು. ಈ ಸಮಯದಲ್ಲಿ ವ್ಯಕ್ತಿಗೆ ಕೈಕಾಲುಗಳು ಮರಗಟ್ಟಿದಂತಾಗುವುದು ಕೈಗಾಲುಗಳನ್ನು ಮೇಲಕ್ಕೆ ಎತ್ತಲು ಸಾಧ್ಯವಾಗುವುದಿಲ್ಲ.
ಅಲ್ಲದೆ ತುಟಿ ಕೂಡ ಒಂದು ಕಡೆಗೆ ತಿರುಗಬಹುದು ತಲೆನೋವು ವಿಪರೀತ ತಲೆನೋವು ಇದರ ಜೊತೆಗೆ ವಾಂತಿ ತಲೆ ಸುತ್ತು ಇವುಗಳಿಗೆ ಯಾವುದು ಬೇಕಾದರೂಕಾಣಬಹುದು ನಡೆಯಲು ಕಷ್ಟವಾಗುವುದು ವ್ಯಕ್ತಿಗೆ ನಡೆಯಲು ಸಾಧ್ಯವಾಗುವುದು ದೇಹದ ಸಮತೋಲನ ತಪ್ಪುತ್ತದೆ. ತೋಳಿನ ದೌರ್ಬಲ್ಯವು ಸ್ಪಷ್ಟವಾಗಿ ತಿಳಿಯುವುದಿಲ್ಲ. ತಮ್ಮ ಕೈಯಿಂದ ವಸ್ತುಗಳು ಕೆಳಗೆ ಬೀಳುವವರೆಗೂ ತೋಳಿನ ದೌರ್ಬಲ್ಯವು ಪಾರ್ಶ್ವವಾಯುವಿಗೆ ಒಳಗಾದ ವ್ಯಕ್ತಿಗೆ ತಿಳಿಯುವುದಿತುರ್ತು ಚಿಕಿತ್ಸೆ ಯಾವುದಾದರೂ ಒಂದು ಲಕ್ಷಣ ಕಂಡುಬಂದರೂ ತಡ ಮಾಡಬೇಡಿ, ಕೂಡಲೇ ಉತ್ತಮ ವೈದ್ಯಕೀಯ ಸೌಲಭ್ಯವಿರುವ ಆಸ್ಪತ್ರೆಗೆ ತಲುಪಿಸಿ ತುರ್ತು ಚಿಕಿತ್ಸೆ ನೀಡಬೇಕಾಗುತ್ತದೆ ಕೂಡಲೇ ಚಿಕಿತ್ಸೆ ದೊರೆಯುತ್ತಾರೆ. ಬದುಕುವ ಹಾಗೂ ಗುಣಮುಖವಾಗುವ ಸಾಧ್ಯತೆ ಹೆಚ್ಚು ತಡವಾದಷ್ಟು ವ್ಯಕ್ತಿ ಒಂದು ವೇಳೆ ಬದುಕಿದರೂ ಗುಣಮುಖರಾಗುವುದು ಕಷ್ಟ ಸ್ಟ್ರೋಕ್ ಗೆ ಕಾರಣಗಳು ಅಪಧಮನಿ ಬ್ಲಾಕ್ ಆಗುವುದಿಲ್ಲ ರಕ್ತನಾಳಗಳು ಒಡೆದು ರಕ್ತ ಸೋರಿಕೆಯಾಗುವುದು ಇದು ಸಾಮಾನ್ಯವಾಗಿ ಕಂಡುಬರುವ ಸ್ಟ್ರೋಕ್ ಆಗಿದೆ ಈ ರೀತಿ ಉಂಟಾದಾಗ ರಕ್ತ ಸಂಚಾರ ಕಡಿಮೆಯಾಗುತ್ತದೆ ಈ ರೀತಿ ಉಂಟಾದಾಗ ಮೆದುಳಿಗೆ ರಕ್ತ ಸಂಚಾರ ಆಗುವುದಿಲ್ಲ.