
ನಮ್ಮ ಜೀವನ ವಿಧಾನವೇ ಸಂವಿಧಾನ. ಇದರ ಘನತೆ ಗೌರವವನ್ನು ಕಾಪಾಡಿಕೊಂಡು, ಅನುಷ್ಠಾನಗೊಳಿಸಿಕೊಂಡು ಹೋದಾಗ ಗಣರಾಜ್ಯ ದಿನಕ್ಕೆ ಅರ್ಥಬರಲು ಸಾಧ್ಯ. ಶಿಕ್ಷಣ ಕೇವಲ ಅಂಕ ಪಡೆಯುವುದಲ್ಲ. ಅದೊಂದು ಜವಾಬ್ದಾರಿ. ಉತ್ತಮ ನಾಗರಿಕನಾಗುವ ಸಂಕಲ್ಪ ತೊಟ್ಟಾಗ ನಮ್ಮ ದೇಶ ವಿಶ್ವಗುರುವಾಗಲು ಸಾಧ್ಯ ಎಂದು ಕಾರ್ಕಳ ರೋಟರಿ ಕ್ಲಬ್ಬಿನ ಅಂಗ ಸಂಸ್ಥೆ ಅನ್ಸ್ ಕಬ್ಬಿನ ಅಧ್ಯಕ್ಷೆಯಾಗಿರುವ ಶ್ರೀಮತಿ ಜಯಂತಿ ಎ ನಾಯಕ್ ಹೇಳಿದರು.


ಅವರು ಕಾರ್ಕಳ ಜ್ಞಾನಸುಧಾ ಕ್ರೀಡಾಂಗಣದಲ್ಲಿ ಜರುಗಿದ ೭೭ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು. ಇದೇ ಸಂದರ್ಭ ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಿ.ಇ,ಒ ದಿನೇಶ್ ಎಂ ಕೊಡವೂರ್, ಪಿ ಆರ್ ಒ. ಶ್ರೀಮತಿ ಜ್ಯೋತಿ ಪದ್ಮನಾಭ ಭಂಡಿ, ಉಪಪ್ರಾಂಶುಪಾಲ ಶ್ರೀ ಸಾಹಿತ್ಯ, ಪ್ರೌಢ ಶಾಲಾ ವಿಭಾಗದ ಉಪಪ್ರಾಂಶುಪಾಲೆ ಶ್ರೀಮತಿ ವಾಣಿ ಕೆ, ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕ ಶ್ರೀ ಸಂತೋಷ್ ನೆಲ್ಲಿಕಾರು ಕಾರ್ಯಕ್ರಮ ನಿರ್ವಹಸಿ ವಂದಿಸಿದರು.



















































































































