ಮಣಿಪಾಲ : ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಸಹಭಾಗಿತ್ವದಲ್ಲಿರುವ ಮಣಿಪಾಲ್ ಹೈಸ್ಕೂಲ್ ಟ್ರಸ್ಟ್ನ ಸಾರ್ವಜನಿಕ ಸಂಪರ್ಕಾಧಿಕಾರಿ (ಪಿ.ಆರ್.ಒ)ಯಾಗಿ ಶ್ರೀ ರಾಮಚಂದ್ರ ನೆಲ್ಲಿಕಾರು ನೇಮಕಗೊಂಡಿದ್ದಾರೆ. ಶೈಕ್ಷಣಿಕ ಕ್ಷೇತ್ರದಲ್ಲಿ 33 ವರ್ಷದ ಅನುಭವ ಹೊಂದಿರುವ ಇವರು ಕಳೆದ 12 ವರ್ಷಗಳಿಂದ ಪ್ರಾಂಶುಪಾಲರಾಗಿ, ಆಂಗ್ಲಭಾಷಾ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಅನುಭವಿ. ಖ್ಯಾತ ವಾಗ್ಮಿಯಾಗಿರುವ ಶ್ರೀಯುತರು 2ಸಾವಿರಕ್ಕೂ ಅಧಿಕ ಅನೇಕ ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಭಾಷಣಕಾರರಾಗಿ, ರಾಜ್ಯಮಟ್ಟದಲ್ಲಿ ನಡೆದ ಎನ್.ಎಸ್.ಎಸ್ ಶಿಬಿರದಲ್ಲಿ ಮೂರು ಬಾರಿ ಸಂಪನ್ಮೂಲ ವ್ಯಕಿಯಾಗಿ ಹಾಗೂ 300ಕ್ಕೂ ಅಧಿಕ ಎನ್.ಎಸ್.ಎಸ್ ಶಿಬಿರದಲ್ಲಿ ಉಪನ್ಯಾಸಕರಾಗಿಯೂ ಜನಪ್ರಿಯರಾಗಿದ್ದಾರೆ.

ವಿದ್ಯಾರ್ಥಿ ದೆಸೆಯಲ್ಲಿಯೇ ಮೂಡಬಿದ್ರಿಯ ದವಳಾ ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿಯೂ, ತದನಂತರ ವೃತ್ತಿ ಬದುಕಿನಲ್ಲಿ ಕಾರ್ಕಳ-ನಾರಾವಿ ದೇವಾಡಿಗ ಸಂಘದ ಕಾರ್ಯದರ್ಶಿಯಾಗಿ, ಕಾರ್ಕಳದ ಜೆ.ಸಿ.ಐನ ಉಪಾಧ್ಯಕ್ಷರಾಗಿ, ಕಾರ್ಯದರ್ಶಿಯಾಗಿಯೂ ಸೇವೆಸಲ್ಲಿಸಿದ ಹೆಗ್ಗಳಿಕೆ ಇವರದ್ದು. ವೃತ್ತಿಯಲ್ಲಿ ಉಪನ್ಯಾಸಕನಾಗಿದ್ದರೂ, ಪ್ರವೃತ್ತಿಯಲ್ಲಿ ರಂಗಭೂಮಿ ಕ್ಷೇತ್ರದಲ್ಲಿ 300ಕ್ಕೂ ಅಧಿಕ ನಾಟಕಗಳಲ್ಲಿ ಕಲಾವಿದರಾಗಿಯೂ ಜೊತೆಗೆ 8 ತುಳು ನಾಟಕಗಳನ್ನು ಬರೆದು ಕಲಾರಸಿಕರ ಮೆಚ್ಚುಗೆಗೂ ಪಾತ್ರರಾಗಿದ್ದಾರೆ. ವಿದ್ಯಾನಗರದ ಮಣಿಪಾಲ್ ಪದವಿ ಪೂರ್ವ ಕಾಲೇಜಿನಲ್ಲಿ ಕಾರ್ಯನಿರತ ದಿನಗಳಲ್ಲಿ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಶಿಕ್ಷಣಾರ್ಥಿಗಳ ಭೇಟಿಗೆ ಲಭ್ಯವಿರುತ್ತಾರೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.