ಬಂಟರ ಸಂಘ ಹೈದರಾಬಾದ್ ವತಿಯಿಂದ ಬಂಟ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ಜುಲೈ 5 ರಂದು ಸಂಜೆ 6 ಗಂಟೆಗೆ ಹೈದರಾಬಾದ್ ಲಕ್ಡಿಕಪುಲ್ ನಲ್ಲಿರುವ ಹೋಟೆಲ್ ಅಬೋಡೆಯಲ್ಲಿ ಸಂಘದ ಅಧ್ಯಕ್ಷ ಎಚ್ ಚಂದ್ರಶೇಖರ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಅದ್ದೂರಿಯಾಗಿ ನಡೆಯಿತು. ಈ ಕಾರ್ಯಕ್ರಮವನ್ನು ಹೈದರಾಬಾದ್ ಬಂಟರ ಸಂಘದ ಮಾಜಿ ಅಧ್ಯಕ್ಷ ಶಿರೂರು ಶಂಕರ್ ಶೆಟ್ಟಿ ಹಾಗೂ ಮುಖ್ಯ ಅತಿಥಿ ಕುಂದಾಪುರ ಯುವ ಬಂಟರ ಸಂಘದ ಸ್ಥಾಪಕಾಧ್ಯಕ್ಷ ಡಾ| ಅಂಪಾರು ನಿತ್ಯಾನಂದ ಶೆಟ್ಟಿಯವರು ದೀಪ ಬೆಳಗಿಸಿ ಉದ್ಘಾಟಿಸಿದರು.




ಹಿರಿಯ ಉದ್ಯಮಿ, ಸಮಾಜ ಸೇವಕರಾದ ಹೈದರಾಬಾದ್ ಬಂಟರ ಸಂಘದ ಮಾಜಿ ಅಧ್ಯಕ್ಷ ರತ್ನಾಕರ ರೈ ಹಾಗೂ ಗೀತಾ ರೈ ದಂಪತಿಗಳನ್ನು ಹಾಗೂ ಮುಖ್ಯ ಅತಿಥಿ ಡಾ| ಅಂಪಾರು ನಿತ್ಯಾನಂದ ಶೆಟ್ಟಿಯವರನ್ನು ಈ ಸಂಧರ್ಭದಲ್ಲಿ ಸನ್ಮಾನಿಸಿ ಗೌರವಿಸಿದರು. ಘನ ವೇದಿಕೆಯಲ್ಲಿ ಅಧ್ಯಕ್ಷರಾದ ಎಚ್ ಚಂದ್ರಶೇಖರ ಶೆಟ್ಟಿ, ಉಪಾಧ್ಯಕ್ಷ ಅಲ್ತಾರು ಜಯರಾಮ್ ಶೆಟ್ಟಿ, ಉಪಾಧ್ಯಕ್ಷೆ ಮಮತಾ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಕವಿತಾ ಪಿ ಶೆಟ್ಟಿ, ಕೋಶಾಧಿಕಾರಿ ರವಿ ಶೆಟ್ಟಿ, ಮಾಜಿ ಅಧ್ಯಕ್ಷರುಗಳಾದ ಬಿ ರಮೇಶ್ ಶೆಟ್ಟಿ, ಶಿರೂರು ಶಂಕರ್ ಶೆಟ್ಟಿ, ಯೋಗೀಶ್ ಶೆಟ್ಟಿ, ಶ್ರೀರಾಜ್ ಶೆಟ್ಟಿ, ಸಂಘದ ಸ್ಥಾಪಕಾಧ್ಯಕ್ಷರಾದ ಚಂದ್ರಶೇಖರ ಶೆಟ್ಟಿಯವರ ಸುಪುತ್ರ ರಾಮಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು. ಬಂಟರ ಸಂಫದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದು, ಕಾರ್ಯಕ್ರಮದ ಕೊನೆಯಲ್ಲಿ ಸಹಭೋಜನ ನಡೆಯಿತು.
























































































































