
ಕಾಟುಕಕ್ಕೆ ಶ್ರೀ ಸುಬ್ರಾಯ ದೇವಸ್ಥಾನದ ಪರಿಸರದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಲಸು, ಮಾವು, ಚಿಕ್ಕು, ನಿಂಬೆ ಸಸಿಗಳನ್ನು ನೆಡಲಾಯಿತು. ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ತಾರಾನಾಥ ರೈ ಪಡ್ಡಂಬೈಲುಗುತ್ತು ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸರಕಾರಿ ವಕೀಲ ಚಂದ್ರಮೋಹನ್, ಎಣ್ಮಕಜೆ ಗ್ರಾ.ಪಂ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ, ವಾರ್ಡ್ ಸದಸ್ಯ ಬಿ.ಎಸ್. ಗಾಂಭೀರ್ ಅತಿಥಿಗಳಾಗಿದ್ದರು.
ಆಡಳಿತ ಮಂಡಳಿ ಸದಸ್ಯರಾದ ಸುಧಾಕರ ಕಲ್ಲಗದ್ದೆ , ಚನಿಯಪ್ಪ ಪರಗದ್ದೆ, ರಿತೇಶ್ ಕಿರಣ್ ಕಾಟುಕಕ್ಕೆ, ಶಿಕ್ಷಕ ಬಾಲಕೃಷ್ಣ ಶೆಟ್ಟಿ ಕಟ್ಟತ್ತಾಡೆ, ಯಶವಂತ ಅರೆಕ್ಕಾಡಿ, ಹಿರಿಯರಾದ ನಾರಾಯಣ ರೈ ಪಡ್ಡಂಬೈಲು, ರಾಧಾಕೃಷ್ಣ ಭಂಡಾರದ ಮನೆ, ನಾರಾಯಣ ಕಲ್ಲಗದ್ದೆ, ಹರೀಶ್ ಪಿಲಿಂಗಲ್ಲು, ಕೃಷ್ಣ ಪೆರ್ಲತಡ್ಕ, ವಿನೋದ್ ಅರೆಕ್ಕಾಡಿ ಮತ್ತು ಧ್ರುವ ಕಾರ್ತಿಕೇಯ ಭಾಗವಹಿಸಿದ್ದರು.



























































































































