ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಪಜೀರು ಗ್ರಾಮದ ಶ್ರೀ ಅರಸು ಮುಂಡಿತ್ತಾಯ ದೈವಸ್ಥಾನದ ವ್ಯವಸ್ಥಾಪನಾ ಸಮಿತಿಯನ್ನು ರಚಿಸಿ ಮಂಗಳೂರಿನ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯಿಂದ ಆದೇಶ ಹೊರಡಿಸಿರುತ್ತಾರೆ. ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರನ್ನಾಗಿ ಪಜೀರು ಅಜೆಕಳಗುತ್ತು ಪ್ರದೀಪ್ ಆಳ್ವ ಕದ್ರಿ ಆಯ್ಕೆ ಮಾಡಲಾಗಿದೆ.

ಸದಸ್ಯರಾಗಿ ಸುಬ್ರಾಯ ಪೂಜಾರಿ ಭಂಡಾರಮನೆ, ಜಗದೀಶ್ ಆಳ್ವ ಕುವೆತ್ತಬೈಲು, ವಿಶ್ವಾಸ್ ರೈ ಬಂಗದಾರೆಗುತ್ತು, ಪುರಂದರ ವಜಲಗುಡ್ಡೆ, ಸರಸ್ವತಿ ಅಡ್ಕ, ಭಾರತಿ ಗಟ್ಟಿ ಕೊರಂತೋಡಿ, ರಂಗನಾಥ ಪೂಂಜ ಅಜೆಕಳಗುತ್ತು, ರಮೇಶ್ ಸಪಲ್ಯ ಗಾಣದಮನೆ ಇವರುಗಳನ್ನು ಆಯ್ಕೆ ಮಾಡಿ ಆದೇಶ ಹೊರಡಿಸಿದೆ.