ವಿದ್ಯಾಗಿರಿ: ಆಳ್ವಾಸ್ ಹಮ್ಮಿಕೊಂಡಿರುವ ಉಚಿತ ಕಣ್ಣಿನ ತಪಾಸಣಾ ಶಿಬಿರ, ಯಾವುದೇ ನಿರ್ದಿಷ್ಟ ಜಾತಿ, ಧರ್ಮಗಳಿಗೆ ಸೀಮಿತವಾಗಿರದೆ, ಸರ್ವರಿಗೂ ಕಣ್ಣಿನ ಆರೋಗ್ಯ ಸೇವೆ ಲಭಿಸುತ್ತಿದೆ ಎಂಬ ತೃಪ್ತಿ ನನಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ ಆಳ್ವ ಹೇಳಿದರು.
ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಆಸ್ಪತ್ರೆ, ಮಂಗಳೂರಿನ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್, ಮಂಗಳೂರು ದಕ್ಷಿಣ ಕನ್ನಡ ಜಿಲ್ಲಾ ಹೆಗ್ಗಡೆ ಸಮಾಜ ಸಂಘ (ರಿ.), ಕೋಟೆಬಾಗಿಲು ಗಾಣಿಗ ಯಾನೆ ಸಪಳಿಗ ಸೇವಾ ಸಂಘ (ರಿ.) ಮೂಡುಬಿದಿರೆ, ಮಿಜಾರು-ಎಡಪದವು ಭಂಡಾರಿ ಸಮಾಜ ಸೇವಾ ಸಂಘ(ರಿ)ಮೂಡುಬಿದಿರೆ ಹಾಗೂ ಮಡಿವಾಳ ಸಮಾಜ ಸೇವಾ ಸಂಘ (ರಿ.), ಮೂಡುಬಿದಿರೆ ಇವರ ಸಂಯುಕ್ತ ಆಶ್ರಯದಲ್ಲಿ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ 9ನೇ ಉಚಿತ ನೇತ್ರ ತಪಾಸಣಾ ಶಿಬಿರ ಮಂಗಳವಾರ ನಡೆಯಿತು.
ಹಲವಾರು ಸಂಘ ಸಂಸ್ಥೆಗಳು ನೇತ್ರ ತಪಾಸಣಾ ಶಿಬಿರ ಹಮ್ಮಿಕೊಳ್ಳುತ್ತಿದ್ದರೂ, ಕಣ್ಣಿನ ಚಿಕಿತ್ಸೆ ಬಗ್ಗೆ ಜಾಗೃತಿ ಜನರಲ್ಲಿ ಇನ್ನೂ ಮೂಡಿಲ್ಲ. ಯಾವುದೇ ರೀತಿ ಆರೋಗ್ಯ ಸಮಸ್ಯೆ ಇದ್ದರೂ ಹೆದರದೆ, ತಕ್ಷಣ ವೈದ್ಯರ ಸೇವೆ ಪಡೆದುಕೊಳ್ಳಬೇಕು. ಮನುಷ್ಯನಿಗೆ ಎಲ್ಲಾ ಅಂಗಗಳು ಮುಖ್ಯವಾದರೂ, ಜಗತ್ತನ್ನು ಕಾಣಲು ಕಣ್ಣು ಬಹುಮುಖ್ಯ. ಕಣ್ಣುಗಳನ್ನು ಮುಚ್ಚಿದಾಗ ನೇತ್ರದ ಶಕ್ತಿ ನಮಗೆ ಅರಿವಾಗುತ್ತದೆ. ಹೀಗಿರುವಾಗ ಶಾಶ್ವತ ಕಣ್ಣಿನ ಸಮಸ್ಯೆಯುಳ್ಳವರನ್ನು ಊಹಿಸಿಕೊಳ್ಳಿ ಎಂದರು.
ಮುಂದಿನ ದಿನಗಳಲ್ಲೂ ಉಚಿತ ಕಣ್ಣಿನ ತಪಾಸಣಾ ಶಿಬಿರನ್ನು ಮುಂದುವರೆಸುವುದಾಗಿ ಹೇಳಿದ ಅವರು, ಮುಂದಿನ ವರ್ಷದ ಮೇ ತಿಂಗಳೊಳಗೆ 5000 ಜನರಿಗೆ ತಪಾಸಣೆ ನಡೆದು, 2500 ಜನರಿಗೆ ಕನ್ನಡಕ ವಿತರಿಸಿ, ಸುಮಾರು 500 ಜನರಿಗೆ ಶಸ್ತ್ರ ಚಿಕಿತ್ಸೆಯನ್ನು ಮಾಡುವ ಗುರಿಯಿದೆ ಎಂದರು.
