ಮುಂಬಯಿ: ಮುಖಪುಟದ ಜಾತೀಯ ಬಳಗಗಳಲ್ಲಿ ಒಂದಾದ ಓನ್ಲಿ ಬಂಟ್ಸ್ ಆರ್ ಅಲೋವ್ಡ್ ಬಳಗದ ಎಂಟನೇ ವಾರ್ಷಿಕೋತ್ಸವದ ಅಂಗವಾಗಿ ಬೆಂಗಳೂರುನಲ್ಲಿ ನೆಲೆಸಿರುವ ಸಾಹಿತಿ, ಯಕ್ಷಗಾನ ಪ್ರಸಂಗಕರ್ತ ಮಹಾಬಲ ಆಳ್ವ ಅವರು ರಚಿಸಿದ `ಜ್ವಾಲಾ ಮೋಹಿನಿ ಎಂಬ ಯಕ್ಷಗಾನ ಪ್ರಸಂಗವನ್ನು ಶ್ರೀ ಗುರು ನಾರಾಯಣ ಯಕ್ಷಗಾನ ಮಂಡಳಿ (ರಿ.) ಸಾಂತಾಕ್ರೂಜ್, ಮುಂಬಯಿ ಇವರ ಸಂಯೋಜನೆಯಲ್ಲಿ ಇದೇ ಬರುವ ರವಿವಾರ (ಸೆ.೧೪) ಅಪರಾಹ್ನ ೨:೩೦ ಗಂಟೆಗೆ ಸಾಂತಾಕ್ರೂಜ್ ಪೂರ್ವದ ಬಿಲ್ಲವರ ಭವನದಲ್ಲಿ, ಅದ್ದೂರಿಯಾಗಿ ಪ್ರದರ್ಶನಗೊಳ್ಳಲಿದೆ.

ಬಳಗದ ನಿರ್ವಾಹಕ ಪ್ರವೀಣ್ ಕಯ್ಯ ಹಾಗೂ ಶ್ರೀಮತಿ ಕಾಂತಿ ಶೆಟ್ಟಿ ಅವರ ಮುಂದಾಳತ್ವದಲ್ಲಿ, ಕೂಟದ ಸರ್ವ ಸದಸ್ಯರ ಸಹಯೋಗದಿಂದ ನಡೆಯಲಿರುವ ಈ ಯಕ್ಷಗಾನ ಪ್ರದರ್ಶನದ ಹಿಮ್ಮೇಳ ಮುಮ್ಮೇಳದಲ್ಲಿ ಮುಂಬಯಿಯ ಪ್ರಸಿದ್ಧ ಹಾಗೂ ಪ್ರಬುದ್ಧ ಕಲಾವಿದರು ಭಾಗವಹಿಸಲಿರುವರು. ಕಾರ್ಯಕ್ರಮದಲ್ಲಿ ಸದಸ್ಯ ಬಾಂಧವರು, ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಈ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಬಳಗದ ಪರವಾಗಿ ನಿರ್ವಾಹಕರು ಮತ್ತು ಸದಸ್ಯರು ವಿನಂತಿಸಿ ಕೊAಡಿದ್ದಾರೆ.