ರೋಟರಿ ಕ್ಲಬ್ ಮಂಗಳೂರು ಕೋಸ್ಟಲ್ ನ ರೋಟರಿ ಗವರ್ನರ್ ರೋ. ರಾಮಕೃಷ್ಣ ಅವರು ಸುರತ್ಕಲ್ ಗೆ ಅಧಿಕೃತ ಭೇಟಿಯ ಸಂದರ್ಭದಲ್ಲಿ ಸುರತ್ಕಲ್ ನಲ್ಲಿರುವ ಅಭಿಷ್ ಕಟ್ಟಡದಲ್ಲಿರುವ ಚಾವಡಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದರು. ಇತ್ತೀಚೆಗೆ ಅಸ್ತಿತ್ವಕ್ಕೆ ಬಂದ ರೋಟರಿ ಕ್ಲಬ್ ಮಂಗಳೂರು ಕೋಸ್ಟಲ್ ನ ಸಾಧನೆಯನ್ನು ಕೊಂಡಾಡಿದರು. ಇತ್ತೀಚೆಗೆ ನಡೆದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ರೋಟರಿ ಕ್ಲಬ್ ಚಾಂಪ್ಯನ್ ಆಗಿರುವುದನ್ನು ಶ್ಲಾಘಿಸಿದರು. ಸಮಾಜ ಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಬಾಳ ಜಗನ್ನಾಥ ಶೆಟ್ಟಿ ಹಾಗು ಕಟ್ಟಬೀಡು ಭಾಸ್ಕರ ರೈಯವರನ್ನು ಪತ್ರಿಕೋದ್ಯಮದಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಅವರನ್ನು ಸನ್ಮಾನಿಸಲಾಯಿತು.

ರೋಟರಿ ಜಿಲ್ಲೆ 3181ರ ಜಿಲ್ಲಾ ಗವರ್ನರ್ ರೋ. ರಾಮಕೃಷ್ಣ ಪಿ.ಕೆ, ಅಸಿಸ್ಟೆಂಟ್ ಗವರ್ನರ್ ಚಿನ್ನಗಿರಿ ಗೌಡ, ಸಂದೀಪ್ ರಾವ್ ಇಡ್ಯ, ಕ್ಲಬ್ಬಿನ ಅಧ್ಯಕ್ಷರಾದ ಸುಭೋದ್ ಕುಮಾರ್ ದಾಸ್, ಕಾರ್ಯದರ್ಶಿ ಕಿರಣ್ ಪ್ರಸಾದ್ ರೈ, ನವೀನ್ ಇಡ್ಯಾ, ಜಯಕುಮಾರ್ ಹಾಗೂ ಸುಧಾಕರ್ ಸಾಲ್ಯಾನ್ ಉಪಸ್ಥಿತರಿದ್ದರು. ಕೃತಿಕಾ ರೈ ಹಾಗೂ ರೋ. ಪೂರ್ಣ ಸುಧಾಕರ ಕಾರ್ಯಕ್ರಮ ನಿರೂಪಿಸಿದರು.