ಉದ್ಯಮಿ ಶಿರ್ವ ಅಟ್ಟಿಂಜ ದಿವಂಗತ ಶಂಭು ಶೆಟ್ಟಿ ಅವರ ಸ್ಮರಣಾರ್ಥ ಶಿರ್ವ ಬಂಟರ ಸಂಘದ ನೇತೃತ್ವದಲ್ಲಿ ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಸಹಯೋಗದೊಂದಿಗೆ ಉಡುಪಿ ಜಿಲ್ಲಾಸ್ಪತ್ರೆ ಹಾಗೂ ಪರಿಸರದ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಬೃಹತ್ ರಕ್ತದಾನ ಶಿಬಿರವು ಆಗಸ್ಟ್ 9ರಂದು ಶಿರ್ವ ಕೊಲ್ಲಬೆಟ್ಟು ಸಂಘಮಿತ್ರದಲ್ಲಿ ನಡೆಯಿತು. ಸಮಾಜಸೇವಕ ಮನೋಹರ ಶೆಟ್ಟಿ ಮಂದಾರ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಸಮಾಜಮುಖಿಯಾಗಿ ಸಾರ್ಥಕ ಬದುಕನ್ನು ಸಾಗಿಸಿದ ಶಂಭು ಶೆಟ್ಟಿ ಅವರ ಸ್ಮರಣಾರ್ಥ ಪರಿಸರದ ಸಂಘ ಸಂಸ್ಥೆಗಳು ರಕ್ತದಾನ ಶಿಬಿರವನ್ನು ಆಯೋಜಿಸಿರುವುದು ಶ್ಲಾಘನೀಯ ಎಂದರು.
ಉಡುಪಿಯ ನ್ಯಾಯವಾದಿ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿ, 90 ವರ್ಷಗಳ ಸಾರ್ಥಕ ಜೀವನ ನಡೆಸಿ ಸಮಾಜಕ್ಕಾಗಿ ತನ್ನದೇ ಆದ ಕೊಡುಗೆ ನೀಡಿದ ಶಂಭು ಶೆಟ್ಟಿಯವರ ಸ್ಮರಣಾರ್ಥ ನಡೆದ ಶಿಬಿರದ ಪ್ರಯೋಜನವನ್ನು ರಕ್ತದ ಅವಶ್ಯಕತೆ ಇದ್ದವರು ಪಡೆಯುವಂತಾಗಲಿ ಎಂದು ತಿಳಿಸಿದರು. ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಜನರಲ್ ಮ್ಯಾನೇಜರ್ ರಾಜೇಶ್ ಶೇರಿಗಾರ್ ಮತ್ತು ಉಡುಪಿ ಜಿಲ್ಲಾಸ್ಪತ್ರೆಯ ಡಾ. ವೀಣಾ ರಕ್ತದಾನದ ಮಹತ್ವದ ಬಗ್ಗೆ ತಿಳಿಸಿದರು. ಶಿರ್ವ ಬಂಟರ ಸಂಘದ ಅಧ್ಯಕ್ಷ ಕುತ್ಯಾರು ಸಾಯಿನಾಥ್ ಶೆಟ್ಟಿ ಮಾತನಾಡಿದರು.




ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ದಿl ಶಂಭು ಶೆಟ್ಟಿ ಅವರ ಪತ್ನಿ ಹೇಮಲತಾ ಶಂಭು ಶೆಟ್ಟಿ, ಪುತ್ರರಾದ ಸುಧೀರ್ ಶೆಟ್ಟಿ, ಪ್ರದೀಪ್ ಶೆಟ್ಟಿ, ಪುತ್ರಿ ಜಯಶ್ರೀ ಜಯಪಾಲ ಶೆಟ್ಟಿ, ಮಾಜಿ ಉಡುಪಿ ನಗರ ಸಭಾಧ್ಯಕ್ಷ ಕಿರಣ್ ಕುಮಾರ್, ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಶಿರ್ವ ನಡಿಬೆಟ್ಟು ಸಂಗೀತಾ ಹೆಗ್ಡೆ, ಕೊಲ್ಲಬೆಟ್ಟು ರವೀಂದ್ರ ಶೆಟ್ಟಿ, ಭಾಸ್ಕರ್ ಶೆಟ್ಟಿ, ಶಶಿಧರ ಶೆಟ್ಟಿ, ಬಿಜೆಪಿ ಕಾಪು ಮಂಡಲ ಅಧ್ಯಕ್ಷ ಜಿತೇಂದ್ರ ಶೆಟ್ಟಿ ಉದ್ಯಾವರ ಹಾಗೂ ಶಿಬಿರಕ್ಕೆ ಸಹಕರಿಸಿದ ಶಿರ್ವ ಮಹಿಳಾ ಮಂಡಲ, ಕುತ್ಯಾರು ಯುವಕ ಮಂಡಲ, ಆಲಯೆನ್ಸ್ ಕ್ಲಬ್ ಶಿರ್ವ, ಶಿರ್ವ ನಾರಾಯಣ ಗುರು ಮಂದಿರ, ಶ್ರೀ ಮಹಾಲಾಸ ನಾರಾಯಣಿ ಭಜನಾ ಮಂಡಳಿ, ಕುಲಾಲ ಸಂಘ, ವಿಶ್ವ ಬ್ರಾಹ್ಮಣ ಯುವ ಸಂಗಮ, ಕುತ್ಯಾರು ಉಳ್ಳಾಯ ಫ್ರೆಂಡ್ಸ್, ಮುದರಂಗಡಿ ಪಿಲಾರು ಸಾಂತೂರು ಜವಣೆರ್ ಮತ್ತಿತರ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸದಸ್ಯರು ರಕ್ತದಾನಿಗಳು ಉಪಸ್ಥಿತರಿದ್ದರು.

ಶಿರ್ವ ಬಂಟರ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ದೀಪಾ ಶೆಟ್ಟಿ ಸ್ವಾಗತಿಸಿ, ನಿರೂಪಿಸಿ ವಂದಿಸಿದರು. ರಕ್ತದಾನಿಗಳಿಂದ ಒಟ್ಟು 126 ಯೂನಿಟ್ ರಕ್ತ ಸಂಗ್ರಹವಾಯಿತು. ಶಿರ್ವ ಶ್ರೀ ಮಹಾಲಸಾ ನಾರಾಯಣೀ ಭಜನಾ ಮಂಡಳಿಯವರಿಂದ ಭಕ್ತಿ ಗಾಯನ ನಡೆಯಿತು.














































































































