ಭಾರತೀಯ ವಿಕಾಸ್ ಟ್ರಸ್ಟ್ ಸಹಯೋಗದೊಂದಿಗೆ ಪಡುಬಿದ್ರಿಯ ವಿಶೇಷ ಆರ್ಥಿಕ ವಲಯದಲ್ಲಿನ ಆಸ್ಪೆನ್ ಇನ್ಫ್ರಾ ಕಂಪೆನಿಯ ಮೂಲಕ 2023-24 ನೇ ಸಾಲಿನ ಸಿಎಸ್ ಆರ್ ನಿಧಿಯಿಂದ ಅನುಷ್ಠಾನಿಸಲಾದ ವಿವಿಧ ಕಾರ್ಯಕ್ರಮಗಳ ಲೋಕಾರ್ಪಣೆಯು ಜೂನ್ 8 ರಂದು ಸಂಜೆ 3 ಕ್ಕೆ ಪಡುಬಿದ್ರಿ ಬಂಟರ ಸಂಘದ ಸಭಾಂಗಣದಲ್ಲಿ ನಡೆಯಲಿದೆ. ಪಲಿಮಾರು ಹಾಗೂ ಪಡುಬಿದ್ರಿ ಗ್ರಾ. ಪಂ ವ್ಯಾಪ್ತಿಗಳ ವಿವಿಧ ಗ್ರಾಮೀಣ ಶಾಲೆ, ಅಂಗನವಾಡಿಗಳಲ್ಲಿ ಸೋಲಾರ್ ಅಳವಡಿಕೆ, ಇ ಶಾಲಾ ವ್ಯವಸ್ಥೆಗಳೊಂದಿಗೆ ನವೀಕರಣ, ಮಹಿಳಾ ಸಬಲೀಕರಣದ ಮೂಲಕ ಅವರಿಗಾಗಿ ವಿವಿಧ ಸ್ವೋದ್ಯೋಗ ಯೋಜನೆಗಳೇ ಮುಂತಾದ ವಿವಿಧ ಸಂಯೋಜಿತ ಕಾರ್ಯಕ್ರಮಗಳ ಉದ್ಘಾಟನೆಯನ್ನು ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ನೆರವೇರಿಸಲಿದ್ದಾರೆ.
ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಪ್ರಧಾನ ಭಾಷಣ ಮಾಡಲಿದ್ದಾರೆ. ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕ ಲಾಲಾಜಿ ಮೆಂಡನ್, ಹಿರಿಯ ನ್ಯಾಯವಾದಿ ಮಟ್ಟಾರ್ ರತ್ನಾಕರ ಹೆಗ್ಡೆ, ಡಾ. ದೇವಿಪ್ರಸಾದ್ ಶೆಟ್ಟಿ, ನವೀನ್ ಚಂದ್ರ ಜೆ.ಶೆಟ್ಟಿ, ವೈ. ಶಶಿಧರ ಶೆಟ್ಟಿ, ವೈ. ಸುಧೀರ್ ಕುಮಾರ್, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಪಡುಬಿದ್ರಿ ಗ್ರಾ.ಪಂ.ಅಧ್ಯಕ್ಷೆ ಶಶಿಕಲಾ ಪೂಜಾರಿ, ಪಲಿಮಾರು ಗ್ರಾ.ಪಂ. ಅಧ್ಯಕ್ಷೆ ಸೌಮ್ಯಲತಾ ಶೆಟ್ಟಿ ಅಬ್ದುಲ್ ಅಜೀಜ್ ಮತ್ತಿತರರು ಉಪಸ್ಥಿತರಿರುವರು. ಆಸ್ಪೆನ್ ಎಸ್ ಇ ಝಡ್ ನ ಹಿರಿಯ ಮಹಾ ಪ್ರಬಂಧಕ ಅಶೋಕ್ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದ ಪ್ರಕಟನೆ ತಿಳಿಸಿದೆ.