ಹೇ ಮೊರಾಜಿಕ್ ಸ್ಟ್ರೋಕ್ ಈ ಕಾರಣಗಳಿಂದ ಉಂಟಾಗುತ್ತದೆ ನಿಯಂತ್ರಣಕ್ಕೆ ಬಾರದ ಅತ್ಯಧಿಕ ರಕ್ತದೊತ್ತಡ ರಕ್ತ ತೆಳುವಾಗುವ ಔಷಧಿ ಅತ್ಯಧಿಕ ಸೇವಿಸುವುದು ದುರ್ಬಲ ರಕ್ತನಾಳಗಳು. ವ್ಯಕ್ತಿಯ ದೃಷ್ಟಿ ಮಸುಕಾಗುತ್ತಿದೆ ಎಂದು ದೂರಬಹುದು. ಈ ಹಂತದಲ್ಲಿ ಅವರು ಅದನ್ನು ಬಿಸಿಲಿನಲ್ಲಿ ಹೆಚ್ಚು ಅಡ್ಡಾಡುವುದರಿಂದ ಅಥವಾ ದಿನದಲ್ಲಿ ಸಾಕಷ್ಟು ನೀರು ಇಲ್ಲದಿರುವುದು ಯಾವುದಾದರೂ ಕಾರಣದಿಂದ ಆಗಿರಬಹುದು ಎಂದು ಹೇಳುತ್ತಾರೆ. ನಿಮಗೆ ಹೀಗಾದಾಗ ತುಂಬಾ ಎಚ್ಚರಿಕೆಯಿಂದ ಗಮನಿಸುವ ಸಮಯ ಇದು.ಪಾರ್ಶ್ವವಾಯುವಿಗೆ ಒಳಗಾಗುವ ವ್ಯಕ್ತಿಯ ಮುಖದ ಅರ್ಧದಷ್ಟು ಭಾಗ ಜೋತು ಬಿದ್ದಂತೆ ಕಾಣುತ್ತದೆ. ಅವರು ಮಾತನಾಡುವಾಗ, ಮುಖದ ಒಂದು ಭಾಗವು ಯಾವುದೇ ಭಾವನೆ ತೋರಿಸುತ್ತಿಲ್ಲ ಎಂದು ಕಾಣುತ್ತದೆ. ಇನ್ನೊಂದು ಭಾಗವು ಸಾಮಾನ್ಯಕ್ಕಿಂತ ಹೆಚ್ಚು ವೇಗವಾಗಿ ತಿರುಗಿಸಲು ಸಾಧ್ಯವಾಗುತ್ತದೆ. ಪಾರ್ಶ್ವವಾಯುವಿನಿಂದ ಬಳಲುತ್ತಿರುವ ವ್ಯಕ್ತಿಯು ಮಾತನಾಡಲು ಸಮಸ್ಯೆ ಆಗುತ್ತದೆ.
ದೇಹದಲ್ಲಿನ ರಚನಾ ಭಾಗಗಳು ಹೃದಯ ಮೆದುಳು ಇವೆಲ್ಲವೂ ಪ್ರಮುಖ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತದೆ .ಮಾಂಸದ ಮುದ್ದೆಯಂತಿರುವ ಮನುಷ್ಯನ ಬಾಲ್ಯದ ದೇಹಗಳು ವಯಸ್ಸಾಗುತ್ತಿದ್ದಂತೆ ಪ್ರಾಕೃತಿಕ ಲಕ್ಷಣವನ್ನು ಹೊಂದಿ ಬಲಾಢ್ಯ ಮನುಷ್ಯನಾಗಿ ಮಾಡುವುದೇ ಮೆದುಳು ಹಾಗೂ ರಕ್ತ ಪರಿಚಲನೆ ಹೃದಯ ಸುರಕ್ಷತಾ ದೃಷ್ಟಿಯಿಂದ ಮುನ್ನೆಚ್ಚರಿಕ ಕ್ರಮವನ್ನು ಕೈಗೊಂಡರೆ ದೇಹದಲ್ಲಿನ ಯಾವುದೇ ಭಾಗಗಳು ಕೂಡ ಕಾಯಿಲೆಗೆ ತುತ್ತಾಗದೆ ಸಂರಕ್ಷಿತವಾಗಿ ಜೀವನ ನಡೆಸಲು, ಹೃದಯದ ಮುಖ್ಯ ಭಾಗಗಳು ಸಹಕಾರಿಯಾಗುತ್ತದೆ. ಅದರ ಅನುಗುಣವಾಗಿ ನಾವು ಮುನ್ನೆಚ್ಚರಿಕ ಆಹಾರ ಪದಾರ್ಥಗಳನ್ನ ಸ್ವೀಕರಿಸಿ ದೇಹದಲ್ಲಿನ ವಿವಿಧ ಸಂರಕ್ಷಣಾ ಭಾಗಗಳನ್ನ ಕಾಪಾಡಿಕೊಳ್ಳುವುದು ಜೀವನದಲ್ಲಿ ಅತ್ಯಗತ್ಯ…!