ಮಂಗಳೂರು – ಮಳೆಗಾಲ ಬರುವಾಗ ತಂಪಾದ ವಾತಾವರಣ, ಮಳೆ ಹನಿ, ಸುತ್ತ ಮುತ್ತ ಹಸಿರಿನಿಂದ ತುಂಬಿದ ಪರಿಸರ ಇವುಗಳೆಲ್ಲ ನಮ್ಮ ಮನಸ್ಸಿಗೆ ಮುದ ನೀಡುತ್ತವೆ. ಆದರೆ ಈ ಮಳೆಯೊಂದಿಗೆ ನಮ್ಮ ಆರೋಗ್ಯಕ್ಕೆ ಸವಾಲುಗಳೂ ಬರುತ್ತವೆ. ಕಳೆದ ಕೆಲವು ವರ್ಷಗಳಲ್ಲಿ, ವಿಶೇಷವಾಗಿ Covid-19 ಮಹಾಮಾರಿ ನಂತರ, ಜನರ ರೋಗ ನಿರೋಧಕ ಶಕ್ತಿ ಕಡಿಮೆಯಾಗಿದೆ ಎಂಬುದು ನಂಬಲೆ ಬೇಕಾದ ವಿಷಯ . ಅದರ ಪರಿಣಾಮವಾಗಿ, ಸಾಮಾನ್ಯ ಶೀತ-ಜ್ವರದಿಂದ ಹಿಡಿದು ಕೆಮ್ಮು, ಫ್ಲೂ ಮುಂತಾದ ಸೋಂಕುಗಳು ಹಿಂದಿನಿಗಿಂತ ಹೆಚ್ಚು ಕಾಡುತ್ತಿರುವುದು ವೈದ್ಯಕೀಯ ಕ್ಷೇತ್ರಕ್ಕೆ ಸವಾಲಾಗಿ ಇರುವುದು ಅಷ್ಟೇ ಸತ್ಯ ಸಂಗತಿ.

Covid ನಂತರದ ಪರಿಸ್ಥಿತಿ – ರೋಗ ನಿರೋಧಕ ಶಕ್ತಿ ಕುಸಿತ
Covid ನಂತರ ಅನೇಕರು ಶಾರೀರಿಕ ಸುಸ್ತು, ಶ್ವಾಸಕೋಶ ಸಂಬಂಧಿಸಿದತ ಖಾಯಿಲೆ, ಅಲರ್ಜಿ ಹೆಚ್ಚಳ ಮತ್ತು ದೀರ್ಘಕಾಲೀನ ಕೆಮ್ಮು ಮುಂತಾದ ಲಕ್ಷಣಗಳಿಂದ ಬಳಲುತ್ತಿದ್ದಾರೆ. . ಹಿಂದಿನಂತೆಯೇ ಒಂದು ವಾರದಲ್ಲಿ ಶೀತ-ಜ್ವರದಿಂದ ಚೇತರಿಸಿಕೊಳ್ಳುವ ಬದಲು, ಈಗ ಕೆಲವರಿಗೆ 3-4 ವಾರಗಳವರೆಗೆ ಕೆಮ್ಮು ಅಥವಾ ಫ್ಲೂ ಲಕ್ಷಣಗಳು ಮುಂದುವರಿಯುತ್ತಿದೆ. ಇದು ದೇಹದ ರೋಗ ನಿರೋಧಕ ಶಕ್ತಿ (Immunity) ಇನ್ನೂ ಸಂಪೂರ್ಣವಾಗಿ ಪುನಃಸ್ಥಾಪನೆಯಾಗಿಲ್ಲ ಎಂಬುದನ್ನು ತೋರಿಸುತ್ತದೆ.
ಮಳೆಗಾಲದಲ್ಲಿ ಸಾಮಾನ್ಯ ಕಾಯಿಲೆಗಳು
- ವೈರಲ್ ಫ್ಲೂ ಮತ್ತು ಜ್ವರ: ಉಷ್ಣಾಂಶದ ಬದಲಾವಣೆ, ತೇವಾಂಶ ಹೆಚ್ಚಳದಿಂದ ವೈರಲ್ ಜ್ವರ ಹೆಚ್ಚಾಗುತ್ತದೆ.
