ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿದ ಸವಣೂರು ಸೀತಾರಾಮ ರೈ ಯವರು ವಿದ್ಯಾರ್ಥಿ ಬಂಟರ ಸಂಘದ ನೇತೃತ್ವದಲ್ಲಿ ನಡೆಯುವ ಈ ಕಾರ್ಯಕ್ರಮ ಎಲ್ಲರಿಗೂ ಆದರ್ಶ. ಪದವಿ ಪಡೆದ ಕೂಡಲೇ ನಾವು ಎಲ್ಲವನ್ನೂ ತಿಳಿದುಕೊಂಡಿದ್ದೇವೆ ಮಾಡುವೆವು ಎಂದು ಬೀಗುವುದು ಸರಿಯಲ್ಲ. ಭಾಷೆ ಯಾವುದೇ ಇರಲಿ ನಿರರ್ಗಳವಾಗಿ, ನಿರ್ಭಯವಾಗಿ ಮಾತನಾಡುವುದನ್ನು ರೂಢಿಸಿಕೊಳ್ಳಬೇಕು. ಸ್ಪರ್ಧಾತ್ಮಕವಾಗಿ ಪರೀಕ್ಷೆಗಳಲ್ಲಿ ಭಾಗವಹಿಸಿ ಯಶಸ್ವಿಯಾಗಬೇಕಾದರೆ ನಾವು ತರಬೇತಿ ಪಡೆಯಬೇಕು. ಅದಕ್ಕೆ ಈ ಕಾರ್ಯಕ್ರಮ ಪೂರಕ ಎಂದು ನಮ್ಮಿಂದ ಏನು ಸಹಾಯಬೇಕು ಅದನ್ನು ಮಾಡುವೆ ಎಂದು ಶುಭಹಾರೈಸಿದರು.
ಬಂಟರ ಯಾನೆ ನಾಡವರ ಮಾತೃ ಸಂಃಘದ ಉಪಾಧ್ಯಕ್ಷರು ಎ ಹೇಮನಾಥ್ ಶೆಟ್ಟಿ ಯವರು ಮಾತನಾಡಿ ವಿದ್ಯಾರ್ಥಿ ಬಂಟರ ಸಂಘದ ಅಧ್ಯಕ್ಷರು ಪವನ್ ಶೆಟ್ಟಿ ಕಂಬಲತ್ತಡ್ಡ ಮತ್ತು ತಂಡ ತನ್ನ ವಿದ್ಯಾರ್ಥಿ ಜೀವನದಲ್ಕಿಯೇ ಸಮಾಜದ ಇತರೇ ಯುವಕ ಯುವತಿಯರಿಗೆ ಉದ್ಯೋಗ ಭರವಸೆ ನೀಡುವ ನಿಟ್ಟಿನಲ್ಲಿ ‘ಭವಿಷ್ಯ’
ಕಾರ್ಯಕ್ರಮದ ಮೂಲಕ ಆರು ತಿಂಗಳ ಕಾಲದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿರುವುದು ಎಲ್ಲರೂ ಪ್ರಶಂಸೆ ಮಾಡ ಬೇಕಾದ ವಿಷಯ. ಇವರ ಈ ಉತ್ಸಾಹ ಮತ್ತು ಉತ್ತಮ ಕೆಲಸಕ್ಕೆ ನಮ್ಮ ವಯುಕ್ತಿಕ ಮತ್ತು ಬಂಟರ ಯಾನೆ ನಾಡವರ ಮಾತೃಸಂಘದ ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದರು.
ಸುಮಾರು 125 ವರುಷಗಳ ಹಿಂದೆಯೇ ಬಂಟ ಸಮಾಜದ ಹಿರಿಯರು ವಿದ್ಯಾಭ್ಯಾಸಕ್ಕೆ ಹೆಚ್ಚಿನ ಮಹತ್ವ ನೀಡುತ್ತಾ ಬಂದಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಪುತ್ತೂರು, ಮಂಗಳೂರು, ಉಡುಪಿ ಸೇರಿದಂತೆ ಹಲವು ಮುಖ್ಯ ಪಟ್ಟಣಗಳಲ್ಲಿ ಹಾಸ್ಟೆಲ್ ನಿರ್ಮಾಣ ಮಾಡಿ, ಬಂಟ ಸಮಾಜ ಮತ್ತು ಇತರೇ ಸಮಾಜದ ವಿದ್ಯಾರ್ಥಿಗಳಿಗೂ ಸಹಕಾರವನ್ನು ನೀಡಿದ್ದಾರೆ. ಅದನ್ನು ನಮ್ಮ ಈಗಿನ ವ್ಯವಸ್ಥೆ ಮುಂದುಚರಿಸುತ್ತಾ ಬಂದಿದೆ. ಅದನ್ನು ವಿದ್ಯಾರ್ಥಿ ಬಂಟರ ಸಂಘವೂ ಅದನ್ನು ಮುಂದುವರಿಸುತ್ತಿರುವುದು ತುಂಬಾ ಒಳ್ಳೆಯ ವಿಚಾರ. ಅವರ ಉತ್ತಮ ಕೆಲಸಕ್ಕೆ ಬೆಂಬಲವಾಗಿ ನಿಂತಿರುವ ಮತ್ತು ತರಬೇತಿ ನಡೆಸಿಕೊಡುವ ಭಾಗ್ಯೇಶ್ ರೈ ನೇತೃತ್ವದ ವಿದ್ಯಾಮಾತಾ ಫೌಂಡೇಶನ್ ಕೂಡಾ ಸಮಾಜದ ಮತ್ತು ಪುತ್ತೂರಿನ ಬೆಳವಣಿಗೆಗೆ ಒಂದು ಕೊಡುಗೆ ಎಂದು ಹೇಳಿ ಶುಭಹಾರೈಸಿದರು.
ವೇದಿಕೆಯಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘ ಪುತ್ತೂರು ತಾಲೂಕು ಸಮಿತಿ ಸಂಚಾಲಕರು ದಯಾನಂದ ರೈ ಮನವಳಿಕೆ, ನಿರ್ದೇಶಕರಾದ ದುರ್ಗಾಪ್ರಸಾದ್ ರೈ ಕುಂಬ್ರ, ವಿದ್ಯಾಮಾತಾ ಫೌಂಡೇಷನ್ ನ ಭಾಗ್ಯೇಶ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿ ಬಂಟರ ಸಂಘದ ಅಧ್ಯಕ್ಷರು ಪವನ್ ಶೆಟ್ಟಿ ಕಂಬಳತ್ತಡ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ವಿಕ್ರಮ್ ಆಳ್ವ ವಂದಿಸಿದರು.
ಉದ್ಘಾಟನಾ ಕಾರ್ಯಕ್ರಮದ ನಂತರ ತರಬೇತಿಗೆ ಆಯ್ಕೆ ಪ್ರಕ್ರಿಯೆ ನಡೆಯಿತು.
Previous Articleಕಟೀಲ್ ನಲ್ಲಿ ವಿಶ್ವ ಬಂಟರ ಸಾಂಸ್ಕೃತಿಕ ವೈಭವದ ಕರಪತ್ರ ಬಿಡುಗಡೆ