ಮೂಡುಬಿದಿರೆ: ಪುತ್ತೂರು ವಿವೇಕಾನಂದ ಸ್ವಾಯತ್ತ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಮಾಧ್ಯಮ ಹಬ್ಬ ವಿವೇಕ ಚೇತನದಲ್ಲಿ ಆಳ್ವಾಸ್ ಪತ್ರಿಕೋದ್ಯಮ ವಿಭಾಗವು ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.


ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ. ಒಟ್ಟು 13 ಸ್ಪರ್ಧೆಗಳಲ್ಲಿ ಆಳ್ವಾಸ್ನ ವಿದ್ಯಾರ್ಥಿಗಳು 6 ಸ್ಪರ್ಧೆಗಳಲ್ಲಿ ಪ್ರಥಮ ಹಾಗೂ ಒಂದು ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದರು.
ಲೋಗೋ ವಿನ್ಯಾಸದಲ್ಲಿ ಸಚಿನ್ ಆಚಾರ್ಯ ಪ್ರಥಮ, ರೇಡಿಯೋ ನಿರೂಪಣೆ ಪ್ರಖ್ಯಾತ ಬೆಳುವಾಯಿ ಪ್ರಥಮ, ಸಪ್ರ್ರೈಸ್ ಇವೆಂಟ್ ರಂಜಿತ್ ಪ್ರಥಮ, ಬೀದಿ ನಾಟಕ ಪ್ರಥಮ, ರಸಪ್ರಶ್ನೆ ಜಡೇಶ್ ಹಾಗೂ ತಬ್ರೀಸ್ ಪ್ರಥಮ, ಪಿ2ಸಿ ಚಿದಾನಂದ ರುದ್ರಪುರಮಠ ಪ್ರಥಮ, ರೀಲ್ಸ್ ಮೇಕಿಂಗ್ ವಿನೀತ್ ದ್ವಿತೀಯ ಸ್ಥಾನವನ್ನು ಪಡೆದುಕೊಂಡರು. ವಿಜೇತ ತಂಡವನ್ನು ಸಂಸ್ಥೆಯ ಅಧ್ಯಕ್ಷ ಡಾ ಎಂ ಮೋಹನ ಆಳ್ವ, ಟ್ರಸ್ಟಿ ವಿವೇಕ್ ಆಳ್ವ ಅಭಿನಂದಿಸಿದ್ದಾರೆ.





































































































