ಕೆಂಜಾರು ಗುಂಡೊಟ್ಟು ಮನೆತನದ ನೂತನ ಧರ್ಮಚಾವಡಿಯ ಪ್ರವೇಶ, ಆರಾಧ್ಯ ದೈವ ಜುಮಾದಿ ಬಂಟ ಮತ್ತು ಪರಿವಾರ ದೈವಗಳಿಗೆ ಪುನರ್ ಪ್ರತಿಷ್ಠೆ, ಕಲಶಾಭಿಷೇಕವು ಏಪ್ರಿಲ್ 8 ರಿಂದ 10 ತನಕ ಶ್ರೀ ಪ್ರಕಾಶ್ ಅಮ್ಮಣ್ಣಾಯ ಜೋತಿರ್ವಿಜ್ಞಾನಂ ಕಾಪು ಅವರ ಮಾರ್ಗದರ್ಶನದಲ್ಲಿ ನಡೆಯಲಿದೆ.

ಏಪ್ರಿಲ್ 10 ರಂದು ಧೂಮಾವತಿ ಪರಿವಾರ ದೈವಗಳ ಧರ್ಮನೇಮ ದೈವದಾಣತಿಯಂತೆ ಕುಟುಂಬದ ಗುರುಹಿರಿಯರು ನಿಶ್ಚಯಿಸಿದಂತೆ ನಡೆಯಲಿದ್ದು, ಆ ಪ್ರಕಾರ ಅಂದು ಬೆಳಿಗ್ಗೆ 9 ಘಂಟೆಗೆ ತಾರಿಬರಿ ಜುಮಾದಿ ಬಂಟ ದೈವಗಳ ಭಂಡಾರ ಬಂದು, ಮಧ್ಯಾಹ್ನ 12.30 ಕ್ಕೆ ಪಲ್ಲ ಪೂಜೆ ಜರಗಲಿದೆ. ಮಧ್ಯಾಹ್ನ 12.30 ರಿಂದ ಸಾರ್ವಜನಿಕ ಅನ್ನಸಂತರ್ಪಣೆ ಜರುಗಲಿದ್ದು, ರಾತ್ರಿ 8.30 ಕ್ಕೆ ಧೂಮಾವತಿ ಪರಿವಾರ ದೈವಗಳಿಗೆ ಧರ್ಮ ನೇಮ ಜರಗಲಿದೆ. ಆಸ್ತಿಕ ಬಾಂಧವರು, ದೈವಾರಾಧಕ ಅಭಿಮಾನಿ ಬಂಧುಗಳು, ಕುಟುಂಬಿಕರು ಸಕಾಲದಲ್ಲಿ ಉಪಸ್ಥಿತರಿದ್ದು ಗಂಧಪ್ರಸಾದ ಸ್ವೀಕರಿಸಿ ದೈವಗಳ ಕೃಪಾ ಕಟಾಕ್ಷಕ್ಕೆ ಪಾತ್ರರಾಗಬೇಕೆಂದು ಶ್ರೀಮತಿ ಮತ್ತು ಶ್ರೀ ರಾಮಣ್ಣ ಶೆಟ್ಟಿ ಹಾಗೂ ಕುಟುಕಬಿಕರು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿಕೊಂಡಿದ್ದಾರೆ.