
ಪುಣೆ ಬಂಟರ ಸಂಘದ ವಾರ್ಷಿಕೊತ್ಸವ ಸಮಾರಂಭವು ಜನವರಿ 26ರಂದು ಬಾಣೇರ್ ನಲ್ಲಿರುವ ಪುಣೆ ಬಂಟರ ಭವನ, ಓಣಿಮಜಲು ಜಗನ್ನಾಥ್ ಶೆಟ್ಟಿ ಸಾಂಸ್ಕ್ರತಿಕ ಕೇಂದ್ರ ಲತಾ ಸುಧೀರ್ ಶೆಟ್ಟಿ ವೇದಿಕೆಯಲ್ಲಿ ಅಪರಾಹ್ನ ಗಂಟೆ 2.30ರಿಂದ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮ, ವೈವಿಧ್ಯಮಯ ನೃತ್ಯ, ನಾಟಕ, ಸಭಾ ಕಾರ್ಯಕ್ರಮ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಲಿದೆ. ಪುಣೆ ಬಂಟರ ಸಂಘದ ಗೌರವಾಧ್ಯಕ್ಷರಾದ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆಯವರ ಉಪಸ್ಥಿತಿಯಲ್ಲಿ ಅಧ್ಯಕ್ಷರಾದ ಅಜಿತ್ ಹೆಗ್ಡೆ ಕೆಂಜಾರು ಗುತ್ತುರವರ ಅದ್ಯಕ್ಷತೆಯಲ್ಲಿ ನಡೆಯಲಿರುವ ವಾರ್ಷಿಕೋತ್ಸವ ಸಂಭ್ರಮ ಸಭಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕಾಪು ಶ್ರೀ ಹೊಸ ಮಾರಿಗುಡಿ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರು ಮತ್ತು ಕಾಪು ಬಂಟರ ಸಂಘದ ಅಧ್ಯಕ್ಷರಾದ ವಾಸುದೇವ್ ಶೆಟ್ಟಿಯವರು ಆಗಮಿಸಲಿದ್ದಾರೆ. ಗೌರವ ಅತಿಥಿಗಳಾಗಿ ಬಜ್ಪೆ ಬಂಟರ ಸಂಘದ ಅಧ್ಯಕ್ಷರು, ಥಾಣೆ ಬಂಟರ ಸಂಘದ ಮಾಜಿ ಅಧ್ಯಕ್ಷರಾದ ವೇಣುಗೋಪಾಲ್ ಎಲ್ ಶೆಟ್ಟಿ ಮತ್ತು ಮುಂಬಯಿಯ ಮೆರಿಟ್ ಹಾಸ್ಪಿಟಾಲಿಟಿ ಸರ್ವಿಸಸ್ ಪ್ರೈ ಲಿಮಿಟೆಡ್ ನ ಸಿಎಂಡಿ ಅಶೋಕ್ ಶೆಟ್ಟಿಯವರು ಉಪಸ್ಥಿತರಿರುವರು. ಈ ಸಂದರ್ಭದಲ್ಲಿ ವರ್ಷಂಪ್ರತಿ ಕೊಡಮಾಡುವ ಜಿಎಂ ಶೆಟ್ಟಿ ಅತ್ಯುತ್ತಮ ಸಮಾಜ ಸೇವಾ ಸಾಧಕ ಪ್ರಶಸ್ತಿಯನ್ನು ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ಅಧ್ಯಕ್ಷ, ಪಿಂಪ್ರಿ ಚಿಂಚ್ವಾಡ್ ಮಹಾನಗರ ಪಾಲಿಕೆಯ ಮಾಜಿ ಸ್ಥಾಯಿ ಕಮಿಟಿ ಕಾರ್ಯಾಧ್ಯಕ್ಷರಾದ ಸಮಾಜ ಸೇವಕ ಜಗದೀಶ್ ಶೆಟ್ಟಿಯವರಿಗೆ ಪ್ರಧಾನ ಮಾಡಲಾಗುವುದು ಹಾಗೂ 2025 ನೇ ಸಾಲಿನ ಮಿಸ್ಸೆಸ್ ಇಂಡಿಯಾ ಪ್ರಶಸ್ತಿ ಮುಡಿಗೇರಿಸಿಕೊಂದ ಡಾ. ರಶ್ಮಾಎಂ ಶೆಟ್ಟಿಯವರಿಗೆ ಸನ್ಮಾನ ನಡೆಯಲಿರುವುದು. ಅಲ್ಲದೇ ಈ ಬಾರಿ ಪುಣೆ ಮಹಾನಗರ ಪಾಲಿಕೆಗೆ ನಡೆದ ಚುನಾವಣೆಯಲ್ಲಿ ಪರ್ವತಿ ನವಿಪೇಟ್ ವಿಭಾಗದದಿಂದ ಕಾರ್ಪೋರೇಟರ್ ಆಗಿ ಪ್ರಚಂಡ ಬಹುಮತದಿಂದ ಜಯಭೇರಿ ಗಳಿಸಿದ ಶ್ರೀಮತಿ ಲತಾ ಶೆಟ್ಟಿ ಮತ್ತು ವಿಶೇಷ ಆಕರ್ಷಣೆಯಾಗಿ ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯರಾಗಿ ಕಲರ್ಸ್ ಕನ್ನಡ ಟಿವಿಯ ಜನಪ್ರಿಯ ಬಿಗ್ ಬಾಸ್ 12 ಸೀಸನ್ ನಲ್ಲಿ ರನ್ನರ್ಸ್ ಪ್ರಶಸ್ತಿ ಪಡೆದ ರಕ್ಷಿತಾ ಶೆಟ್ಟಿಯವರನ್ನು ಗಣ್ಯರ ಸಮ್ಮುಖದಲ್ಲಿ ಸತ್ಕಾರಿಸಲಾಗುವುದು ಹಾಗೂ ಬಂಟ ಸಮಾಜದ ಪ್ರತಿಭಾವಂತ ಸಾಧಕರಿಗೆ ಸತ್ಕಾರ ನಡೆಯಲಿರುವುದು.

ಬಂಟರ ಸಂಘದ ವಾರ್ಷಿಕೋತ್ಸವ ಸಂಭ್ರಮದ ಕಾರ್ಯಕ್ರಮಗಳು ಅಪರಾಹ್ನ ಗಂಟೆ 2.30ರಿಂದ ಆರಂಭಗೊಳ್ಳಲಿದ್ದು, ಮನೋರಂಜನಾ ಕಾರ್ಯಕ್ರಮದ ಅಂಗವಾಗಿ ಸಂಘದ ಸದಸ್ಯರು ಮತ್ತು ಸಮಾಜ ಬಾಂಧವರಿಂದ ವಿವಿಧ ವೈವಿಧ್ಯಮಯ ನೃತ್ಯ ಕಾರ್ಯಕ್ರಮಗಳು ಪ್ರದರ್ಶನಗೊಳ್ಳಲಿದೆ. ನಂತರ ತ್ಯಾಗ ಮತ್ತು ಶೌರ್ಯವನ್ನು ಪ್ರತಿಬಿಂಬಿಸುವ ಸಿಂಧೂರ್ ಎಂಬ ನೃತ್ಯ ರೂಪಕ ಪ್ರದರ್ಶನಗೊಳ್ಳಲಿದೆ. ಸಂಜೆ ಗಂಟೆ 5.30 ಕ್ಕೆ ಸರಿಯಾಗಿ ಸಭಾ ಕಾರ್ಯಕ್ರಮ ನಡೆಯಲಿದೆ. ನಂತರ ಪ್ರೀತಿ ಭೋಜನ ಜರಗಲಿರುವುದು. ಬಂಟರ ಸಂಘ ಪುಣೆ ಇದರ ಸುವರ್ಣ ಮಹೋತ್ಸವ ವರ್ಷದ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಪಾಲ್ಗೊಂಡು ಸಮಾರಂಭವನ್ನು ಯಶಸ್ವಿಗೊಳಿಸುವಂತೆ ಗೌರವಾಧ್ಯಕ್ಷರಾದ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ, ಅಧ್ಯಕ್ಷರಾದ ಅಜಿತ್ ಹೆಗ್ಡೆ ಕೆಂಜಾರು ಗುತ್ತು, ಉಪಾಧ್ಯಕ್ಷರುಗಳಾದ ವಿಶ್ವನಾಥ್ ಶೆಟ್ಟಿ ಮತ್ತು ರಾಮಕೃಷ್ಣ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸುಧೀರ್ ಶೆಟ್ಟಿ ಕಣಂಜಾರು, ಕೋಶಾಧಿಕಾರಿ ಪ್ರಶಾಂತ್ ಶೆಟ್ಟಿ ಹೆರ್ಡೆಬೀಡು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಮ್ಮಿ ಎ ಹೆಗ್ಡೆ, ಜೊತೆ ಕಾರ್ಯದರ್ಶಿ ಮತ್ತು ಕಲ್ಪವೃಕ್ಷ ತ್ರೈಮಾಸಿಕ ಪತ್ರಿಕೆಯ ಕಾರ್ಯಾಧ್ಯಕ್ಷರಾದ ಚಂದ್ರಶೇಖರ್ ಶೆಟ್ಟಿ ನಿಟ್ಟೆ, ಜೊತೆ ಕೋಶಾಧಿಕಾರಿ ಸುನಿಲ್ ಶೆಟ್ಟಿ, ಕಟ್ಟಡ ಸಮಿತಿಯ ಪ್ರಧಾನ ಸಲಹೆಗಾರರಾದ ಮೋಹನ್ ಶೆಟ್ಟಿ, ಕಲ್ಪವೃಕ್ಷ ಸಮಾಜ ಕಲ್ಯಾಣ ಸಮಿತಿಯ ಸಲಹೆಗಾರರಾದ ಸತೀಶ್ ಶೆಟ್ಟಿ, ಸಾಂಸ್ಕ್ರತಿಕ ವಿಭಾಗದ ಕಾರ್ಯಾಧ್ಯಕ್ಷರಾದ ಎರ್ಮಾಳ್ ಚಂದ್ರಹಾಸ್ ಶೆಟ್ಟಿ, ಕಲ್ಪವೃಕ್ಷ ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷರಾದ ಪ್ರವೀಣ್ ಶೆಟ್ಟಿ ಪುತ್ತೂರು, ಭವನ ಅಭಿವೃದ್ದಿ ಸಮಿತಿಯ ಕಾರ್ಯಾಧ್ಯಕ್ಷರಾದ ಗಣೇಶ್ ಹೆಗ್ಡೆ ಪುಣ್ಚೂರ್, ಸಾರ್ವಜನಿಕ ಸಂಪರ್ಕ ಮತ್ತು ನಾಯಕತ್ವ ಅಭಿವೃದ್ದಿ ಸಮಿತಿಯ ಕಾರ್ಯಾಧ್ಯಕ್ಷರಾದ ಪ್ರಭಾಕರ್ ವಿ ಶೆಟ್ಟಿ ತಮನ್ನಾ, ಸದಸ್ಯ ನೋಂದಣಿ ಸಮಿತಿಯ ಕಾರ್ಯಾಧ್ಯಕ್ಷರಾದ ಶಶೀಂದ್ರ ಶೆಟ್ಟಿ, ಮ್ಯಾರೇಜ್ ಬ್ಯೂರೋ ಸಮಿತಿಯ ಕಾರ್ಯಾಧ್ಯಕ್ಷರಾದ ಮಾಧವ್ ಶೆಟ್ಟಿ, ಕಾನೂನು ವಿಭಾಗದ ಕಾರ್ಯಾಧ್ಯಕ್ಷರಾದ ಗಣೇಶ್ ಶೆಟ್ಟಿ, ವಿಹಾರ ಕೂಟ ಸಮಿತಿಯ ಕಾರ್ಯಾಧ್ಯಕ್ಷರಾದ ದಿನೇಶ್ ಶೆಟ್ಟಿ ಕಳತ್ತೂರು, ಕ್ರೀಡಾ ಕಾರ್ಯಾಧ್ಯಕ್ಷರಾದ ವಿವೇಕಾನಂದ ಶೆಟ್ಟಿ ಅವರ್ಸೆ ಇರಾಮಕ್ಕಿ, ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣ ಕಾರ್ಯಾಧ್ಯಕ್ಷ ಸುನಿಲ್ ಪಿ ಶೆಟ್ಟಿ, ಕ್ಯಾಟರಿಂಗ್ ಸಮಿತಿಯ ಕಾರ್ಯಾಧ್ಯಕ್ಷ ರವಿ ಶೆಟ್ಟಿ ಕಾಪು, ಧಾರ್ಮಿಕ ಆಚರಣೆಗಳ ಸಮಿತಿಯ ಕಾರ್ಯಾಧ್ಯಕ್ಷರಾದ ಶೇಖರ್ ಸಿ ಶೆಟ್ಟಿ, ಈವೆಂಟ್ ಮ್ಯಾನೇಜ್ಮೆಂಟ್ ಕಾರ್ಯಾಧ್ಯಕ್ಷ ಗಣೇಶ್ ಪೂಂಜಾ, ಯುವ ವಿಭಾಗದ ಸಮನ್ವಯಕ ಜನ ಸಂಪರ್ಕಾಧಿಕಾರಿ ರೋನಕ್ ಜೆ ಶೆಟ್ಟಿ, ಪಿಂಪ್ರಿ ಚಿಂಚ್ವಾಡ್ ಸಮನ್ವಯಕ ರಾಕೇಶ್ ಶೆಟ್ಟಿ ಬೆಳ್ಳಾರೆ ಮತ್ತು ಎರ್ಮಾಳ್ ಬಾಲಚಂದ್ರ ಶೆಟ್ಟಿ, ವಿಭಾಗದ ಉಪಾಧ್ಯಕ್ಷೆಯರುಗಳಾದ ಸಂಧ್ಯಾ ಆರ್ ಶೆಟ್ಟಿ, ದಿವ್ಯಾ ಎಸ್ ಶೆಟ್ಟಿ, ಕಾರ್ಯದರ್ಶಿ ನೀನಾ ಬಿ ಶೆಟ್ಟಿ, ಕೋಶಾಧಿಕಾರಿ ವೀಣಾ ಪಿ ಶೆಟ್ಟಿ, ಜೊತೆ ಕಾರ್ಯದರ್ಶಿ ನೈನಾ ಜೆ ಶೆಟ್ಟಿ, ಜೊತೆ ಕೋಶಾಧಿಕಾರಿ ನಿವೇದಿತಾ ಎಸ್ ಶೆಟ್ಟಿ, ಸಾಂಸ್ಕ್ರತಿಕ ಕಾರ್ಯಾಧ್ಯಕ್ಷೆ ಸಾರಿಕಾ ಸಿ ಶೆಟ್ಟಿ, ಕ್ರೀಡಾ ಕಾರ್ಯಾಧ್ಯಕ್ಷೆ ವಿನಯಾ ಯು ಶೆಟ್ಟಿ, ಸಾಂಸ್ಕ್ರತಿಕ ಉಪ ಕಾರ್ಯಾಧ್ಯಕ್ಷೆ ಆಶಾ ಪಿ ಶೆಟ್ಟಿ, ಧಾರ್ಮಿಕ ಆಚರಣೆಗಳ ಕಾರ್ಯಾಧ್ಯಕ್ಷೆ ಗೀತಾ ಜೆ ಶೆಟ್ಟಿ, ಸಮಾಜ ಕಲ್ಯಾಣ ಕಾರ್ಯಾಧ್ಯಕ್ಷೆ ಗೀತಾ ಅರ್ ಶೆಟ್ಟಿ, ಕ್ರೀಡಾ ಉಪ ಕಾರ್ಯಾಧ್ಯಕ್ಷೆ ರೇಷ್ಮಾ ಎಸ್ ಶೆಟ್ಟಿ, ಸದಸ್ಯ ನೋಂದಣಿ ಸಮಿತಿ ಕಾರ್ಯಾಧ್ಯಕ್ಷೆ ಜ್ಯೋತಿ ಎಸ್ ಭಂಡಾರಿ, ಮಾಧ್ಯಮ ಕಾರ್ಯಾಧ್ಯಕ್ಷೆ ಗೀತಾ ವಿ ಶೆಟ್ಟಿ, ಜನ ಸಂಪರ್ಕಾಧಿಕಾರಿ ನೀನಾ ಬಿ ರೈ, ಮ್ಯಾರೇಜ್ ಬ್ಯೂರೋ ಕಾರ್ಯಾಧ್ಯಕ್ಷೆ ವೀಣಾ ಪಿ ಶೆಟ್ಟಿ, ಆಹ್ವಾನಿತ ಸದಸ್ಯೆ ನಂದಿನಿ ಡಿ ಹೆಗ್ಡೆ, ಯುವ ವಿಭಾಗದ ಕಾರ್ಯಾಧ್ಯಕ್ಷರಾದ ಅಭಿನಂದನ್ ಶೆಟ್ಟಿ, ದಕ್ಷಿಣ, ಉತ್ತರ, ಪೂರ್ವ, ಪಶ್ಚಿಮ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರುಗಳಾದ ಸುಧಾಕರ್ ಶೆಟ್ಟಿ, ನಾರಾಯಣ ಹೆಗ್ಡೆ, ಸಂದೇಶ್ ಶೆಟ್ಟಿ, ಪ್ರಕಾಶ್ ಶೆಟ್ಟಿ, ಕಾರ್ಯಾಧ್ಯಕ್ಷೆಯರುಗಳಾದ ವಿನೋದಾ ಶೆಟ್ಟಿ, ಪ್ರೇಮಾ ಅರ್ ಶೆಟ್ಟಿ, ಶಾಲಿನಿ ಎಂ ಶೆಟ್ಟಿ, ನಯನಾ ಸಿ ಶೆಟ್ಟಿ, ಎಲ್ಲಾ ಸಮಿತಿಗಳು, ಮಹಿಳಾ ವಿಭಾಗ, ಯುವ ವಿಭಾಗ, ಪ್ರಾದೇಶಿಕ ಸಮಿತಿಯ ಪದಾಧಿಕಾರಿಗಳು, ಸದಸ್ಯರುಗಳು ವಿನಂತಿಸಿಕೊಂಡಿದ್ದಾರೆ. ಕಾರ್ಯಕ್ರಮದ ದಿನದಂದು ಬಂಟರ ಭವನಕ್ಕೆ ಬಾಲಾಜಿ ನಗರದಿಂದ, ಕಾತ್ರಜ್, ವಡಗಾಂವ್, ವಾರ್ಜೆ ಚಾಂದಿನಿ ಚೌಕ್ ಮುಖಾಂತರ ಬಸ್ಸಿನ ವ್ಯವಸ್ತೆ ಮಾಡಲಾಗಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ. 

ವಾರ್ಷಿಕೋತ್ಸವ ಸಂಭ್ರಮದಲ್ಲಿ ಬಂಟರ ಸಂಘ ಪುಣೆ : 51 ವರ್ಷಗಳ ಹಿಂದೆ ಪ್ರಾರಂಭವಾದ ಬಂಟರ ಸಂಘ ಪುಣೆ ಸಮಾಜಮುಖಿ ಚಿಂತನೆಯೊಂದಿಗೆ, ಅನೇಕಾನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜದ ಆಸಕ್ತರಿಗೆ ಹಾಗೂ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಬೆನ್ನೆಲುಬಾಗಿ ನಿಂತು, ಶಿಸ್ತುಬದ್ದವಾದ ಸಂಘಟನಾ ಚತುರರ, ಹೃದಯ ವೈಶಾಲ್ಯದ ಸಜ್ಜನರ, ಯುವಕರ, ಮಹಿಳೆಯರ, ಸತ್ ಚಿಂತನೆಯ ಪ್ರತೀಕವಾಗಿ ಪುಣೆ ಬಂಟರ ಮಾತೃ ಸಂಘ ಎಂಬ ಹೆಮ್ಮೆಯ ಸಂಸ್ಥೆಯಾಗಿದೆ. ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆಯವರು ಪುಣೆ ಬಂಟರ ಭವನದ ರೂವಾರಿಯಾಗಿ ಭವ್ಯ ರಮಣೀಯ, ಸುಂದರ ಶಿಲಾನ್ಯಾಸ, ವಾಸ್ತುಶಿಲ್ಪದೊಂದಿಗೆ ಜಗತ್ತಿನೆಲ್ಲೆಡೆ ಪ್ರಸಿದ್ದಿಯನ್ನು ಪಡೆದು ಪುಣೆ ಮುಂಬೈ ಮಹಾಮಾರ್ಗದ ಹತ್ತಿರ ಬಾಣೇರ್ ನಲ್ಲಿ ಭವನ ರಾರಾಜಿಸುತ್ತಿದೆ. ಸಾಮಾಜಿಕ ಚಿಂತನೆಯ ಮಾಜಿ ಅಧ್ಯಕ್ಷರುಗಳು, ಸಮಾಜದ ಹಿರಿಯರು, ಮಹಾದಾನಿಗಳು, ದಾನಿಗಳು ಮತ್ತು