ಯಕ್ಷಧ್ರುವ ಪಟ್ಲ ಫೌಂಡೇಶನ್ ನ ದೆಹಲಿ ಘಟಕದ ದಶಮ ಸಂಭ್ರಮ ದೆಹಲಿಯ ಕರ್ನಾಟಕ ಸಂಘದ ಸಭಾಂಗಣದಲ್ಲಿ ನೆರವೇರಿತು. ದೆಹಲಿಯ ಸಂಸದರಾದ ಭಾನ್ಸುರಿ ಸ್ವರಾಜ್ ಸಮಾರಂಭವನ್ನು ಉದ್ಘಾಟಿಸಿ ಯಕ್ಷಧ್ರುವ ಪಟ್ಲ ಫೌಂಡೇಶನ್ನಿನ ಕಾರ್ಯ ಯೋಜನೆಗಳನ್ನು ಮತ್ತು ಪಟ್ಲ ಸತೀಶ್ ಶೆಟ್ಟಿಯವರಿಗೆ ಕಲಾವಿದರ ಮೇಲಿರುವ ಕಾಳಜಿಯನ್ನು ಮುಕ್ತ ಕಂಠದಿಂದ ಪ್ರಶಂಸಿಸಿ ತನ್ನ ಅಧಿಕಾರ ವ್ಯಾಪ್ತಿಯಲ್ಲಿ ಪಟ್ಲ ಟ್ರಸ್ಟ್ ಫೌಂಡೇಶನ್ ಗೆ ಪೂರ್ಣ ಪ್ರಮಾಣದ ಸಹಕಾರದ ಭರವಸೆಯನ್ನು ನೀಡಿದರು. ಪಟ್ಲ ಫೌಂಡೇಶನ್ ನ ದೆಹಲಿ ಘಟಕದ ಅಧ್ಯಕ್ಷರಾದ ವಸಂತ ಶೆಟ್ಟಿ ಬೆಳ್ಳಾರೆಯವರು ಅಧ್ಯಕ್ಷತೆ ವಹಿಸಿದ್ದರು.

ಸಮಾರಂಭದಲ್ಲಿ ಅತಿಥಿಗಳಾಗಿ ಜಮ್ಮು ಕಾಶ್ಮೀರ ಸರ್ಕಾರದ ಪ್ರಿನ್ಸಿಪಾಲ್ ಸೆಕ್ರೆಟರಿ ರಾಜೇಶ್ ಪ್ರಸಾದ್, ಐಎಎಸ್ ಸಿಬಿಐಯ ಜಂಟಿ ನಿರ್ದೇಶಕ ಅಶ್ವಿನ್ ಶೇನ್ವಿ ಐಪಿಎಸ್, ಸುಳ್ಯ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ, ಪಟ್ಲ ಟ್ರಸ್ಟ್ ನ ಮಹಾದಾನಿ ಶಶಿಧರ ಶೆಟ್ಟಿ ಬರೋಡ, ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ದೆಹಲಿಯ ಪ್ರಸಿಧ್ಧ ಉದ್ಯಮಿಗಳಾದ ವಿವೇಕ್ ಅಗರ್ವಾಲ್, ಶ್ರೀಮತಿ ದೀಪ್ತಿ ಶರ್ಮ, ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ನಾಗರಾಜ್, ಕಾರ್ಯದರ್ಶಿ ರಾಧಾಕೃಷ್ಣ, ಪಟ್ಲ ಫೌಂಡೇಶನ್ ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್, ಕೋಶಾಧಿಕಾರಿ ಸಿಎ ಸುದೇಶ್ ಕುಮಾರ್ ರೈ ಭಾಗವಹಿಸಿದರು. ಪಾವಂಜೆ ಮೇಳದ ಖ್ಯಾತ ಕಲಾವಿದರಾದ ರಾಧಾಕೃಷ್ಣ ನಾವಡರವರನ್ನು ದೆಹಲಿ ಘಟಕದ ಪರವಾಗಿ ಸನ್ಮಾನಿಸಲಾಯಿತು.
ಪಟ್ಲ ಫೌಂಡೇಶನ್ ನ ಕೇಂದ್ರೀಯ ಸಮಿತಿಯ ಪದಾಧಿಕಾರಿಗಳಾದ ಪ್ರದೀಪ ಆಳ್ವ ಕದ್ರಿ, ರವಿಚಂದ್ರ ಶೆಟ್ಟಿ ಅಶೋಕನಗರ, ಸಿಎ ವೃಂದಾ ಕೊನ್ನಾರ್, ಟ್ರಸ್ಟಿಗಳಾದ ಚರಣ್ ಶೆಟ್ಟಿ ಸುರತ್ಕಲ್, ಮುಂಬೈ ಘಟಕದ ಕರ್ನೂರ್ ಮೋಹನ್ ರೈ, ಮಂಗಳೂರು ಘಟಕದ ಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ಪಟ್ಲ ಸತೀಶ್ ಶೆಟ್ಟಿಯವರ ಸಾರಥ್ಯದಲ್ಲಿ ತೆಂಕು ಬಡಗು ಕಲಾವಿದರಿಂದ ಕೀಚಕ ವಧೆ ಯಕ್ಷಗಾನ ಪ್ರದರ್ಶನಗೊಂಡಿತು.
		




































































