- ಶೀತ ಮತ್ತು ದೀರ್ಘಕಾಲೀನ ಕೆಮ್ಮು: ಈ ಸಮಯದಲ್ಲಿ ಕೆಮ್ಮು ಕಡಿಮೆಯಾಗದೆ ವಾರಗಳ ಕಾಲ ಮುಂದುವರಿಯುವುದು ಸಾಮಾನ್ಯವಾಗಿದೆ.
- ಅತಿಸಾರ ಮತ್ತು ಅಜೀರ್ಣ: ಮಳೆಗಾಲದಲ್ಲಿ ನೀರಿನ ಅಶುದ್ಧತೆ, ಬೀದಿ ಆಹಾರದ ಸೇವನೆ ಹೊಟ್ಟೆ ತೊಂದರೆಗಳಿಗೆ ಕಾರಣವಾಗುತ್ತದೆ.
- ಚರ್ಮದ ಸೋಂಕುಗಳು: ತೇವ ವಾತಾವರಣದಿಂದ ಶೀಲೀಂಧ್ರ ಸೋಂಕು , ಸ್ಕೇಬೀಸ್, ಅಲರ್ಜಿ ಹೆಚ್ಚಾಗುತ್ತವೆ.
- ಶ್ವಾಸಕೋಶದ ಸಮಸ್ಯೆಗಳು: ಅಸ್ತಮಾ ತೀವ್ರತೆ, ಸೈನಸೈಟಿಸ್, ಉರಿ ಶೀತ ಹೆಚ್ಚಾಗುತ್ತದೆ.
ಹೋಮಿಯೋಪಥಿ ಚಿಕಿತ್ಸೆಯ ಅಗತ್ಯತೆ
ಹೋಮಿಯೋಪಥಿ ಚಿಕಿತ್ಸೆಯು ಕೇವಲ ಲಕ್ಷಣ ಕಡಿಮೆ ಮಾಡುವುದಲ್ಲ, ದೇಹದ ಒಳಗಿನ ರಕ್ಷಣಾ ಶಕ್ತಿಯನ್ನು ಬಲಪಡಿಸುತ್ತದೆ.
- ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು: ಸರಿಯಾದ ಹೋಮಿಯೋಪಥಿ ಔಷಧಿ ದೇಹದ ರೋಗ ನಿರೋಧಕ ಶಕ್ತಿಯನ್ನು ಪುನಃ ಸ್ಥಾಪಿಸಿ, ಮುಂದಿನ ಸೋಂಕುಗಳಿಂದ ರಕ್ಷಿಸುತ್ತದೆ.
- ದೀರ್ಘಕಾಲೀನ ಕೆಮ್ಮು-ಫ್ಲೂ ನಿರ್ವಹಣೆ: ಕೆಮ್ಮು, ಶೀತ, ಫ್ಲೂ ದೀರ್ಘವಾಗಿದೆಯಾದರೆ ಮೂಲ ಕಾರಣವನ್ನು ಗುರುತಿಸಿ ಸೂಕ್ತ ಔಷಧಿ ನೀಡಲಾಗುತ್ತದೆ.
- ಚರ್ಮ ಮತ್ತು ಹೊಟ್ಟೆ ಸಮಸ್ಯೆಗಳಿಗೂ ಸಮಗ್ರ ಪರಿಹಾರ: ಅತಿಸಾರ, ಶೀಲೀಂಧ್ರ ಸೋಂಕುಗಳಿಗೆ ಸುರಕ್ಷಿತ ಔಷಧೋಪಚಾರ.
ಹೋಮಿಯೋಪಥಿ ನಿರ್ವಹಣೆ
- ವೈಯಕ್ತಿಕ ಇತಿಹಾಸ ಪರಿಶೀಲನೆ: ರೋಗಿಯ ಹಿಂದಿನ Covid ಇತಿಹಾಸ, ಪ್ರಸ್ತುತ ಜೀವನ ಶೈಲಿ, ಆಹಾರ ಪದ್ಧತಿ ಪರಿಶೀಲಿಸಿ ಸೂಕ್ತ ಔಷಧಿ ಆಯ್ಕೆ.
- ಇಮ್ಯುನಿಟಿ ಬೂಸ್ಟರ್ ಥೆರಪಿ: ಮಳೆಗಾಲಕ್ಕೆ ತಕ್ಕಂತೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಹೋಮಿಯೋಪಥಿ ಔಷಧಿಗಳು.
