ಓನ್ಲಿ ಬಂಟ್ಸ್ ಆರ್ ಅಲ್ಲೋವ್ಡ್ ಫೇಸ್ಬುಕ್ ಬಳಗದ ಎಂಟನೇ ವಾರ್ಷಿಕೋತ್ಸವದ ಪ್ರಯುಕ್ತ ಸೆಪ್ಟೆಂಬರ್ 14 ರಂದು ಅಪರಾಹ್ನ 2.30 ರಿಂದ ಸಾಂತಾಕ್ರೂಜ್ ಬಿಲ್ಲವರ ಭವನದಲ್ಲಿ ಸಾಹಿತಿ, ಯಕ್ಷಗಾನ ಪ್ರಸಂಗಕರ್ತ ಮಹಾಬಲ ಆಳ್ವ ರಚಿಸಿರುವ ‘ಜ್ವಾಲಾ ಮೋಹಿನಿ’ ಯಕ್ಷಗಾನ ಪ್ರಸಂಗವು ಗುರು ನಾರಾಯಣ ಯಕ್ಷಗಾನ ಮಂಡಳಿ ಸಾಂತಾಕ್ರೂಸ್ ಮುಂಬೈ ಇವರ ಸಂಯೋಜನೆಯಲ್ಲಿ ಪ್ರದರ್ಶನಗೊಳ್ಳಲಿದೆ.

ಬಳಗದ ನಿರ್ವಾಹಕರಾದ ಪ್ರವೀಣ್ ಕಯ್ಯ, ಕಾಂತಿ ಶೆಟ್ಟಿ ಮುಂದಾಳತ್ವದಲ್ಲಿ ಕೂಟದ ಸರ್ವ ಸದಸ್ಯರ ಸಹಯೋಗದೊಂದಿಗೆ ನಡೆಯಲಿರುವ ಯಕ್ಷಗಾನ ಪ್ರದರ್ಶನದ ಹಿಮ್ಮೇಳ ಮುಮ್ಮೇಳದಲ್ಲಿ ನಗರದ ಪ್ರಸಿದ್ಧ ಹಾಗೂ ಪ್ರಬುದ್ಧ ಕಲಾವಿದರು ಭಾಗವಹಿಸಲಿದ್ದಾರೆ. ಸದಸ್ಯರು, ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸುವಂತೆ ಬಳಗದ ಪರವಾಗಿ ನಿರ್ವಾಹಕರು ಮತ್ತು ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.