ಈ ಹಿಂದೆ ನಡೆದಿದ್ದ ನೇತ್ರದಾನ ಶಿಬಿರದ ಫಲಾನುಭವಿಗಳಿಗೆ ಉಚಿತವಾಗಿ ಕನ್ನಡಕವನ್ನು ವಿತರಿಸಲಾಯಿತು ಕಾರ್ಯಕ್ರಮದಲ್ಲಿ , ಮೂಡುಬಿದಿರೆ ಸಪಳಿಗೆ ಯಾನೆ ಗಾಣಿಗರ ಸೇವಾ ಸಂಘದ ಅಧ್ಯಕ್ಷ, ರಾಜೇಶ್ ಬಂಗೇರ, ಮಿಜಾರು-ಎಡಪದವು ಸಪಳಿಗೆ ಯಾನೆ ಗಾಣಿಗರ ಸೇವಾ ಸಂಘದ ಅಧ್ಯಕ್ಷ ಭಾಸ್ಕರ ಸಪಳಿಗ, ದ.ಕ. ಜಿಲ್ಲಾ ಹೆಗ್ಗಡೆ ಸಮಾಜ ಸಂಘ(ರಿ.) ಕೋಟೆಬಾಗಿಲು, ಅಧ್ಯಕ್ಷ ನವೀನ್ ಎನ್. ಹೆಗ್ಡೆ, ಮಾಜಿ ಪುರಸಭಾ ಅಧ್ಯಕ್ಷರು ಹಾಗೂ ಮೂಡುಬಿದರೆ ಭಂಡಾರಿ ಸಮಾಜ ಸೇವಾ ಸಂಘ(ರಿ.), ಸ್ಥಾಪಕ ಪ್ರಧಾನ ಕಾರ್ಯದರ್ಶಿ, ಪ್ರಸಾದ್ ಕುಮಾರ್ ಭಂಡಾರಿ, ಮೂಡುಬಿದಿರೆಯ ಮಡಿವಾಳ ಸಮಾಜ ಸೇವಾ ಸಂಘ(ರಿ), ಗೌರವಾಧ್ಯಕ್ಷರು, ಶ್ಯಾಮ ಎಂ. , ಪ್ರಸಾದ್ ನೇತ್ರಾಲಯದ ಕಣ್ಣಿನ ತಜ್ಞ ಡಾ ವಿಷ್ಣು, ಪ್ರಾಚಾರ್ಯ ಡಾ ಸಜಿತ್ ಎಂ ಇದ್ದರು.
ಕಾರ್ಯಕ್ರಮವನ್ನು ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಮಂಜುನಾಥ್ ಭಟ್ ಸ್ವಾಗತಿಸಿ, ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಆಸ್ಪತ್ರೆಯ ಪ್ರಾಧ್ಯಪಕ ಡಾ. ವಿಕ್ರಮ್ ಕುಮಾರ್ ವಂದಿಸಿ, ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಆಸ್ಪತ್ರೆ ಪ್ರಾಧ್ಯಪಕ ಡಾ. ಗೀತಾ ಬಿ ಮಾಕರ್ಂಡೆ ನಿರೂಪಿಸಿದರು. ಬಾಕ್ಸ್ ಐಟಂ ಇಲ್ಲಿಯ ತನಕ ನಡೆದ ಒಟ್ಟು 9 ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ 1478 ಮಂದಿ ಪಾಲ್ಗೊಂಡು, 784 ಮಂದಿಗೆ ಕನ್ನಡಕ ವಿತರಿಸಿ, 221 ಮಂದಿ ಕ್ಯಾಟರಕ್ಟ್ ಶಸ್ತ್ರ ಚಿಕಿತ್ಸೆಗೆ ನೋಂದಣಿಗೊಂಡು, 86 ಜನರು ಯಶಸ್ವಿ ಶಸ್ತ್ರ ಚಿಕಿತ್ಸೆ ಮುಗಿಸಿದ್ದಾರೆ.