ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ಉಡುಪಿಯ ಕೊಳಲಗಿರಿಯ ಸಮೀಪ ಇರುವ ಹೋಂ ಡಾಕ್ಟರ್ ಫೌಂಡೇಶನ್ ನ ಆಡಳಿತಕ್ಕೊಳಪಟ್ಟ ಸ್ವರ್ಗ ಅಸಹಾಯಕರ ಅರಮನೆ ಅನಾಥಾಶ್ರಮಕ್ಕೆ 35000 ರೂಪಾಯಿ ಮೌಲ್ಯದ ಶುದ್ಧ ಕುಡಿಯುವ ನೀರಿನ ವಾಟರ್ ಫಿಲ್ಟರ್ ಹಾಗೂ ಆಶ್ರಮಕ್ಕೆ ಬೇಕಾದ 10000 ಮೌಲ್ಯದ ದಿನಬಳಕೆಯ ವಸ್ತುಗಳನ್ನು ಸಂಘದ ವತಿಯಿಂದ ಸಂಘದ ಗೌರವಾಧ್ಯಕ್ಷರಾದ ಶ್ರೀಮತಿ ವತ್ಸಲಾ ದಯಾನಂದ ಶೆಟ್ಟಿ ಹೋಮ್ ಡಾಕ್ಟರ್ ಫೌಂಡೇಶನ್ ನ ಆಡಳಿತ ನಿರ್ದೇಶಕ ಡಾ. ಶಶಿಕಿರಣ್ ಶೆಟ್ಟಿ ಅವರಿಗೆ ಹಸ್ತಾಂತರ ಮಾಡಿದರು.ಈ ಸಂಧರ್ಭ ಸಂಘದ ಅಧ್ಯಕ್ಷ ಶ್ರೀ ನಿತೀಶ್ ಶೆಟ್ಟಿ ಬಸ್ರೂರು, ಸ್ಥಾಪಕಾಧ್ಯಕ್ಷರಾದ ಡಾ. ಅಂಪಾರು ನಿತ್ಯಾನಂದ ಶೆಟ್ಟಿ, ಶ್ರೀಮತಿ ನಿಮಿತ ಶೆಟ್ಟಿ ಮತ್ತು ಸ್ವರ್ಗ ಆಶ್ರಮದ ಸಿಬ್ಬಂದಿಗಳು ಉಪಸ್ಥಿತರಿದ್ದರು.