ವಿಜಯ ಬ್ಯಾಂಕ್ ನ ನಿವೃತ್ತ ಅಧಿಕಾರಿ ಪುತ್ತೂರು ಮೂಲದ ಅಗರಿ ಮೋಹನ್ ದಾಸ್ ಭಂಡಾರಿ ಅವರು ಅ. 5ರಂದು ರಾತ್ರಿ ಬೆಂಗಳೂರಿನ ಸ್ವಗೃಹದಲ್ಲಿ ಹೃದಯಘಾತದಿಂದ ನಿಧನರಾದರು. ಮೃತರು ಪತ್ನಿ ಶಕುಂತಲಾ ಭಂಡಾರಿ, ಪುತ್ರಿಯರಾದ ಭವ್ಯ, ದಿವ್ಯ, ಅಳಿಯಂದಿರಾದ ನಿತಿನ್ ರೈ, ವಿಜಯ್ ಶೆಟ್ಟಿ, ಸಹೋದರರಾದ ಕರ್ನಲ್ ಎ ಜೆ ಭಂಡಾರಿ, ಸಹಕಾರಿ ಧುರೀಣ ದಿ. ಅಗರಿ ಜಗಜೀವನ್ ಭಂಡಾರಿ, ಆರ್.ಬಿ.ಐ ನ ಮಾಜಿ ನಿರ್ದೇಶಕ ಸಹಕಾರ ರತ್ನ ಅಗರಿ ನವೀನ್ ಭಂಡಾರಿ, ಅಗರಿ ಭಗವಾನ್ ದಾಸ್ ಭಂಡಾರಿಯವರನ್ನು ಅಗಲಿದ್ದಾರೆ.

ಮೋಹನ್ ದಾಸ್ ಭಂಡಾರಿ ಅವರು ದೆಹಲಿ, ಜೆಮ್ಶೆಡ್ ಪುರ, ಮದ್ರಾಸ್, ಕೊಲ್ಕತ್ತಾ, ಬೆಂಗಳೂರು, ಹೊಸೂರು, ಮೂಡಲಪಾಳ್ಯ, ದೊಮ್ಮಲೂರು ಸೇರಿದಂತೆ ವಿಜಯ ಬ್ಯಾಂಕಿನಲ್ಲಿ 35 ವರ್ಷ ಕಾಲ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕರಾಗಿದ್ದ ಭಂಡಾರಿಯವರು ಭಾಂಧವ್ಯ ಕ್ರೆಡಿಟ್ ಸಹಕಾರಿ ಲಿಮಿಟೆಡ್ ಎಂಬ ಸೊಸೈಟಿ ಬ್ಯಾಂಕ್ ಬೆಂಗಳೂರಿನಲ್ಲಿ ಸ್ಥಾಪಿಸಿ ಅದರ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.