ಕಾಯಕವೇ ಕೈಲಾಸ ಎಂದು ನಂಬಿರುವ ರಾಜೇಂದ್ರ ವಿ ಶೆಟ್ಟಿಯವರು ಹುಬ್ಬಳ್ಳಿಯಲ್ಲಿ ನೆಲೆಸಿ ಪಂಜುರ್ಲಿ ಗ್ರೂಪ್ ಆಫ್ ಹೋಟೆಲ್ಸ್ ನ ಸಂಸ್ಥಾಪಕರಾಗಿ ಸಮಾಜಸೇವೆ ಮಾಡುತ್ತಾ ಬರುತ್ತಿದ್ದಾರೆ. ಸಾವಿರಾರು ನೌಕರ ವೃಂದಕ್ಕೆ ಅನ್ನದಾತರಾಗಿ, ಓರ್ವ ಅಪ್ಪಟ ದೇಶಪ್ರೇಮಿಯಾಗಿ, ನಮ್ಮ ಸಂಸ್ಕೃತಿ ಆಚಾರ ವಿಚಾರ ಬೆಳೆಸುವಲ್ಲಿ ಕಿರಿಯರಿಗೆ ಮಾರ್ಗದರ್ಶಕರಾಗಿ, ಹಿರಿಯರಿಗೆ ಸದಾ ಗೌರವ ಕೊಡುವ ರಾಜೇಂದ್ರ ಶೆಟ್ಟರಿಗೆ ಭಗವಂತ ಸುಖ, ಶಾಂತಿ, ನೆಮ್ಮದಿ, ಐಶ್ವರ್ಯ, ಆರೋಗ್ಯ, ಸಕಲ ಸಂಪತ್ತನ್ನು ನೀಡಿ ಹರಸಲಿ ಎಂದು ಸಮಸ್ತ ಬಂಟ ಸಮಾಜದ ಪರವಾಗಿ ಶುಭ ಕೋರುತ್ತಿದ್ದೇವೆ.