ಸಮಾಜ ಬಾಂಧವರ ನೆರವಿನಿಂದ ತಲೆ ಎತ್ತಿ ನಿಂತಿರುವ ಭವ್ಯ ಬಂಟರ ಭವನ ಪುಣೆ ಬಂಟರ ಹೆಮ್ಮೆಯ ದ್ಯೋತಕವಾಗಿದೆ. ಕಳೆದ ವರ್ಷ ಸಂತೋಷ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಸುವರ್ಣ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಿಕೊಂಡ ಸಂಘವು ಹಲವಾರು ಅರ್ಥಪೂರ್ಣ, ಸಮಾಜಮುಖಿಯಾದ ಕಾರ್ಯ ಯೋಜನೆಗಳ ಮೂಲಕ ಮಾದರಿಯಾಗಿ ಪ್ರಸಿದ್ದಿಯನ್ನು ಪಡೆದಿದೆ. ಶಕುಂತಲಾ ಜಗನ್ನಾಥ್ ಶೆಟ್ಟಿ ಕಲ್ಪವೃಕ್ಷ ಸಮಾಜ ಕಲ್ಯಾಣ ಸಮಿತಿಯ ಎಲ್ಲಾ ದಾನಿಗಳು ವಿದ್ಯಾದಾತ, ಅನ್ನದಾತ, ಆರೋಗ್ಯದಾತ, ಆಶ್ರಯದಾತ ಹಾಗೂ ಕ್ರೀಡಾದಾತ ಯೋಜನೆಯ ದಾನಿಗಳು ಮತ್ತು ಮಾರ್ಗದರ್ಶಿಗಳು ಹಿರಿಯರು ಹಾಕಿ ಕೊಟ್ಟ ಸಂಪ್ರದಾಯ, ಸಂಸ್ಕಾರ ಮತ್ತು ಬಂಟ ಸಮಾಜದ ಸಂಸ್ಕ್ರತಿಗೆ ಅನುಗುಣವಾಗಿ ಸಂಘದ ಕಾರ್ಯ ಚಟುವಟಿಕೆಗಳು ನಡೆಯುತ್ತಿದ್ದು, ಮಾಜಿ ಅಧ್ಯಕ್ಷರುಗಳು ಬೆಳೆಸಿದ ಸಂಘದ ಭವ್ಯ ಪರಂಪರೆ ಮತ್ತು ಭವನದ ವೈಭವವೇ ಪುಣೆ ಬಂಟರ ಗೌರವವನ್ನು ಇಮ್ಮಡಿಗೊಳಿಸಿದೆ. ಇನ್ನೂ ಹಲವಾರು ವಿವಿಧ ಯೋಜನೆ, ಕಾರ್ಯಕ್ರಮಗಳನ್ನು ಸಮಾಜದ ಅಭಿವೃದ್ದಿಗೋಸ್ಕರ ಸಿದ್ದಪಡಿಸುತ್ತಿದ್ದು ಹಿರಿಕಿರಿಯರ ಒಮ್ಮತದೊಂದಿಗೆ ಕಾರ್ಯಪೃವತ್ತರಾಗಿದ್ದಾರೆ. ಬಂಟರ ಸಂಘದ ವಾರ್ಷಿಕ ಸ್ನೇಹ ಸಮ್ಮಿಲನ ಕಾರ್ಯಕ್ರಮವಾದ ವಾರ್ಷಿಕೋತ್ಸವ ಸಂಭ್ರಮ ಜನವರಿ 26ರಂದು ನಡೆಯಲಿದೆ. ಸಮಾಜ ಬಾಂಧವರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ವಿನಂತಿ.
ಚಿತ್ರ, ವರದಿ : ಹರೀಶ್ ಮೂಡಬಿದ್ರಿ ಪುಣೆ



















































































































