ಪಾಪ್ಯುಲರ್ ಜಗದೀಶ ಸಿ. ಶೆಟ್ಟಿ ಚಾರಿಟೇಬಲ್ ಫೌಂಡೇಶನ್, ಪಾಪ್ಯುಲರ್ ಬಂಟ್ಸ್ ಇಂಗ್ಲೀಷ್ ಮೀಡಿಯಂ ಪ್ರೌಢಶಾಲೆ ಆಶ್ರಯದಲ್ಲಿ ಸಂಸ್ಥೆಯ ಸ್ಥಾಪಕ ಕಾರ್ಯಾಧ್ಯಕ್ಷ ಹಾಗೂ ಸಂಚಾಲಕರಾಗಿದ್ದ ದಿ. ಪಾಪ್ಯುಲರ್ ಜಗದೀಶ ಸಿ. ಶೆಟ್ಟಿ ಅವರ 8ನೇ ಪುಣ್ಯ ಸಂಸ್ಮರಣಾ ಕಾರ್ಯಕ್ರಮವು ಪ್ರೌಢಶಾಲೆಯ ಸಭಾಂಗಣದಲ್ಲಿ ನಡೆಯಿತು. ಫೌಂಡೇಷನ್ ಹಾಗೂ ಪ್ರೌಢಶಾಲೆಯ ಸಂಚಾಲಕರಾದ ಕೆ. ಕರುಣಾಕರ ಶೆಟ್ಟಿಯವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಪಾಪ್ಯುಲರ್ ಜಗದೀಶ ಸಿ ಶೆಟ್ಟಿಯವರ ಪ್ರತಿಮೆಗೆ ಹೂ ಹಾರ ಹಾಗೂ ಪುಷ್ಪ ನಮನ ಸಲ್ಲಿಸಿದರು. ಬಳಿಕ 40 ಮಂದಿ ಆಶಕ್ತರಿಗೆ ಹಾಗೂ 31 ವಿದ್ಯಾರ್ಥಿಗಳ ಶಿಕ್ಷಣಕ್ಕೆ ಒಟ್ಟು 10 ಲಕ್ಷರೂ. ಸಹಾಯ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಬಂಟ್ಸ್ ವೆಲ್ಫೇರ್ ಟ್ರಸ್ಟಿನ ಹಾಗೂ ಪಾಪ್ಯುಲರ್ ಬಂಟ್ಸ್ ಇಂಗ್ಲೀಷ್ ಮೀಡಿಯಂ ಪ್ರೌಢಶಾಲಾ ಕಾರ್ಯದರ್ಶಿ ಗೋಪಿನಾಥ ಹೆಗ್ಡೆ ಪಾಪ್ಯುಲರ್ ಜಗದೀಶ ಸಿ.ಶೆಟ್ಟಿಯವರ ಆದರ್ಶ, ಮಾರ್ಗದರ್ಶನ ನಮಗೆ ದಾರಿದೀಪ. ಉತ್ತಮ ಶಿಕ್ಷಣ ಸಂಸ್ಥೆಯಾಗಬೇಕು, ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ, ಆಶಕ್ತರಿಗೆ ಧನ ಸಹಾಯ ಅವರ ಕನಸು ಈಡೇರಿಸುವ ಪ್ರಾಮಾಣಿಕ ಪ್ರಯತ್ನದೊಂದಿಗೆ ಅವರಿಗೆ ಅರ್ಥಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸಲಾಗುತ್ತಿದೆ ಎಂದರು.
ಟ್ರಸ್ಟಿನ ಕೋಶಾಧಿಕಾರಿ ರತ್ನಾಕರ ಶೆಟ್ಟಿ ಮಾತನಾಡಿ, ಪಾಪ್ಯುಲರ್ ಜಗದೀಶ್ ಸಿ ಶೆಟ್ಟಿಯವರ ನೆನಪು ಸದಾ ಉಳಿಯುವಂತೆ ಮಾಡಿದೆ. ಸಂಸ್ಥೆಯಲ್ಲಿ 1,200 ವಿದ್ಯಾರ್ಥಿಗಳಿಗೆ ಶಿಕ್ಷಣ, ಸಹಾಯದ ನಿರೀಕ್ಷೆಯಲ್ಲಿ ಬಂದ ಅಶಕ್ತರಿಗೆ ಸಹಾಯಧನ ನೀಡುವ ಮೂಲಕ ಅವರ ಕನಸು ಸಾಕಾರಗೊಳಿಸಿದೆ ಎಂದರು. ಫೌಂಡೇಶನ್ ಕಾರ್ಯದರ್ಶಿ ಮತ್ತು ಟ್ರಸ್ಟಿ ಶಶಿರೇಖಾ ಜೆ ಶೆಟ್ಟಿ, ಟ್ರಸ್ಟಿ ಸಂದೀಪ್ ರೈ, ಶಶಿಕಲಾ ಶೆಟ್ಟಿ, ಅರ್ಚನಾ ಶೆಟ್ಟಿ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯಿನಿ ಶಹನ ಎಂ ಫೆಹಲವಿ ಸ್ವಾಗತಿಸಿದರು. ಶಿಕ್ಷಕಿ ಸಾಧನ ಶೆಟ್ಟಿ ಫಲಾನುಭವಿಗಳ ಹೆಸರನ್ನು ವಾಚಿಸಿದರು. ಸದಾಶಿವ ಎಂ. ನಿರೂಪಿಸಿದರು. ಸಹ ಮುಖ್ಯ ಶಿಕ್ಷಕಿ ಸೆಲ್ವಿನ್ ಸಲ್ದಾನ ವಂದಿಸಿದರು.