ಮಂದಾರ್ತಿ ಸೇವಾ ಸಹಕಾರಿ ಸಂಘದ ಶತಮಾನೋತ್ಸವ ಶತಸಾರ್ಥಕ್ಯ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆಗೊಂಡಿತು. ಶ್ರೀ ಕ್ಷೇತ್ರ ಮಂದಾರ್ತಿಯ ಪ್ರಧಾನ ಅರ್ಚಕ ವೇದಮೂರ್ತಿ ಎಂ ಶ್ರೀಪತಿ ಅಡಿಗ ಅವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಸಂಘದ ಅಧ್ಯಕ್ಷ ಎಚ್. ಗಂಗಾಧರ ಶೆಟ್ಟಿ, ಉಪಾಧ್ಯಕ್ಷ ಕೆ. ಶಂಭುಶಂಕರ ರಾವ್, ನಿರ್ದೇಶಕರಾದ ಎಚ್. ವಿಠಲ ಶೆಟ್ಟಿ, ನಿತ್ಯಾನಂದ ಶೆಟ್ಟಿ, ಪ್ರವೀಣ್ ಶೆಟ್ಟಿ, ಬಸವ ಮರಾಠಿ, ಗುರುಪ್ರಸಾದ್, ಅರುಣ್ ಕುಮಾರ್ ಶೆಟ್ಟಿ ಕಾರ್ಯನಿರ್ವಹಣಾಧಿಕಾರಿ ರಾಮಕೃಷ್ಣ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಶತಸಾರ್ಥಕ್ಯ ಸಮಾರೋಪ ಸಮಾರಂಭ ನವೆಂಬರ್ 3ರ ಬೆಳಗ್ಗೆ 10:30ಕ್ಕೆ ಜರಗಲಿದೆ. ಸಹಕಾರಿ ಧುರೀಣರು, ಸಚಿವರು, ಜನಪ್ರತಿನಿಧಿಗಳು ಇಲಾಖಾ ಅಧಿಕಾರಿಗಳು, ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.