- ಮಕ್ಕಳಿಗಾಗಿ ಸುರಕ್ಷಿತ ಚಿಕಿತ್ಸಾ ಕ್ರಮಗಳು: ಶೀತ, ಕೆಮ್ಮು, ಅತಿಸಾರ ಹೆಚ್ಚಾಗುವ ಮಕ್ಕಳಿಗೆ ಸುರಕ್ಷಿತ ಹೋಮಿಯೋಪಥಿ ಚಿಕಿತ್ಸೆಯ ಮೂಲಕ ಶೀಘ್ರ ಚೇತರಿಕೆ.
- ದೀರ್ಘಕಾಲೀನ ಕಾಯಿಲೆಗಳ ನಿರ್ವಹಣೆ: ಅಸ್ತಮಾ, ಅಲರ್ಜಿ, ಸೈನಸೈಟಿಸ್ ಮುಂತಾದ ಸಮಸ್ಯೆಗಳಿಗೆ ದೀರ್ಘಕಾಲೀನ ಪರಿಹಾರ.
ಮಳೆಗಾಲದಲ್ಲಿ ಆರೋಗ್ಯ ಕಾಪಾಡುವ ಸಲಹೆಗಳು
- ಶುದ್ಧ ನೀರನ್ನು ಮಾತ್ರ ಸೇವಿಸಿ, ಕುದಿಸಿ ಕುಡಿಯುವುದು ಉತ್ತಮ.
- ಅಶುದ್ಧ ಬೀದಿ ಬದಿ ಆಹಾರ ತಿನ್ನುವುದನ್ನು ತಪ್ಪಿಸಿ.
- ತೇವದಿಂದ ಒದ್ದೆಯಾದ ಬಟ್ಟೆ ತಕ್ಷಣ ಬದಲಿಸಿ ದೇಹವನ್ನು ಒಣವಾಗಿರಿಸಿ.
- ವಿಟಮಿನ್ C, ಪ್ರೋಟೀನ್ ಸಮೃದ್ಧ ಆಹಾರ ಸೇವನೆ ಮೂಲಕ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ.
- ದಿನನಿತ್ಯದ ನಿಯಮಿತ ವ್ಯಾಯಾಮ, ಯೋಗ ಅಥವಾ ಪ್ರಾಣಾಯಾಮ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ.
ಸಾರಾಂಶ
ಮಳೆಗಾಲದಲ್ಲಿ ಆರೋಗ್ಯ ಕಾಪಾಡುವುದು ಸವಾಲಿನ ಕೆಲಸ, ವಿಶೇಷವಾಗಿ Covid ನಂತರ ನಮ್ಮ ದೇಹ ಇನ್ನೂ ನಾರ್ಮಲ್ ಸ್ಥಿತಿಗೆ ಮರಳುತ್ತಿರುವ ಸಂದರ್ಭದಲ್ಲಿ. ಸರಿಯಾದ ಮುನ್ನೆಚ್ಚರಿಕೆ, ಆರೋಗ್ಯಕರ ಜೀವನ ಶೈಲಿ ಮತ್ತು ಸಮರ್ಪಿತ ಹೋಮಿಯೋಪಥಿ ಚಿಕಿತ್ಸೆ ಮೂಲಕ, ಮಳೆಗಾಲದಲ್ಲಿ ಆರೋಗ್ಯಕರ ಜೀವನ ಸಾಧ್ಯ.
ಡಾ ರೈ ಹೋಮಿಯೋಪಥಿ ಕೇಂದ್ರದಲ್ಲಿ ತಜ್ಞರ ಮಾರ್ಗದರ್ಶನದಲ್ಲಿ ಚಿಕಿತ್ಸೆ ಪಡೆದು ನಿಮ್ಮ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಿ, ಮಳೆಗಾಲವನ್ನು ಆರೋಗ್ಯಕರವಾಗಿ ಹಾಗೂ ಹರ್ಷದಿಂದ ಕಳೆಯಿರಿ!
✍️ ಲೇಖನ:
ಡಾ. ಪ್ರವೀಣ್ ಕುಮಾರ್ ರೈ BHMS. ಎಂಡಿ(Hom)
ಡಾ ರೈ ಹೋಮಿಯೋಪಥಿ ಸೆಂಟರ್
ಮಂಗಳೂರು – ಪುತ್ತೂರು – ಕಾರವಾರ
📞 ಮೊಬೈಲ್: 8123870254