ಪ್ರತಿಷ್ಠಿತ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಸಾಂಸ್ಕೃತಿಕ ವಿನಿಮಯ ವಿಭಾಗದ ರಾಷ್ಟ್ರೀಯ ಉಪ ಕಮಿಷನರ್ ಆಗಿ ನೇಮಕಗೊಂಡಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ಹಾಗೂ ಯುವ ಬಂಟರ ಸಂಘ ಮೂಡುಬಿದಿರೆಯ ಗೌರವಾಧ್ಯಕ್ಷರಾದ ವಿವೇಕ್ ಆಳ್ವ ಅವರನ್ನು ಸಂಘದ ವತಿಯಿಂದ ಅಭಿನಂದಿಸಿ ಶುಭ ಹಾರೈಸಲಾಯಿತು. ಈ ಸಂಧರ್ಭದಲ್ಲಿ ಅಧ್ಯಕ್ಷರಾದ ಸಂದೀಪ್ ಶೆಟ್ಟಿ ಬೆಳುವಾಯಿ, ಉಪಾಧ್ಯಕ್ಷ ಸಂದೀಪ್ ಎಂ ಶೆಟ್ಟಿ ತೋಡಾರು, ಪ್ರಧಾನ ಕಾರ್ಯದರ್ಶಿ ರಮೇಶ್ ಶೆಟ್ಟಿ ಮಿಜಾರು, ಕೋಶಾಧಿಕಾರಿ ಭರತ್ ಶೆಟ್ಟಿ ಇರುವೈಲು, ಜೊತೆ ಕೋಶಾಧಿಕಾರಿ ಸಂತೋಷ್ ಶೆಟ್ಟಿ, ಧನಂಜಯ ಹಾಗೂ ಆಳ್ವಾಸ್ ಸಂಸ್ಥೆಯ ತಿಲಕ್ ಉಪಸ್ಥಿತರಿದ್ದರು






















































































































